ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲು ಓದಿ: ಭಾರತದಲ್ಲಿ ಕೊರೊನಾವೈರಸ್ 2ನೇ ಅಲೆ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳಿ

|
Google Oneindia Kannada News

ನವದೆಹಲಿ, ಏಪ್ರಿಲ್ 19: ಭಾರತದಲ್ಲಿ ಕೊರೊನಾವೈರಸ್ ಪರಿಸ್ಥಿತಿ ಮೊದಲಿನಂತಿಲ್ಲ. ಎರಡನೇ ಅಲೆಯು ಮೊದಲಿಗಿಂತ ವೇಗವಾಗಿ ಹರಡುತ್ತಿದ್ದು, ಹೆಚ್ಚು ಅಪಾಯಕಾರಿ ಎಂಬ ಆತಂಕವನ್ನು ಸೃಷ್ಟಿಸುತ್ತಿದೆ. ಕೆಮ್ಮು, ಜ್ವರ, ನೆಗಡಿ ಲಕ್ಷಣಗಳ ಜೊತೆಗೆ ಬೇರೆ ಬೇರೆ ರೀತಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.

ಕೊರೊನಾವೈರಸ್ ಎರಡನೇ ಅಲೆಯು ಶರವೇಗದಲ್ಲಿ ಹರಡುವುದಕ್ಕೆ ಸಾಕಷ್ಟು ಕಾರಣಗಳಿವೆ. ಸೋಂಕಿತರು ತಮ್ಮಲ್ಲಿ ಕಾಣಿಸಿಕೊಂಡ ರೋಗದ ಲಕ್ಷಣಗಳ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಏಕೆಂದರೆ ಸೋಂಕಿನ ಹೊಸ ಲಕ್ಷಣಗಳ ಬಗ್ಗೆ ಸಾರ್ವಜನಿಕರಲ್ಲಿ ಯಾವುದೇ ರೀತಿ ಮಾಹಿತಿಯಿಲ್ಲ.

Explainer: ಕೊರೊನಾವೈರಸ್ ಅಲೆಗಳ ಆಯುಷ್ಯದ ಮೇಲೆ ಭಾರತದ ಭವಿಷ್ಯ!?Explainer: ಕೊರೊನಾವೈರಸ್ ಅಲೆಗಳ ಆಯುಷ್ಯದ ಮೇಲೆ ಭಾರತದ ಭವಿಷ್ಯ!?

ಹೊಟ್ಟೆನೋವು, ಕಣ್ಣಿನ ದೃಷ್ಟಿ ಸಮಸ್ಯೆ, ಕಿವಿ ಕೇಳಿಸದಿರುವ ರೀತಿಯ ಅನೇಕ ಸಮಸ್ಯೆಗಳು ಎರಡನೇ ಅಲೆಯ ಕೊರೊನಾವೈರಸ್ ಸೋಂಕಿತರಲ್ಲಿ ಕಾಣಿಸಿಕೊಳ್ಳುತ್ತಿವೆ. ದೇಶದಲ್ಲಿ ಪ್ರತಿನಿತ್ಯ 2 ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಪತ್ತೆಯಾಗುತ್ತಿದ್ದು, ಹೊಸ ಕೊವಿಡ್-19 ಸೋಂಕಿತರಲ್ಲಿ ಕಾಣಿಸಿಕೊಳ್ಳುತ್ತಿರುವ ಆರೋಗ್ಯ ಸಮಸ್ಯೆಗಳೇನು. ಎರಡನೇ ಅಲೆಯ ಕೊರೊನಾವೈರಸ್ ರೋಗಿಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಲಕ್ಷಣಗಳೇನು. ಮೊದಲ ಅಲೆಗೂ ಎರಡನೇ ಅಲೆಗೂ ಮಧ್ಯೆ ಇರುವ ವ್ಯತ್ಯಾಸವೇನು. ಹೀಗೆ ಕೊರೊನಾವೈರಸ್ ಎರಡನೇ ಅಲೆಯ ಕುರಿತಾದ ಒಂದು ವಿಶೇಷ ವರದಿ 'Oneindia Kannada' ಓದುಗರಿಗಾಗಿ.

ಸಾಮಾನ್ಯವಾಗಿ ಸೋಂಕಿತರಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳು?

ಸಾಮಾನ್ಯವಾಗಿ ಸೋಂಕಿತರಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳು?

ಕೊರೊನಾವೈರಸ್ ಸೋಂಕಿತರಲ್ಲಿ ಮೊದಲಿನಿಂದಲೂ ಕೆಲವು ಸಾಮಾನ್ಯ ಲಕ್ಷಣಗಳು ಗೋಚರಿಸುತ್ತವೆ. ಒಣ ಕೆಮ್ಮು, ಜ್ವರ, ಆಹಾರದ ರುಚಿ ಕಳೆದುಕೊಳ್ಳುವುದು, ವಾಸನೆ ಗುರುತಿಸಲಾಗದೇ ಇರುವುದು, ಮೂಗು ಸ್ರವಿಸುವಿಕೆ ಹಾಗೂ ಗಂಟಲು ನೋವಿನ ಸಮಸ್ಯೆಯು ಕೊವಿಡ್-19 ಸೋಂಕಿತರಲ್ಲಿ ಕಾಣಿಸಿಕೊಳ್ಳುವು ಸಾಮಾನ್ಯ ಆರೋಗ್ಯ ಸಮಸ್ಯೆಗಳಾಗಿರುತ್ತವೆ.

ಗಂಟಲು ನೋವು, ಮೂಗಿನ ಸ್ರವಿಸುವಿಕೆ ಕೊರೊನಾ ಅಲ್ಲ

ಗಂಟಲು ನೋವು, ಮೂಗಿನ ಸ್ರವಿಸುವಿಕೆ ಕೊರೊನಾ ಅಲ್ಲ

ಸಾಮಾನ್ಯವಾಗಿ ವಯಸ್ಕರಲ್ಲಿ ಕಾಣಿಸಿಕೊಳ್ಳುವ ಗಂಟಲು ನೋವು ಮತ್ತು ಮೂಗಿನ ಸ್ರವಿಸುವಿಕೆಯು ಕೊರೊನಾವೈರಸ್ ಸೋಂಕಿನ ಲಕ್ಷಣ ಆಗಿರುವುದಿಲ್ಲ. ಈ ಲಕ್ಷಣ ಇತರೆ ಸಾಮಾನ್ಯ ವೈರಸ್ ದಾಳಿಯಿಂದಲೂ ಕಾಣಿಸಿಕೊಳ್ಳುತ್ತವೆ. ಶೇ.84ರಷ್ಟು ವಯಸ್ಕರಲ್ಲಿ ಈ ರೋಗದ ಲಕ್ಷಣಗಳು ಕಂಡು ಬರುತ್ತವೆ ಎಂದು ವೈದ್ಯಕೀಯ ತಜ್ಞ ಮ್ಯಾಕ್ ಅಲಿಸ್ಟರ್ ತಿಳಿಸಿದ್ದಾರೆ. ಶ್ವಾಸಕೋಶದಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಯಿಂದ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಕನ್ನಡಿಗರಿಗೆ ಶಾಕ್: ರಾಜ್ಯದಲ್ಲಿ ಹೊಸ ದಾಖಲೆ ಬರೆದ ಕೊರೊನಾವೈರಸ್!ಕನ್ನಡಿಗರಿಗೆ ಶಾಕ್: ರಾಜ್ಯದಲ್ಲಿ ಹೊಸ ದಾಖಲೆ ಬರೆದ ಕೊರೊನಾವೈರಸ್!

ಬಹುತೇಕ ಸೋಂಕಿತರಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಲಕ್ಷಣ

ಬಹುತೇಕ ಸೋಂಕಿತರಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಲಕ್ಷಣ

ಕೊರೊನಾವೈರಸ್ ಸೋಂಕಿನ ಎರಡನೇ ಅಲೆಯು ವೇಗವಾಗಿ ಹರಡುವುದಕ್ಕೆ ಕಾರಣವಿದೆ. ಇದು ಮನುಷ್ಯರ ಕೆಲವು ಅಂಗಗಳಲ್ಲಿ ಇರುವ ಹೆಚ್ಚಿನ ಪ್ರತಿರಕ್ಷಣಾ ಶಕ್ತಿಯಿಂದ ತಪ್ಪಿಸಿಕೊಂಡು ಹೆಚ್ಚು ಪರಿಣಾಮಕಾರಿಯಾಗಿ ದಾಳಿ ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಈ ಹಿನ್ನೆಲೆ ಸೋಂಕಿತರಲ್ಲಿ ಜ್ವರದ ಲಕ್ಷಣ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದ್ದು, ಇದರ ಜೊತೆ ತೀವ್ರ ದಣಿವು ಕಂಡು ಬರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

2ನೇ ಅಲೆಯ ಕೊರೊನಾ ಸೋಂಕಿತರ ಲಕ್ಷಣಗಳಾವವು?

2ನೇ ಅಲೆಯ ಕೊರೊನಾ ಸೋಂಕಿತರ ಲಕ್ಷಣಗಳಾವವು?

ಕೊರೊನಾವೈರಸ್ ಸೋಂಕಿನ ಎರಡನೇ ಅಲೆಯಲ್ಲಿ ಸೋಂಕಿತರಿಗೆ ಹಲವು ರೀತಿ ಸಮಸ್ಯೆಗಳು ಕಾಣಿಸಿಕೊಂಡಿರುವುದು ಪತ್ತೆಯಾಗಿದೆ. ಈ ಪೈಕಿ ಸ್ನಾಯು ಸೆಳೆತ, ಕಿವಿ ಕೇಳಿಸದಿರುವುದು, ಚರ್ಮ ರೋಗ, ಉದರ ಬಾಧೆ (ಹೊಟ್ಟೆ ನೋವು, ಹೊಟ್ಟೆಯಲ್ಲಿ ಹಿಂಡುವಿಕೆ, ಅತಿಸಾರ) ಕಣ್ಣು ಕೆಂಪಾಗುವುದು ಹಾಗೂ ದೃಷ್ಟಿದೋಷದ ರೀತಿ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ.

ಭಾರತದಲ್ಲಿ ರಾಜಕೀಯ ನಾಯಕರ ಬೆನ್ನೇರಿದ ಕೊರೊನಾವೈರಸ್ಭಾರತದಲ್ಲಿ ರಾಜಕೀಯ ನಾಯಕರ ಬೆನ್ನೇರಿದ ಕೊರೊನಾವೈರಸ್

ಕೊರೊನಾ 2ನೇ ಅಲೆ ಬಗ್ಗೆ ತಜ್ಞವೈದ್ಯರು ಹೇಳುವುದೇನು?

ಕೊರೊನಾ 2ನೇ ಅಲೆ ಬಗ್ಗೆ ತಜ್ಞವೈದ್ಯರು ಹೇಳುವುದೇನು?

ಭಾರತದಲ್ಲಿ ಇತ್ತೀಚಿಗೆ ಪತ್ತೆಯಾಗುತ್ತಿರುವ ಕೊರೊನಾವೈರಸ್ ಸೋಂಕಿತರಲ್ಲಿ ಈ ಹಿಂದೆ ಕಾಣಿಸಿಕೊಳ್ಳದಂತಾ ಜ್ವರ, ಶ್ರವಣ ದೋಷ, ಸ್ನಾಯು ಸೆಳೆತ, ಒಣ ಹಾಗೂ ಹಸಿ ಕೆಮ್ಮು, ರುಚಿ ಮತ್ತು ವಾಸನೆ ಗುರುತಿಸುವ ಶಕ್ತಿ ಕಳೆದುಕೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಇದರ ಜೊತೆಗೆ ದೃಷ್ಟಿ ದೋಷ, ಗಂಟಲು ನೋವು, ತಲೆನೋವು, ಹೊಟ್ಟೆನೋವಿನ ಸಮಸ್ಯೆ, ಕೈಬೆರಳು ಮತ್ತು ಕಾಲಿನ ಬೆರಳುಗಳಲ್ಲಿ ಬಣ್ಣ ಬದಲಾಗುಲ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ ಎಂದು ಉಜಾಲಾ ಸೈನಸ್ ಗ್ರೂಪ್ ಆಫ್ ಹಾಸ್ಪಿಟಲ್ಸ್ ಸಂಸ್ಥಾಪಕ ನಿರ್ದೇಶಕ ಡಾ. ಶುಚಿನ್ ಬಜಾಜ್ ತಿಳಿಸಿದ್ದಾರೆ.

ಕೊರೊನಾ 2ನೇ ಅಲೆ ಹರಡುವಿಕೆ ವೇಗ ಹೆಚ್ಚಾಗಿರುವುದೇಕೆ?

ಕೊರೊನಾ 2ನೇ ಅಲೆ ಹರಡುವಿಕೆ ವೇಗ ಹೆಚ್ಚಾಗಿರುವುದೇಕೆ?

ಹೊಸ ಅಧ್ಯಯನದ ಪ್ರಕಾರ, ಇಂಗ್ಲೆಂಡಿನ ರೂಪಾಂತರ ಕೊರೊನಾ ರೋಗಾಣುವಿನ B.1.1.7 ತಳಿಯು ಇತರೆ ರೋಗಾಣುಗಳಿಗಿಂತ ಅತ್ಯಂತ ಸುಲಭ ಹಾಗೂ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ. ಮೊದಲ ಅಲೆಯಲ್ಲಿ ಒಬ್ಬ ಕೊರೊನಾವೈರಸ್ ಸೋಂಕಿತನಿಂದ ಆತನ ಸಂಪರ್ಕಕ್ಕೆ ಬಂದವರಲ್ಲಿ ಶೇ.30 ರಿಂದ 40ರಷ್ಟು ಜನರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿತ್ತು. ಆದರೆ ಎರಡನೇ ಅಲೆಯಲ್ಲಿ ಈ ಪ್ರತಿಶತ ಪ್ರಮಾಣವು ದ್ವಿಗುಣಗೊಂಡಿದೆ. ಒಬ್ಬ ಸೋಂಕಿತನಿಂದ ಆತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಶೇ.80 ರಿಂದ 90ರಷ್ಟು ಜನರಲ್ಲಿ ಕೊರೊನಾವೈರಸ್ ಸೋಂಕು ಕಾಣಿಸಿಕೊಳ್ಳುತ್ತಿದೆ ಎಂದು ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ ಪ್ರತಿನಿತ್ಯ ರಾತ್ರಿ ಕರ್ಫ್ಯೂ ಜೊತೆ ಭಾನುವಾರದ ಲಾಕ್‌ಡೌನ್ತಮಿಳುನಾಡಿನಲ್ಲಿ ಪ್ರತಿನಿತ್ಯ ರಾತ್ರಿ ಕರ್ಫ್ಯೂ ಜೊತೆ ಭಾನುವಾರದ ಲಾಕ್‌ಡೌನ್

ಮೊದಲಿಗಿಂತ ಅಪಾಯಕಾರಿ ಈ ರೂಪಾಂತರ ವೈರಸ್

ಮೊದಲಿಗಿಂತ ಅಪಾಯಕಾರಿ ಈ ರೂಪಾಂತರ ವೈರಸ್

ಇಂಗ್ಲೆಂಡ್ ಮೂಲದ ರೂಪಾಂತರ ಕೊರೊನಾವೈರಸ್ ಸೋಂಕಿನ ಹೊಸ ತಳಿಯು ಮೊದಲಿಗಿಂತ ಶೇ.70ರಷ್ಟು ಹೆಚ್ಚು ಪರಿಣಾಮಕಾರಿ ಹಾಗೂ ಅಪಾಯಕಾರಿ ಆಗಿದೆ ಎಂದು ಎಮರ್ಜಿಂಗ್ ರೆಸ್ಪಿರೆಟರಿ ವೈರಸ್ ಥ್ರೆಟ್ಸ್ ಅಡ್ವೈಸರಿ ಗ್ರೂಪ್ ವರದಿ ಮಾಡಿದೆ. 2020ರ ಅಕ್ಟೋಬರ್ ತಿಂಗಳಿನಲ್ಲಿ B.1.1.7 ತಳಿಯ ಸೋಂಕು ಕಾಣಿಸಿಕೊಂಡಿತ್ತು. ಇತ್ತೀಚಿಗೆ ದಕ್ಷಿಣ ಆಫ್ರಿಕಾದಲ್ಲಿ B.1.351 ತಳಿ ಪತ್ತೆಯಾಗಿದೆ. ಜನವರಿ ತಿಂಗಳಾಂತ್ಯದ ಸಮಯದಲ್ಲಿ ಅಮೆರಿಕಾದಲ್ಲಿ ಪತ್ತೆಯಾದ ಕೆಲವರಲ್ಲಿ ಈ ರೂಪಾಂತರ ವೈರಸ್ ಗೋಚರಿಸಿದೆ ವಿಪತ್ತು ನಿರ್ವಹಣೆ ಮತ್ತು ನಿಯಂತ್ರಣಾ ಕೇಂದ್ರ ತಿಳಿಸಿದೆ.

ದೇಶದಲ್ಲಿ ಕೊರೊನಾವೈರಸ್ ರೂಪಾಂತರ ತಳಿ

ದೇಶದಲ್ಲಿ ಕೊರೊನಾವೈರಸ್ ರೂಪಾಂತರ ತಳಿ

ಕಳೆದ ಎರಡು ತಿಂಗಳಿನಲ್ಲಿ ಕೊರೊನಾವೈರಸ್ ಸೋಂಕಿನ SARS-CoV-2 ತಳಿಯು 192 ಜನರಲ್ಲಿ ಕಾಣಿಸಿಕೊಂಡಿದೆ. ದಕ್ಷಿಣ ಆಫ್ರಿಕಾದ ಕೊವಿಡ್-19 ತಳಿಯು ನಾಲ್ವರಲ್ಲಿ ಮತ್ತು ಬ್ರೆಜಿಲ್ ಮೂಲಕ ಕೊರೊನಾವೈರಸ್ ತಳಿಯು ಒಬ್ಬ ಸೋಂಕಿತರಲ್ಲಿ ಪತ್ತೆಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯು ತಿಳಿಸಿದೆ.

ದೇಶದಲ್ಲಿ 2ನೇ ಅಲೆ ಹರಡುವಿಕೆ ವೇಗ ಹೆಚ್ಚಲು ಕಾರಣ?

ದೇಶದಲ್ಲಿ 2ನೇ ಅಲೆ ಹರಡುವಿಕೆ ವೇಗ ಹೆಚ್ಚಲು ಕಾರಣ?

ಕೊರೊನಾವೈರಸ್ ಸೋಂಕಿನ ಹರಡುವಿಕೆ ವೇಗ ಹೆಚ್ಚಾಗುವುದಕ್ಕೆ ಶಿಷ್ಟಾಚಾರಗಳ ಉಲ್ಲಂಘನೆಯೇ ಪ್ರಾಥಮಿಕ ಕಾರಣ ಎಂದು ಜೆನೆಸ್ಟ್ರಿಂಗ್ಸ್ ಡೈಗ್ನಾಸ್ಟಿಕ್ ಸೆಂಟರ್ ಸಂಸ್ಥಾಪಕ ನಿರ್ದೇಶಕಿ ಡಾ. ಗೌರಿ ಅಗರ್ವಾಲ್ ತಿಳಿಸಿದ್ದಾರೆ. ಕಳೆದ ವರ್ಷಾಂತ್ಯದ ವೇಳೆಯಲ್ಲಿ ಜನರು ಕೊವಿಡ್-19 ಶಿಷ್ಟಾಚಾರಗಳ ಬಗ್ಗೆ ಎಷ್ಟರ ಮಟ್ಟಿಗೆ ನಿರ್ಲಕ್ಷ್ಯ ವಹಿಸಿದ್ದರು ಎನ್ನುವುದನ್ನು ನಾವೆಲ್ಲ ನೋಡಿದ್ದೀವಿ. ಹೀಗಾಗಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಏರಿಕೆಯಲ್ಲಿ ಯಾವುದೇ ಆಶ್ಚರ್ಯವಿಲ್ಲ. ಇನ್ನೊಂದು ದಿಕ್ಕಿನಲ್ಲಿ ಕೊವಿಡ್-19 ಸೋಂಕಿನ ಹೊಸ ತಳಿಯು ಮೊದಲಿಗಿಂತ ಹೆಚ್ಚು ಪರಿಣಾಮ ಮತ್ತು ಪ್ರಭಾವಶಾಲಿಯಾಗಿ ಹರಡುತ್ತಿವೆ ಎಂದು ಹೇಳಿದ್ದಾರೆ.

ದೇಶದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳು

ದೇಶದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳು

ಕೊರೊನಾವೈರಸ್ ಸೋಂಕಿನ ಎರಡನೇ ಅಲೆಗೆ ಭಾರತ ತತ್ತರಿಸಿ ಹೋಗಿದೆ. ಕಳೆದ 24 ಗಂಟೆಗಳಲ್ಲಿ 2,61,500 ಮಂದಿಗೆ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದು ದಿನದಲ್ಲಿ 1501 ಮಂದಿ ಪ್ರಾಣ ಬಿಟ್ಟಿದ್ದು, 1,38,423 ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1,47,88,109ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಈವರೆಗೂ 1,28,09,643 ಸೋಂಕಿತರು ಗುಣಮುಖರಾಗಿದ್ದು, ಸಾವಿನ ಸಂಖ್ಯೆ 1,77,150ಕ್ಕೆ ಏರಿಕೆಯಾಗಿದೆ. ಇದರ ಹೊರತಾಗಿ ದೇಶದಲ್ಲಿ 18,01,316 ಸಕ್ರಿಯ ಪ್ರಕರಣಗಳಿವೆ ಎಂದು ಗೊತ್ತಾಗಿದೆ.

ಕೊವಿಡ್-19 ಲಕ್ಷಣಗಳ ಬಗ್ಗೆ ಜಾಗೃತಿ ವಹಿಸಿ

ಕೊವಿಡ್-19 ಲಕ್ಷಣಗಳ ಬಗ್ಗೆ ಜಾಗೃತಿ ವಹಿಸಿ

ಕೊರೊನಾವೈರಸ್ ಸೋಂಕಿನ ಲಕ್ಷಣಗಳು ಈ ಎಲ್ಲ ಲಕ್ಷಣಗಳಿಗಿಂತಲೂ ಭಿನ್ನವಾಗಿರುತ್ತದೆ. ಮೂಗು ಸ್ರವಿಸುವಿಕೆ, ಗಂಟಲು ನೋವಿನ ಜೊತೆಗೆ ಜ್ವರ, ಕೆಮ್ಮು, ರುಚಿ ಮತ್ತು ವಾಸನೆ ಗುರುತಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುವ ಲಕ್ಷಣವು ಕೊರೊನಾವೈರಸ್ ಸೋಂಕಿನ ಪ್ರಮುಖ ಲಕ್ಷಣವಾಗಿರುತ್ತದೆ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ. ಈ ಪೈಕಿ ಯಾವುದೇ ಸೋಂಕಿನ ಲಕ್ಷಣಗಳು ಕಂಡು ಬಂದರೂ ಕೂಡಾ ಜನರು ಮನೆಯಲ್ಲೇ ಇರಬೇಕು. ತಮ್ಮ ಆರೋಗ್ಯದಲ್ಲಿ ಬದಲಾವಣೆ ಆಗುತ್ತಿದೆ ಎನ್ನುವುದು ಗಮನಕ್ಕೆ ಬರುತ್ತಿದ್ದಂತೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಕೈಗಳನ್ನು ಶುದ್ಧವಾಗಿ ತೊಳೆದುಕೊಳ್ಳುವಲ್ಲಿ ಹೆಚ್ಚಿನ ಲಕ್ಷ್ಯ ವಹಿಸಬೇಕಿದೆ.

12 ಕೋಟಿ ಫಲಾನುಭವಿಗಳಿಗೆ ಕೊರೊನಾ ಲಸಿಕೆ

12 ಕೋಟಿ ಫಲಾನುಭವಿಗಳಿಗೆ ಕೊರೊನಾ ಲಸಿಕೆ

ಭಾರತದಲ್ಲಿ ಭಾನುವಾರವೊಂದೇ ದಿನ 26 ಲಕ್ಷಕ್ಕೂ ಅಧಿಕ ಜನರಿಗೆ ಲಸಿಕೆ ನೀಡಲಾಗಿದೆ. ಈವರೆಗೂ 12,26,22,590 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ದೇಶದಲ್ಲಿ 91,28,146 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಮತ್ತು 57,08,223 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ. 1,12,33,415 ಜನ ಮೊದಲ ಶ್ರೇಣಿ ಕಾರ್ಮಿಕರಿಗೆ ಮೊದಲ ಡೋಸ್ ಹಾಗೂ 55,10,238 ಕಾರ್ಮಿಕರಿಗೆ ಎರಡನೇ ಡೋಸ್ ಕೊವಿಡ್-19 ಲಸಿಕೆ ನೀಡಲಾಗಿದೆ.

ಈವರೆಗೂ 45 ವರ್ಷಕ್ಕಿಂತ ಮೇಲ್ಪಟ್ಟ 4,04,74,993 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, 10,81,759 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. 60 ವರ್ಷ ಮೇಲ್ಪಟ್ಟ 4,55,94,522 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, 38,91,294 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.

English summary
Coronavirus Second Wave: How Covid-19 Dangerous Than Previous Wave In India, Here Read About Symptoms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X