ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂವಿಧಾನ ದಿನ: ಮರೆಯಲಾಗದ ಅಂಬೇಡ್ಕರ್ ರ ಹತ್ತು ಮಾತುಗಳು

|
Google Oneindia Kannada News

ನವದೆಹಲಿ, ನವೆಂಬರ್ 26: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತಕ್ಕೆ ಸಂವಿಧಾನ ರಚಿಸಿ, ದೇಶಕ್ಕೆ ಭದ್ರ ಬುನಾದಿ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು, ಸಂವಿಧಾನ ರಚನಾ ಕರಡು ಸಮಿತಿಯ ಅಧ್ಯಕ್ಷರಾಗಿದ್ದವರು, ಮಹಾನ್ ಮಾನವತಾವಾದಿ 'ಡಾ.ಬಿ.ಆರ್.ಅಂಬೇಡ್ಕರ್' ರವರು. ಇವರನ್ನು ಭಾರತದ ಸಂವಿಧಾನ ಶಿಲ್ಪಿ ಎಂದೇ ಕರೆಯುತ್ತಾರೆ.

ಭಾರತದ ಸಂವಿಧಾನವು ನವೆಂಬರ್ 26, 1949 ರಲ್ಲಿ ಸಂವಿಧಾನ ರಚನಾ ಸಭೆಯಲ್ಲಿ ಅಂಗೀಕರಿಸಲ್ಪಟ್ಟಿತು. ಜನೇವರಿ 26, 1950 ರಂದು ಜಾರಿಗೆ ತರಲಾಯಿತು. ಈ ದಿನ ಸಂವಿಧಾನವನ್ನು ಇಡೀ ಭಾರತ ಒಪ್ಪಿಕೊಂಡ ದಿನದ ನೆನಪಿಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಯಂತೆ 2015 ರಿಂದ 'ಸಂವಿಧಾನ ದಿನ'ವನ್ನಾಗಿ ಆಚರಿಸಲಾಗುತ್ತದೆ.

 ಶೋಷಿತ ವರ್ಗಗಳು, ನನ್ನ ಕಣ್ಣುಗಳು

ಶೋಷಿತ ವರ್ಗಗಳು, ನನ್ನ ಕಣ್ಣುಗಳು

1) ಮಹಿಳೆಯರಿಗೆ ಸಮಾನತೆಯನ್ನು ಹಾಗೂ ಗೌರವವನ್ನು ನೀಡದ ಸಮಾಜ ಎಂದೂ ಆದರ್ಶ ಸಮಾಜವಾಗಾರದು.

2) ಭಾರತದ ಶೋಷಿತ ವರ್ಗಗಳ ಹಿತಕಾಯಲೆಂದೇ ನಾನು ಮೊದಲು ಭಾರತ ಸಂವಿಧಾನ ಕರಡು ರಚನಾ ಸಮಿತಿಗೆ ಬಂದೆ, ದುರ್ಬಲ ವರ್ಗಗಳಿಗೆ ಮಾನವ ಹಕ್ಕುಗಳನ್ನು ಗಳಿಸಿಕೊಡಬೇಕೆಂಬುದೇ ನನ್ನ ಜೀವನದ ಧ್ಯೇಯ.

ಸಂವಿಧಾನ ದಿನದಂದು ಕಲಾಪ ಬಹಿಷ್ಕಾರಕ್ಕೆ ಪ್ರತಿಪಕ್ಷಗಳ ನಿರ್ಧಾರಸಂವಿಧಾನ ದಿನದಂದು ಕಲಾಪ ಬಹಿಷ್ಕಾರಕ್ಕೆ ಪ್ರತಿಪಕ್ಷಗಳ ನಿರ್ಧಾರ

 ಚಿಂತನೆ ಇಲ್ಲದ ವ್ಯಕ್ತಿ ಇದ್ದೂ ಸತ್ತಂತೆ

ಚಿಂತನೆ ಇಲ್ಲದ ವ್ಯಕ್ತಿ ಇದ್ದೂ ಸತ್ತಂತೆ

3) ಮನುಷ್ಯ ಚಿರಂಜೀವಿ ಆಗಲಾರ. ಆದರೆ ಆತನ ಚಿಂತನೆಗಳು ಶಾಶ್ವತವಾಗಿ ಉಳಿಯುತ್ತವೆ.

4) ಒಂದು ಗಿಡಕ್ಕೆ ನೀರು ಎಷ್ಟು ಅವಶ್ಯವಿದೆಯೋ, ಹಾಗೆಯೇ ಒಂದು ಚಿಂತನೆ ಪ್ರಸರಣವಾಗುವುದು ಅಷ್ಟೇ ಅಗತ್ಯ. ಇಲ್ಲವಾದರೆ ಎರಡೂ ಸಾಯುತ್ತವೆ.

 ನಮ್ಮ ಸಾಧನೆಗಳು ಮಾತನಾಡುವಂತಿರಬೇಕು

ನಮ್ಮ ಸಾಧನೆಗಳು ಮಾತನಾಡುವಂತಿರಬೇಕು

5) ದೇಶದ ಹಿತಕ್ಕಿಂತ ಪಕ್ಷದ ಹಿತವನ್ನೇ ಪ್ರಧಾನವೆಂದು ಪರಿಗಣಿಸುವ ರಾಜಕೀಯ ಪಕ್ಷಗಳ ಹುನ್ನಾರದ ಬಗ್ಗೆ ಇಡೀ ದೇಶ ಎಚ್ಚರದಿಂದಿರಬೇಕಾಗುತ್ತದೆ. ಇಲ್ಲದೇ ಹೋದರೆ ದೇಶದ ಸ್ವಾತಂತ್ರ್ಯ, ಏಕತೆ ಹಾಗೂ ಸಂವಿಧಾನದ ಮೇಲೆ ಅಪಾಯದ ಕಾರ್ಮೋಡ ಕವಿಯುತ್ತವೆ.

6) ಸತ್ತ ಮೇಲೆ ಬದುಕಬೇಕು ಎಂದರೆ ಒಂದು ಕೆಲಸ ಮಾಡಿ ಹೋಗಿ, "ಜನ ಓದುವ ಹಾಗೆ ಏನಾದರೂ ಒಂದು ಬರೆದಿಟ್ಟು ಹೋಗಿ, ಇಲ್ಲವಾದರೆ ಜನ ನಿಮ್ಮ ಬಗ್ಗೆ ಬರೆಯುವ ಹಾಗೆ ಏನಾದರೂ ಕಾರ್ಯ ಮಾಡಿ ಹೋಗಿ."

 ಶಿಕ್ಷಣವೇ ಶಕ್ತಿ

ಶಿಕ್ಷಣವೇ ಶಕ್ತಿ

7) ಭಾರತದ ಜನತೆ ದೇವಸ್ಥಾನಗಳಿಗೆ ಸಾಲುಗಟ್ಟಿ ನಿಲ್ಲುವಂತೆ ಗ್ರಂಥಾಲಯಗಳಿಗೆ ಸಾಲುಗಟ್ಟಿ ಯಾವಾಗ ನಿಲ್ಲುತ್ತಾರೋ, ಅಂದು ಭಾರತ ಜಗತ್ತಿನ ಗುರುವಾಗಲಿದೆ.

8) ಶಿಕ್ಷಣ ಪ್ರಬಲ ಮತ್ತು ಪರಿಣಾಮಕಾರಿ ಅಸ್ತ್ರ ಎಂಬುದನ್ನು ಅರಿಯಬೇಕು.

ಸಲೀಸ್ ಆಗುತ್ತಾ ಭಾರತದ ಪೌರತ್ವ ಪಡೆಯುವ ಹಾದಿ?ಸಲೀಸ್ ಆಗುತ್ತಾ ಭಾರತದ ಪೌರತ್ವ ಪಡೆಯುವ ಹಾದಿ?

 ಆದರ್ಶ ಬದುಕು ಅಳವಡಿಸಿಕೊಳ್ಳಬೇಕು

ಆದರ್ಶ ಬದುಕು ಅಳವಡಿಸಿಕೊಳ್ಳಬೇಕು

9) ಜಾತಿಪದ್ಧತಿ ನಾಶವಾದರೆ ಮಾತ್ರ ಹಿಂದೂ ಸಮಾಜ ಆತ್ಮ ರಕ್ಷಣೆಗೆ ಸಮರ್ಥವಾಗಬಲ್ಲದು. ಇಂಥ ಆಂತರಿಕ ಶಕ್ತಿ ಇಲ್ಲದೆ ಹೋದರೆ ಸ್ವರಾಜ್ಯವೆಂಬುದು ಹಿಂದೂಗಳ ಪಾಲಿಗೆ ಗುಲಾಮಗಿರಿಯತ್ತ ಇಡುವ ಇನ್ನೊಂದು ಹೆಜ್ಜೆಯೇ ಆದೀತು.

10) ನನ್ನ ಜೈಕಾರ ಮಾಡುವುದಕ್ಕಿಂತ ನಾನು ತೋರಿಸಿದ ಮಾರ್ಗದಲ್ಲಿ ನಡೆಯಿರಿ.

English summary
The Constitution Of India Was Adopted At The Constituent Assembly on November 26, 1949. Effective January 26, 1950. This Day Is Being Celebrated As 'Constitution Day' By Prime Minister Narendra Modi As a Proclamation To Commemorate The Day The Constitution Was Accepted By The Whole Of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X