ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಹಿಯಾಗೆ ಮೋಸ ಮಾಡಿದವ್ರು ದೇಶ ಬಿಡ್ತಾರಾ? ಮೋದಿ ಚಾಟಿಯೇಟು

|
Google Oneindia Kannada News

ಇಂದು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಭಗತ್, ಸುಖದೇವ್ ಮತ್ತು ರಾಜಗುರು ಅವರನ್ನು ನೆನೆಯುವ 'ಹುತಾತ್ಮರ ದಿನ' ಮಾತ್ರವಲ್ಲ, ಆಧುನಿಕ ಭಾರತಕ್ಕೆ ಹೊಸ ದಿಕ್ಕು ತೋರಿಸಿದ್ದ ಸಮಾಜವಾದಿ ಹೋರಾಟಗಾರ ಡಾ. ರಾಮ್ ಮನೋಹರ ಲೋಹಿಯಾ ಅವರ ಹುಟ್ಟುಹಬ್ಬ ಕೂಡ. ಈ ಸಂದರ್ಭದಲ್ಲಿ ಲೋಹಿಯಾ ಅವರನ್ನು ನೆನೆದಿರುವ ನರೇಂದ್ರ ಮೋದಿಯವರು ತಮ್ಮ ಬ್ಲಾಗ್ ನಲ್ಲಿ, ಕಾಂಗ್ರೆಸ್ ಪಕ್ಷದ ಆಷಾಡಭೂತಿತನವನ್ನು ತೀವ್ರವಾಗಿ ಟೀಕಿಸಿದ್ದಾರೆ.

***
ಇಂದು ಕ್ರಾಂತಿವೀರರನ್ನು ನೆನಪಿಸಿಕೊಳ್ಳುವ ದಿನ. ಭಾರತ ಮಾತೆಯ ವೀರ ಪುತ್ರರಾದ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರು ದೇಶಕ್ಕಾಗಿ ಮಾಡಿದ ತ್ಯಾಗ, ಬಲಿದಾನವನ್ನು ನೆನಪಿಸಿಕೊಳ್ಳುವ ದಿನ.

ಭಗತ್ ಬಗ್ಗೆ ಗೊತ್ತಿಲ್ಲದ ಸಣ್ಣಸಣ್ಣ ಸಂಗತಿಗಳುಭಗತ್ ಬಗ್ಗೆ ಗೊತ್ತಿಲ್ಲದ ಸಣ್ಣಸಣ್ಣ ಸಂಗತಿಗಳು

ಇಂದು, ಈ ವೀರಪುತ್ರರು ಮಾತ್ರವಲ್ಲ, ಭಾರತ ಕಂಡ ಅದ್ಭುತ ವಿಚಾರವಾದಿ, ಅಸಾಧಾರಣ ಬುದ್ಧಿಜೀವಿ, ಕ್ರಾಂತಿಕಾರಿ ಮತ್ತು ಮಹಾನ್ ದೇಶಭಕ್ತ ಡಾ. ರಾಮ್ ಮನೋಹರ ಲೋಹಿಯಾ ಅವರ ಜಯಂತಿಯೂ ಹೌದು.

Congress has betrayed Dr Lohia, will betray nation : Narendra Modi

ಕ್ವಿಟ್ ಇಂಡಿಯಾ ಚಳವಳಿ ಉಚ್ಛ್ರಾಯ ಸ್ಥಿತಿಗೆ ತಲುಪಿ, ಭಾರತದ ಹಲವಾರು ನಾಯಕರು ಬಂಧನಕ್ಕೊಳಗಾಗಿದ್ದಾಗ, ಯುವಕರಾಗಿದ್ದ ಡಾ. ಲೋಹಿಯಾ ಅವರು ಕನಲಲಿಲ್ಲ. ಬದಲಿಗೆ, ಭೂಗತರಾಗಿ ಚಳವಳಿಯನ್ನು ಇನ್ನಷ್ಟು ತ್ವರಿತಗೊಳಿಸಲು ಭೂಗತ ರೇಡಿಯೋ ಸ್ಟೇಷನ್ ಆರಂಭಿಸಿದರು.

ಗೋವಾ ವಿಮೋಚನಾ ಚಳವಳಿಯ ಇತಿಹಾಸದ ಪುಟಗಳಲ್ಲಿ ಡಾ. ರಾಮ್ ಮನೋಹರ ಲೋಹಿಯಾ ಅವರ ಹೆಸರನ್ನು ಸ್ವರ್ಣಾಕ್ಷರಗಳಲ್ಲಿ ಕೆತ್ತಲಾಗಿದೆ. ದಮನಿತರ ಧ್ವನಿ ಕೇಳಬೇಕಾಗಿದ್ದ ಸಮಯ, ಸಂದರ್ಭದಲ್ಲೆಲ್ಲ ಲೋಹಿಯಾ ದಮನಿತರಿಗಾಗಿ ಇರುತ್ತಿದ್ದರು.

ದೇಶಕ್ಕಾಗಿ ಬಲಿದಾನಗೈದ ಆ ಮೂರು ವೀರರಿಗೆ ಭಾವಪೂರ್ಣ ಶ್ರದ್ಧಾಂಜಲಿದೇಶಕ್ಕಾಗಿ ಬಲಿದಾನಗೈದ ಆ ಮೂರು ವೀರರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಡಾ. ಲೋಹಿಯಾ ಅವರ ವಿಚಾರಧಾರೆ ನಮಗೆಲ್ಲ ಸ್ಫೂರ್ತಿ. ಕೃಷಿ ಕ್ಷೇತ್ರವನ್ನು ಆಧುನೀಕರಣಗೊಳಿಸುವ ಬಗ್ಗೆ, ರೈತರಿಗೆ ಅಧಿಕಾರ ನೀಡುವ ಬಗ್ಗೆ ಅವರು ಸಾಕಷ್ಟು ಬರೆದಿದ್ದರು. ಇದೇ ನಿಟ್ಟಿನಲ್ಲಿ ಎನ್ಡಿಎ ಸರಕಾರ ಪಿಎಂ ಕಿಸಾನ್ ಸಮ್ಮಾನ್ ನಿಧಿ, ಕೃಷಿ ಸಿಂಚೈ ಯೋಜನೆ, ಈ-ನಾಮ್, ಸಾಯ್ಲ್ ಹೆಲ್ತ್ ಕಾರ್ಡ್ ಮುಂತಾದವುಗಳನ್ನು ಜಾರಿಗೆ ತಂದಿದೆ.

ಸ್ತ್ರೀಯರು ಮತ್ತು ಪುರುಷರ ನಡುವಿನ ಅಸಮಾನತೆ ಮತ್ತು ಜಾತಿ ತಾರತಮ್ಯಕ್ಕಿಂತ ಹೆಚ್ಚಿಗೆ ಬೇರಾವುದೂ ಲೋಹಿಯಾ ಅವರಿಗೆ ನೋವು ನೀಡಿದ್ದಿಲ್ಲ. 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ಮಂತ್ರ ಜಪಿಸುತ್ತಿರುವ ನಾವು, ಕಳೆದ ಐದು ವರ್ಷಗಳಲ್ಲಿ ಡಾ. ಲೋಹಿಯಾ ಅವರ ಈ ಕನಸನ್ನು ನನಸು ಮಾಡುವಲ್ಲಿ ನಿರತರಾಗಿದ್ದೇವೆ. ಎನ್ಡಿಎದ ಈ ಸಾಧನೆಯನ್ನು ನೋಡಿದ್ದರೆ ಲೋಹಿಯಾ ಖಂಡಿತ ಹೆಮ್ಮೆಪಟ್ಟುಕೊಳ್ಳುತ್ತಿದ್ದರು.

ಸಂಸತ್ತಿನಲ್ಲಿ ಲೋಹಿಯಾ ಅವರು ಮಾತಾಡಿದಾಗಲೆಲ್ಲ, ಕಾಂಗ್ರೆಸ್ ಹೆದರಿಕೆಯಿಂದ ಥರಥರಗುಟ್ಟುತ್ತಿತ್ತು. ಕಾಂಗ್ರೆಸ್ ಪಕ್ಷ ಎಂಥ ದುರಂತಮಯ ಎಂದು ಅವರಿಗೆ ಗೊತ್ತಿತ್ತು. ಕಾಂಗ್ರೆಸ್ ಆಡಿತಾವಧಿಯಲ್ಲಿ, ಕೃಷಿ ಕ್ಷೇತ್ರವಾಗಲಿ, ಉದ್ಯಮವಾಗಲಿ ಅಥವಾ ಸೇನೆಯಾಗಲಿ ಯಾವುದೂ ಅಭಿವೃದ್ಧಿ ಕಾಣಲಿಲ್ಲ ಎಂದು ಅವರು 1962ರಲ್ಲಿಯೇ ನುಡಿದಿದ್ದರು.

Congress has betrayed Dr Lohia, will betray nation : Narendra Modi

ಈ ಮಾತುಗಳು ಕಾಂಗ್ರೆಸ್ ಆಡಳಿತ ನಡೆಸಿದ ಮುಂದಿನ ಹಲವಾರು ವರ್ಷಗಳಲ್ಲಿ ಕೂಡ ನಿಜವಾದವು. ಕೃಷಿಕರಿಗೆ ತೊಂದರೆ ನೀಡಲಾಯಿತು, ಉದ್ಯಮಗಳಿಗೆ ಪ್ರೋತ್ಸಾಹ ನಿರಾಕರಿಸಲಾಯಿತು (ಕಾಂಗ್ರೆಸ್ ಸ್ನೇಹಿತರು ಮತ್ತು ಬಂಧುಗಳಿಗೆ ಹೊರತುಪಡಿಸಿ) ಮತ್ತು ರಾಷ್ಟ್ರೀಯ ಭದ್ರತೆಯನ್ನು ನಿರ್ಲಕ್ಷಿಸಲಾಯಿತು.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಡಾ. ಲೋಹಿಯಾ ಅವರ ಹೃದಯ ಮತ್ತು ಆತ್ಮ ಕಾಂಗ್ರೆಸ್ ವಿರೋಧಿಯಾಗಿತ್ತು. 1967ರ ಚುನಾವಣೆಯಲ್ಲಿ ಭಾರೀ ಪ್ರಬಲವಾಗಿದ್ದ ಕಾಂಗ್ರೆಸ್ಸಿಗೆ ಭಾರೀ ಹೊಡೆತ ಅವರು ನೀಡಿದರು. "ಡಾ. ಲೋಹಿಯಾ ಅವರ ಈ ಪ್ರಯತ್ನದಿಂದಾಗಿ, ಹೌರಾ ಮತ್ತು ಅಮೃತಸರ ನಡುವೆ ಕಾಂಗ್ರೆಸ್ ಆಡಳಿತವಿಲ್ಲದ ರಾಜ್ಯಗಳ ಮೂಲಕ ರೈಲಿನಲ್ಲಿ ಸಂಚರಿಸಬಹುದು" ಎಂದು ಅಟಲ್ ಜಿ ಅವರು ಉದ್ಘರಿಸಿದ್ದರು.

ಆದರೆ, ಇಂದಿನ ರಾಜಕೀಯ ಬೆಳವಣಿಗೆಗಳನ್ನು ನೋಡಿ ಲೋಹಿಯಾ ಅವರು ಆಘಾತಕ್ಕೀಡಿಗಿರುತ್ತಿದ್ದರು. ಲೋಹಿಯಾ ಅವರಿಂದ ಸ್ಫೂರ್ತಿ ಪಡೆದಿದ್ದೇವೆ ಎಂದು ಹೇಳಿಕೊಳ್ಳುವ ಪಕ್ಷಗಳೇ ಇಂದು ಅವರ ಆದರ್ಶಗಳನ್ನು ಕೈಬಿಟ್ಟಿವೆ. ಆ ಪಕ್ಷಗಳು ಲೋಹಿಯಾ ಅವರಿಗೆ ಎಲ್ಲ ರೀತಿಯಿಂದಲೂ ಅವಮಾನ ಮಾಡುತ್ತಿವೆ. "ಲೋಹಿಯಾ ಅವರು ಬ್ರಿಟಿಷರಿಗಿಂತ ಕಾಂಗ್ರೆಸಾ ಆಡಳಿತಾವಧಿಯಲ್ಲಿಯೇ ಹೆಚ್ಚು ಜೈಲಿಗೆ ಹೋಗಿದ್ದರು" ಎಂದು ಹಿರಿಯ ಸಮಾಜವಾದಿ ನಾಯಕ ಸುರೇಂದ್ರನಾಥ್ ದ್ವಿವೇದಿ ಅವರು ಹೇಳಿದ್ದಾರೆ.

ತಾವು ಡಾ. ಲೋಹಿಯಾ ಅವರ ಹಿಂಬಾಲಕರೆಂದು ಸುಳ್ಳು ಹೇಳಿಕೆ ನೀಡುತ್ತಿರುವ ಪಕ್ಷಗಳ ನಾಯಕರೇ, ಅದೇ ಕಾಂಗ್ರೆಸ್ ಪಕ್ಷದ ಜೊತೆ ಅವಕಾಶವಾದಿ ಮಹಾ ಕಲಸುಮೇಲೋಗರ ಘಟಬಂಧನವನ್ನು ಮಾಡಿಕೊಳ್ಳುತ್ತಿವೆ. ಇದು ಇಂದಿನ ವ್ಯಂಗ್ಯ ಮತ್ತು ವಿಡಂಬನೆ.

ಪ್ರಜಾಪ್ರಭುತ್ವಕ್ಕೆ ಕುಟುಂಬ ರಾಜಕಾರಣ ಎಂದಿಗೂ ಮಾರಕ ಎಂದು ಡಾ. ಲೋಹಿಯಾ ನಂಬಿದ್ದರು. ಇದೀಗ ದೇಶಕ್ಕಿಂತ ತಮ್ಮು ಕುಟುಂಬದ ಬಗ್ಗೆಯೇ ಚಿಂತಿಸುತ್ತಿರುವವರನ್ನು ನೋಡಿ ಲೋಹಿಯಾ ಅವರು ಆಘಾತಕ್ಕೀಡಾಗುತ್ತಿದ್ದರು.

ಸಮತಾ, ಸಮಾನತಾ ಮತ್ತು ಸಮತ್ವಭಾವಕ್ಕಾಗಿ ಯಾರು ಕೆಲಸ ಮಾಡುತ್ತಾರೋ ಅವರು ಯೋಗಿ ಎಂದು ಲೋಹಿಯಾ ಚಿಂತಿಸಿದ್ದರು. ಆದರೆ, ಲೋಹಿಯಾ ಅವರ ಹಿಂಬಾಲಕರೆಂದು ಹೇಳಿಕೊಳ್ಳುವವರು ಈ ಆದರ್ಶಗಳನ್ನು ಮರೆತಿದ್ದಾರೆ. ಅವರಿಗೆ ಸ್ವಾರ್ಥ ಮತ್ತು ಶೋಷಣೆಯಲ್ಲಿಯೇ ನಂಬಿಕೆ. ಅಧಿಕಾರ ಕಬಳಿಸುವಲ್ಲಿ, ಇತರರ ಶೋಷಣೆ ಮಾಡಿ ಲೂಟಿ ಮಾಡುವಲ್ಲಿ ಇವರು ತಜ್ಞರು. ಬಡಬಗ್ಗರು, ಗುಡ್ಡಗಾಡು ಜನರು, ದಲಿತರು, ಹಿಂದುಳಿದವರು ಮತ್ತು ಮಹಿಳೆಯರು ಅಂಥವರ ಕೈಕೆಳಗೆ ಸುರಕ್ಷಿತವಾಗಿಲ್ಲ. ಏಕೆಂದರೆ ಆ ಪಕ್ಷಗಳು ಕ್ರಿಮಿನಲ್ ಗಳಿಗೆ, ಸಮಾಜ ವಿರೋಧಿಗಳಿಗೆ ಮುಕ್ತ ಹಸ್ತ ನೀಡಿವೆ.

ಲೋಹಿಯಾ ಅವರು ಪುರುಷ ಮತ್ತು ಸ್ತ್ರೀಯರ ನಡುವೆ ಸಮಾನತೆ ಇರಬೇಕು ಎಂದು ಬಯಸಿದ್ದರು. ಆದರೆ, ಬರೀ ವೋಟ್ ಬ್ಯಾಂಕ್ ರಾಜಕಾರಣದಲ್ಲಿ ಮುಳುಗಿರುವವರು, ಡಾ. ಲೋಹಿಯಾ ಅವರ ಹಿಂಬಾಲಕರೆಂದು ಹೇಳಿಕೊಳ್ಳುವವರು, ಅಮಾನವೀಯ ತ್ರಿವಳಿ ತಲಾಖ್ ಗೆ ವಿರೋಧ ವ್ಯಕ್ತಪಡಿಸಿದರು. ಲೋಹಿಯಾ ಅವರ ವಿಚಾರಧಾರೆಗಿಂತ ಇವರಿಗೆ ವೋಟ್ ಬ್ಯಾಂಕ್ ಪಾಲಿಟಿಕ್ಸೇ ಹೆಚ್ಚಾಯಿತೆ?

ಇಂದು, 130 ಕೋಟಿ ಭಾರತೀಯರು ಎದುರಿಸುತ್ತಿರುವ ಪ್ರಶ್ನೆಯೆಂದರೆ, ಡಾ. ಲೋಹಿಯಾ ಅವರಿಗೆ ಮೋಸ ಮಾಡಿದ, ಅವರ ಬೆನ್ನಿಗೆ ಚೂರಿ ಹಾಕಿದ ಪಕ್ಷಕ್ಕೆ ಹೇಗೆ ದೇಶದ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು? ಅವರು ಇಂದು ಲೋಹಿಯಾ ಅವರ ಆದರ್ಶಗಳಿಗೆ ಮೋಸ ಮಾಡಿದ್ದಾರೆ, ನಾಳೆ ಅವರು ಇಡೀ ದೇಶದ ಜನರಿಗೇ ಮೋಸ ಮಾಡುತ್ತಾರೆ!

English summary
Today they are betraying the principles of Dr. Ram Manohar Lohia, tomorrow they will also betray the people of India. My thoughts on why those who claim to follow Dr. Lohia have let him down. Do read - Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X