ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಕಥೆ ಹೀಗಾದ್ರೆ, ಎಬೋಲಾಗೆ ವೈದ್ಯರ ಚಿಕಿತ್ಸೆ ಹೇಗಿತ್ತು?

|
Google Oneindia Kannada News

ನವದೆಹಲಿ, ಏಪ್ರಿಲ್.07: ಮಾನವ ಸಂಕುಲವನ್ನು ಕೊರೊನಾ ವೈರಸ್ ಎಂಬ ಮಹಾಮಾರಿ ಕಾಡುವ ಮೊದಲು ವೈದ್ಯಕೀಯ ಲೋಕವನ್ನೇ ಬೆಚ್ಚಿ ಬೀಳಿಸಿದ್ದು ಎಬೋಲಾ ವೈರಸ್. ಅತ್ಯಾಧುನಿಕ ತಂತ್ರಜ್ಞಾನ ಚಿಕಿತ್ಸಾ ವಿಧಾನಗಳ ನಡುವೆಯೇ ಎಬೋಲಾ ಸವಾಲು ಎದುರಾಯಿತು.

1976ರಲ್ಲಿ ಮೊದಲಿಗೆ ಎಬೋಲಾ ವೈರಸ್ ಕಾಣಿಸಿಕೊಂಡರೂ ಸಹ 2018ರವರೆಗೂ ಆಗಾಗ ಮಾರಕ ರೋಗ ಮರಣ ಮೃದಂಗ ಬಾರಿಸುತ್ತಲೇ ಬಂದಿದೆ. ಎಬೋಲಾ ಹಾವಳಿಗೆ ಒಂದೊಂದು ದೇಶವು ಒಂದೊಂದು ವರ್ಷದಲ್ಲಿ ತತ್ತರಿಸಿ ಹೋಗಿವೆ. ಎಬೋಲಾ ವೈರಸ್ ಕಾಟ ಅಮೆರಿಕಾಕ್ಕೂ ಹೊರತಾಗಿಲ್ಲ.

ಕೊರೊನಾಗಿಂತಲೂ ಮೊದಲು ವೈದ್ಯಕೀಯ ಲೋಕಕ್ಕೆ ಎಬೋಲಾ ಸವಾಲುಕೊರೊನಾಗಿಂತಲೂ ಮೊದಲು ವೈದ್ಯಕೀಯ ಲೋಕಕ್ಕೆ ಎಬೋಲಾ ಸವಾಲು

ಕೊರೊನಾ ವೈರಸ್ ಹರಡುವಿಕೆಗೆ ಮನೆಯಲ್ಲಿರಿ.. ಮನೆಯಲ್ಲಿರಿ.. ಮನೆಯಲ್ಲೇ ಇರಿ ಎಂದು ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳುತ್ತಿದ್ದಾರೆ. ಇದು ಈಗಿನ ಚಿಕಿತ್ಸಾ ಪದ್ಧತಿಯಂತೂ ಅಲ್ಲವೇ ಅಲ್ಲ. ಈ ಹಿಂದೆ ಹಲವು ದೇಶಗಳಲ್ಲಿ ಸಾಂಕ್ರಾಮಿಕ ಪಿಡುಗು ಕಾಣಿಸಿಕೊಂಡಾಗಲೂ ಸಾಮಾಜಿಕ ಅಂತರ ಮತ್ತು ಸ್ವಯಂ ದಿಗ್ಬಂಧನವನ್ನು ಅಸ್ತ್ರವಾಗಿ ಬಳಸಿಕೊಳ್ಳಲಾಗಿತ್ತು. ಕೊರೊನಾ ವೈರಸ್ ಸೋಂಕಿತರಿಗೆ ನೀಡುತ್ತಿರುವ ಚಿಕಿತ್ಸಾ ವಿಧಾನದ ಬಗ್ಗೆ ತಿಳಿದಿದ್ದೀರಾ. ಆದರೆ ಎಬೋಲಾ ಸೋಂಕಿತರಿಗೆ ನೀಡಿದ ಚಿಕಿತ್ಸಾ ವಿಧಾನ ಹೇಗಿತ್ತು, ಅಂದು ವೈದ್ಯರು ಅನುಸರಿಸಿದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಿಳಿಯೋಣ.

ಗೃಹ ದಿಗ್ಬಂಧನ ಮತ್ತು ಸಾಮಾಜಿಕ ಅಂತರವೇ ಅಸ್ತ್ರ

ಗೃಹ ದಿಗ್ಬಂಧನ ಮತ್ತು ಸಾಮಾಜಿಕ ಅಂತರವೇ ಅಸ್ತ್ರ

ಕೊರೊನಾ ವೈರಸ್ ನಿಂದ ಬಚಾವ್ ಆಗುವುದಕ್ಕೆ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ಸಾಮಾಜಿಕ ಅಂತರ ಮತ್ತು ಗೃಹ ದಿಗ್ಬಂಧನ ವಿಧಿಸಲಾಗುತ್ತಿದೆ. ಈ ಹಿಂದೆ ಜಗತ್ತನ್ನು ಕಾಡಿದ ಎಬೋಲಾ ವೈರಸ್ ವಿರುದ್ಧ ಸಮರ ಸಾರಿದ ಸಂದರ್ಭದಲ್ಲೂ ವೈದ್ಯರು ಮತ್ತು ವಿಜ್ಞಾನಿಗಳು ಮೊದಲು ಇದೇ ಅಸ್ತ್ರಗಳನ್ನು ಬಳಸುವಂತೆ ಸಲಹೆ ನೀಡಿದ್ದರು. ಅದರಂತೆ ಸೋಂಕು ಹೆಚ್ಚಾಗಿ ಕಾಣಿಸಿಕೊಂಡ ದೇಶಗಳೆಲ್ಲ ಕಂಪ್ಲೀಟ್ ಲಾಕ್ ಡೌನ್ ಆಗಿದ್ದವು.

ಎಬೋಲಾಗೆ ಕಡಿವಾಣ ಹಾಕಲು ದಿಗ್ಬಂಧನದ ಮದ್ದು

ಎಬೋಲಾಗೆ ಕಡಿವಾಣ ಹಾಕಲು ದಿಗ್ಬಂಧನದ ಮದ್ದು

ಮಾರಕ ಎಬೋಲಾ ಸೋಂಕು ಕೂಡಾ ಕೊರೊನಾ ವೈರಸ್ ನಂತೆ ಜನರ ನೇರ ಸಂಪರ್ಕದಿಂದ ಹೆಚ್ಚಾಗಿ ಹರಡುವ ಅಪಾಯವಿತ್ತು. ಇದನ್ನು ಅರಿತ ವೈದ್ಯರು ಶಂಕಿತ ಸೋಂಕಿತರನ್ನು ದಿಗ್ಬಂಧನದಲ್ಲಿ ಇರಿಸಲು ತೀರ್ಮಾನಿಸಿದರು. ಅಂದು ಗೃಹ ದಿಗ್ಬಂಧನ ಎಂಬ ಪದ್ಧತಿ ಇರಲಿಲ್ಲ. ಬದಲಿಗೆ ಆಸ್ಪತ್ರೆಗಳಲ್ಲೇ ಸಿದ್ಧಗೊಂಡ ಪ್ರತ್ಯೇಕ ವಾರ್ಡ್ ಗಳಲ್ಲಿ ಎಬೋಲಾ ಸೋಂಕಿತರನ್ನು ಕನಿಷ್ಠ 21 ದಿನಗಳ ಕಾಲ ದಿಗ್ಬಂಧನದಲ್ಲಿ ಇರಿಸಲಾಗುತ್ತಿತ್ತು.

ಆಗಾಗ ಕೈಗಳನ್ನು ಶುದ್ಧವಾಗಿ ತೊಳೆದುಕೊಳ್ಳುವಂತೆ ಸಲಹೆ

ಆಗಾಗ ಕೈಗಳನ್ನು ಶುದ್ಧವಾಗಿ ತೊಳೆದುಕೊಳ್ಳುವಂತೆ ಸಲಹೆ

ಇನ್ನು, ಎಬೋಲಾ ವೈರಸ್ ಕೂಡಾ ಸೋಂಕಿತ ವ್ಯಕ್ತಿಯ ರಕ್ತ, ದ್ರವ್ಯ ಹಾಗೂ ಸ್ಪರ್ಶದಿಂದ ಹರಡುತ್ತದೆ. ಈ ಹಿನ್ನೆಲೆ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಸೋಂಕಿತರು ಬಳಸಿದ ವಸ್ತುಗಳ ಪುನರ್ ಬಳಕೆಗೆ ನಿರ್ಬಂಧ ವಿಧಿಸಲಾಗಿತ್ತು. ಸೋಂಕಿತರು ಕೈಗಳನ್ನು ಶುದ್ಧವಾಗಿ ಸೋಪು, ಸ್ಯಾನಿಟೈಸರ್ ನಿಂದ ಆಗಾಗ ತೊಳೆದುಕೊಳ್ಳುವುದು. ಹ್ಯಾಂಡ್ ಗ್ಲೌಸ್ ಗಳನ್ನು ಧರಿಸುವಂತೆ ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಯು ಈ ಹಿಂದೆ ಕೂಡಾ ಸಲಹೆ ನೀಡಿತ್ತು.

ಹ್ಯಾಂಡ್ ಶೇಕ್ ಮಾಡುವಂತಿಲ್ಲ, ಲೈಂಗಿಕ ಸಂಪರ್ಕ ಹೊಂದುವಂತಿಲ್ಲ

ಹ್ಯಾಂಡ್ ಶೇಕ್ ಮಾಡುವಂತಿಲ್ಲ, ಲೈಂಗಿಕ ಸಂಪರ್ಕ ಹೊಂದುವಂತಿಲ್ಲ

ಲಿಬೇರಿಯಾ ದೇಶದ ಆರೋಗ್ಯ ಸಚಿವರು ಸಾರ್ವಜನಿಕರಲ್ಲಿ ಇಂಥದೊಂದು ಮನವಿ ಮಾಡಿಕೊಂಡರು. ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆ ಸೂಚಿಸುವವರೆಗೂ ಯಾರೊಬ್ಬರು ಹಸ್ತಲಾಘವ, ಅಪ್ಪುಗೆ ಮತ್ತು ಪರಸ್ಪರ ಪ್ರೀತಿಪಾತ್ರರು ಚುಂಬಿಸುವಂತಿಲ್ಲ. ಲೈಂಗಿಕ ಸಂಪರ್ಕ ಕ್ರಿಯೆಯಲ್ಲಿ ತೊಡಗದಂತೆ ಮನವಿ ಮಾಡಿಕೊಂಡರು. ಏಕೆಂದರೆ ಇದರಿಂದ ಅತಿಹೆಚ್ಚು ಸೋಂಕು ಹರಡುವ ಅಪಾಯವನ್ನು ಅರಿತುಕೊಳ್ಳಲಾಗಿತ್ತು.

ಚಿಕಿತ್ಸೆ ನೀಡುವ ವೈದ್ಯರಿಗೆ ಸರ್ಜಿಕಲ್ ಕ್ಯಾಪ್

ಚಿಕಿತ್ಸೆ ನೀಡುವ ವೈದ್ಯರಿಗೆ ಸರ್ಜಿಕಲ್ ಕ್ಯಾಪ್

ಎಬೋಲಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ ವಿಶೇಷವಾದ ಉಡುಪು ಸಿದ್ಧಪಡಿಸಲಾಗಿತ್ತು. ಸರ್ಜಿಕಲ್ ಕ್ಯಾಪ್ ಒಂದನ್ನು ತಯಾರಿಸಿದ್ದು, ಮುಖದ ಭಾಗಕ್ಕೆ ಗ್ಲಾಸಿನ ಕವರ್ ಹೊರತುಪಡಿಸಿ ಉಳಿದಂತೆ ಇಡೀ ದೇಹವೇ ಮುಚ್ಚಿಕೊಳ್ಳುವಂತಾ ಉಡುಪನ್ನು ವೈದ್ಯರು ಚಿಕಿತ್ಸೆ ನೀಡುವ ಸಂದರ್ಭದಲ್ಲಿ ತೊಟ್ಟುಕೊಳ್ಳುತ್ತಿದ್ದರು. ಇದರಿಂದ ಸೋಂಕಿತರಿಗೆ ಚಿಕಿತ್ಸೆ ನೀಡಿವಾಗಲೂ ಕೂಡಾ ವೈದ್ಯರಿಗೆ ಯಾವುದೇ ಅಪಾಯ ಆಗುತ್ತಿರಲಿಲ್ಲ, ಸೋಂಕು ಹರಡುತ್ತಿರಲಿಲ್ಲ.

ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ 2 ಸೆಟ್ ಗ್ಲೌಸ್

ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ 2 ಸೆಟ್ ಗ್ಲೌಸ್

ಎಬೋಲಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು ತಮ್ಮ ಕೈಗಳಿಗೆ ಎರಡು ಸೆಟ್ ಗ್ಲೌಸ್ ಗಳನ್ನು ಧರಿಸುವುದು. ಮೊದಲ ಗ್ಲೌಸ್ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಆದರೆ, ಇನ್ನೊಂದು ಗ್ಲೌಸ್ ಸೋಂಕಿತನಿಂದ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲು ನೆರವಾಗುತ್ತದೆ. ಇದರ ಜೊತೆ ಕಣ್ಣಿಗೆ ಸುರಕ್ಷತಾ ಗ್ಲೌಸ್ ಗಳನ್ನು ಧರಿಸಲಾಗುತ್ತದೆ. ಇನ್ನು, ವೈದ್ಯರ ಕಾಲಿಗೆ ರಬ್ಬರ್ ಬೂಟ್ ಗಳನ್ನು ಧರಿಸುತ್ತಿದ್ದರು.

ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರಲ್ಲೇ ಹೆದರಿಕೆ

ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರಲ್ಲೇ ಹೆದರಿಕೆ

ಎಬೋಲಾ ವೈರಸ್ ಎಂಬ ಮಾರಕ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಆರಂಭದಲ್ಲಿ ಮದ್ದು ಇಲ್ಲದ ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರೇ ಭಯಪಡುವಂತಾ ವಾತಾವರಣ ಸೃಷ್ಟಿಯಾಗಿತ್ತು. ಮೊದ ಮೊದಲು ಎಬೋಲಾ ಮಾರಿಗೆ ವೈದ್ಯರೇ ಬಲಿಯಾಗಿದ್ದರು. ಅದಾಗಿಯೂ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳದಿದ್ದಲ್ಲಿ ವೈದ್ಯರ ಪ್ರಾಣಕ್ಕೇ ಕುತ್ತು ಎದುರಾಗುವ ಅಪಾಯವಿತ್ತು. ಇದನ್ನೆಲ್ಲೆ ಮೆಟ್ಟಿ ನಿಂತು ಸುರಕ್ಷತಾ ಕ್ರಮಗಳನ್ನು ವೈದ್ಯರು ತೆಗೆದುಕೊಂಡಿದ್ದರು. ತಮ್ಮನ್ನು ತಾವು ಸುರಕ್ಷಿತವಾಗಿ ಇಟ್ಟುಕೊಂಡು ಸೋಂಕಿತರಿಗೆ ಚಿಕಿತ್ಸೆ ನೀಡಲು ಮುಂದಾದರು.

ಎಬೋಲಾ ಸೋಂಕಿತರಿಗೆ ನಾಲ್ಕು ರೀತಿಯಲ್ಲಿ ಚಿಕಿತ್ಸೆ

ಎಬೋಲಾ ಸೋಂಕಿತರಿಗೆ ನಾಲ್ಕು ರೀತಿಯಲ್ಲಿ ಚಿಕಿತ್ಸೆ

2018ರವರೆಗೂ ಎಬೋಲಾ ವೈರಸ್ ಸೋಂಕಿತರಿಗೆ ನಿರ್ದಿಷ್ಠವಾದ ಲಸಿಕೆ ಅಥವಾ ಔಷಧಿಯನ್ನು ಪತ್ತೆ ಹಚ್ಚಿರಲಿಲ್ಲ. 2018ರಲ್ಲಿ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊದಲ್ಲಿ ನಾಲ್ಕು ರೀತಿಯಲ್ಲಿ ಎಬೋಲಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಬಗ್ಗೆ ತನಿಖಾತ್ಮಕ ಪ್ರಯೋಗ ನಡೆಸಲಾಯಿತು. ಸದ್ಯದ ಮಟ್ಟಿಗೆ ಎಬೋಲಾ ಸೋಂಕಿತರ ಚಿಕಿತ್ಸೆಗೆ REGN-EB3 ಮತ್ತು mAb114 ಔಷಧವನ್ನು ಬಳಸಲಾಗುತ್ತಿದೆ.

ಎಬೋಲಾಗೆ ಅಮೆರಿಕಾ ಕಂಡು ಹಿಡಿದ ಔಷಧಿ

ಎಬೋಲಾಗೆ ಅಮೆರಿಕಾ ಕಂಡು ಹಿಡಿದ ಔಷಧಿ

1976ರಲ್ಲೇ ಮೊದಲು ಕಾಣಿಸಿಕೊಂಡ ಎಬೋಲಾ ವೈರಸ್ ಗೆ 2019ರ ಡಿಸೆಂಬರ್ 19ರಲ್ಲಿ ಔಷಧಿ ಪತ್ತೆ ಮಾಡಲಾಗಿತು. rVSV-ZEBOV ಎಂಬ ಔಷಧಿಯನ್ನು ಅಮೆರಿಕಾದ ಆಹಾರ ಮತ್ತು ಔಷಧಿ ಆಡಳಿತ ಮಂಡಳಿಯು ಅನುಮೋದನೆ ನೀಡಿತು. rVSV-ZEBOV ಲಸಿಕೆಯು ಸಿಂಗಲ್ ಡೋಸ್ ಆಗಿದ್ದು ಈ ಔಷಧಿಯು ಎಬೋಲಾ ವೈರಸ್ ನ ಜೈರಾ ತಳಿಯಿಂದ ಮಾತ್ರ ರಕ್ಷಿಸಲು ಸಹಕಾರಿ ಎಂದು ಎಫ್ ಡಿಎ ತಿಳಿಸಿತು.

ಎಬೋಲಾ ಕಾಟಕ್ಕೆ ಪ್ರಾಣ ಬಿಟ್ಟವರು ಅದೆಷ್ಟು ಮಂದಿ?

ಎಬೋಲಾ ಕಾಟಕ್ಕೆ ಪ್ರಾಣ ಬಿಟ್ಟವರು ಅದೆಷ್ಟು ಮಂದಿ?

ಪ್ರಪಂಚವನ್ನು ಈಗ ಕಾಡುತ್ತಿರುವ ಕೊರೊನಾ ವೈರಸ್ 209 ರಾಷ್ಟ್ರಗಳಲ್ಲಿ ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿದೆ. ಈ ಹಿಂದೆ ಎಬೋಲಾ ಕೂಡಾ ಹಲವು ರಾಷ್ಟ್ರಗಳಲ್ಲಿ ಸಾವಿರಾರು ಜನರ ಪ್ರಾಣವನ್ನು ತೆಗೆದಿತ್ತು. ಹಾಗಿದ್ದಲ್ಲಿ ಮಾರಕ ಸೋಂಕು ಅದೆಷ್ಟು ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿತ್ತು. ಎಬೋಲಾ ಮಹಾಮಾರಿಗೆ ಬಲಿಯಾಗಿದ್ದು ಅದೆಷ್ಟು ಜನರು ಎಂಬ ಪ್ರಶ್ನೆಗಳಿಗೆ ಮುಂದಿನ ಭಾಗದಲ್ಲಿ ಉತ್ತರವನ್ನು ಕಂಡುಕೊಳ್ಳೋಣ.

English summary
Corona Virus V/s Ebola Virus: Worldwide Doctors How Treat Ebola Patients. ಕೊರೊನಾ ವೈರಸ್
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X