• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಸೋಂಕಿತರ ಟ್ರ್ಯಾಕ್ ಮಾಡಲು Corona Watch App

|

ಬೆಂಗಳೂರು, ಮಾರ್ಚ್ 27: ಕೊರೊನಾವೈರಸ್ ವಿರುದ್ಧ ನಿರ್ಣಾಯಕ ಹೋರಾಟಕ್ಕೆ ಸಾರ್ವಜನಿಕರ ಸಹಕಾರವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಯಸಿವೆ. ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಹಾಗೂ ನೆರವು ಇದೀಗ ಲಭ್ಯವಿದೆ. ಫೇಸ್ಬುಕ್, ವಾಟ್ಸಾಪ್, ಟೆಲಿಗ್ರಾಂ, ಇನ್ಸ್ಟಾಗ್ರಾಂ, ಟಿಕ್ ಟಾಕ್ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಈಗ ಆಂಡ್ರಾಯ್ಡ್ ಆಪ್ ಸರದಿ. ಸರ್ಕಾರ ರಚಿಸಿರುವ ವಾರ್ ರೂಮಿನಿಂದ ಅಧಿಕಾರಿ ಮನೀಶ್ ಮೌದ್ಗೀಲ್ ನೇತೃತ್ವದಲ್ಲಿ ಹೊರ ಬಂದಿದೆ ಕೊರೊನಾ ವಾಚ್ ಎಂಬ ಮೊಬೈಲ್ ಅಪ್ಲಿಕೇಷನ್

ವಾಟ್ಸಾಪ್ ಹಾಗೂ ಫೇಸ್ಬುಕ್ ಮೆಸೇಂಜರ್ ಆಪ್ ಮೂಲಕ ರಿಯಲ್ ಟೈಂನಲ್ಲಿ ಚಾಟ್ ಬಾಟ್ ಬಳಸಿ ಮಾಹಿತಿ ಪಡೆಯುವ ಸೌಲಭ್ಯವೂ ಇದೆ. ಗೂಗಲ್ ಮ್ಯಾಪ್, ಆಂಡ್ರಾಯ್ಡ್ ಆಪ್, ಅಪೋಲೋ ಆಸ್ಪತ್ರೆಯ ಎಐ ಆಧಾರಿತ ಚಾಟ್ ಬಾಟ್ ಹೀಗೆ ವಿವಿಧ ರೀತಿಯಲ್ಲಿ ಮಾಹಿತಿ ಹಾಗೂ ನೆರವು ಲಭ್ಯವಿದೆ.

ಕೊರೊನಾ ಅಂದ್ರೆ ಭಯನಾ? ಬೆಂಗಳೂರು ಪೊಲೀಸರ ಟಿಕ್‌ಟಾಕ್ ನೋಡಿ

ಈ ನಡುವೆ ಕರ್ನಾಟಕ ಸರ್ಕಾರದ ಆರೊಗ್ಯ ಇಲಾಖೆಯು ''Corona Watch " ಎಂಬ ಆಂಡ್ರಾಯ್ಡ್ ಆಪ್ಲಿಕೇಷನ್ ಹೊರತಂದಿದೆ. ಈ ಆಪ್ ಮೂಲಕ ಕೊವಿಡ್19 ಪಾಸಿಟಿವ್ ರೋಗಿಗಳ ಚಲನವಲನಗಳನ್ನು ರಿಯಲ್ ಟೈಮಲ್ಲಿ ಟ್ರ್ಯಾಕ್ ಮಾಡಬಹುದು. ಕೊರೊನಾ ಸೋಂಕಿತರು, ಹೋಂ ಕ್ವಾರಂಟೈನ್ ಆಗಿರುವವರು ಎಲ್ಲೆಲ್ಲಿದ್ದಾರೆ ಎಂದು ಮ್ಯಾಪ್ ನೋಡಿ ಗುರುತಿಸಬಹುದು. ವೈದ್ಯಕೀಯ ನೆರವು ಪಡೆಯುವುದು ಎಲ್ಲಿ? ಕೈಗೆ ಕ್ವಾರಂಟೈನ್ ಸ್ಟ್ಯಾಂಪ್ ಇರುವವರು ಎಲ್ಲೆಂದರಲ್ಲಿ ಓಡಾಡುತ್ತಿದ್ದರೆ ಯಾರಿಗೆ ಕರೆ ಮಾಡಿ ತಿಳಿಸಬೇಕು ಎಂಬೆಲ್ಲ ಮಾಹಿತಿ ಈ ಆಪ್ ನಲ್ಲಿದೆ.

ಪಾಸಿಟಿವ್ ರೋಗಿಗಳ ಚಲನವಲನ ಪತ್ತೆ

ಪಾಸಿಟಿವ್ ರೋಗಿಗಳ ಚಲನವಲನ ಪತ್ತೆ

ಕೊರೊನಾ ಸೋಂಕಿತ ರೋಗಿ ಕಳೆದ 14 ದಿನಗಳಲ್ಲಿ ಎಲ್ಲೆಲ್ಲಿ ಓಡಾಡುತ್ತಿದ್ದರು ಎಂಬ ಮಾಹಿತಿ ಸಿಗಲಿದೆ. ಸೋಂಕಿತರು ಯಾವ ಜಿಲ್ಲೆಯಲ್ಲಿದ್ದಾರೆ ಎಂದು ತಿಳಿಯಲು ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಹಳೆ ಮಾಹಿತಿ ಜೊತೆಗೆ ಸದ್ಯ ಕೊವಿಡ್19 ರೋಗಿ ಇರುವ ಸ್ಥಳ, ಚಲನವಲನ ಮಾಹಿತಿಯೂ ಸಿಗಲಿದೆ. ಸೋಂಕಿತರು ಭೇಟಿ ಮಾಡಿದ ವ್ಯಕ್ತಿಗಳು ನಿಮಗೆ ತಿಳಿದಿದ್ದರೆ 104, 080-46848600, 080 66692000 ಸಹಾಯವಾಣಿಗೆ ಕರೆ ಮಾಡಬಹುದು.

ಸಮೀಪದ ಆಸ್ಪತ್ರೆ ಬಗ್ಗೆ ಮಾಹಿತಿ

ಸಮೀಪದ ಆಸ್ಪತ್ರೆ ಬಗ್ಗೆ ಮಾಹಿತಿ

ನೀವು ಸದ್ಯ ನೆಲೆಸಿರುವ ಸ್ಥಳಕ್ಕೆ ಸಮೀಪದಲ್ಲಿರುವ ಆಸ್ಪತ್ರೆಗಳ ವಿವರ, ಸ್ಯಾಂಪಲ್ ಸಂಗ್ರಹಿಸುವ ಕೇಂದ್ರ ಹಾಗೂ ಟೆಸ್ಟಿಂಗ್ ಕೇಂದ್ರಗಳ ಪಟ್ಟಿಯೂ ಸಿಗಲಿದೆ. ಸೋಂಕಿತರ ಜೊತೆಗೆ ಪ್ರತಿದಿನ ಪಾಸಿಟಿವ್ ಪ್ರಕರಣಗಳ ಸಂಖ್ಯೆಯು ತಿಳಿಯಲಿದೆ. 4.7 ಎಂಬಿ ತೂಕದ ಈ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಆಧಾರಿತ ಆಪ್ ಬಳಸಲು ನಿಮ್ಮ ಫೋನ್ ನಲ್ಲಿ ಆಂಡ್ರಾಯ್ಡ್ ಓಎಸ್ 4.4 ಅಥವಾ ಅದಕ್ಕಿಂತ ಹೆಚ್ಚಿನ ಆವೃತ್ತಿ ಇದ್ದರೆ ಸಾಕು.

ಫೇಸ್ಬುಕ್‌ನಲ್ಲಿ ಕೊರೊನಾ ಮಾಹಿತಿಗಾಗಿ ಪ್ರತ್ಯೇಕ ಹೆಲ್ಪ್ ಡೆಸ್ಕ್

ಗೃಹ ದಿಗ್ಬಂಧನದಲ್ಲಿ ಯಾರಿದ್ದಾರೆ?

ಗೃಹ ದಿಗ್ಬಂಧನದಲ್ಲಿ ಯಾರಿದ್ದಾರೆ?

ವಿದೇಶದಿಂದ ಬಂದು ಕೆಲವರು ಸ್ವಯಂ ಗೃಹ ದಿಗ್ಬಂಧನದಲ್ಲಿದ್ದರೆ, ಮತ್ತೆ ಕೆಲವರು ಎಲ್ಲೆಂದರಲ್ಲೂ ಓಡಾಡಿಕೊಂಡಿದ್ದಾರೆ. ಇಂಥವರನ್ನು ಪತ್ತೆ ಹಚ್ಚಲು ಕೈ ಮೇಲೆ ಕ್ವಾರಂಟೈನ್ ಸೀಲ್ ಹಾಕಲಾಗುತ್ತದೆ. ನಿಮ್ಮ ಪ್ರದೇಶದಲ್ಲಿ ಯಾವ ಅಡ್ಡರಸ್ತೆಯಲ್ಲಿ ಯಾವ ಗಲ್ಲಿಯಲ್ಲಿ ಇಂಥವರಿಗೆ ಗೃಹ ದಿಗ್ಬಂಧನ ವಿಧಿಸಲಾಗಿದೆ ಎಂಬ ಮಾಹಿತಿಯನ್ನು ಮ್ಯಾಪ್ ಮೂಲಕ ಪಡೆದುಕೊಳ್ಳಬಹುದು. ಗೂಗಲ್, ಬಿಂಗ್ ಸೇರಿದಂತೆ ಇನ್ನೆರಡು ಆವೃತ್ತಿ ಮ್ಯಾಪ್ ಗಳಿದ್ದು, ಜೂಮ್ ಮಾಡಿ ಕ್ವಾರಂಟೈನ್ ಆಗಿರುವ ವ್ಯಕ್ತಿಯ ವಿಳಾಸ ಪತ್ತೆ ಹಚ್ಚಬಹುದು. ಆದರೆ, ಆರೋಗ್ಯ ಇಲಾಖೆ ವೆಬ್ ತಾಣದಲ್ಲಿರುವಂತೆ ಆಪ್ ನಲ್ಲಿ ವಿಳಾಸ ಮಾಹಿತಿ, ಕ್ವಾರಂಟೈನ್ ಯಾವಾಗ ಮುಕ್ತಾಯವಾಗಲಿದೆ ಎಂಬ ಮಾಹಿತಿ ಇಲ್ಲ. ಕೊರೊನಾ ವಾಚ್ ಆಪ್ ಡೌನ್ ಲೋಡ್ ಮಾಡಿಕೊಳ್ಳಲು ಕ್ಲಿಕ್ ಮಾಡಿ .

ಕೊರೊನಾ ಕುರಿತ ಸಹಾಯವಾಣಿ

ಕೊರೊನಾ ಕುರಿತ ಸಹಾಯವಾಣಿ

ಮೈಗೋವ್ ಕೊರೊನಾ ಸಹಾಯಕೇಂದ್ರ ವಾಟ್ಸಾಪ್‌ ಚಾಟ್‌ಬಾಟ್‌ ಬಿಟ್ಟು ಕೇಂದ್ರ ಸಹಾಯವಾಣಿ ಮತ್ತು ಆಯಾ ರಾಜ್ಯಗಳ ಸಹಾಯವಾಣಿ ಕೇಂದ್ರಗಳು ಕಾರ್ಯರೂಪದಲ್ಲಿದೆ ಸಹಾಯವಾಣಿ ಸಂಖ್ಯೆ + 91-11-23978046ಗೆ ಕರೆ ಮಾಡಿ ನೊವೆಲ್ ಕೊರೊನಾ ವೈರಾಣು ಕುರಿತ ಮಾಹಿತಿ, ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ. Karnataka Health Dept - 080-46848600. ರಾಜ್ಯ ಸಹಾಯವಾಣಿ - 104 Helpline - 080-6669200 ರಾಷ್ಟ್ರೀಯ ಸಹಾಯವಾಣಿ - 1075.

English summary
Corona Watch mobile app - shows the spots visited by Corona Positive Patients before detection with date and time of visit to that spot and also Home quartined list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more