ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೀಕ್ಷೆಗಳಲ್ಲಿ LDFಗೆ ಜಯ; ತಲೆಕೆಡಿಸಿಕೊಳ್ಳದ ಕಾಂಗ್ರೆಸ್-ಯುಡಿಎಫ್

|
Google Oneindia Kannada News

ತಿರುವನಂತಪುರಂ, ಫೆಬ್ರವರಿ 23: ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಎಲ್ ಡಿ ಎಫ್ ಮತ್ತೊಂದು ಅವಧಿಗೆ ಸರ್ಕಾರ ಸ್ಥಾಪಿಸಲಿದೆ ಎಂಬ ವರದಿ ಬಂದಿದೆ. ಯುಡಿಎಫ್ ಪರ ಎರಡು ಸಮೀಕ್ಷೆಗಳಲ್ಲೂ ಫಲಿತಾಂಶ ಬರದಿದ್ದರೂ ಕಾಂಗ್ರೆಸ್ ನಾಯಕರು ತಲೆಕೆಡಿಸಿಕೊಂಡಿಲ್ಲ.

ಮೊದಲು ಬಂದ ಸಮೀಕ್ಷೆಯಲ್ಲಿ ಎಲ್ ಡಿ ಎಫ್ 72 ರಿಂದ 78 ಸ್ಥಾನ ಗೆಲ್ಲುವ ಸಾಧ್ಯತೆಯಿದೆ ಎನ್ನಲಾಗಿದೆ. ಯುಡಿಎಫ್ 65 ಹಾಗೂ ಬಿಜೆಪಿ 3 ರಿಂದ 7 ಸ್ಥಾನ ಗಳಿಸುವ ನಿರೀಕ್ಷೆಯಿದೆ.

ಎರಡನೇ ಸಮೀಕ್ಷೆಯಲ್ಲಿ ಎಲ್ ಡಿ ಎಫ್ 68 ರಿಂದ 78 ಸ್ಥಾನ, ಯುಡಿಎಫ್ 62 ರಿಂದ 72 ಸ್ಥಾನ ಹಾಗೂ ಬಿಜೆಪಿ 2 ಸ್ಥಾನ ಗಳಿಸುವ ಸಾಧ್ಯತೆ ಇದೆ ಎಂದು ವರದಿ ಬಂದಿದೆ.

Congress not worried as Survey show another turn for LDF

2016ರಲ್ಲಿ ಯುಡಿಎಫ್ 47 ಸ್ಥಾನ ಗಳಿಸಿತ್ತು. ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಫಲಿತಾಂಶ ನೀಡಿದರೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯುಡಿಎಫ್ ಸಾಧನೆ ಕಳಪೆಯಾಗಿತ್ತು.

ಕಳೆದ ಬಾರಿ 87 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ 22 ಸ್ಥಾನ ಗೆದ್ದಿತ್ತು. ಮುಸ್ಲಿಂ ಲೀಗ್ 24 ಕ್ಷೇತ್ರಗಳಲ್ಲಿ 18 ಕ್ಷೇತ್ರ ತನ್ನದಾಗಿಸಿಕೊಂಡಿತ್ತು. ಈ ಬಾರಿ ಕೂಡಾ ಉತ್ತರ ಕೇರಳದಲ್ಲಿ ಕಾಂಗ್ರೆಸ್ ಹಾಗೂ ಮಲಬಾರ್ ಪ್ರಾಂತ್ಯದಲ್ಲಿ ಮುಸ್ಲಿಂ ಲೀಗ್ ಉತ್ತಮ ಪ್ರದರ್ಶನ ನೀಡಿ ಮ್ಯಾಜಿಕ್ ನಂಬರ್ 71 ದಾಟುವ ನಿರೀಕ್ಷೆ ಹೊಂದಲಾಗಿದೆ.

ಉಮ್ಮನ್ ಚಾಂಡಿ ನಾಯಕತ್ವದ ಮೇಲೆ ಭರವಸೆ ಇಟ್ಟುಕೊಂಡಿರುವ ಮೈತ್ರಿಕೂಟಕ್ಕೆ ಕೇರಳದ ಮಧ್ಯಭಾಗದಲ್ಲಿ ಎಲ್ ಡಿ ಎಫ್ ಮತಗಳನ್ನು ಸೆಳೆಯುವ ನಿರೀಕ್ಷೆಯಿದೆ. ಏಪ್ರಿಲ್ ಮೇ ತಿಂಗಳಿನಲ್ಲಿ ತಮಿಳುನಾಡು, ಅಸ್ಸಾಂ, ಪುದುಚೇರಿ , ಪಶ್ಚಿಮ ಬಂಗಾಳದ ಜೊತೆಗೆ ಕೇರಳ ರಾಜ್ಯದ ವಿಧಾನಸಭೆಗೂ ಚುನಾವಣೆ ನಡೆಯಬೇಕಿದೆ. 2020ರಲ್ಲಿ 140 ಸ್ಥಾನಗಳ ವಿಧಾನಸಭೆಯ ಬಲಾಬಲ: ಸಿಪಿಐ (ಎಂ) ನೇತೃತ್ವದ ಎಲ್ ಡಿ ಎಫ್ 93 ಸ್ಥಾನ, ಕಾಂಗ್ರೆಸ್ ನೇತೃತ್ವ ಯುಡಿಎಫ್ 42 ಹಾಗೂ ಬಿಜೆಪಿ ನೇತೃತ್ವದ ಎನ್ಡಿಎ 1 ಸ್ಥಾನ ಹೊಂದಿದೆ.

English summary
Ahead of assembly polls results of two pre-poll surveys show another term for LDF but Congress leader not worried.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X