• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಷ್ಯಾದ Su-35S ಮತ್ತು ಫ್ರಾನ್ಸ್‌ನ ರಫೇಲ್ ಪೈಕಿ ಯಾವುದು ಬೆಟರ್?

|
Google Oneindia Kannada News

ಉಕ್ರೇನ್ ವಾಯುಪಡೆ ಇತ್ತೀಚೆಗೆ ರಷ್ಯಾದ ಎಸ್‌ಯು-35ಎಸ್ ಫೈಟರ್ ಜೆಟ್ ಅನ್ನು ತನ್ನ ಕ್ಷಿಪಣಿ ದಾಳಿಗಳಿಂದ ಹೊಡೆದುಹಾಕಿತು. ಸು-35ಎಸ್ ಯುದ್ಧವಿಮಾನದ ಅವಶೇಷಗಳ ಫೋಟೋಗಳನ್ನು ಉಕ್ರೇನ್ ಮಿಲಿಟರಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿತ್ತು. ರಷ್ಯಾದ ಐದನೇ ತಲೆಮಾರಿನ ತಂತ್ರಜ್ಞಾನ ಇರುವ ಈ ಯುದ್ಧವಿಮಾನವು ಆ ದೇಶದ ಅತ್ಯಂತ ಬಲಿಷ್ಠ ಫೈಟರ್ ಜೆಟ್‌ಗಳಲ್ಲಿ ಒಂದೆಂದು ಪರಿಗಣಿತವಾಗಿದೆ. ಅಚ್ಚರಿ ಎಂದರೆ ಉಕ್ರೇನ್ ಬಳಿ ಇರುವುದು ಯಾವುದೋ ಹಳೆಯ ಕಾಲದ ವಾಯು ರಕ್ಷಣಾ ವ್ಯವಸ್ಥೆ. ಆದರೂ ರಷ್ಯಾದ ಪ್ರಬಲ ಹಾಗೂ ಬೃಹತ್ ಗಾತ್ರದ ಫೈಟರ್ ಜೆಟ್ ಅನ್ನು ಉಡಾಯಿಸಿದೆ. ಇನ್ನೂ ಅಚ್ಚರಿ ಎಂದರೆ ಸ್ಟೀಲ್ತ್ ತಂತ್ರ (ರಾಡಾರ್ ಕಣ್ಣಿಗೆ ಬೀಳದಂತೆ) ಇಲ್ಲದೆಯೇ ಕ್ಷಿಪಣಿಗಳು Su-35 S ಜೆಟ್ ಅನ್ನು ನೆಲಕ್ಕುರುಳಿಸಿದ್ದವು.

ಚೀನಾಗೆ ಶುರುವಾಯಿತು ಆತಂಕ: ರಷ್ಯಾದ ಸು-35ಎಸ್ ಫೈಟರ್ ಜೆಟ್ ಅನ್ನು ಉಕ್ರೇನ್ ಪಡೆಗಳು ಹೊಡೆದು ಹಾಕಿದ ಘಟನೆ ರಷ್ಯಾ ದೇಶವನ್ನು ತಲ್ಲಣಗೊಳಿಸಿದೆ. ತನ್ನ ಅತ್ಯಾಧುನಿಕ ಮತ್ತು ಭಾರೀ ಸಾಮರ್ಥ್ಯದ ಯುದ್ಧವಿಮಾನ ನಾಶವಾಗಿದ್ದು ರಷ್ಯಾದ ಕಣ್ಣು ಕೆಂಪಗಾಗಿಸಿದೆ. ಚೀನಾ ಕೂಡ ಕಂಗಾಲಾಗಿದೆ ಎಂದು ಹೇಳಲಾಗುತ್ತಿದೆ. ಒಂದು ಯುದ್ಧವಿಮಾನ ಉರುಳಿಬಿದ್ದರೆ ಅಷ್ಟು ಆತಂಕ ಪಡುವ ಅಗತ್ಯವಾದರೂ ಏನು ಅನಿಸಬಹುದು. ಅದಕ್ಕೆ ಕಾರಣ ಇದೆ. ಈ ಬಗ್ಗೆ ಇನ್ನಷ್ಟು ವಿವರ ಮುಂದಿದೆ...

ಭಾರತದ ರಫೇಲ್ ಯುದ್ಧವಿಮಾನ ಎದುರಿಸಲು ಪಾಕ್‌ಗೆ ನೆರವಾದ ಚೀನಾಭಾರತದ ರಫೇಲ್ ಯುದ್ಧವಿಮಾನ ಎದುರಿಸಲು ಪಾಕ್‌ಗೆ ನೆರವಾದ ಚೀನಾ

 ರಹಸ್ಯ ತಂತ್ರಜ್ಞಾನದ ಫೈಟರ್ ಜೆಟ್ ಅದಾಗಿತ್ತು:

ರಹಸ್ಯ ತಂತ್ರಜ್ಞಾನದ ಫೈಟರ್ ಜೆಟ್ ಅದಾಗಿತ್ತು:

ರಷ್ಯಾದ ಸುಖೋಯ್ ಸು-35ಎಸ್ ಫೈಟರ್ ಜೆಟ್ ಮೊದಲೇ ಹೇಳಿದಂತೆ ಐದನೇ ತಲೆಮಾರಿನ ಯುದ್ಧವಿಮಾನ ಎನಿಸಿದೆ. ಜಗತ್ತಿನ ಅತ್ಯಂತ ಪ್ರಬಲ ಫೈಟರ್ ಜೆಟ್ ಇದು ಎಂದು ಹೇಳಿಕೊಳ್ಳಲಾಗುತ್ತಿತ್ತು. ಈಗ ಈ ಯುದ್ಧವಿಮಾನದ ಅವಶೇಷಗಳು ಉಕ್ರೇನ್ ಪಡೆಗಳ ಸುಪರ್ದಿಗೆ ಸಿಕ್ಕಿದೆ. ಈ ತಂತ್ರಜ್ಞಾನದ ರಹಸ್ಯ ಶತ್ರುಗಳಿಗೆ ತಿಳಿದುಹೋದರೆ ಭಾರೀ ಹಿನ್ನಡೆ ಆದಂತಾಗುತ್ತದೆ. ಇದು ರಷ್ಯಾ ಮತ್ತು ಚೀನಾಗೆ ಆತಂಕ ತರುತ್ತಿರುವ ಸಂಗತಿ.

ರಫೇಲ್ ಖರೀದಿಗೆ ಫ್ರಾನ್ಸ್‌ನೊಂದಿಗೆ ಇಂಡೋನೇಷ್ಯಾ ಒಪ್ಪಂದರಫೇಲ್ ಖರೀದಿಗೆ ಫ್ರಾನ್ಸ್‌ನೊಂದಿಗೆ ಇಂಡೋನೇಷ್ಯಾ ಒಪ್ಪಂದ

 ಅಮೆರಿಕ ಅಂಡ್ ಕೋ ಇಂದ ನಡೆಯುತ್ತಿದೆ ಅಧ್ಯಯನ:

ಅಮೆರಿಕ ಅಂಡ್ ಕೋ ಇಂದ ನಡೆಯುತ್ತಿದೆ ಅಧ್ಯಯನ:

ಸುಖೋಯ್ ಸು-35ಎಸ್ ಯುದ್ಧವಿಮಾನದ ಅವಕಶೇಷಗಳ ಬಗ್ಗೆ ಉಕ್ರೇನ್ ವಾಯುಪಡೆ ತಜ್ಞರು ಬಹಳ ಮುಖ್ಯವಾದ ಮತ್ತು ರಹಸ್ಯವಾದ ಮಾಹಿತಿಯನ್ನು ಪತ್ತೆಹಚ್ಚಿದ್ದಾರೆನ್ನಲಾಗಿದೆ. ಈ ಮಾಹಿತಿ ಮತ್ತು ವಿಮಾನದ ಅವಶೇಷದ ಭಾಗಗಳನ್ನ ಬ್ರಿಟಿಷ್ ಗುಪ್ತಚರ ಸಂಸ್ಥೆಗೂ ಕಳುಹಿಸಿಕೊಡಲಾಗಿದೆ. ಬ್ರಿಟನ್ ಮತ್ತು ಅಮೆರಿಕನ್ ವಿಜ್ಞಾನಿಗಳು ಈಗ ಈ ಫೈಟರ್ ಜೆಟ್‌ನ ರಹಸ್ಯವನ್ನು ಸಂಪೂರ್ಣವಾಗಿ ಜಾಲಾಡುವ ಕೆಲಸದಲ್ಲಿದ್ದಾರೆ.

 ಚೀನಾಗೆ ಯಾಕೆ ಕಳವಳ?

ಚೀನಾಗೆ ಯಾಕೆ ಕಳವಳ?

ತನ್ನ ಫೈಟರ್ ಜೆಟ್ ಪತನಗೊಂಡು ಶತ್ರುಗಳಿಗೆ ಸಿಕ್ಕಿಹೋಗಿರುವುದು ರಷ್ಯಾ ಮತ್ತು ಚೀನಾಗೆ ಆತಂಕ ತಂದಿದೆ. ರಷ್ಯಾ ಬಳಿ 47 ಎಸ್‌ಯು-35ಎಸ್ ಫೈಟರ್ ಜೆಟ್‌ಗಳಿವೆ. ಈ ಜೆಟ್‌ನ ತಂತ್ರಜ್ಞಾನದ ರಹಸ್ಯ ಶತ್ರುಗಳಿಗೆ ತಿಳಿದುಹೋದರೆ ಇವುಗಳನ್ನ ಯುದ್ಧದಲ್ಲಿ ಬಳಕೆ ಮಾಡುವುದೇ ನಿರರ್ಥಕ ಎನಿಸಿಬಿಡಬಹುದು. ಹಾಗೆಯೇ, ರಷ್ಯಾದ ಪ್ರಮುಖ ಡಿಫೆನ್ಸ್ ಪಾರ್ಟ್ನರ್ ಎನಿಸಿರುವ ಚೀನಾ ಕೂಡ ರಷ್ಯಾದಿಂದ 24 ಸು-35ಎಸ್ ಫೈಟರ್ ಜೆಟ್‌ಗಳನ್ನ ಖರೀದಿ ಮಾಡುತ್ತಿದೆ. ಇದು ಚೀನಾದ ಆತಂಕಕ್ಕೆ ಕಾರಣ.

ಮಾರಿಯುಪೋಲ್ ರಷ್ಯಾ ವಶಕ್ಕೆ; ಪುಟಿನ್ ಘೋಷಣೆಮಾರಿಯುಪೋಲ್ ರಷ್ಯಾ ವಶಕ್ಕೆ; ಪುಟಿನ್ ಘೋಷಣೆ

 ಸು-35ಎಸ್ ಶ್ರೇಷ್ಠತೆಗಳು ಹಲವು:

ಸು-35ಎಸ್ ಶ್ರೇಷ್ಠತೆಗಳು ಹಲವು:

ಸುಖೋಯ್ ಸು35ಎಸ್ ಯುದ್ಧವಿಮಾನ ರಷ್ಯಾದ ಬೆಸ್ಟ್ ಫೈಟರ್ ಜೆಟ್ ಎಂದು ಪರಿಗಣಿತವಾಗಿದೆ. ಡಬಲ್ ಎಂಜಿನ್ ಇರುವ ಈ ಯುದ್ಧವಿಮಾನಕ್ಕೆ ಡಿಜಿಟಲ್ ಮಾಹಿತಿ ನಿಯಂತ್ರಣ ವ್ಯವಸ್ಥೆ ಇದೆ. ಹಾಗೆಯೇ, ಎಂಟು ಗುರಿಗಳನ್ನ ಏಕಕಾಲದಲ್ಲಿ ನಿರ್ವಹಿಸಬಲ್ಲ ಹೊಸ ರಾಡಾರ್ ವ್ಯವಸ್ಥೆ ಹೊಂದಿದೆ. ಬರೋಬ್ಬರಿ 2400 ಕಿಮೀ ವೇಗದಲ್ಲಿ 3600 ಕಿಮೀ ದೂರ ಕ್ರಮಿಸಬಲ್ಲ ಈ ಸೂಪರ್ ಮಲ್ಟಿ-ಪರ್ಪೋಸ್ ಯುದ್ದವಿಮಾನವು ರಾಕೆಟ್, ವಿವಿಧ ಕ್ಷಿಪಣಿಗಳನ್ನ ಹೊತ್ತೊಯ್ಯಬಲ್ಲುದು. ಇದರಲ್ಲಿರುವ ಪ್ರಬಲ ರಾಡಾರ್ 500 ಕಿಮೀ ದೂರದಿಂದಲೇ ಶತ್ರುಗಳ ಜೆಟ್‌ಗಳನ್ನ ಗುರುತಿಸಬಲ್ಲುದು.

 ಸು-35ಎಸ್‌ಗೆ ಹೋಲಿಸಿದರೆ ರಫೇಲ್ ಹೇಗೆ?

ಸು-35ಎಸ್‌ಗೆ ಹೋಲಿಸಿದರೆ ರಫೇಲ್ ಹೇಗೆ?

ಸುಖೋಯ್ ಸು-35ಎಸ್‌ನಂತೆ ರಫೇಲ್ ಕೂಡ ಐದನೇ ತಲೆಮಾರಿನ ತಂತ್ರಜ್ಞಾನ ಇರುವ ಯುದ್ಧವಿಮಾನವಾಗಿದೆ. ಫ್ರಾನ್ಸ್ ದೇಶದ ಡಸ್ಸೋ ಸಂಸ್ಥೆ ತಯಾರಿಸಿರುವ ರಫೇಲ್ 190 ಕಿಲೋ ತೂಕಷ್ಟು ಕ್ಷಿಪಣಿಗಳನ್ನ ಹೊತ್ತು 2200 ಕಿಮೀ ವೇಗದಲ್ಲಿ ಸಾಗಬಲ್ಲುದು. ರಫೇಲ್ 50 ಸಾವಿರ ಅಡಿಯಷ್ಟು ಎತ್ತರದಲ್ಲಿ ಹಾರಾಡಬಲ್ಲುದು.

ಆದರೆ, ರಫೇಲ್‌ಗೆ ಹೋಲಿಸಿದರೆ ರಷ್ಯಾದ ಸೂಪರ್ ಫೈಟರ್ ಜೆಟ್ ಬಹಳ ಶಕ್ತಿಶಾಲಿ ಮತ್ತು ಪರಿಣಾಮಕಾರಿ ಎನಿಸಿದೆ. ಇದು 60 ಸಾವಿರ ಅಡಿ ಎತ್ತರದಲ್ಲಿ ಸಾಗಬಲ್ಲುದು. ಡಾಗ್ ಫೈಟ್ ಅಥವಾ ವೈಮಾನಿಕ ಸಂಘರ್ಷದ ವೇಳೆ ಶತ್ರುಗಳ ಜೆಟ್‌ಗಳ ಎದುರು ಫೈಟ್ ಮಾಡುವುದು ಸುಲಭವಾಗುತ್ತದೆ.

ಸು-35ಎಸ್ ಯುದ್ಧವಿಮಾನ ಹಲವಾರು ಕೋನಗಳಿಂದ ದಾಳಿ ಮಾಡಲು ಸಮರ್ಥವಾಗಿದೆ. ಎದುರಾಳಿಗಳ ರಾಡಾರ್ ಅನ್ನು ನಿಷ್ಕ್ರಿಯಗೊಳಿಸಬಲ್ಲ ತಂತ್ರಜ್ಞಾನ ಇದಕ್ಕಿದೆ. ಜೆಟ್‌ನ ಮೂತಿ ಒಂದು ದಿಕ್ಕಿಗೆ ತಿರುಗಿಸುತ್ತಾ, ಮತ್ತೊಂದು ದಿಕ್ಕಿನಲ್ಲಿ ಚಲಿಸುವ ಸಾಮರ್ಥ್ಯ ರಷ್ಯಾದ ಈ ವಿಮಾನಕ್ಕಿದೆ.

ರಷ್ಯಾದ ಸು-35ಎಸ್ ತಂತ್ರಜ್ಞಾನಕ್ಕೆ ಹೋಲಿಸಬಹುದಾದ ಎಂಜಿನ್ ಇರುವುದು ಅಮೆರಿಕದ ಎಫ್-22 ಯುದ್ಧವಿಮಾನಕ್ಕೆ ಮಾತ್ರ ಎಂದು ತಜ್ಞರು ಹೇಳುತ್ತಾರೆ. ಆದರೆ, ಯುದ್ಧಸ್ಥಿತಿಯಲ್ಲಿ ಎಫ್-22 ಜೊತೆ ಹಣಾಹಣಿಗೆ ಇಳಿದರೆ ಸು-35ಎಸ್ ಯುದ್ಧವಿಮಾನಕ್ಕೆ ಮೇಲುಗೈ ಆಗುವ ನಿರೀಕ್ಷೆ ಇದೆ.

 ರಷ್ಯಾ ಅಧ್ಯಕ್ಷರನ್ನು ಮೊಸಳೆಗೆ ಹೋಲಿಸಿದ ಬ್ರಿಟನ್ ಪ್ರಧಾನಿ ರಷ್ಯಾ ಅಧ್ಯಕ್ಷರನ್ನು ಮೊಸಳೆಗೆ ಹೋಲಿಸಿದ ಬ್ರಿಟನ್ ಪ್ರಧಾನಿ

 ಸಾಮಾನ್ಯ ದಾಳಿಗೆ ನೆಲಕ್ಕುರುಳಿದ ಶಕ್ತಿಶಾಲಿ ಯುದ್ಧವಿಮಾನ:

ಸಾಮಾನ್ಯ ದಾಳಿಗೆ ನೆಲಕ್ಕುರುಳಿದ ಶಕ್ತಿಶಾಲಿ ಯುದ್ಧವಿಮಾನ:

ಇಂಥ ಯುದ್ಧವಿಮಾನ ಈಗ ಉಕ್ರೇನ್‌ನ ಸಾಮಾನ್ಯ ರಕ್ಷಣಾ ವ್ಯವಸ್ಥೆಗೆ ಸಿಕ್ಕು ಪತನಗೊಂಡಿರುವುದು ವಿಪರ್ಯಾಸವೇ ಸರಿ. ಸ್ಟೀಲ್ತ್ ತಂತ್ರ ಇಲ್ಲದೆಯೇ ಉಕ್ರೇನ್ ಪಡೆಗಳು ಕ್ಷಿಪಣಿ ದಾಳಿ ನಡೆಸಿ ಸು-35ಎಸ್ ಅನ್ನು ಹೊಡೆದುಹಾಕಿವೆ. ನೂರಾರು ಕಿಮೀ ದೂರದಿಂದಲೇ ಎದುರಾಳಿಯ ಕ್ಷಿಪಣಿ ಅಥವಾ ಯುದ್ಧವಿಮಾನವನ್ನು ಗುರುತಿಸುವ ರಾಡಾರ್ ಇದ್ದರೂ ಸು-35ಎಸ್ ಪತನಗೊಂಡಿರುವುದು ಅಚ್ಚರಿ ತಂದಿದೆ. ಈ ಯುದ್ಧವಿಮಾನದಲ್ಲಿ ಬೇರಾವುದೋ ತಾಂತ್ರಿಕ ದೋಷ ಇದ್ದರೂ ಇರಬಹುದು. ಬ್ರಿಟನ್ ಮತ್ತು ಅಮೆರಿಕನ್ ವಿಜ್ಞಾನಿಗಳು ನಡೆಸುತ್ತಿರುವ ಅಧ್ಯಯನದಿಂದ ಕೆಲ ಮಹತ್ವ ಸಂಗತಿಗಳು ಬೆಳಕಿಗೆ ಬಂದರೆ ಅಚ್ಚರಿ ಇಲ್ಲ.

(ಒನ್ಇಂಡಿಯಾ ಸುದ್ದಿ)

   DC vs RR ಪಂದ್ಯದಲ್ಲಿ ಅಸಲಿಗೆ ನಡೆದಿದ್ದೇನು | Oneindia Kannada
   English summary
   How powerful is Rafale as compared to Russia's Su-35S... Ukrainian Air Force experts have obtained important and so far confidential information about Su-35S fighter aircraft from its burnt remains.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X