ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಎರಡು ಔಷಧಗಳು ಸ್ಲೀಪ್ ಅಪ್ನಿಯಾವನ್ನು ಎಷ್ಟು ಕಡಿಮೆ ಮಾಡುತ್ತವೆ ಗೊತ್ತೇ?

|
Google Oneindia Kannada News

ಸುಖನಿದ್ರೆ ಬಂದರೆ ಅದೇ ಸ್ವರ್ಗ, ಮರುದಿನ ಇಡೀ ದಿನ ಖುಷಿಯಿಂದ ಕಳೆಯಬಹುದು, ಆದರೆ ಅದೇ ರಾತ್ರಿ ನಿದ್ರೆ ಬಾರದೆ ಇದ್ದರೆ ಬರುದಿನವಿಡೀ ನರಕ ಅನುಭವಿಸಬೇಕಾಗುತ್ತದೆ.

ಕೆಲವರಿಗಂತೂ ಸಣ್ಣ ಶಬ್ದವಾದರೂ ಎಚ್ಚರಗೊಳ್ಳುತ್ತಾರೆ, ನಿದ್ರೆಯಿಂದ ಒಮ್ಮೆ ಎಚ್ಚರಗೊಂಡರೆ ಎರಡು ಮೂರು ತಾಸುಗಳು ಕಳೆದರೂ ನಿದ್ರೆಯೇ ಬರುವುದಿಲ್ಲ.

ನಿಮಗೆ ಪದೇ ಪದೇ ನಿದ್ರಾಭಂಗವಾಗುತ್ತಿದ್ದರೆ ನಿಮ್ಮ ಲೈಫ್‌ಸ್ಟೈಲ್ ಬದಲಾಗಿದೆ ಎಂದೇ ಅರ್ಥ ಸ್ಟ್ರೆಸ್ ಇದ್ದಾಗ, ಸ್ಲೀಪ್ ಅಪ್ನಿಯಾ ಕಾಯಿಲೆ ಇದ್ದಾಗ ರಾತ್ರಿ ನಿದ್ದೆ ಬರುವುದಿಲ್ಲ. ಸ್ಲೀಪ್ ಅಪ್ನಿಯಾ ಎಂಬುದು ನಿದ್ರೆಗೆ ಸಂಬಂಧಿಸಿದ ಒಂದು ಗಂಭೀರ ಕಾಯಿಲೆಯಾಗಿದೆ.

ನಿದ್ರೆಗೆ ಜಾರಿದ ಸಂದರ್ಭದಲ್ಲಿ ಶ್ವಾಸನಾಳ ಏಕಾಏಕಿ ಬಂದ್ ಆಗಿ ಉಸಿರುಕಟ್ಟಲು ಶುರುವಾಗುತ್ತದೆ, ಕೂಡಲೇ ಎಚ್ಚರವಾಗಿ ರಾತ್ರಿ ಇಡೀ ನಿದ್ದೆ ಬರುವುದಿಲ್ಲ ಇದಕ್ಕೆ ಸ್ಲೀಪ್ ಅಪ್ನಿಯಾ ಎನ್ನುತ್ತಾರೆ. ಬ್ರೀಥಿಂಗ್ ಯಂತ್ರ ಇದಕ್ಕೊಂದು ಪರಿಹಾರವೆಂದೇ ಹೇಳಬಹುದು.

 ಈ ಎರಡು ಔಷಧದಿಂದ ಶೇ.30ರಷ್ಟು ಕಾಯಿಲೆ ವಾಸಿ

ಈ ಎರಡು ಔಷಧದಿಂದ ಶೇ.30ರಷ್ಟು ಕಾಯಿಲೆ ವಾಸಿ

ಈ ಕುರಿತು ಪ್ರೊ.ಡ್ಯಾನಿ ಎಕರ್ಟ್ ಮಾತನಾಡಿದ್ದು, "ವೈದ್ಯರು ಸಾಮಾನ್ಯವಾಗಿ ಅಪ್ನಿಯಾ ಕಾಯಿಲೆಗೆ reboxetine( ರೆಬಾಕ್ಸಿಟೈನ್) ಹಾಗೂ butybromide(ಬುಟಿಬ್ರೊಮೈಡ್) ಔಷಧವನ್ನು ನೀಡುತ್ತಾರೆ. ಇದು ಶೇ.30ರಷ್ಟು ಪರಿಣಾಮಕಾರಿ'' ಎಂದು ಹೇಳಿದ್ದಾರೆ.
ಒಟ್ಟು 15ರಲ್ಲಿ ಮೂರು ಮಂದಿ ಔಷಧ ಉತ್ಪಾದಕರು ಪ್ರಯೋಗ ಹಂತದಲ್ಲಿರುವಾಗಲೇ ಕೈಚೆಲ್ಲಿದರು.

 ರಾತ್ರಿ ನಿದ್ರೆ ಇಲ್ಲದಿದ್ದರೆ ಈ ಕಾಯಿಲೆ ಬರಬಹುದು

ರಾತ್ರಿ ನಿದ್ರೆ ಇಲ್ಲದಿದ್ದರೆ ಈ ಕಾಯಿಲೆ ಬರಬಹುದು

ರಾತ್ರಿ ನಿದ್ರೆ ಸರಿಯಾಗಿ ಬಾರದಿದ್ದರೆ ಟೈಪ್ 2 ಡಯಾಬಿಟಿಸ್, ಒಬೆಸಿಟಿ, ಮಾನಸಿಕ ಒತ್ತಡ ಸೇರಿ ಹಲವು ಕಾಯಿಲೆಗಳು ಬರುವ ಎಲ್ಲಾ ಸಾಧ್ಯತೆ ಇದೆ. ಸ್ಲೀಪ್ ಅಪ್ನಿಯಾವನ್ನು ಸಂಪೂರ್ಣವಾಗಿ ಕಡಿಮೆ ಮಾಡುವ ಔಷಧವನ್ನು ಇನ್ನೂ ಕಂಡುಹಿಡಿದಿಲ್ಲ.

 ಸ್ಲೀಪ್ ಅಪ್ನಿಯಾಗೆ ಚಿಕಿತ್ಸೆ ಏನು?

ಸ್ಲೀಪ್ ಅಪ್ನಿಯಾಗೆ ಚಿಕಿತ್ಸೆ ಏನು?

ಮಲಗುವಾಗ ಮಾಸ್ಕ್ ಧರಿಸುವುದು: ಮಲಗುವಾಗ ಮಾಸ್ಕ್ ಧರಿಸುವುದರಿಂದ ಗಾಳಿಯ ಒತ್ತಡ ಏರ್ಪಟ್ಟು ಸರಾಗವಾಗಿ ಉಸಿರಾಡುವಂತಾಗಿ ನಿದ್ದೆ ಬರುತ್ತದೆ ಎಂದು ವೈದ್ಯರು ಹೇಳುತ್ತಾರೆ, ಆದರೂ ಕೆಲವು ಮಂದಿ ನಿದ್ರೆಯಿಂದ ಎಚ್ಚರಗೊಳ್ಳುತ್ತಾರೆ.

ಶಸ್ತ್ರಚಿಕಿತ್ಸೆ: ಸ್ಲೀಪ್ ಅಪ್ನಿಯಾ ಇರುವವರಿಗೆ ಶಸ್ತ್ರ ಚಿಕಿತ್ಸೆಯ ಮಾರ್ಗ ಕೂಡ ಇದೆ, ವಾಯುಮಾರ್ಗವನ್ನು ತಡೆಹಿಡಿಯುವಲ್ಲಿ ಕೆಲವರಿಗೆ ದುರ್ಮಾಂಸ ಬೆಳೆದಿರುತ್ತದೆ ಅದನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆದುಹಾಕಲಾಗುತ್ತದೆ.

 ಸುಖ ನಿದ್ರೆಗೆ ಇಲ್ಲಿದೆ ಸಿಂಪಲ್ ಟಿಪ್ಸ್

ಸುಖ ನಿದ್ರೆಗೆ ಇಲ್ಲಿದೆ ಸಿಂಪಲ್ ಟಿಪ್ಸ್

* ನಿದ್ರೆಗೆ ಮುನ್ನ ಬಿಸಿನೀರಿನ ಸ್ನಾನ ಮಾಡಿ ನೋಡಿ. ಶರೀರ ರಿಲ್ಯಾಕ್ಸ್ ಆಗುತ್ತದೆ. ರಾತ್ರಿ ಗಟ್ಟಿ ನಿದ್ರೆ ಬರುತ್ತದೆ.
* ಮಲಗುವ ಮುನ್ನ ಭರ್ಜರಿ ಭೋಜನ ಬೇಡ. ಊಟಕ್ಕೂ ನಿದ್ರೆಗೂ ಕನಿಷ್ಠ 2 ಗಂಟೆ ಗ್ಯಾಪ್ ಬೇಕು
* ಮನಸ್ಸಿಗೆ ಮುದ ನೀಡುವ ಸಂಗೀತ ಕೇಳಿ ನೋಡಿ. ಮನಸ್ಸು ಸ್ಟ್ರೆಸ್ ನಿಂದ ಹೊರಬರುತ್ತದೆ. ಸುಖ ನಿದ್ರೆ ಪಕ್ಕಾ .
*ಆಲ್ಕೋಹಾಲ್ ಕುಡಿದರೆ ನಿದ್ರೆ ಬರುತ್ತದೆ ಅನ್ನೋದು ತಪ್ಪು ಗ್ರಹಿಕೆ. ಒಂದು ಪೆಗ್ ಆಲ್ಕೋಹಾಲ್ ಹಾಕಿದರೆ ನಿದ್ರೆ ಏನೋ ಬರುತ್ತೆ. ಯಾಕಂದರೆ, ಅಲ್ಕೋಹಾಲಿನಲ್ಲಿ ನಿದ್ರೆಗೆ ಉತ್ತೇಜನ ನೀಡುವ ಅಂಶಗಳಿವೆ. ಆದರೆ, ಪೆಗ್ ಹಾಕೋದು ಅಭ್ಯಾಸವಾಗಿ ಬಿಟ್ಟರೆ ಬೇರೆ ಆರೋಗ್ಯದ ಸಮಸ್ಯೆಗಳು ಸೃಷ್ಟಿಯಾಗುತ್ತದೆ. ಹಾಗಾಗಿ ಮಲಗುವ ಮುನ್ನ ಪೆಗ್ ಬೇಡ.
* ಮೊಬೈಲ್ ಅಥವಾ ಬೇರೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳು ಬೆಡ್ ರೂಮಿಗೆ ಬರಬಾರದು. ಮಲಗುವ ಅರ್ಧ ಗಂಟೆ ಮೊದಲು ಮೊಬೈಲ್ ಬಂದ್ ಮಾಡಿ.
*ಬೆಡ್ ರೂಮ್ ಸ್ವಚ್ಛ ಹಾಗೂ ಶಿಸ್ತಿನಲ್ಲಿರಲಿ. ಕಿಟಕಿಗೆ ದಪ್ಪ ಪರದೆ ಹಾಕಿ. ನೈಟ್ ಲ್ಯಾಂಪ್ ಇದ್ದರೆ ಅದರ ಪ್ರಕಾಶ ಕಡಿಮೆ ಮಾಡಿ
* ಎಲ್ಲಾದಕ್ಕೂ ಮುಖ್ಯವಾಗಿ ನಿದ್ರೆಗೆ ಒಂದು ಟೈಂ ಟೇಬಲ್ ಇರಲಿ. ರೂಟಿನ್ ಪ್ರಕಾರವೇ ನಿದ್ರೆ ಮಾಡಬೇಕು. ಯಾವುದೇ ಸಮಯಕ್ಕೆ ಮಲಗುವುದು. ಏಳುವುದು ಸರಿಯಲ್ಲ.

English summary
Sleep is an important restorative process. The Centers for Disease Control and Prevention (CDC)Trusted Source states that a person is at greater risk of type 2 diabetes, cardiovascular disease, obesity, and depression without enough sleep.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X