ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕೀಯಕ್ಕೆ ಎಂಟ್ರಿ ಕೊಡಲು ಸಜ್ಜಾದ ಸೋನಿಯಾ ಆಪ್ತನ ಮಗಳು!

|
Google Oneindia Kannada News

ಅಹಮದಾಬಾದ್, ಆಗಸ್ಟ್ 19: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಆಪ್ತ ವಲಯದ ಅಹ್ಮದ್ ಪಟೇಲ್ ಪುತ್ರಿ ರಾಜಕೀಯ ಎಂಟ್ರಿಗೆ ವೇದಿಕೆ ಸಜ್ಜಾಗಿರುವ ಸುದ್ದಿ ಬಂದಿದೆ. ಗುಜರಾತ್ ಚುನಾವಣೆಗಾಗಿ ಕಾಂಗ್ರೆಸ್ ನಿಧಾನಗತಿಯಿಂದ ಸಜ್ಜಾಗುತ್ತಿದ್ದು, ಯುವ ಹಾಗೂ ಹೊಸ ಮುಖಗಳಿಗೆ ಆದ್ಯತೆ ನೀಡಲು ಮುಂದಾಗಿರುವ ಸಾಧ್ಯತೆ ಹೆಚ್ಚಿದೆ. ಆದರೆ, ಮುಮ್ತಾಜ್ ರಾಜಕೀಯ ಪ್ರವೇಶದ ಬಗ್ಗೆ ಖಚಿತ ಮಾಹಿತಿ ಇಲ್ಲದಿದ್ದರೂ, ರಾಷ್ಟ್ರೀಯ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಕ್ರಿಯ ರಾಜಕೀಯಕ್ಕೆ ಎಂಟ್ರಿಕೊಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಭಾರಿ ಬದಲಾವಣೆ ಅಗತ್ಯವಿದೆ, ಗುಜರಾತ್ ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆಯಿಂದ ರಾಜಕೀಯ ಪ್ರವೇಶಿಸುವ ಬಗ್ಗೆ ಆಲೋಚಿಸಿಲ್ಲ ಎಂದು ಎನ್ ಡಿ ಟಿ ವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದರು.

''ರಾಜಕಾರಣವೆಂದರೆ ಜನರೊಟ್ಟಿಗೆ ಕಲೆತು ಬೆರೆತು ಸಮಾಜದ ಸುಧಾರಣೆಗೆ ಶ್ರಮಿಸುವುದಾಗಿದೆ. ನಾನು ಸರಿಯಾದ ಸಮಯ ಹಾಗೂ ಸೂಕ್ತ ವೇದಿಕೆ ಮೂಲಕ ರಾಜಕೀಯಕ್ಕೆ ಅಧಿಕೃತ ಪ್ರವೇಶ ಪಡೆಯುವ ಇಚ್ಛೆ ಹೊಂದಿದ್ದೇನೆ. ಸಾರ್ವಜನಿಕರು ಭಾವಿಸಿದರೆ, ನಾನು ಅದಕ್ಕೆ ಸಿದ್ಧನಿದ್ದೇನೆ ಮತ್ತು ಜನರನ್ನು ಪ್ರತಿನಿಧಿಸಲು ನನಗೆ ಅವಕಾಶ ಸಿಕ್ಕರೆ, ಆಗ ನಾನು ಇಲ್ಲ ಎಂದು ಹೇಳುವುದಿಲ್ಲ ಎಂದು ಪಟೇಲ್ ಹೇಳಿದರು.

ಸಾರ್ವಜನಿಕರೊಂದಿಗೆ ಕೆಲಸ ಮಾಡಲು ವೇದಿಕೆ

ಸಾರ್ವಜನಿಕರೊಂದಿಗೆ ಕೆಲಸ ಮಾಡಲು ವೇದಿಕೆ

"ರಾಜಕೀಯವು ಸಾರ್ವಜನಿಕರೊಂದಿಗೆ ಕೆಲಸ ಮಾಡಲು ವೇದಿಕೆಯಾಗಲಿದೆ. ಅಧಿಕೃತ ಪ್ರವೇಶ ಅಥವಾ ಪಾತ್ರವನ್ನು ಪಡೆಯಲು ನಾನು ಸರಿಯಾದ ಸ್ಥಳ ಮತ್ತು ಸಮಯವನ್ನು ಹುಡುಕುತ್ತಿದ್ದೇನೆ. ಸಾರ್ವಜನಿಕರು ಭಾವಿಸಿದರೆ, ನಾನು ಅದಕ್ಕೆ ಸಿದ್ಧನಿದ್ದೇನೆ ಮತ್ತು ಅವರು ಅವರನ್ನು ಪ್ರತಿನಿಧಿಸಲು ನನಗೆ ಅವಕಾಶ ನೀಡಲು ಸಿದ್ಧರಿದ್ದಾರೆ, ಆಗ ನಾನು ಇಲ್ಲ ಎಂದು ಹೇಳುವುದಿಲ್ಲ ಎಂದು ಪಟೇಲ್ ಹೇಳಿದರು.

"ನನಗೆ ಯಾವುದೇ ಆತುರವಿಲ್ಲ, ಖಂಡಿತ ಸಮಯ ತೆಗೆದುಕೊಳ್ಳುತ್ತೇನೆ, ನನ್ನ ತಂದೆ ಪ್ರಾರಂಭಿಸಿದ ಕೆಲವು ಒಳ್ಳೆಯ ಕೆಲಸವನ್ನು ಹತ್ತಿರದಿಂದ ನೋಡುತ್ತಿದ್ದೇನೆ. ಭರೂಚ್‌ನಲ್ಲಿರುವ ನನ್ನ ಕುಟುಂಬದಿಂದ ಜನರು ಬಹಳಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ" ಎಂದು ಅಹ್ಮದ್ ಪಟೇಲ್ ಅವರ ಸ್ವಕ್ಷೇತ್ರದ ಬಗ್ಗೆ ಉಲ್ಲೇಖಿಸಿ ಮುಮ್ತಾಜ್ ಹೇಳಿದರು.

ವಿಶ್ವಾಸಾರ್ಹ ಸಹಾಯಕರಾಗಿದ್ದ ಅಹ್ಮದ್ ಪಟೇಲ್

ವಿಶ್ವಾಸಾರ್ಹ ಸಹಾಯಕರಾಗಿದ್ದ ಅಹ್ಮದ್ ಪಟೇಲ್

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅತ್ಯಂತ ವಿಶ್ವಾಸಾರ್ಹ ಸಹಾಯಕರಾಗಿದ್ದ ಅಹ್ಮದ್ ಪಟೇಲ್ ಅವರು ಎರಡು ವರ್ಷಗಳ ಹಿಂದೆ ಕೋವಿಡ್‌ ಸೋಂಕಿಗೆ ತುತ್ತಾಗಿ ತಮ್ಮ 71 ನೇ ವಯಸ್ಸಿನಲ್ಲಿ ನಿಧನರಾದರು.

2002ರ ಗಲಭೆಯಲ್ಲಿ ಗುಜರಾತಿನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿರನ್ನು ಸಿಲುಕಿಸಲು ಸೋನಿಯಾ ಗಾಂಧಿಯವರ ಅಣತಿಯಂತೆ ಅಹ್ಮದ್ ಪಟೇಲ್ ಸಂಚು ರೂಪಿಸಿದ್ದರು ಎಂಬ ಆರೋಪಕ್ಕೆ ಮುಮ್ತಾಜ್ ಬೇಸರ ವ್ಯಕ್ತಪಡಿಸಿದರು. "ಈ ಆರೋಪಗಳು ಈಗ ಏಕೆ ಕೇಳಿ ಬರುತ್ತಿವೆ? ನನ್ನ ತಂದೆ ಬದುಕಿದ್ದಾಗ ಏಕೆ ಪ್ರಶ್ನೆ ಮಾಡಲಿಲ್ಲ? ಕಾಂಗ್ರೆಸ್ ಅಧ್ಯಕ್ಷರನ್ನು ಗುರಿಯಾಗಿಸಲು ಈಗ ಇದನ್ನು ಬಳಸಲಾಗುತ್ತಿದೆ," ಮುಮ್ತಾಜ್ ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಪಟೇಲ್ ವಿಧಿವಶ
ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿಲ್ಲ

ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿಲ್ಲ

ಸದ್ಯಕ್ಕೆ ನಾನು ಅಧಿಕೃತವಾಗಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿಲ್ಲ "ನನಗೆ ಈಗ ಸಿಕ್ಕಿರುವ ಪ್ರೀತಿ, ಗೌರವ ಹಾಗೂ ನಿರೀಕ್ಷೆ ಎಲ್ಲವೂ ನಾನು ಅವರ ಮಗಳು ಎಂಬ ಕಾರಣಕ್ಕೆ ಮಾತ್ರ, ಅದಕ್ಕೆ ತಕ್ಕಂತೆ ಬದುಕಲು ಬಯಸುತ್ತೇನೆ." ಎಂದರು.


ಸಹೋದರ ಫೈಸಲ್ ರಾಜಕೀಯ ಪ್ರವೇಶದ ಬಗ್ಗೆ ಇದೇ ರೀತಿಯ ಚರ್ಚೆ ನಡೆದಿತ್ತು. ಕಾಂಗ್ರೆಸ್ ಅನ್ನು ಸಾರ್ವಜನಿಕವಾಗಿ ಟೀಕಿಸುವವರೆಗೂ ಚರ್ಚೆ ಮುಂದುವರೆದಿತ್ತು. ತಂದೆಯ ಸಾವಿನ ನೋವು ಆತನನ್ನು ಬಾಧಿಸಿದೆ ಎಂದು ಮುಮ್ತಾಜ್ ಹೇಳಿದರು.

ಗಾಂಧಿ ಪರಿವಾರದ ಬಗ್ಗೆ ಮುಮ್ತಾಜ್

ಗಾಂಧಿ ಪರಿವಾರದ ಬಗ್ಗೆ ಮುಮ್ತಾಜ್

"ಜವಾಬ್ದಾರಿಯುತ ನಾಗರಿಕಳಾಗಿ ನಾನು ಇದನ್ನು ಹೇಳಲಿದ್ದೇನೆ, ನೀವು ಜನರ ಸಂಪರ್ಕ ಹೊಂದಿರಬೇಕು, ಪಕ್ಷದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಬೇಕಾಗಿದೆ ಎಂದು ನಾನು ಭಾವಿಸುತ್ತೇನೆ. ಯುವ, ವಿದ್ಯಾವಂತರು, ಅಭಿಪ್ರಾಯಗಳನ್ನು ನಿರ್ಭೀತಿಯಿಂದ ವ್ಯಕ್ತಪಡಿಸುವವರು ಒಗ್ಗೂಡಬೇಕಿದೆ," ಎಂದರು.

ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಬೆಳೆದು ಬಂದ ಹಾದಿ


"ಕಾಂಗ್ರೆಸ್ ಪಕ್ಷವನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡಿರುವುದು ಗಾಂಧಿ ಪರಿವಾರ ಎಂಬುದರಲ್ಲಿ ಎರಡು ಮಾತಿಲ್ಲ, ಆದರೆ, ಸರಿಯಾದ ಆಲೋಚನೆಗಳು, ಸರಿಯಾದ ಉದ್ದೇಶಗಳನ್ನು ಹೊಂದಿರುವ ಮತ್ತು ಪಕ್ಷವನ್ನು ಬಲಪಡಿಸುವ ಬಹಳಷ್ಟು ಜನರಿಗೆ ಮುಕ್ತ ಅವಕಾಶ ಸಿಗಬೇಕಿದೆ," ಎಂದು ಮುಮ್ತಾಜ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

English summary
Speaking to NDTV, Mumtaz Patel (Congress leader Ahmed Patel's daughter) said she has "no intention" of contesting the upcoming Gujarat assembly election, but said looking for the right space and time to get an official entry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X