• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡೊನಾಲ್ಡ್ ಟ್ರಂಪ್ ನಿದ್ದೆಗೆಡಿಸುತ್ತಿರುವ ಆ ಹುಡುಗಿ ಯಾರು?

|

ಬೆಂಗಳೂರು, ಡಿಸೆಂಬರ್, 12: ಜಗತ್ತಿನ ದೊಡ್ಡಣ್ಣ ಎಂದು ಬಡಾಯಿ ಕೊಚ್ಚಿಕೊಳ್ಳುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಈಗ ವಿಶ್ವದ ಎದುರು ಒಂದು ಸಣ್ಣ ಹುಡುಗಿಯಿಂದ ತಲೆ ತಗ್ಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೌ ಡೇರ್ ಯು? (ನಿಮಗೆಷ್ಟು ದೈರ್ಯ?) ಎಂದು ಭೂಮಂಡಲವನ್ನು ಹಾಳು ಮಾಡುತ್ತಿರುವ ಅಭಿವೃದ್ದಿ ಬಕಾಸುರರನ್ನು ತನ್ನ ಅಂತರಾಳದಿಂದ ಕೆಣಕಿರುವ ಸ್ವೀಡನ್ ನ ಹದಿನೇಳು ವರ್ಷದ ಆ ಪುಟ್ಟ ಬಾಲೆ ಡೊನಾಲ್ಡ್ ಟ್ರಂಪ್ ಗೆ ಅಕ್ಷರಶಃ ನಿದ್ದೆಕೆಡಿಸುತ್ತಿದ್ದಾಳೆ. ಅರೆ ಡೊನಾಲ್ಡ್ ಟ್ರಂಪ್ ಎಲ್ಲಿ? ಆ ಪುಟ್ಟ ಬಾಲೆ ಎಲ್ಲಿ? ಎಂದು ಗೊಂದಲವಾದರೆ ಈ ಸ್ಟೋರಿ ಓದಿ...

ಚಿತ್ರ ಕೃಪೆ: Greta Thunberg

ಅವಳೇ ಗ್ರೇಟ್ ಗ್ರೇಟಾ

ಅವಳೇ ಗ್ರೇಟ್ ಗ್ರೇಟಾ

ಶಾಲೆಯಲ್ಲಿ ತನ್ನ ವಾರಗಿಯವರ ಜೊತೆ ಆಟವಾಡುತ್ತಾ, ಪಾಠಪ್ರವಚನಗಳನ್ನು ಕೇಳಿಕೊಂಡು ಪರೀಕ್ಷೆ ಎದುರಿಸಬೇಕಿದ್ದ ಈ ಹುಡುಗಿಗೆ ಜೀವಿ ಸಂಕುಲ ಇರಲು ಇರುವ ಒಂದೇ ಒಂದು ಭೂಮಿಯನ್ನು ಮನುಷ್ಯ ತನ್ನ ಸ್ವಾರ್ಥಕ್ಕಾಗಿ ದಿನದಿಂದ ದಿನಕ್ಕೆ ಹಾಳು ಮಾಡುತ್ತಿರುವ ಪರಿ ನಿದ್ದೆಗೆಡಿಸಿದೆ. ಮುಂದಿನ ಪೀಳಿಗೆಗೆ ಇಂದಿನ ಸುಂದರ ಭೂಮಿಯನ್ನು ಹಾಳು ಮಾಡುತ್ತಿದ್ದಿರಲ್ಲ ನಿಮಗೆಷ್ಟು ದೈರ್ಯ ಎಂದು ದೈರ್ಯದಿಂದಲೇ ಪ್ರಶ್ನಿಸಿರುವ ಆ ಹುಡುಗಿ ಹೆಸರು ಗ್ರೇಟಾ ಥನಬರ್ಗ್. ಸ್ವೀಡನ್ ದೇಶದ ಹದಿನೇಳು ವರ್ಷದ ಈ ಪುಟ್ಟ ಬಾಲೆ, ಮಲೆನಾ ಎರ್ಮಾನ್ ಎಂಬ ಪರಿಸರ ಹೋರಾಟಗಾರ್ತಿ ಮಗಳು. ಆಟ ಪಾಠ ಎಂದು ಇರಬೇಕಿದ್ದ ಈ ಹುಡುಗಿ ಜಾಗತಿಕ ತಾಪಮಾನ ಏರುತ್ತಿರುವುದನ್ನು ಕಂಡು ಚಿಂತಾಕ್ರಾಂತಳಾಗಿದ್ದಾಳೆ. ಅಭಿವೃದ್ಧಿ ಹೆಸರಿನಲ್ಲಿ ಜಾಗತಿಕ ತಾಪಮಾನಕ್ಕೆ ಕಾರಣವಾಗುತ್ತಿರುವ ಅಮೆರಿಕ ಸೇರಿದಂತೆ ದೊಡ್ಡ ದೊಡ್ಡ ರಾಷ್ಟ್ರಗಳ ದೊಡ್ಡವರನ್ನು ನೇರವಾಗಿ ಪ್ರಶ್ನೆ ಮಾಡುತ್ತಿದ್ದಾಳೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಮತ್ತೊಂದು ಲೈಂಗಿಕ ದೌರ್ಜನ್ಯ ಆರೋಪ

ಹೌ ಡೇರ್ ಯು?

ಹೌ ಡೇರ್ ಯು?

ಅವತ್ತು 2019 ರ ಸೆಪ್ಟೆಂಬರ್ 23. ವಿಶ್ವಸಂಸ್ಥೆ ಜಾಗತಿಕ ತಾಪಮಾನ ಬದಲಾವಣೆ ಕುರಿತು ನ್ಯೂಯಾರ್ಕನಲ್ಲಿ ಶೃಂಗಸಭೆ ಏರ್ಪಡಿಸಿತ್ತು. ಜಾಗೃತಿಗಾಗಿ ಪ್ರಪಂಚದ ವಿವಿಧ ದೇಶಗಳ ಪುಟ್ಟ ಮಕ್ಕಳಿಗೂ ಈ ಬಗ್ಗೆ ಸಮಾವೇಶದಲ್ಲಿ ಮಾತನಾಡಲು ಅವಕಾಶ ಕೊಟ್ಟಿತ್ತು. ಅವತ್ತು ಗ್ರೇಟಾ ಥನಬರ್ಗ್ ಕೂಡ ಆಗಮಿಸಿದ್ದಳು. ಆದರೆ, ಅವಳ ಮನಸ್ಸು ಸಹಜವಾಗಿರಲಿಲ್ಲ. ಮನಸ್ಸು ಕುದಿಯುತ್ತಿತ್ತು. ಭಾಷಣ ಮಾಡಲು ಪ್ರಾರಂಭಿಸಿದಾಗ 'ಇಂದಿನ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಸುಂದರ ಭೂಮಿಯನ್ನು ಹೇಗೆ ಹಾಳು ಮಾಡುತ್ತಾ, ಜಾಗತಿಕ ತಾಪಮಾನವನ್ನು ಹೆಚ್ಚಿಸುತ್ತಿದ್ದಾನೆ, ನಮ್ಮ ಸುಂದರ ಕನಸು, ಭವಿಷ್ಯವನ್ನು ಕಸಿಯಲು ನಿಮಗೆಷ್ಟು ದೈರ್ಯ' ಎಂದು ಕಣ್ಣೀರು ಹರಿಸಿ, ಪ್ರಶ್ನಿಸಿದಳು. ಗ್ರೇಟಾಳ ಅಂತರಾಳದ ಈ ಮಾತುಗಳು ಇಡೀ ಜಗತ್ತಿನ ಪರಿಸರವಾದಿಗಳನ್ನು ಬಡಿದೆಬ್ಬಿಸಿದರೇ, ಜಾಗತಿಕ ತಾಪಮಾನಕ್ಕೆ ಕಾರಣರಾದವರು ಇವಳತ್ತ ವ್ಯಗ್ರವಾಗಿ ತಿರುಗಿ ನೋಡಿದರು. ಈ ಹುಡುಗಿಗೆ ಇಂತದೆಲ್ಲ ಏಕೆ? ಎಂದು ಅಣಕವಾಡಿದರು.

ಟೈಮ್ ಮ್ಯಾಗಜೀನ್ ನ ವರ್ಷದ ವ್ಯಕ್ತಿ!

ಟೈಮ್ ಮ್ಯಾಗಜೀನ್ ನ ವರ್ಷದ ವ್ಯಕ್ತಿ!

ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಜಾಗತಿಕ ತಾಪಮಾನ ಪರಿಸರದ ಕುರಿತು ಗ್ರೇಟಾ ಹಚ್ಚಿರುವ ಕಿಚ್ಚು ಪ್ರಪಂಚದ ತುಂಬ ಹರಡಿಕೊಂಡಿದೆ. ಅದರಲ್ಲೂ ಜಾಗತಿಕ ತಾಪಮಾನ ಕಡಿಮೆ ಮಾಡಲು ಇತರ ದೇಶಗಳನ್ನು ಕಟ್ಟಿಕೊಂಡು ಕೆಲಸ ಮಾಡಬೇಕಿದ್ದ ಅಮೆರಿಕದ ಡೊನಾಲ್ಡ ಟ್ರಂಪ್ ಗ್ರೇಟಾಳ ಪ್ರಶ್ನೆಗಳಿಗೆ ಉತ್ತರಿಸಲಾಗದೇ, ಅವಳಿಗೆ ಕೊಂಕು ಮಾತುಗಳನ್ನು ಮಾತನಾಡುತ್ತಿರುವುದು ಗ್ರೇಟಾ ಪರ ಅಲೆ ಹೆಚ್ಚಾಗಲು ಮತ್ತಷ್ಟು ಕಾರಣವಾಗಿದೆ. ಈಗಾಗಲೇ ಗ್ರೇಟಾ ಹಲವು ರಾಷ್ಟ್ರಗಳಿಗೆ ಭೇಟಿ ನೀಡಿ ಭಾಷಣಗಳನ್ನು, ಜಾಗೃತಿಯನ್ನು ಮಾಡುತ್ತಿದ್ದಾಳೆ. ದಿನದಿಂದ ದಿನಕ್ಕೆ ಗ್ರೇಟಾ ಜನಪ್ರಿಯಳಾಗುತ್ತಿದ್ದಾಳೆ. ಪರಿಸರವಾದಿಗಳು ಅವಳನ್ನು ಮುಕ್ತಮನಸ್ಸಿನಿಂದ ಬೆಂಬಲಿಸುತ್ತಿದ್ದಾರೆ. ದೊಡ್ಡ ದೊಡ್ಡ ಪ್ರಶಸ್ತಿಗಳು ಅವಳನ್ನು ಅರಿಸಿ ಬರುತ್ತಿವೆ. ಆದರೆ, ಅವಳು ಮಾತ್ರ ಜಾಗತಿಕ ತಾಪಮಾನ ಇಳಿಸಿ, ಇಲ್ಲದಿದ್ದರೇ ನಮ್ಮ ಭವಿಷ್ಯ ಕತ್ತಲು ಎಂದು ಅಲವತ್ತುಕೊಳ್ಳುತ್ತಿದ್ದಾಳೆ. ಇಂತಹ ಪ್ರತಿಭೆಗೆ ಟೈಮ್ ಮ್ಯಾಗಜಿನ್ ಕೊಡುವ ಅತ್ಯನ್ನತ ಗೌರವವಾದ ಟೈಮ್ ವರ್ಷದ ವ್ಯಕ್ತಿ 2019 ರ ಪುರಸ್ಕಾರಕ್ಕೆ ಪಾತ್ರವಾಗಿದ್ದಾಳೆ.

ದ ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್ ಓದಲ್ಲ ಎಂದ ಟ್ರಂಪ್

ಟ್ರಂಪ್ ಗೆ ತೀವ್ರ ಅವಮಾನ

ಟ್ರಂಪ್ ಗೆ ತೀವ್ರ ಅವಮಾನ

ಈ ವರ್ಷ ಟೈಮ್ ಮ್ಯಾಗಜಿನ್ ವರ್ಷದ ವ್ಯಕ್ತಿ ಗೆ ಡೊನಾಲ್ಡ ಟ್ರಂಪ್ ಆಯ್ಕೆಯಾಗುತ್ತಾರೆ ಎಂದು ಡೊನಾಲ್ಡ್ ಟ್ರಂಪ್ ನೇ ಭಾವಿಸಿದ್ದರಂತೆ! ಆದರೆ, ಟೈಮ್ ಮ್ಯಾಗಜಿನ್ ಮಾತ್ರ ಟ್ರಂಪ್ ರನ್ನು ದೂರ ಇಟ್ಟು ಗ್ರೇಟಾಳನ್ನು ಆಯ್ಕೆ ಮಾಡಿರುವುದು ಟ್ರಂಪ್ ಗೆ ತೀವ್ರ ಇರಿಸು ಮುರಿಸು ಉಂಟು ಮಾಡಿದೆ. ಈ ಕುರಿತು ಪರೋಕ್ಷವಾಗಿ ಟ್ವೀಟ್ ಮಾಡುತ್ತಾ ಟ್ರಂಪ್ ಕುಚೋದ್ಯ ಮೆರೆಯುತ್ತಿರುವುದು ಟ್ರಂಪ್ ವ್ಯಕ್ತಿತ್ವವನ್ನು ಜಗತ್ತಿನ ಮುಂದೆ ಗ್ರೇಟಾ ಬಯಲು ಮಾಡುತ್ತಿದ್ದಾಳೆ.

ಟ್ರಂಪ್ ಕುಚೋದ್ಯ

ಟ್ರಂಪ್ ಕುಚೋದ್ಯ

ಗ್ರೇಟಾಳಿಗೆ ಟೈಮ್ ಮ್ಯಾಗಜಿನ್ ಪುರಸ್ಕಾರ ದೊರಕಿರುವುದು ಟ್ರಂಪ್ ಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಈ ಬಗ್ಗೆ ಟ್ವೀಟ್ ಮಾಡಿರುವ ಟ್ರಂಪ್, ಗ್ರೇಟಾಳನ್ನು ನೋಡಿದರೆ ತುಂಬಾ ಹಾಸ್ಯಾ ಅನಿಸುತ್ತೆ. ಗ್ರೇಟಾ ನೀನು ಮೊದಲು ನಿನ್ನ ಸಿಟ್ಟನ್ನು ನಿಗ್ರಹಿಸಿಕೊ. ಅದಕ್ಕಾಗಿ ನಿನ್ನ ಸ್ನೇಹಿತೆ ಜೊತೆ ಒಂದು ಒಳ್ಳೆಯ ಸಿನಿಮಾ ನೋಡು. ಕೂಲ್ ಗ್ರೇಟಾ ಕೂಲ್ ಎಂದು ಕುಚೋದ್ಯ ಮಾಡಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಟ್ವೀಟ್ಟಿಗರು ಟ್ರಂಪ್ ಗೆ ಹಿಗ್ಗಾಮುಗ್ಗಾ ಝಾಡಿಸಿದ್ದಾರೆ.

ಕೂಲ್ ಕೂಲ್ ಗ್ರೇಟಾ!

ಕೂಲ್ ಕೂಲ್ ಗ್ರೇಟಾ!

ಟ್ರಂಪ್ ಟ್ವೀಟ್ ಗಮನಿಸಿರುವ ಗ್ರೇಟಾ ತನ್ನದೇ ಶೈಲಿಯಲ್ಲಿ ಟ್ವೀಟರ್ ನಲ್ಲಿ ಟ್ರಂಪ್ ಗೆ ಮತ್ತಷ್ಟು ಅವಮಾನ ಮಾಡಿದ್ದಾಳೆ. ಒಬ್ಬ ಹದಿಹರೆಯದವಳು ಅವಳ ಸಮಸ್ಯೆಯನ್ನು ನಿಗ್ರಹಿಸಿಕೊಳ್ಳುವ ಸಾಮರ್ಥ್ಯವನ್ನೂ ಪಡೆದಿದ್ದಾಳೆ. ಅವಳ ಸ್ನೇಹಿತೆ ಜೊತೆ ಸಿನಿಮಾವನ್ನು ನೋಡುತ್ತಿದ್ದಾಳೆ. ಆದರೆ, ಜಗತ್ತಿಗೆ ಉತ್ತಮವಾದ ಕೆಲಸವನ್ನು ಮಾಡಬೇಕಾದವರು ಮಾತ್ರ ಏನು ಮಾಡುತ್ತಿಲ್ಲ ಎಂದು ಕಾಲೆಳದಿದ್ದಾಳೆ.

English summary
Climate Change Activist Greta Thunberg Gets Time Magzine Award 2019 Kannada. its cause for US President Donald Trump upset.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X