ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನಿದು 'ಹೈಬ್ರಿಡ್ ವರ್ಕ್ ಮೋಡ್'? ನೌಕರರಿಗೆ ಕಂಪನಿಗಳ ಹೊಸ ಆಯ್ಕೆ...

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ನವದೆಹಲಿ, ಅಕ್ಟೋಬರ್ 05: ಕೆಲವು ದಿನಗಳಿಂದ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಇದರೊಂದಿಗೆ ವ್ಯಾಪಾರ ವಾಣಿಜ್ಯ ವಹಿವಾಟು ಆರಂಭಗೊಂಡಿದೆ. ಆರ್ಥಿಕ ಚಟುವಟಿಕೆಗಳು ಗರಿಗೆದರಿವೆ. ಕೊರೊನಾ ಮೂರನೇ ಅಲೆ ಆತಂಕವಿದ್ದರೂ, ಸೂಕ್ತ ನಿಯಮಗಳ ಪಾಲನೆಯೊಂದಿಗೆ ಆರ್ಥಿಕ ಚಟುವಟಿಕೆ ನಡೆಸಲು ಸರ್ಕಾರ ಕೂಡ ಪ್ರೋತ್ಸಾಹಿಸುತ್ತಿದೆ.

ಇದರೊಂದಿಗೆ ಕಳೆದ ಒಂದೂವರೆ ವರ್ಷದಿಂದ ನೌಕರರಿಗೆ ವರ್ಕ್ ಫ್ರಂ ಹೋಂ ಸೌಲಭ್ಯ ನೀಡಿದ್ದ ಕಂಪನಿಗಳು ನೌಕರರಿಗೆ ಕಚೇರಿಗೆ ಮರಳುವ ಆಯ್ಕೆಯನ್ನು ನೀಡುತ್ತಿವೆ.

ಐಟಿ ಕಂಪನಿಗಳಿಗೆ 2022ರವರೆಗೂ ವರ್ಕ್ ಫ್ರಂ ಹೋಂ ವಿಸ್ತರಿಸುವಂತೆ ಸರ್ಕಾರ ಸಲಹೆಐಟಿ ಕಂಪನಿಗಳಿಗೆ 2022ರವರೆಗೂ ವರ್ಕ್ ಫ್ರಂ ಹೋಂ ವಿಸ್ತರಿಸುವಂತೆ ಸರ್ಕಾರ ಸಲಹೆ

ಜೊತೆಗೆ, ಇದನ್ನು ಸಾಕ್ಷೀಕರಿಸುವಂತೆ 39 ವಲಯಗಳಲ್ಲಿ ಸುಮಾರು ಒಂದರಿಂದ ಒಂದೂವರೆ ಮಿಲಿಯನ್ ಜನರಿಗೆ ಉದ್ಯೋಗ ನೀಡಿರುವ 1350 ಕಂಪನಿಗಳ ಅರ್ಧಕ್ಕಿಂತಲೂ ಹೆಚ್ಚು ಉದ್ಯೋಗಿಗಳು ಈ ವರ್ಷದ ಅಂತ್ಯದ ವೇಳೆಗೆ ಕಚೇರಿಗೆ ಮರಳುವ ಸಾಧ್ಯತೆಯಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

 Companies Approaching Hybrid Work Mode Due To Coronavirus

'ಅಯಾನ್ ಫ್ಯೂಚರ್ ವರ್ಕ್ ಆಫ್ ಸರ್ವೇ' ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ತಿಳಿದುಬಂದಿದೆ. ಹಣಕಾಸು ಸಂಸ್ಥೆಗಳು, ಇಂಜಿನಿಯರಿಂಗ್, ಉತ್ಪಾದನೆ, ಆಟೋಮೋಟಿವ್, ರೀಟೇಲ್ ಹಾಗೂ ರಾಸಾಯನಿಕ ಕ್ಷೇತ್ರಗಳ ಕಂಪನಿಗಳ ಬಹುಪಾಲು ಉದ್ಯೋಗಿಗಳು ಕಚೇರಿಗೆ ಮರಳಲು ಆಸಕ್ತರಾಗಿದ್ದಾರೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.

ದೇಶದಲ್ಲಿ ಕಂಪನಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸರಿಸುಮಾರು ಅರ್ಧದಷ್ಟು ಉದ್ಯೋಗಿಗಳು ವಾರದಲ್ಲಿ ಎರಡು ಮೂರು ದಿನ ಕಚೇರಿಯಲ್ಲಿ ಕೆಲಸ ಮಾಡುವ ಸಾಧ್ಯತೆಯಿದೆ ಎಂಬುದನ್ನು ಸಮೀಕ್ಷೆ ಹೇಳಿದೆ.

ವರ್ಕ್‌ ಫ್ರಂ ಹೋಂ ಬಳಿಕ ನೈಸರ್ಗಿಕ ಗರ್ಭಧಾರಣೆ ಹೆಚ್ಚಳವರ್ಕ್‌ ಫ್ರಂ ಹೋಂ ಬಳಿಕ ನೈಸರ್ಗಿಕ ಗರ್ಭಧಾರಣೆ ಹೆಚ್ಚಳ

'ಆರ್ಥಿಕತೆ ಹಾಗೂ ಹಣಕಾಸು ಚಟುವಟಿಕೆಗಳಲ್ಲಿ ಬಲವಾದ ಸುಧಾರಣೆಯೊಂದಿಗೆ, ಎಂದಿನಂತೆ ಸಹಜತೆಗೆ ಮರಳಲು ಹಾಗೂ ಆರ್ಥಿಕತೆಯ ಪುನಃಸ್ಥಾಪನೆಗೆ ಕಂಪನಿಗಳಿಂದ ಒತ್ತಡವೂ ಇದೆ. ಹೀಗಾಗಿ ಶೀಘ್ರವೇ ನೂತನ ಮಾದರಿಯ ಕೆಲಸದ ರೀತಿಯನ್ನು ಕಂಪನಿಗಳು ಅಳವಡಿಸಿಕೊಳ್ಳಬಹುದು' ಎಂದು ಅಯಾನ್ ವ್ಯವಹಾರ ಪಾಲುದಾರ ರೂಪಾಂಕ್ ಚೌಧರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 Companies Approaching Hybrid Work Mode Due To Coronavirus

'ಕೆಲಸದಲ್ಲಿ ಹೆಚ್ಚಿನ ಮಟ್ಟದಲ್ಲಿ ಉದ್ಯೋಗಿಗಳನ್ನು ತೊಡಗಿಸಿಕೊಳ್ಳುವ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ವೈವಿಧ್ಯಮಯ ಗ್ರಾಹಕರನ್ನು ಹೊಂದಿರುವ ಸಂಸ್ಥೆಗಳು ತಮ್ಮ ಉದ್ಯೋಗಿಗಳನ್ನು ಕಚೇರಿಗೆ ಮರಳಲು ಪ್ರೋತ್ಸಾಹಿಸುತ್ತಿವೆ' ಎಂದು ಅವರು ಹೇಳಿದ್ದಾರೆ.

ಹೈಬ್ರಿಡ್ ಕೆಲಸದ ಮಾದರಿಗೆ ಪ್ರೋತ್ಸಾಹ:
ಇನ್ನೂ ಕೆಲವು ಕಂಪನಿಗಳು ನೌಕರರಿಗೆ ಎರಡೂ ಆಯ್ಕೆಯನ್ನು ನೀಡಲು ಮುಂದಾಗಿವೆ. ಮನೆಯಿಂದ ಕೆಲಸ, ಕಚೇರಿಯಿಂದ ಕೆಲಸ- ಈ ಎರಡೂ ಮಾದರಿಗಳ ಮಿಶ್ರಣವನ್ನು ಕೆಲವು ಕಂಪನಿಗಳು ಅನುಸರಿಸುತ್ತಿವೆ. ವಾರದಲ್ಲಿ 2-3 ದಿನ ಕಚೇರಿಯಲ್ಲಿ ಕೆಲಸವಾದರೆ, ಉಳಿದ ದಿನ ಮನೆಯಲ್ಲಿ ಕೆಲಸ ನಿರ್ವಹಿಸಲು ಅವಕಾಶ ನೀಡುತ್ತಿವೆ. ಬಹುಪಾಲು ಸಂಸ್ಥೆಗಳು ಕಚೇರಿಯನ್ನು ತೆರೆದಿವೆ. ಆದರೆ ನೌಕರರಿಗೂ ಅನುಕೂಲವಾಗುವಂತೆ ಕೆಲವು ದಿನ ಕಚೇರಿಯಿಂದ ಹಾಗೂ ಕೆಲವು ದಿನ ಮನೆಯಿಂದ ಕೆಲಸ ಮಾಡುವ ಸೌಲಭ್ಯ ನೀಡಲಾಗುತ್ತಿದೆ. ಇದನ್ನೇ ಹೈಬ್ರಿಡ್ ವರ್ಕ್ ಮೋಡ್ ಎಂದು ಕರೆಯಲಾಗುತ್ತಿದೆ.

ಕಂಪನಿ ಸಂಬಂಧ ಸಭೆಗಳಿದ್ದರೆ ಕಚೇರಿಗಳಿಗೆ ಬರುವುದು ಸೂಕ್ತ. ಇದರಿಂದ ಸಂವಹನ ಸುಲಭ ಸಾಧ್ಯ ಎನ್ನುವುದು ಕಂಪನಿಗಳ ಉದ್ದೇಶ. ಜೊತೆಗೆ ಬಹುದೂರ ಪ್ರಯಾಣ ಮಾಡಬೇಕಾದ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಬಹುದಾದ ಅವಕಾಶಗಳನ್ನು ನೀಡಲಾಗುತ್ತಿದೆ.

'ನಾವು ಕ್ರಮೇಣವಾಗಿ ಕಚೇರಿಗಳನ್ನು ತೆರೆಯುತ್ತಿದ್ದೇವೆ. ಮಾರ್ಕೆಟಿಂಗ್ ತಂಡಗಳು ಮತ್ತೆ ಕಚೇರಿಯಿಂದ ಕೆಲಸ ಮಾಡಲು ಮರಳುತ್ತಿವೆ. ಆಯಾ ಸ್ಥಳಗಳಲ್ಲಿನ ಕೊರೊನಾ ಸೋಂಕಿನ ಪಾಸಿಟಿವಿಟಿ ದರ ಆಧರಿಸಿ ಕಚೇರಿಗಳನ್ನು ತೆರೆಯುವುದೋ ಬೇಡವೋ ಎಂಬುದನ್ನು ನಿರ್ಧರಿಸಲಾಗುತ್ತದೆ' ಎಂದು ಮಾರ್ಸ್ ರಿಗ್ಲೇ ವ್ಯವಸ್ಥಾಪಕ ನಿರ್ದೇಶಕ ಕಲ್ಪೇಶ್ ಆರ್ ಪರ್ಮಾರ್ ತಿಳಿಸಿದ್ದಾರೆ.

Recommended Video

ದೆಹಲಿಯಲ್ಲಿ ಫ್ಲೈ ಓವರ್ ಕೆಳಗೆ‌ ನುಗ್ಗಿದ‌ ವಿಮಾನ:ವೈರಲ್ ವಿಡಿಯೋ | Oneindia Kannada

ಇದೇ ಪರಿಸ್ಥಿತಿ ಮುಂದಿನ ಎರಡು ಮೂರು ತಿಂಗಳವರೆಗೂ ಮುಂದುವರೆಯುತ್ತದೆ ಎಂದು ಕೆಲವು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಂಪನಿ ಹಾಗೂ ನೌಕರರ ಹಿತದೃಷ್ಟಿಯಿಂದ ಕೆಲವು ಕಂಪನಿಗಳು ನೌಕರರ ಸೌಲಭ್ಯಗಳಿಗೆ ತಕ್ಕಂತೆ ಆಯ್ಕೆ ನೀಡುತ್ತಿವೆ ಎಂದು ಹೇಳಿದ್ದಾರೆ.

English summary
More than half the workforce of 1,350 companies, employing 1-1.5 million people, across 39 sectors is likely to return to office by the end of this year, found the latest survey conducted by Aon
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X