ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನುಷ್ಯರಿಂದ ಪ್ರಾಣಿಗಳಿಗೂ ಹಬ್ಬುತ್ತಿದೆಯಾ ಡೆಡ್ಲಿ ಕೊರೊನಾ ವೈರಸ್?

|
Google Oneindia Kannada News

ಮಾರಣಾಂತಿಕ ಕೊರೊನಾ ವೈರಸ್ ನಿಂದಾಗಿ ಇಡೀ ವಿಶ್ವ ನಲುಗುತ್ತಿದೆ. ಇಲ್ಲಿಯವರೆಗೂ 14,31,973 ಮಂದಿಯಲ್ಲಿ ಕೋವಿಡ್-19 ಪಾಸಿಟಿವ್ ಕಂಡುಬಂದಿದೆ. ಡೆಡ್ಲಿ ಕೊರೊನಾ ವೈರಸ್ ನಿಂದ 82,096 ಮಂದಿ ಮೃತಪಟ್ಟಿದ್ದಾರೆ.

ಎಷ್ಟೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೂ, ಕೊರೊನಾ ವೈರಸ್ ಸೋಂಕು ಮನುಷ್ಯರಿಂದ ಮನುಷ್ಯರಿಗೆ ವ್ಯಾಪಕವಾಗಿ ಹರಡುತ್ತಿದೆ. ಹೀಗಿರುವಾಗಲೇ, ಮತ್ತೊಂದು ಆತಂಕ ಶುರುವಾಗಿದೆ.

ಹುಲಿಗೂ ಬಂತು ಕೊರೊನಾ, ಜಗತ್ತಿನಲ್ಲಿ ಮೊದಲ ಪ್ರಾಣಿ ಕೇಸ್?ಹುಲಿಗೂ ಬಂತು ಕೊರೊನಾ, ಜಗತ್ತಿನಲ್ಲಿ ಮೊದಲ ಪ್ರಾಣಿ ಕೇಸ್?

ಮನುಷ್ಯರಿಂದ ಪ್ರಾಣಿಗಳಿಗೂ ಕೊರೊನಾ ವೈರಸ್ ಹರಡುತ್ತಿದೆಯಾ ಎಂಬ ಅನುಮಾನ ಹಲವರಲ್ಲಿ ಮೂಡಿದೆ. ಯಾಕಂದ್ರೆ, ಯುಎಸ್ ಝೂನಲ್ಲಿದ್ದ 4 ವರ್ಷದ ಮಲಯನ್ ಟೈಗರ್ ಗೆ ನೋವೆಲ್ ಕೊರೊನಾ ವೈರಸ್ ಸೋಂಕು ತಗುಲಿತ್ತು. ರೋಗ ಲಕ್ಷಣವಿಲ್ಲದ ಕೋವಿಡ್-19 ಪಾಸಿಟಿವ್ ರೋಗದಿಂದ ಬಳಲುತ್ತಿದ್ದ ಝೂ ಸಿಬ್ಬಂದಿಯಿಂದ ಹುಲಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ವುಹಾನ್ ನಲ್ಲಿ ಜನ್ಮತಾಳಿದ ಕೊರೊನಾ ವೈರಸ್

ವುಹಾನ್ ನಲ್ಲಿ ಜನ್ಮತಾಳಿದ ಕೊರೊನಾ ವೈರಸ್

ಕೊರೊನಾ ವೈರಸ್ ಮೊದಲು ಕಾಣಿಸಿಕೊಂಡಿದ್ದು ಚೀನಾದ ವುಹಾನ್ ನಲ್ಲಿ. ಅಲ್ಲಿನ ಸಮುದ್ರಾಹಾರ ಮಾರುಕಟ್ಟೆಯ ಕೆಲ ವ್ಯಾಪಾರಿಗಳಲ್ಲಿ ಮೊದಲು ಸೋಂಕು ಕಾಣಿಸಿಕೊಂಡಿತ್ತು. ವುಹಾನ್ ನ ಸಮುದ್ರಾಹಾರ ಮಾರುಕಟ್ಟೆಯಲ್ಲಿದ್ದ ಪ್ರಾಣಿಗಳಿಂದ ಮನುಷ್ಯರಿಗೆ ವೈರಸ್ ಹರಡಿರಬಹುದು ಎಂದು ಶಂಕಿಸಲಾಗಿದೆ. ಅಂಥದ್ರಲ್ಲಿ, ಇದೀಗ ಮನುಷ್ಯರಿಂದ ಮತ್ತೆ ಪ್ರಾಣಿಗಳಿಗೂ ಕೊರೊನಾ ಕಂಟಕ ಕಾದಿದೆಯಾ.? ಗೊತ್ತಿಲ್ಲ.! ಆದರೆ, ಹಾಂಗ್ ಕಾಂಗ್ ನಲ್ಲಿನ ಎರಡು ಶ್ವಾನಗಳಲ್ಲೂ ಕೋವಿಡ್-19 ಪಾಸಿಟಿವ್ ಕಂಡು ಬಂದಿತ್ತು.

ಮನುಷ್ಯರಿಂದ ಪ್ರಾಣಿಗಳಿಗೆ ಕೊರೊನಾ.?

ಮನುಷ್ಯರಿಂದ ಪ್ರಾಣಿಗಳಿಗೆ ಕೊರೊನಾ.?

ಮನುಷ್ಯರಿಂದ ಮನುಷ್ಯರಿಗೆ ಕೊರೊನಾ ವೈರಸ್ ಹರಡುತ್ತಿರುವುದು ವಿಶ್ವದಾದ್ಯಂತ ಕಂಡುಬಂದಿದೆ. ಆದ್ರೆ, ಹಾಂಗ್ ಕಾಂಗ್ ನ ಶ್ವಾನಗಳು ಮತ್ತು ಮಲಯನ್ ಟೈಗರ್ ನಲ್ಲಿ ಕಂಡುಬಂದಿರುವ ಕೋವಿಡ್-19 ಪಾಸಿಟಿವ್ ಸಂಶೋಧಕರು ಮತ್ತು ವಿಜ್ಞಾನಿಗಳಲ್ಲಿ ಹಲವು ಪ್ರಶ್ನೆಗಳು ಗಳನ್ನು ಹುಟ್ಟುಹಾಕಿದೆ.

ಸೂಪರ್ ಸುದ್ದಿ: ಎರಡು ದಿನಗಳಲ್ಲಿ ಕೊರೊನಾನ ಕೊಲ್ಲುತ್ತೆ ಈ ಔಷಧಿ.!ಸೂಪರ್ ಸುದ್ದಿ: ಎರಡು ದಿನಗಳಲ್ಲಿ ಕೊರೊನಾನ ಕೊಲ್ಲುತ್ತೆ ಈ ಔಷಧಿ.!

ಬೆಕ್ಕುಗಳಿಗೆ ಸುಲಭವಾಗಿ ಹರಡುತ್ತದೆ

ಬೆಕ್ಕುಗಳಿಗೆ ಸುಲಭವಾಗಿ ಹರಡುತ್ತದೆ

ಬೆಕ್ಕುಗಳಲ್ಲಿ ಕೊರೊನಾ ವೈರಸ್ ಸೋಂಕು ಸುಲಭವಾಗಿ ಹರಡುತ್ತದೆ. ಉಸಿರಾಟದ ಹನಿಗಳ ಮೂಲಕ ಬೆಕ್ಕುಗಳಲ್ಲಿ ಕೊರೊನಾ ವೈರಸ್ ಸೋಂಕು ವ್ಯಾಪಿಸುತ್ತದೆ ಎಂದು ಚೀನಾದ ಹಾರ್ಬಿನ್ ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಕಂಡುಬಂದಿದೆ.

ಅಧ್ಯಯನ ಚಾಲ್ತಿಯಲ್ಲಿದೆ.!

ಅಧ್ಯಯನ ಚಾಲ್ತಿಯಲ್ಲಿದೆ.!

''ನಾಯಿ, ಹಂದಿ, ಕೋಳಿಗಳಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುವುದಿಲ್ಲ. ಆದ್ರೆ, ಬೆಕ್ಕುಗಳಲ್ಲಿ ಸುಲಭವಾಗಿ ಹರಡುತ್ತದೆ'' ಎಂದು ಸಂಶೋಧಕರು ತಿಳಿಸಿದ್ದಾರೆ. ಮನುಷ್ಯರಿಂದ ಪ್ರಾಣಿಗಳಿಗೂ ಸೋಂಕು ತಗಲುವ ಬಗ್ಗೆ ಸಂಶೋಧನೆ, ಅಧ್ಯಯನ ಸದ್ಯ ಚಾಲ್ತಿಯಲ್ಲಿದೆ.

ವಿಜ್ಞಾನಿಯ ಶಾಕಿಂಗ್ ಹೇಳಿಕೆ: ಅಯ್ಯೋ ವಿಧಿಯೇ.. ಬದುಕು ಮೊದಲಿನಂತಾಗುವುದಿಲ್ಲವೇ?ವಿಜ್ಞಾನಿಯ ಶಾಕಿಂಗ್ ಹೇಳಿಕೆ: ಅಯ್ಯೋ ವಿಧಿಯೇ.. ಬದುಕು ಮೊದಲಿನಂತಾಗುವುದಿಲ್ಲವೇ?

ಅಂತರ ಕಾಯ್ದುಕೊಳ್ಳಿ..

ಅಂತರ ಕಾಯ್ದುಕೊಳ್ಳಿ..

ಒಂದು ವೇಳೆ ನಿಮ್ಮ ಮನೆಯಲ್ಲಿ ಪ್ರಾಣಿಗಳನ್ನು ನೀವು ಸಾಕಿದ್ದರೆ, ಕೊರೊನಾ ವೈರಸ್ ಸೋಂಕು ನಿಮ್ಮಲ್ಲಿ ಅಥವಾ ಪ್ರಾಣಿಗಳಲ್ಲಿ ಕಾಣಿಸಿಕೊಂಡರೆ, ಅಂತರ ಕಾಯ್ದುಕೊಳ್ಳಿ. ಸ್ವಚ್ಛತೆ ಮತ್ತು ಶುಚಿತ್ವ ಕಾಪಾಡಿಕೊಳ್ಳಿ. ಆಗಾಗ ಸೋಪಿನಿಂದ ಕೈತೊಳೆದುಕೊಳ್ಳಿ. ಕಣ್ಣು, ಮೂಗು, ಬಾಯಿ, ಕಿವಿಯೊಳಗೆ ಕೈ ಹಾಕಬೇಡಿ.

ಒಂದು ದೇಶ ಸಂಪೂರ್ಣ ನಾಶ: ಕೋಡಿಶ್ರೀಗಳು ನುಡಿದ 'ಭೀಕರ' ಯುಗಾದಿ ಭವಿಷ್ಯ!ಒಂದು ದೇಶ ಸಂಪೂರ್ಣ ನಾಶ: ಕೋಡಿಶ್ರೀಗಳು ನುಡಿದ 'ಭೀಕರ' ಯುಗಾದಿ ಭವಿಷ್ಯ!

English summary
Coronavirus: Can Humans Infect Animals too?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X