ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಮುಕ್ತ ಭಾರತ; ಯಾವ ಸ್ಯಾನಿಟೈಸರ್ ಬಳಕೆ ಸೂಕ್ತ?

|
Google Oneindia Kannada News

ಬೆಂಗಳೂರು, ಮಾರ್ಚ್.16: ಜಾಗತಿಕ ಮಟ್ಟದಲ್ಲಷ್ಟೇ ಹಾವಳಿ ಎಬ್ಬಿಸಿದ್ದ ಕೊರೊನಾ ವೈರಸ್ ಭಾರತಕ್ಕೂ ಲಗ್ಗೆ ಇಟ್ಟು ಆಗಿದೆ. ದೇಶದಲ್ಲೀಗ ಸ್ಯಾನಿಟೈಸರ್ ಗಳಿಗೆ ಸಖತ್ ಡಿಮ್ಯಾಂಡಪ್ಪೋ ಡಿಮ್ಯಾಂಡು. ಈ ನಡುವೆ ಸಾರ್ವಜನಿಕರು ಕೊಂಚ ಎಚ್ಚರಿಕೆ ವಹಿಸಿಕೊಳ್ಳಬೇಕು.

ಮಾರಕ ಸೋಂಕಿನಿಂದ ಅಂತರ ಕಾಯ್ದುಕೊಳ್ಳಲು ಸರ್ಕಾರವು ಸುರಕ್ಷತಾ ಸಲಹೆಗಳನ್ನು ನೀಡಿದೆ. ಇದರ ಮಧ್ಯೆ ಕೊರೊನಾ ವೈರಸ್ ಮತ್ತು ಹಾನಿಕಾರಕ ರೋಗಣುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳುವುದಕ್ಕೆ ಜನರು ಸ್ಯಾನಿಟೈಸರ್ ಗಳ ಮೊರೆ ಹೋಗುತ್ತಿದ್ದಾರೆ.

ಸ್ಯಾನಿಟೈಸರ್ ಬಳಸುವುದು ಓಕೆ, ಆದರೆ ಯಾವ ರೀತಿಯ ಸ್ಯಾನಿಟೈಸರ್ ಗಳು ರೋಗಾಣುಗಳಿಂದ ನಮ್ಮನ್ನು ದೂರ ಇಡುತ್ತವೆ ಎಂಬುದರ ಬಗ್ಗೆ ಸಾಕಷ್ಟು ಜನರಿಗೆ ಮಾಹಿತಿ ಇರುವುದಿಲ್ಲ. ದೇಶದಲ್ಲಿ ಸೃಷ್ಟಿಯಾಗಿರುವ ಆತಂಕಕಾರಿ ಸನ್ನಿವೇಶದಲ್ಲಿ ಎಂಥಾ ಸ್ಯಾನಿಟೈಸರ್ ಬಳಸಬೇಕು ಎಂಬುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.

ಸಾಮಾನ್ಯ ಸಾಬೂನಿಗಿಂತ ಸ್ಯಾನಿಟೈಸರ್ಸ್ ಪರಿಣಾಮಕಾರಿ

ಸಾಮಾನ್ಯ ಸಾಬೂನಿಗಿಂತ ಸ್ಯಾನಿಟೈಸರ್ಸ್ ಪರಿಣಾಮಕಾರಿ

ಹಾನಿಕಾರಕ ಸೂಕ್ಷ್ಮಾಣುಗಳಿಂದ ರಕ್ಷಿಸಿಕೊಳ್ಳುವುದಕ್ಕೆ ಸಾಮಾನ್ಯವಾಗಿ ಜನರು ಸಾಬೂನುಗಳನ್ನು ಬಳಸಿಕೊಳ್ಳುತ್ತಾರೆ. ಈ ಸೋಪ್ ಗಳಿಗಿಂತಲೂ ಸ್ಯಾನಿಟೈಸರ್ ಗಳು ಹೆಚ್ಚು ಪರಿಣಾಮಕಾರಿ ಪ್ರಭಾವವನ್ನು ಬೀರುತ್ತದೆ. ಹೀಗಾಗಿ ಸೋಪ್ ಗಿಂತ ಸ್ಯಾನಿಟೈಸರ್ ಬಳಕೆಯೇ ಸೂಕ್ತ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಸ್ಯಾನಿಟೈಸರ್ಸ್ ಗಳೆಲ್ಲವೂ ಒಂದೇ ಅಲ್ಲ ಎಂದ ತಜ್ಞರು

ಸ್ಯಾನಿಟೈಸರ್ಸ್ ಗಳೆಲ್ಲವೂ ಒಂದೇ ಅಲ್ಲ ಎಂದ ತಜ್ಞರು

ಇನ್ನು, ಕೊರೊನಾ ವೈರಸ್ ನಿಂದ ಪಾರಾಗಲು ಜನರು ಸ್ಯಾನಿಟೈಸರ್ ಗಳನ್ನು ಬಳಸಲು ಮುಗಿ ಬೀಳುತ್ತಿದ್ದಾರೆ. ಆದರೆ ಎಲ್ಲ ಸ್ಯಾನಿಟೈಸರ್ ಗಳು ಒಂದೇ ರೀತಿಯಲ್ಲಿ ಪ್ರಭಾವಕಾರಿಯಾಗಿ ಕೆಲಸ ಮಾಡುವುದಿಲ್ಲ.

ಎರಡು ವಿಧಗಳಲ್ಲಿ ಇರುವ ಹ್ಯಾಂಡ್ ಸ್ಯಾನಿಟೈಸರ್

ಎರಡು ವಿಧಗಳಲ್ಲಿ ಇರುವ ಹ್ಯಾಂಡ್ ಸ್ಯಾನಿಟೈಸರ್

ಜನರು ಸ್ಯಾನಿಟೈಸರ್ ಗಳನ್ನು ಬಳಸುವ ಮೊದಲು ಈ ವಿಚಾರವನ್ನು ತಿಳಿದುಕೊಂಡಿರಬೇಕು. ಅಸಲಿಗೆ ಹ್ಯಾಂಡ್ ಸ್ಯಾನಿಟೈಸರ್ ಗಳಲ್ಲಿ ಎರಡು ವಿಧಾನಗಳಿವೆ. ಒಂದು ಆಲ್ಕೋಹಾಲ್ ಯುಕ್ತ ಸ್ಯಾನಿಟೈಸರ್ ಆಗಿದ್ದರೆ, ಇನ್ನೊಂದು ಆಲ್ಕೋಹಾಲ್ ರಹಿತ ಸ್ಯಾನಿಟೈಸರ್ ಎಂದು ಕರೆಯಲಾಗುತ್ತದೆ.

ಆಲ್ಕೋಹಾಲ್ ಯುಕ್ತ ಸ್ಯಾನಿಟೈಸರ್ ಗಳೇ ಪರಿಣಾಮಕಾರಿ

ಆಲ್ಕೋಹಾಲ್ ಯುಕ್ತ ಸ್ಯಾನಿಟೈಸರ್ ಗಳೇ ಪರಿಣಾಮಕಾರಿ

ಹ್ಯಾಂಡ್ ಸ್ಯಾನಿಟೈಸರ್ ಗಳ ಪೈಕಿ ಆಲ್ಕೋಹಾಲ್ ಯುಕ್ತ ಸ್ಯಾನಿಟೈಸರ್ ಗಳಲ್ಲಿ ಶೇ.60ರಿಂದ 95ರಷ್ಟು ಆಲ್ಕೋಹಾಲ್ ಅಂಶವಿರುವ ಐಸೋಪ್ರೊಪಿಲ್ ಆಲ್ಕೋಹಾಲ್ ಮತ್ತು ಎಥನಾಲ್ ಅಂಶವನ್ನು ಸೇರಿಸಲಾಗಿರುತ್ತದೆ. ಆಲ್ಕೋಹಾಲ್ ಮಿಶ್ರಣದ ಪ್ರಮಾಣಕ್ಕೆ ತಕ್ಕಂತೆ ಈ ಈ ಸ್ಯಾನಿಟೈಸರ್ ಗಳ ಬೆಲೆಯಲ್ಲಿ ಏರಿಳಿತ ಕಂಡು ಬರುತ್ತದೆ.

ಆಲ್ಕೋಹಾಲ್ ರಹಿತ ಸ್ಯಾನಿಟೈಸರ್ ಗಳೂ ಪರಿಣಾಮಕಾರಿಯೇ

ಆಲ್ಕೋಹಾಲ್ ರಹಿತ ಸ್ಯಾನಿಟೈಸರ್ ಗಳೂ ಪರಿಣಾಮಕಾರಿಯೇ

ಇನ್ನು, ಆಲ್ಕೋಹಾಲ್ ರಹಿತ ಸ್ಯಾನಿಟೈಸರ್ ನಲ್ಲಿ ಆಲ್ಕೋಹಾಲ್ ಬದಲಿಗೆ ಅಮೋನಿಯಂ ಸಂಯುಕ್ತ ಅಂಶಗಳುಳ್ಳ ದ್ರವಣವನ್ನು ಮಿಶ್ರಣ ಮಾಡಲಾಗಿರುತ್ತದೆ. ಈ ಸ್ಯಾನಿಟೈಸರ್ ಗಳು ಸೂಕ್ಷ್ಮಾಣುಗಳನ್ನು ಕೊಲ್ಲುತ್ತವೆ. ಆದರೆ, ಆಲ್ಕೋಹಾಲ್ ಯುಕ್ತ ಸ್ಯಾನಿಟೈಸರ್ ಗಿಂತ ಹೆಚ್ಚು ಪರಿಣಾಮಕಾರಿಯಲ್ಲ ಎಂದು ಹೇಳಲಾಗುತ್ತದೆ.

ಆಲ್ಕೋಹಾಲ್ ಯುಕ್ತ ಸ್ಯಾನಿಟೈಸರ್ ಗಳು ಪ್ರಭಾವಶಾಲಿ

ಆಲ್ಕೋಹಾಲ್ ಯುಕ್ತ ಸ್ಯಾನಿಟೈಸರ್ ಗಳು ಪ್ರಭಾವಶಾಲಿ

ಆಲ್ಕೋಹಾಲ್ ರಹಿತ ಸ್ಯಾನಿಟೈಸರ್ ಗಳಿಗೆ ಹೋಲಿಸಿ ನೋಡಿದರೆ ಆಲ್ಕೋಹಾಲ್ ಯುಕ್ತ ಸ್ಯಾನಿಟೈಸರ್ ಗಳು ಹೆಚ್ಚು ಪ್ರಭಾವಶಾಲಿ ಎಂದು ತಿಳಿದು ಬಂದಿದೆ. ಈ ಸ್ಯಾನಿಟೈಸರ್ ಗಳು ಹಲವು ಬಗೆಯ ಬ್ಯಾಕ್ಟಿರಿಯಾಗಳನ್ನು ಕೊಲ್ಲುವ ಶಕ್ತಿಯನ್ನು ಹೊಂದಿರುತ್ತದೆ. ಶೀತಜ್ವರದ ಸೂಕ್ಷ್ಮಾಣು, ರೈನೋ ವೈರಸ್, ಹೆಪಟೈಟಸ್-ಎ ವೈರಸ್, ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್ ಕೊರೊನಾ ವೈರಸ್(MERS-Cov) ಗಳಿಂದ ರಕ್ಷಿಸುವ ಶಕ್ತಿಯನ್ನು ಆಲ್ಕೋಹಾಲ್ ಯುಕ್ತ ಸ್ಯಾನಿಟೈಸರ್ ಗಳು ಹೊಂದಿರುತ್ತವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಸ್ಯಾನಿಟೈಸರ್ ಗಳಲ್ಲಿ ಶೇ.60ರಷ್ಟು ಆಲ್ಕೋಹಾಲ್ ಅಂಶ

ಸ್ಯಾನಿಟೈಸರ್ ಗಳಲ್ಲಿ ಶೇ.60ರಷ್ಟು ಆಲ್ಕೋಹಾಲ್ ಅಂಶ

ಹ್ಯಾಂಡ್ ಸ್ಯಾನಿಟೈಸರ್ ಗಳಲ್ಲಿ ಕನಿಷ್ಠ ಶೇ.60ರಷ್ಟು ಆಲ್ಕೋಹಾಲ್ ಅಂಶವಿದ್ದಲ್ಲಿ ಮಾತ್ರ ಅಂಥ ಸ್ಯಾನಿಡೈಸರ್ ಗಳು ಪರಿಣಾಮಕಾರಿಯಾಗಿ ಸೂಕ್ಷ್ಮಾಣುಗಳ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಅವುಗಳ ಬಳಕೆಯಿಂದ ಅಷ್ಟಾಗಿ ಉಪಯೋಗವಾಗದು. ಅದಕ್ಕಿಂತ ಸೋಪ್ ಗಳಲ್ಲಿ ಕೈ ತೊಳೆಯುವುದೇ ಉತ್ತಮ ಎಂದು ಹೇಳಲಾಗುತ್ತಿದೆ.

English summary
Coronavirus Awareness: Which Sanitisers Are Effective To Deadly Virus. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X