• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ವೈರಸ್: ಕೆಟ್ಟ ದಾಖಲೆ ಬರೆಯುತ್ತಿದೆ ಬೆಂಗಳೂರು

|

ಬೆಂಗಳೂರು, ಸೆಪ್ಟೆಂಬರ್ 26: ಕೊರೊನಾ ವೈರಸ್ ಇಲ್ಲವೇ ಇಲ್ಲ ಎನ್ನುವ ಮಟ್ಟಿಗೆ ನಗರಗಳಲ್ಲಿ ಜನಜೀವನ ಸಹಜವಾಗಿ ನಡೆಯುತ್ತಿದೆ. ಕೊರೊನಾದೊಂದಿಗೆ ಹೊಂದಿಕೊಂಡವರಂತೆ ಜನರು ಯಾವುದೇ ಮುಂಜಾಗ್ರತಾ ಕ್ರಮಗಳಿಲ್ಲದ ಗುಂಪುಗೂಡುತ್ತಿರುವುದು ಅಪಾಯಕ್ಕೆ ಎಡೆ ಮಾಡಿಕೊಡುತ್ತಿದೆ.

ಐದು ಮಿಲಿಯನ್‌ಗೂ ಅಧಿಕ ಜನಸಂಖ್ಯೆಯುಳ್ಳ ದೇಶದ ಒಟ್ಟು ಒಂಬತ್ತು ಮೆಟ್ರೊಪಾಲಿಟನ್ ನಗರಗಳಲ್ಲಿ ಅತಿ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳು ಹಾಗೂ ಸಾವುಗಳು ವರದಿಯಾಗಿರುವುದು ಪುಣೆಯಲ್ಲಿ. ಆದರೆ ಬೆಂಗಳೂರಿನಲ್ಲಿ ವರದಿಯಾಗುತ್ತಿರುವ ಪ್ರಕರಣಗಳ ಪ್ರಮಾಣ ನೋಡಿದರೆ ಇಡೀ ಭಾರತದಲ್ಲಿಯೇ ಅತ್ಯಂತ ಕೋವಿಡ್ ಸಂತ್ರಸ್ತ ನಗರ ಎಂಬ ಹಣೆಪಟ್ಟಿ ಅಂಟಿಕೊಳ್ಳುವ ದಿನ ದೂರವಿಲ್ಲ ಎಂಬ ಆತಂಕ ಮೂಡುತ್ತದೆ.

ಕರ್ನಾಟಕದಲ್ಲಿ ಒಟ್ಟು 8655, ಬೆಂಗಳೂರಿನಲ್ಲಿ 4080 ಕೊರೊನಾ ಸೋಂಕಿತರು ಪತ್ತೆ

ಕಳೆದ ಒಂದು ತಿಂಗಳಲ್ಲಿ ಬೆಂಗಳೂರಿನಲ್ಲಿ ವರದಿಯಾದ ಕೋವಿಡ್ ಪ್ರಕರಣಗಳು ಕಳವಳಕಾರಿ ಮಟ್ಟದಲ್ಲಿವೆ. ಸೆಪ್ಟೆಂಬರ್ ತಿಂಗಳಲ್ಲಿ ದೇಶದ ಪ್ರಮುಖ ನಗರಗಳ ಪೈಕಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳು ಹಾಗೂ ಮರಣಗಳು ದಾಖಲಾಗಿವೆ. ಬೆಂಗಳೂರು ಅತ್ಯಂತ ವೇಗವಾಗಿ ಸೋಂಕಿನ ಹೊಡೆತಕ್ಕೆ ನಲುಗುತ್ತಿದೆ.

ಅಹ್ಮದಾಬಾದ್‌ನಲ್ಲಿ ಕಳೆದ ತಿಂಗಳಿಂದ ಸಾವಿನ ಪ್ರಮಾಣ ಕಡಿಮೆಯಾಗಿದ್ದರೂ, ದೇಶದಲ್ಲಿ ಅತಿ ಹೆಚ್ಚು, 4.8ರಷ್ಟು ಮರಣ ಪ್ರಮಾಣ ಹೊಂದಿರುವ ನಗರವಾಗಿ ಮುಂದುವರಿದಿದೆ. ಮುಂದೆ ಓದಿ.

ಚಂಡೀಗಢದಲ್ಲಿ ಆಕ್ಸ್‌ಫರ್ಡ್ ಕೊರೊನಾ ಲಸಿಕೆ ಪ್ರಯೋಗ ಆರಂಭ

ಮೂರು ನಗರಗಳ ಹಿಂದೆ ಬೆಂಗಳೂರು

ಮೂರು ನಗರಗಳ ಹಿಂದೆ ಬೆಂಗಳೂರು

ಪುಣೆ, ಮುಂಬೈ ಮತ್ತು ಚೆನ್ನೈಗಳು ಪ್ರತಿ ಮಿಲಿಯನ್ ಜನಸಂಖ್ಯೆಗೆ ಅತ್ಯಧಿಕ ಕೊರೊನಾ ವೈರಸ್ ಪ್ರಕರಣ ಹಾಗೂ ಮರಣಗಳನ್ನು ಹೊಂದಿವೆ. ಕಳೆದ ಒಂದು ತಿಂಗಳಲ್ಲಿ ಮುಂಬೈ ಅನ್ನು ಪುಣೆ ಹಿಂದಿಕ್ಕಿದೆ. ಪ್ರತಿ ಮಿಲಿಯನ್ ಪ್ರಕರಣಗಳ ಲೆಕ್ಕಾಚಾರದಲ್ಲಿ ಈ ಮೂರು ನಗರಗಳ ಹಿಂದೆಯೇ ಬೆಂಗಳೂರು ಇದೆ. ಆದರೆ ಕಳೆದ ಕೆಲವು ವಾರಗಳಲ್ಲಿ ಪ್ರತಿ ಮಿಲಿಯನ್‌ಗೆ ಸಾವಿನ ಸಂಖ್ಯೆಯಲ್ಲಿ ದೆಹಲಿ ನಾಲ್ಕನೆಯ ಸ್ಥಾನದಲ್ಲಿದೆ.

ಬೆಂಗಳೂರಲ್ಲಿ ಅತ್ಯಧಿಕ

ಬೆಂಗಳೂರಲ್ಲಿ ಅತ್ಯಧಿಕ

ಕಳೆದ ಒಂದು ತಿಂಗಳಲ್ಲಿ ಬೆಂಗಳೂರಿನಲ್ಲಿ ಕೊರೊನಾ ವೈರಸ್ ಪ್ರಕರಣಗಳಲ್ಲಿ ಶೇ 86 ಮತ್ತು ಸಾವಿನ ಸಂಖ್ಯೆಯಲ್ಲಿ ಶೇ 58ರಷ್ಟು ಏರಿಕೆಯಾಗಿದೆ. ಇದು ದೇಶದ ಯಾವುದೇ ನಗರಗಳಿಗಿಂತ ಅಧಿಕ. ಕಳೆದ ಒಂದು ತಿಂಗಳಲ್ಲಿ ಶೇ 77ರಷ್ಟು ಪ್ರಕರಣಗಳೊಂದಿಗೆ ಪುಣೆ ಎರಡನೆಯ ಸ್ಥಾನದಲ್ಲಿದೆ. ದೆಹಲಿ ಮತ್ತು ಮುಂಬೈನಲ್ಲಿ ದೊಡ್ಡ ಮಟ್ಟಿನ ಇಳಿಕೆಯಾಗಿದೆ.

ಲಸಿಕೆ ಅಭಿವೃದ್ಧಿ, ಉತ್ಪಾದನೆ ವೆಚ್ಚಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಸೂಚಿ

ಸಿಎಫ್ಆರ್ ಇಳಿಕೆ

ಸಿಎಫ್ಆರ್ ಇಳಿಕೆ

ಮರಣ ಪ್ರಮಾಣದಲ್ಲಿ ಬೆಂಗಳೂರಿನ ಬಳಿಕ ಅತಿ ಹೆಚ್ಚು ಏರಿಕೆಯಾಗಿರುವುದು ಕೋಲ್ಕತಾದಲ್ಲಿ. ಪ್ರಕರಣ ಮರಣ ಪ್ರಮಾಣ (ಸಿಎಫ್ಆರ್) ಅಥವಾ ಪ್ರತಿ ನೂರು ಪ್ರಕರಣಗಳಿಗೆ ಸಾವಿನ ಸಂಖ್ಯೆ ಈ ಒಂದು ತಿಂಗಳ ಅವಧಿಯಲ್ಲಿ ಎಲ್ಲ 9 ನಗರಗಳಲ್ಲಿ ಇಳಿಕೆಯಾಗಿದೆ. ಆಸ್ಪತ್ರೆಗೆ ದಾಖಲಾದ ಪ್ರಕರಣಗಳ ನಿರ್ವಹಣೆ ಉತ್ತಮವಾಗಿದೆ ಎಂಬುದನ್ನು ಇದು ಸೂಚಿಸುತ್ತದೆ ಅಥವಾ ಪ್ರಕರಣಗಳು ಹಿಂದಿನಷ್ಟು ಗಂಭೀರವಾಗಿಲ್ಲ ಎನ್ನಬಹುದು. ಸಿಎಫ್‌ಆರ್‌ನಲ್ಲಿ ದೆಹಲಿ ಮತ್ತು ಮುಂಬೈ ದೊಡ್ಡ ಪ್ರಮಾಣದಲ್ಲಿ ಇಳಿಕೆ ಕಂಡಿದ್ದರೆ, ಅಹಮದಾಬಾದ್ ಹಾಗೂ ಪುಣೆ ನಂತರದಲ್ಲಿವೆ.

ರಾಷ್ಟ್ರೀಯ ಸರಾಸರಿಗಿಂತಲೂ ಹೆಚ್ಚು

ರಾಷ್ಟ್ರೀಯ ಸರಾಸರಿಗಿಂತಲೂ ಹೆಚ್ಚು

ಆದರೆ ರಾಷ್ಟ್ರೀಯ ಸರಾಸರಿಗಿಂತಲೂ ಹೈದರಾಬಾದ್ ಹಾಗೂ ಬೆಂಗಳೂರಿನಲ್ಲಿ ಸಿಎಫ್ಆರ್ ಅತಿ ಹೆಚ್ಚಿದೆ. ಅಹಮದಾಬಾದ್, ಮುಂಬೈ ಮತ್ತು ಸೂರತ್‌ ಸಹ ಈ ಒಂಬತ್ತು ನಗರ ಪ್ರದೇಶಗಳಲ್ಲಿ ಅತಿ ಹೆಚ್ಚಿನ ಸಿಎಫ್ಆರ್‌ನಲ್ಲಿ ಮುಂದುವರಿದಿವೆ.

  North Korea ಅಧ್ಯಕ್ಷನ್ನ meet ಮಾಡ್ತೀನಿ , ನೋ Tension | Oneindia Kannada
  ಹಾಸಿಗೆಗಳು ಸಿಗುತ್ತಿಲ್ಲ

  ಹಾಸಿಗೆಗಳು ಸಿಗುತ್ತಿಲ್ಲ

  ಪ್ರಕರಣಗಳಲ್ಲಿ ವೇಗದ ಏರಿಕೆಯಾಗುತ್ತಿರುವುದರಿಂದ ಬೆಂಗಳೂರು ಮತ್ತು ಪುಣೆಗಳಲ್ಲಿ ಆಸ್ಪತ್ರೆಗಳು ಸದಾ ಭರ್ತಿಯಾಗಿಯೇ ಇವೆ. ಜನರು ಹಾಸಿಗೆ ಸಿಗದೆ ಪರದಾಡುತ್ತಿದ್ದಾರೆ. ಪ್ರಕರಣಗಳ ಏರಿಕೆಯಲ್ಲಿ ದೆಹಲಿ ನಂತರದ ಸ್ಥಾನದಲ್ಲಿದೆ. ಆದರೆ ಸಾವಿನ ಮಟ್ಟದಲ್ಲಿ ಇಳಿಕೆಯಾಗಿದೆ. ಅಹಮಾದಾಬಾದ್ ಪ್ರಕರಣ ಹಾಗೂ ಮರಣದಲ್ಲಿ ಅತಿ ಕಡಿಮೆ ಏರಿಕೆ ಕಂಡಿದೆ.

  English summary
  Bengaluru is the worst hit by Covid 19 in September among 9 metro cities of the country.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X