ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಐಸಿಸಿ ಹೇಳೋದು ಒಂದು, ಡಿ.ಕೆ.ಶಿವಕುಮಾರ್ ಇಲ್ಲಿ ಮಾಡೋದು ಇನ್ನೊಂದು!

|
Google Oneindia Kannada News

ಕೆಪಿಸಿಸಿಯ ಮಹತ್ವಾಕಾಂಕ್ಷೆಯ ಮೇಕೆದಾಟು ಪಾದಯಾತ್ರೆ ಭಾನುವಾರ (ಜ 9) ಆರಂಭಗೊಂಡಿದೆ. ಪಾದಯಾತ್ರೆಯಲ್ಲಿ ಭಾಗವಹಿಸಲು ಸರಕಾರ ಅಡ್ಡಿ ಪಡಿಸಿದರೆ ನಾವಿಬ್ಬರೇ ಪಾಲ್ಗೊಳ್ಳುತ್ತೇವೆ ಎಂದು ಹೇಳಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ನಾಲ್ಕು ಕಿಲೋಮೀಟರ್ ಪಾದಯಾತ್ರೆ ನಡೆಸಿ ಸುಸ್ತಾಗಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

ಕೋವಿಡ್ ನಿಯಮವನ್ನು ಪಾಲಿಸಲಾಗುವುದು ಎಂದು ಹೇಳಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೂ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಮಾಸ್ಕ್ ಧರಿಸದೇ ಮಾತಿಗೆ ತಪ್ಪಿದ್ದಾರೆ. ಇನ್ನು, ಪಾದಯಾತ್ರೆಯಲ್ಲಿ ಕೊರೊನಾ ಮಾರ್ಗಸೂಚಿ ಪಾಲನೆಯ ಬಗ್ಗೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ.

ಕಾಂಗ್ರೆಸ್ ಮೇಕೆದಾಟು, ಜೆಡಿಎಸ್ ಜಲಧಾರೆ ನಡುವೆ ವೈರಸ್ ಹುಡುಕಾಟದಲ್ಲಿ ಜನತೆ!ಕಾಂಗ್ರೆಸ್ ಮೇಕೆದಾಟು, ಜೆಡಿಎಸ್ ಜಲಧಾರೆ ನಡುವೆ ವೈರಸ್ ಹುಡುಕಾಟದಲ್ಲಿ ಜನತೆ!

ಕೂರೊನಾ ಓಮಿಕ್ರಾನ್ ವೈರಸ್ ನಾಗಾಲೋಟದಲ್ಲಿ ಏರಿಕೆಯಾಗುತ್ತಿರುವ ಬಗ್ಗೆ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಗಿ ಹೇಳಿಕೆ ನೀಡುವ ಮೂಲಕ, ಪಾದಯಾತ್ರೆಯ ಮುಂದಿನ ದಿನಗಳೂ ಜಾತ್ರೆಯಂತೆ ಇರಲಿದೆ ಎನ್ನುವುದರ ಬಗ್ಗೆ ಮುನ್ಸೂಚನೆ ಕೊಟ್ಟಂತಿದೆ.

ಪಾದಯಾತ್ರೆಯನ್ನು ತಡೆಯಲು ಸರಕಾರಕ್ಕೆ ಹಲವು ದಾರಿಗಳಿದ್ದರೂ, ಸಿಎಂ ಬಸವರಾಜ ಬೊಮ್ಮಯಿ ಕಾದು ನೋಡುವ ತಂತ್ರಕ್ಕೆ ಮುಂದಾಗಿದ್ದಾರೆ. ಕೋವಿಡ್ ನಿಯಮ ಪಾಲನೆಯ ವಿಚಾರದಲ್ಲಿ ಎಐಸಿಸಿ ಒಂದು ನಿಯಮವನ್ನು ಪಾಲಿಸಿದರೆ, ಇತ್ತ ಕೆಪಿಸಿಸಿಗೆ ಬೇರೆದೆಯೇ ಆದ ಕಾನೂನಿನಂತೆ ವಿದ್ಯಮಾನಗಳು ನಡೆಯುತ್ತಿವೆ.

ಬೆಂಗಳೂರು: ಸಕ್ರಿಯ ಪ್ರಕರಣ 25,370, ಆಸ್ಪತ್ರೆಯಲ್ಲಿ ಇರುವವರು 1,025ಬೆಂಗಳೂರು: ಸಕ್ರಿಯ ಪ್ರಕರಣ 25,370, ಆಸ್ಪತ್ರೆಯಲ್ಲಿ ಇರುವವರು 1,025

 ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿಕೆ

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿಕೆ

ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಎಲ್ಲಾ ರಾಜಕೀಯ ಪಕ್ಷಗಳಿಗೆ ಪ್ರಮುಖವಾಗಿರುವ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಚುನಾವಣಾ ರ‍್ಯಾಲಿಯನ್ನು ರದ್ದು ಪಡಿಸಿತ್ತು. "ಉತ್ತರ ಪ್ರದೇಶ ಸೇರಿದಂತೆ ಚುನಾವಣೆ ನಡೆಯಲಿರುವ ಐದು ರಾಜ್ಯಗಳಲ್ಲಿ ಚುನಾವಣಾ ಸಭೆಯನ್ನು ರದ್ದುಗೊಳಿಸುವ ತೀರ್ಮಾನಕ್ಕೆ ಬರಲಾಗಿದೆ. ರಾಜ್ಯ ಘಟಕಗಳಿಗೆ ಪರಿಸ್ಥಿತಿಯನ್ನು ಅವಲೋಕಿಸಿ ತೀರ್ಮಾನ ತೆಗೆದುಕೊಳ್ಳಲು ಸೂಚಿಸಲಾಗಿದೆ"ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದ್ದರು.

ಮೋದಿ ಸರಕಾರಕ್ಕೆ ಜನರ ಪ್ರಾಣಕ್ಕಿಂತ, ವೋಟ್ ಮುಖ್ಯವಾಗುತ್ತದೋ

ಇನ್ನೊಂದು ಕಡೆ ಎಐಸಿಸಿ ಟ್ವೀಟ್ ಒಂದನ್ನು ಮಾಡಿ, "ಕೋವಿಡ್ ಮೂರನೇ ಅಲೆ ಆರಂಭವಾಗಿದೆ. ಇಂತಹ ಸಮಯದಲ್ಲಿ ಚುನಾವಣಾ ರಾಜಕೀಯ ಮುನ್ನಲೆಗೆ ಬರುತ್ತದೆಯೇ? ಮೋದಿ ಸರಕಾರಕ್ಕೆ ಜನರ ಪ್ರಾಣಕ್ಕಿಂತ, ವೋಟ್ ಮುಖ್ಯವಾಗುತ್ತದೋ" ಎಂದು ಟ್ವೀಟ್ ಮಾಡಿತ್ತು. ಈ ಟ್ವೀಟ್ ಅನ್ನು ಫಾರ್ವರ್ಡ್ ಮಾಡಿ ಬಿಜೆಪಿಯ ಕರ್ನಾಟಕ ಐಟಿ ಘಟಕ ಕೋವಿಡ್ ಯಾತ್ರೆ ಎನ್ನುವ ಹ್ಯಾಷ್ ಟ್ಯಾಗ್ ಮೂಲಕ, "ಮೇಕೆದಾಟು ವಿಚಾರದಲ್ಲಿ #ಸುಳ್ಳಿನಜಾತ್ರೆ ಹೊರಟಿರುವ @DKShivakumar ಅವರು ದೇಶದಲ್ಲಿ ಕೋವಿಡ್ ಇಲ್ಲ, ಎಲ್ಲವೂ ಬಿಜೆಪಿ ಸೃಷ್ಟಿ ಎನ್ನುತ್ತಿದ್ದಾರೆ. ಆದರೆ ಅವರದೇ ಪಕ್ಷದ ಹಿರಿಯ ನಾಯಕರು ಹಾಗೂ ಹೈಕಮಾಂಡ್ ಕೋವಿಡ್ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಸವಾರಿಗೆ ಹೊರಟಿದೆ. ಹಾಗಾದರೆ ಯಾರ ಮಾತು ಸರಿ?" ಎಂದು ಬಿಜೆಪಿ ಪ್ರಶ್ನಿಸಿದೆ.

ವೀರಪ್ಪ ಮೊಯಿಲಿಯವರ ಪೂರ್ವ ನಿಗದಿತ ಕಾರ್ಯಕ್ರಮ ರದ್ದು

ಮತ್ತೊಂದು ಕಡೆ, ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ಸಿನ ಹಿರಿಯ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯಿಲಿಯವರೂ ಪೂರ್ವ ನಿಗದಿತ ಕಾರ್ಯಕ್ರಮವಾದ ಪತ್ರಿಕಾಗೋಷ್ಠಿ ಮತ್ತು ಪುಸ್ತಕ ಬಿಡುಗಡೆ ಕಾರ್ಯಕಮವನ್ನು ಕೋವಿಡ್ ಕಾರಣಕ್ಕಾಗಿ ಮುಂದಕ್ಕೆ ಹಾಕಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ರಾಜ್ಯ ಇಂಧನ ಸಚಿವ ವಿ.ಸುನೀಲ್ ಕುಮಾರ್ ಅವರು ಮೊಯಿಲಿಯವರಿಗೆ ಇರುವ ಕಾಳಜಿ ನಿಮಗಿಲ್ಲವೇ ಎಂದು ಡಿಕೆಶಿ ಮತ್ತು ಸಿದ್ದರಾಮಯ್ಯನವರನ್ನು ಪ್ರಶ್ನಿಸಿದ್ದಾರೆ. "ಹೆಚ್ಚುತ್ತಿರುವ ಕೋವಿಡ್ ಕಾರಣಕ್ಕೆ ನಿಮ್ಮ ಪಕ್ಷದ ವೀರಪ್ಪ ಮೊಯಿಲಿ ತಮ್ಮ ಪೂರ್ವ ನಿಯೋಜಿತ ಕಾರ್ಯಕ್ರಮವನ್ನ ರದ್ದುಪಡಿಸಿದ್ದಾರೆ. ಅವರಿಗೆ ಇರುವ ಜನತೆಯ ಮೇಲಿನ ಕಾಳಜಿ, ಅಧಿಕಾರದ ಹಗಲುಗನಸು ಕಾಣುತ್ತಿರುವ ನಿಮ್ಮಿಬ್ಬರಿಗೆ ಇಲ್ಲದೇ ಹೋಯಿತೇ..?

 ಕೋವಿಡ್ ನಿಯಮ ಪಾಲನೆಯಾಗುತ್ತಿಲ್ಲ ಎನ್ನುವುದನ್ನು ಕಾಂಗ್ರೆಸ್ಸಿಗರೇ ಒಪ್ಪಿಕೊಳ್ಳುತ್ತಾರೆ

ಕೋವಿಡ್ ನಿಯಮ ಪಾಲನೆಯಾಗುತ್ತಿಲ್ಲ ಎನ್ನುವುದನ್ನು ಕಾಂಗ್ರೆಸ್ಸಿಗರೇ ಒಪ್ಪಿಕೊಳ್ಳುತ್ತಾರೆ

ಮೇಕೆದಾಟು ಪಾದಯಾತ್ರೆಯಲ್ಲಿ ಕೋವಿಡ್ ನಿಯಮ ಪಾಲನೆಯಾಗುತ್ತಿಲ್ಲ ಎನ್ನುವುದನ್ನು ಕಾಂಗ್ರೆಸ್ ಮುಖಂಡರೇ ಒಪ್ಪಿಕೊಳ್ಳುತ್ತಾರೆ. ಕಾಂಗ್ರೆಸ್ಸಿನವರು ಎರಡ್ಮೂರು ಸಾವಿರ ಜನ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬಹುದು ಎನ್ನುವ ನಿರೀಕ್ಷೆಯಲ್ಲಿದ್ದರು, ಆದರೆ ಮೊದಲ ದಿನ ಇಪ್ಪತ್ತು ಸಾವಿರಕ್ಕೂ ಮೀರಿತ್ತು. ಆದರೆ, ಮುಖ್ಯಮಂತ್ರಿ ಆದಿಯಾಗಿ ಸರಕಾರದ ಸಚಿವರು ಡಿಕೆಶಿಗೆ ಪಾದಯಾತ್ರೆ ಮೊಟಕುಗೊಳಿಸುವಂತೆ ಮನವಿ ಮಾಡಿದರೂ, ಇದಕ್ಕೆ ಡಿಕೆ ಸಹೋದರರು ಸೊಪ್ಪು ಹಾಕುತ್ತಿಲ್ಲ. ಹಾಗಾಗಿ, ನಿಮ್ಮ ಕೇಂದ್ರದ ನಾಯಕರು ಬುದ್ದಿವಾದ ಹೇಳುವುದು ಒಂದು ನೀವು ಮಾಡುವುದು ಇನ್ನೊಂದು ಎಂದು ಕೆಪಿಸಿಸಿ ಅಧ್ಯಕ್ಷರನ್ನು ಪ್ರಶ್ನಿಸಲಾಗುತ್ತಿದೆ.

Recommended Video

Ross Taylor ಅವರಿಗೆ ಕಡೇ ಪಂದ್ಯದಲ್ಲಿ ಭಾರೀ ಗೌರವ | Oneindia Kannada

English summary
Congress Dual Stand In Uttar Pradesh And In Karnataka: Mekedatu Padayatra In Swing. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X