ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆತ್ಮವಿಶ್ವಾಸದಲ್ಲೂ ಬಾಲಕಿಯರೇ ಬೆಸ್ಟ್ ಎಂದ ಸಮೀಕ್ಷೆಯು ಬಾಲಕರ ಬಗ್ಗೆ ಹೇಳುವುದೇನು?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 8: ಭಾರತದ ಅತಿದೊಡ್ಡ ಶಾಲಾ ಎಡ್‌ಟೆಕ್‌ ಕಂಪನಿ ʻಲೀಡ್ʼ(LEAD) ದೇಶದ ವಿದ್ಯಾರ್ಥಿಗಳ ಆತ್ಮವಿಶ್ವಾಸಕ್ಕೆ ಸಂಬಂಧಿಸಿದಂತೆ ಮೊದಲ ಸೂಚ್ಯಂಕವನ್ನು ಬಿಡುಗಡೆ ಮಾಡಿದೆ. ಇದು ಆತ್ಮನಿರ್ಭರ್ ಭಾರತಕ್ಕಾಗಿ ಆತ್ಮವಿಶ್ವಾಸದ ಆಶಯಕ್ಕೆ ಅನುಗುಣವಾಗಿದೆ ಎಂದು ಹೇಳಲಾಗುತ್ತಿದೆ.

ಇದು ಭಾರತದ ವಿವಿಧ ಪ್ರದೇಶಗಳು, ನಗರಗಳು ಮತ್ತು ಜನಸಂಖ್ಯೆಯಲ್ಲಿ ಶಾಲೆಗೆ ಹೋಗುವ ವಿದ್ಯಾರ್ಥಿಗಳ ಆತ್ಮವಿಶ್ವಾಸದ ಮಟ್ಟವನ್ನು ವಿವಿಧ ಮಾನದಂಡಗಳ ಅಡಿಯಲ್ಲಿ ಮಾಪನ ಮಾಡುವ ಅಧ್ಯಯನವಾಗಿದೆ.

PM-SHRI Scheme: ಭಾರತದಲ್ಲಿ 14000 ಶಾಲೆಗಳ ಪುನರಾಭಿವೃದ್ಧಿಗೆ ಕೇಂದ್ರ ಸಂಪುಟ ಅಸ್ತುPM-SHRI Scheme: ಭಾರತದಲ್ಲಿ 14000 ಶಾಲೆಗಳ ಪುನರಾಭಿವೃದ್ಧಿಗೆ ಕೇಂದ್ರ ಸಂಪುಟ ಅಸ್ತು

ಟಾಟಾ ಇನ್ಸ್‌ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ʼ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ, ʻಲೀಡ್‌ʼನ ಸೂಚ್ಯಂಕವು ವಿದ್ಯಾರ್ಥಿಗಳ ಆತ್ಮವಿಶ್ವಾಸದ ಬಗ್ಗೆ ಹಲವಾರು ಮಹತ್ವದ ಅಂಶಗಳನ್ನು ಬಹಿರಂಗಪಡಿಸಿದೆ. ಭಾರತದಲ್ಲಿ ವಿದ್ಯಾರ್ಥಿಗಳ ಒಟ್ಟಾರೆ ಆತ್ಮವಿಶ್ವಾಸದ ಪ್ರಮಾಣವು ಶೇ.75ರಷ್ಟಿದೆ. ಅದೇ ರೀತಿ ಶೇ.36ರಷ್ಟು ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸವು ಶೇ.81ಕ್ಕಿಂತ ಹೆಚ್ಚಾಗಿದೆ. ಈ ಹಂತದಲ್ಲಿ ಯಾವ ರಾಜ್ಯಗಳಲ್ಲಿ ವಿದ್ಯಾರ್ಥಿಗಳ ಆತ್ಮವಿಶ್ವಾಸ ಮಟ್ಟ ಹೆಚ್ಚಾಗಿದೆ?, ಕರ್ನಾಟಕದಲ್ಲಿ ವಿದ್ಯಾರ್ಥಿಗಳ ಆತ್ಮವಿಶ್ವಾಸದ ಪ್ರಮಾಣ ಎಷ್ಟಿದೆ ಎಂಬುದರ ಕುರಿತು ಅಧ್ಯಯನ ಏನು ಹೇಳುತ್ತದೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳಿ.

ವಿದ್ಯಾರ್ಥಿಗಳ ಆತ್ಮವಿಶ್ವಾಸ ಪರೀಕ್ಷೆ ಮಾಡಿದ್ದು ಹೇಗೆ?

ವಿದ್ಯಾರ್ಥಿಗಳ ಆತ್ಮವಿಶ್ವಾಸ ಪರೀಕ್ಷೆ ಮಾಡಿದ್ದು ಹೇಗೆ?

ʻಲೀಡ್ʼನ ʻವಿದ್ಯಾರ್ಥಿ ಆತ್ಮವಿಶ್ವಾಸ ಸೂಚ್ಯಂಕʼವು ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ವಿಯಾಗಲು ನಿರ್ಣಾಯಕವಾಗಿರುತ್ತದೆ. 21ನೇ ಶತಮಾನದಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವ ಐದು ಪ್ರಮುಖ ಗುಣಲಕ್ಷಣಗಳನ್ನು ಮೌಲ್ಯಮಾಪನ ಮಾಡಲಾಗಿದೆ. ಈ ವಿಷಯಗಳನ್ನು ಆಧಾರವಾಗಿ ಇಟ್ಟುಕೊಂಡು ವಿದ್ಯಾರ್ಥಿಗಳಲ್ಲಿ ಇರುವ ಅತ್ಮವಿಶ್ವಾಸದ ಮಟ್ಟದನ್ನು ಪರಿಶೋಧನೆ ಮಾಡಲಾಗಿದೆ. ಅದರ ಪ್ರಕಾರ, ವಿದ್ಯಾರ್ಥಿಗಳಲ್ಲಿನ ಪರಿಕಲ್ಪನೆಯ ತಿಳುವಳಿಕೆ, ವಿಮರ್ಶಾತ್ಮಕ ಚಿಂತನೆ, ಸಂವಹನ, ಸಹಯೋಗ ಹಾಗೂ ಅವಕಾಶಗಳು ಮತ್ತು ವೇದಿಕೆಗಳ ಮೇಲೆ ಆತ್ಮವಿಶ್ವಾಸವನ್ನು ಅಳತೆ ಮಾಡಲಾಗಿದೆ.

ತಮ್ಮಲ್ಲಿನ ಆತ್ಮವಿಶ್ವಾಸಕ್ಕೆ ವಿದ್ಯಾರ್ಥಿಗಳ ರೇಟಿಂಗ್

ತಮ್ಮಲ್ಲಿನ ಆತ್ಮವಿಶ್ವಾಸಕ್ಕೆ ವಿದ್ಯಾರ್ಥಿಗಳ ರೇಟಿಂಗ್

ಗುಣಲಕ್ಷಣ - ಮಹಾನಗರ - ಮಹಾನಗರವಲ್ಲದ ಪ್ರದೇಶ

ಪರಿಕಲ್ಪನಾತ್ಮಕ ತಿಳುವಳಿಕೆ - 61 - 42

ವಿಮರ್ಶಾತ್ಮಕ ಚಿಂತನೆ - 61 - 42

ಸಂವಹನ - 63 - 46

ಸಹಯೋಗ - 53 - 44

ತೆರೆದುಕೊಳ್ಳುವಿಕೆ - 57 - 41

ಮುಂಬೈ ಮತ್ತು ಚೆನ್ನೈನಲ್ಲಿ ಬಾಲಕಿಯರೇ ಬೆಸ್ಟ್

ಮುಂಬೈ ಮತ್ತು ಚೆನ್ನೈನಲ್ಲಿ ಬಾಲಕಿಯರೇ ಬೆಸ್ಟ್

ವಿದ್ಯಾರ್ಥಿ ಆತ್ಮವಿಶ್ವಾಸ ಸೂಚ್ಯಂಕದ ಪ್ರಕಾರ, ಪ್ರಾದೇಶಿಕ ಮಟ್ಟದಲ್ಲಿ 81ನೇ ಸ್ಥಾನ ಪಡೆದುಕೊಳ್ಳುವ ಮೂಲಕ ಪಶ್ಚಿಮ ಭಾರತವು ಅಗ್ರಸ್ಥಾನದಲ್ಲಿದ್ದರೆ, ದಕ್ಷಿಣ ಮತ್ತು ಪೂರ್ವ ಭಾರತವು ರಾಷ್ಟ್ರೀಯ ಸರಾಸರಿ ಆಗಿರುವ ಶೇ75ರಷ್ಟರ ಸಮೀಪದಲ್ಲಿದೆ. ಚೆನ್ನೈ ಮತ್ತು ಮುಂಬೈನಲ್ಲಿ ಮಾತ್ರ ಬಾಲಕರಿಗಿಂತಲೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಬೆಂಗಳೂರಿನಲ್ಲಿ ಬಾಲಕರು ಮತ್ತು ಬಾಲಕಿಯರಲ್ಲಿ ಆತ್ಮವಿಶ್ವಾಸದ ಮಟ್ಟವು ಶೇ.75ಕ್ಕಿಂತ ಹೆಚ್ಚಾಗಿರುವುದು ಅಧ್ಯಯನದ ವೇಳೆ ಗೊತ್ತಾಗಿದೆ. ಇದನ್ನು ಹೊರತುಪಡಿಸಿ ಉಳಿದೆಲ್ಲಿ ಮೆಟ್ರೊ ಮತ್ತು ಮೆಟ್ರೋಯೇತರ ನಗರಗಳಾದ್ಯಂತ ಬಾಲಕರು ಮತ್ತು ಬಾಲಕಿಯರು ಸಮಾನ ಆತ್ಮವಿಶ್ವಾಸ ಮಟ್ಟವನ್ನು ಹೊಂದಿರುವುದು ಗೊತ್ತಾಗಿದೆ.

ವಿದ್ಯಾರ್ಥಿ ಆತ್ಮವಿಶ್ವಾಸ ಸೂಚ್ಯಂಕದ ಬಗ್ಗೆ ಲೀಡ್ ಪ್ರತಿಕ್ರಿಯೆ ಏನು?

ವಿದ್ಯಾರ್ಥಿ ಆತ್ಮವಿಶ್ವಾಸ ಸೂಚ್ಯಂಕದ ಬಗ್ಗೆ ಲೀಡ್ ಪ್ರತಿಕ್ರಿಯೆ ಏನು?

ಭಾರತದಲ್ಲಿನ ವಿದ್ಯಾರ್ಥಿಗಳ ಆತ್ಮವಿಶ್ವಾಸ ಸೂಚ್ಯಂಕದ ಬಗ್ಗೆ ʻಲೀಡ್ʼ ಸಹ-ಸಂಸ್ಥಾಪಕ ಮತ್ತು ಸಿಇಒ ಸುಮೀತ್ ಮೆಹ್ತಾ ಪ್ರತಿಕ್ರಿಯೆ ನೀಡಿದ್ದಾರೆ. "ಭಾರತವು ಆತ್ಮನಿರ್ಭರ್ ಆಗಬೇಕಾದರೆ, ನಮ್ಮ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗಬೇಕು. ಆದರೆ ದೇಶದ ವಿದ್ಯಾರ್ಥಿಗಳ ಆತ್ಮವಿಶ್ವಾಸದ ಮಟ್ಟವನ್ನು ತಿಳಿಯಲು ಯಾವುದೇ ಮಾರ್ಗವಿರಲಿಲ್ಲ. ʻಟಾಟಾ ಇನ್ಸ್‌ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ʼ (ಎಲ್ಎಂಆರ್‌ಎಫ್‌, ಎಸ್ಎಂಎಲ್ಎಸ್) ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದ ʻಲೀಡ್', ವಿದ್ಯಾರ್ಥಿಗಳ ಆತ್ಮವಿಶ್ವಾಸ ಸೂಚ್ಯಂಕವನ್ನು ತಿಳಿಯುವ ಪ್ರಯತ್ನ ಮಾಡಿದೆ. ಇದೊಂದು ವಾರ್ಷಿಕ ಸಮೀಕ್ಷೆಯಾಗಿದ್ದು, ನಮ್ಮ ವಿದ್ಯಾರ್ಥಿಗಳ ಆತ್ಮವಿಶ್ವಾಸದ ಮಟ್ಟವನ್ನು ತಿಳಿಯಲು ನಮಗೆ ಸಹಾಯವಾಗುತ್ತದೆ. ಇದರ ಜೊತೆಗೆ ನಮ್ಮ ಶೈಕ್ಷಣಿಕ ಕಾರ್ಯಕ್ರಮಗಳ ಕೇಂದ್ರೀಕೃತ ಮಧ್ಯಸ್ಥಿಕೆಗಳನ್ನು ಮಾಡಲು ಸಹಾಯ ಮಾಡುತ್ತದೆ." ಎಂದು ಹೇಳಿದರು.

ʻಟಿಐಎಸ್‌ಎಸ್‌ʼ ಪ್ರಕಾರ ಸೂಚ್ಯಂಕದ ಲಾಭವೇನು?

ʻಟಿಐಎಸ್‌ಎಸ್‌ʼ ಪ್ರಕಾರ ಸೂಚ್ಯಂಕದ ಲಾಭವೇನು?

ʻಟಾಟಾ ಇನ್ಸ್‌ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ʼನ ಸಹಾಯಕ ಪ್ರಾಧ್ಯಾಪಕ ಡಾ ರಾಹುಲ್ ಎಸ್ ಮಾತನಾಡಿದ್ದಾರೆ. "ಭಾರತದ ಚೊಚ್ಚಲ ವಿದ್ಯಾರ್ಥಿ ಆತ್ಮವಿಶ್ವಾಸ ಸೂಚ್ಯಂಕ ಅಭಿವೃದ್ಧಿಗಾಗಿ ʻಲೀಡ್ʼ ಜೊತೆ ಪಾಲುದಾರರಾಗಲು ನಾವು ಸಂತಸಭರಿತರಾಗಿದ್ದೇವೆ. ಈ ʻಆತ್ಮವಿಶ್ವಾಸ ಸೂಚ್ಯಂಕʼವನ್ನು ಅಭಿವೃದ್ಧಿಪಡಿಸಲು ʻಟಿಐಎಸ್‌ಎಸ್‌ʼ(TISS)ನಲ್ಲಿ ʻಎಲ್ಎಂಆರ್‌ಎಫ್‌ʼ ತಂಡವು ಕಠಿಣ ಸಂಶೋಧನಾ ಪ್ರಕ್ರಿಯೆಯನ್ನು ಅನುಸರಿಸಿತು. ಶೈಕ್ಷಣಿಕ ಕಾರ್ಯಕ್ಷಮತೆಗೆ ಕಾರಣವಾಗುವ ಆತ್ಮವಿಶ್ವಾಸವನ್ನು ಅಳೆಯುವ ಸಾಧನದ ಸಿಂಧುತ್ವ ಮತ್ತು ವಿಶ್ವಾಸಾರ್ಹತೆಯು ವೈಜ್ಞಾನಿಕವಾಗಿ ನಿರೂಪಿತವಾಗಿದೆ. ʻಲೀಡ್ʼ ಶಾಲೆಗಳು ಮತ್ತು ವಿದ್ಯಾರ್ಥಿಗಳೊಂದಿಗೆ ನಮ್ಮ ಸಂಶೋಧನೆ ಮತ್ತು ಒಡನಾಟವು ಶೈಕ್ಷಣಿಕ ಸಾಧನೆಗಳಲ್ಲಿ ಅರ್ಥಪೂರ್ಣ ಬದಲಾವಣೆಯನ್ನು ತರುವ ಸಾಮರ್ಥ್ಯದ ಬಗ್ಗೆ ನಮಗೆ ಪ್ರಾಥಮಿಕವಾಗಿ ಮನವರಿಕೆ ಮಾಡಿಕೊಟ್ಟಿತು. ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳ ಜೀವನ ಮತ್ತು ವೃತ್ತಿಜೀವನದಲ್ಲಿ ಬದಲಾವಣೆ ತರುವ ಸಾಮರ್ಥ್ಯದ ಬಗ್ಗೆ ಅರಿವು ಮೂಡಿಸಿತು," ಎಂದು ಹೇಳಿದರು.

ಈ ಸೂಚ್ಯಂಕ ಸಮೀಕ್ಷೆಯು ಸಾಗಿ ಬಂದ ಹಾದಿ ಹೇಗಿತ್ತು?

ಈ ಸೂಚ್ಯಂಕ ಸಮೀಕ್ಷೆಯು ಸಾಗಿ ಬಂದ ಹಾದಿ ಹೇಗಿತ್ತು?

ಭಾರತದ ಮೊದಲ "ವಿದ್ಯಾರ್ಥಿಗಳ ಆತ್ಮವಿಶ್ವಾಸ ಸೂಚ್ಯಂಕ"ದ ಭಾಗವಾಗಿ 6 ಮೆಟ್ರೋ ಸಿಟಿಗಳು ಹಾಗೂ 6 ಮೆಟ್ರೋ ಸಿಟಿಗಳಲ್ಲದೇ ನಗರಗಳು ಮತ್ತು ಎರಡು ಹಾಗೂ ಮೂರನೇ ಶ್ರೇಣಿಯ 3 ನಗರಗಳಲ್ಲಿ ಅಧ್ಯಯನ ನಡೆಸಲಾಗಿದೆ. 6 ರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ 2800ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಈ ಸಮೀಕ್ಷೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ.

English summary
The Confidence Level Of Mumbai Students Stands At 78, Higher Than The National Average Of 75; Revealed by India’s First Student Confidence Index By LEAD. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X