ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಪಮಾನ ಏರಿಕೆಯ ಗಂಭೀರ ಸವಾಲುಗಳು: ಐಪಿಸಿಸಿ ವರದಿ ಏನು ಹೇಳುತ್ತೆ?

|
Google Oneindia Kannada News

ಬೆಂಗಳೂರು, ಆಗಸ್ಟ್ 09: ಭೂಮಿಯ ತಾಮಪಾನ ವೇಗವಾಗಿ ಹೆಚ್ಚುತ್ತಿದೆ, ಮತ್ತು ವಿಶ್ವಸಂಸ್ಥೆಯ ನೇತೃತ್ವದ 195 ದೇಶಗಳು ಮುಂದಿನ ಒಂದು ಶತಮಾನದವರೆಗೆ ಈ ತಾಪಮಾನದ ಹೆಚ್ಚಳವನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಮಿತಿಗೊಳಿಸಲು ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಿವೆ.

ಯುಎನ್ ಅಂಗಸಂಸ್ಥೆ ಐಪಿಸಿಸಿ ನೀಡಿರುವ ಮಾಹಿತಿ ಪ್ರಕಾರ, ಇಡೀ ಮಾನವ ಜನಾಂಗವು ಭೂಮಿಯನ್ನು ಪ್ರಮುಖ ಮತ್ತು ಶಾಶ್ವತ ಬದಲಾವಣೆಯತ್ತ ಕೊಂಡೊಯ್ಯುತ್ತಿದೆ. ವಾಸ್ತವವಾಗಿ, ಇದು ಜಾಗತಿಕ ತಾಪಮಾನದ ಪರಿಣಾಮವಾಗಿದೆ.

ಇದನ್ನು ನಾವು ಕಾಡ್ಗಿಚ್ಚು, ಪ್ರವಾಹ, ಭೂಕುಸಿತ ಇತ್ಯಾದಿಗಳ ರೂಪದಲ್ಲಿ ನಿರಂತರವಾಗಿ ನೋಡುತ್ತಿದ್ದೇವೆ. ಭೂಮಿಯ ಮೇಲೆ ಯಾವ ರೀತಿಯ ಬದಲಾವಣೆಗಳು ಆಗುತ್ತಿವೆ ಎಂಬುದರ ಕುರಿತು ಇಂಟರ್‌ಗವರ್ನಮೆಂಟಲ್ ಪ್ಯಾನಲ್ ಫಾರ್ ಕ್ಲೈಮೇಟ್ ಚೇಂಜ್(ಐಪಿಸಿಸಿ) ಸೋಮವಾರ ವರದಿ ಬಿಡುಗಡೆ ಮಾಡಿದೆ.

ವರದಿಯ ಪ್ರಕಾರ, 1980ರಿಂದ ಉಷ್ಣ ಅಲೆ ಅಂದರೆ ಸಮುದ್ರದಿಂದ ಏರುವ ಬೆಚ್ಚಗಿನ ಮಾರುತದ ಪ್ರಕ್ರಿಯೆಯು ತೀವ್ರಗೊಂಡಿದೆ. ಇದರ ಹಿಂದಿನ ದೊಡ್ಡ ಕಾರಣ ಮಾನವಕುಲದ ಚಟುವಟಿಕೆಗಳು. ವಿಶೇಷವಾಗಿ 2006ರಿಂದಲೂ ಗಂಭೀರವಾದ ಬದಲಾವಣೆಗಳನ್ನು ಕಾಣಬಹುದಾಗಿದೆ.

ಇದು ಐಪಿಸಿಸಿಯ ಆರನೇ ಮೌಲ್ಯಮಾಪನ ಚಕ್ರವಾಗಿದ್ದು, ಇದರ ಅಡಿಯಲ್ಲಿ ವಿವಿಧ ಗುಂಪುಗಳ ವಿಜ್ಞಾನಿಗಳು ಪ್ರಪಂಚದ ಮೂಲೆ ಮೂಲೆಯಲ್ಲಿ ಆಗುತ್ತಿರುವ ಹವಾಮಾನ ಬದಲಾವಣೆಯನ್ನು ಅಧ್ಯಯನ ಮಾಡುತ್ತಿದ್ದಾರೆ.

ಮೊದಲ ಗುಂಪಿನ ಅಧ್ಯಯನ ಅಂದರೆ ಐಪಿಸಿಸಿಯ ವರ್ಕಿಂಗ್ ಗ್ರೂಪ್ 1 ಆಗಸ್ಟ್ 6 ರಂದು ಪೂರ್ಣಗೊಂಡಿತು ಮತ್ತು ಇಂದು ವರದಿಯನ್ನು ಸಮಿತಿಯು ಬಿಡುಗಡೆ ಮಾಡಿದೆ.
ಯಾವುದೇ ನಿಯಂತ್ರಣವಿಲ್ಲದೆ ತಾಪಮಾನ ಮತ್ತು ಇಂಗಾಲ ಹೊರಸೂಸುವಿಕೆ ಹೆಚ್ಚುತ್ತಲೇ ಹೋದರೆ ಭವಿಷ್ಯದಲ್ಲಿ ನಾವು ಇದರ ಹಲವು ಅಡ್ಡಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

2030ರ ವೇಳೆಗೆ ಇಂಗಾಲದ ಹೊರಸೂಸುವಿಕೆಯನ್ನು ಶೇ.50ರಷ್ಟು ಕಡಿಮೆ ಮಾಡುವುದು ಬಹಳ ಮುಖ್ಯ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆ ಸ್ಥಿತಿಯಲ್ಲಿ ಮಾತ್ರ ಭೂಮಿಯ ಉಷ್ಣತೆಯ ಹೆಚ್ಚಳವನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಮಿತಗೊಳಿಸಲು ಸಾಧ್ಯವಿದೆ.

ನಿಸ್ಸಂಶಯವಾಗಿ ಇದನ್ನು ಮಾಡಬೇಕಾದರೆ ಸರ್ಕಾರಗಳು ತ್ವರಿತ ಯೋಜನೆಗಳನ್ನು ಸಿದ್ಧಗೊಳಿಸಬೇಕು ಎಂದು ಹೇಳಲಾಗಿದೆ.

 ಭೂಮಿ ಹೇಗೆ ಬದಲಾಯಿತು

ಭೂಮಿ ಹೇಗೆ ಬದಲಾಯಿತು

ಪ್ರಸ್ತುತ, ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಸಾಗರಗಳು ಮತ್ತು ಹಿಮನದಿಗಳಲ್ಲಿ ಸುಲಭವಾಗಿ ಕಾಣಬುಹುದು. ಆರ್ಕ್ಟಿಕ್ ಸಾಗರವು 1850ರ ನಂತರ ಮೊದಲ ಬಾರಿಗೆ ಕಳೆದ ದಶಕಗಳಲ್ಲಿ ಅತ್ಯಂತ ಕಡಿಮೆ ಮಟ್ಟವನ್ನು ಕಂಡಿತು. ಅಲ್ಲಿ ಹಿಮನದಿಗಳನ್ನು ಒಡೆಯುವ ಪ್ರಕ್ರಿಯೆ ಮುಂದುವರೆಯುತ್ತದೆ. ಅಂಟಾರ್ಟಿಕಾದಲ್ಲೂ ಇದೇ ರೀತಿಯದ್ದು ಕಂಡುಬರುತ್ತದೆ. ಇದರ ಹೊರತಾಗಿ, ನಾವು ಅರಣ್ಯಗಳ ಅಳಿವನ್ನೂ ಕೂಡ ನೋಡುತ್ತಿದ್ದೇವೆ.

ಕಳೆದ 3 ಸಾವಿರ ವರ್ಷಗಳಲ್ಲಿ ಜಾಗತಿಕ ಸಮುದ್ರ ಮಟ್ಟದಲ್ಲಿ ಹೆಚ್ಚಳ, ಅದೇ ಹೆಚ್ಚಳವನ್ನು 1900ರಿಂದ ಅಂದರೆ ಕಳೆದ 120 ವರ್ಷಗಳಲ್ಲಿ ದಾಖಲಿಸಲಾಗಿದೆ. 1980ರಿಂದ ಸಮುದ್ರದಿಂದ ಏರುತ್ತಿರುವ ಶಾಖದ ಅಲೆ ಅಂದರೆ ಬೆಚ್ಚಗಿನ ಗಾಳಿಯ ಪ್ರಕ್ರಿಯೆಯು ತೀವ್ರಗೊಂಡಿದೆ. ಇದರ ಹಿಂದಿನದೊಡ್ಡ ಕಾರಣ ಮಾನವಕುಲದ ಚಟುವಟಿಕೆಗಳು.

 ವರದಿಯಲ್ಲಿರುವ ಪ್ರಮುಖ ಅಂಶಗಳೇನು?

ವರದಿಯಲ್ಲಿರುವ ಪ್ರಮುಖ ಅಂಶಗಳೇನು?

ವಿಜ್ಞಾನಿಗಳು ಭೂಮಿಯ ಉಷ್ಣತೆಯ ಹೆಚ್ಚಳವು ಮಾನವ ಚಟುವಟಿಕೆಗಳಿಂದ ಆಗಿರುವುದರಲ್ಲಿ ಯಾವುದೇ ಸಂಶಯವಿಲ್ಲ ಮತ್ತು ಈಗ ಆಗುತ್ತಿರುವ ಹೆಚ್ಚಿನ ಬದಲಾವಣೆಗಳು ಶಾಶ್ವತವೆಂದು ಕಂಡುಕೊಂಡಿದ್ದಾರೆ. ಮುಂದಿನ ದಶಕದಲ್ಲಿ ಅಂದರೆ 2030ರ ಹೊತ್ತಿಗೆ, ಭೂಮಿಯ ಉಷ್ಣತೆಯು 1.5 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಾಗುತ್ತದೆ. ಮತ್ತು ಅದರ ನಂತರ 1.6 ಡಿಗ್ರಿ ಸೆಲ್ಸಿಯಸ್ ನ ಹೆಚ್ಚಳವನ್ನು ಅತಿ ಶೀಘ್ರವಾಗಿ ದಾಖಲಿಸಲಿದೆ. ಇಂಗಾಲದ ಡೈಆಕ್ಸೈಡ್ ಹೊರತಾಗಿ, ಇತರೆ ಅನೇಕ ಹಸಿರುಮನೆ ಅನಿಲಗಳು ಕೂಡ ಹೊರಸೂಸಲ್ಪಡುತ್ತದೆ. ಮಾನವಕುಲವು ಹವಾಮಾನದ ಉಷ್ಣತೆಯನ್ನು ಹೆಚ್ಚಿಸಿದೆ. ಇದರಿಂದಾಗಿ ಭೂಮಿಯ ಮೇಲೆ ತ್ವರಿತ ಬದಲಾವಣೆಗಳು ಆಗಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಕಳೆದ 2 ಸಾವಿರ ವರ್ಷಗಳಲ್ಲಿ ಆಗಿರುವ ಬದಲಾವಣೆಗಳು ಅಭೂತಪೂರ್ವ . 1750ರಿಂದ ಹಸಿರುಮನೆ ಅನಿಲ ಹೊರಸೂಸಿವಿಕೆ ವೇಗವಾಗಿ ಹೆಚ್ಚಾಗಿದೆ. 2019ರಲ್ಲಿ ವಾಯುಮಂಡಲದಲ್ಲಿ ದಾಖಲಾದ ಅತಿ ಹೆಚ್ಚು ಇಂಗಾಲದ ಡೈಆಕ್ಸೈಡ್(CO2)ನ್ನು ದಾಖಲಿಸಿದೆ. ಕಳೆದ 20 ಲಕ್ಷ ವರ್ಷಗಳಲ್ಲಿ ಕೂಡ ಇಷ್ಟೊಂದು ಕಂಡಿರಲಿಲ್ಲ.

 ವರ್ಕಿಂಗ್ ಗ್ರೂಪ್ 1 ವರದಿ

ವರ್ಕಿಂಗ್ ಗ್ರೂಪ್ 1 ವರದಿ

ಇಂದು ಬಿಡುಗಡೆಯಾದ ಐಪಿಸಿಸಿಯ ವರ್ಕಿಂಗ್ ಗ್ರೂಪ್ 1ರ ವರದಿಯನ್ನು 195 ಸರ್ಕಾರಗಳು ಮತ್ತು ವಿವಿಧ ದೇಶಗಳ 234 ವಿಜ್ಞಾನಿಗಳು ಅನುಮೋದಿಸಿದ್ದಾರೆ.
ಈ ಹವಾಮಾನ ಬದಲಾವಣೆಯನ್ನು 'Climate change 2021: The Physical Science Basis' ಎಂದು ಕರೆಯಲಾಗಿದೆ. ಈ ಗುಂಪು ಮಾನವಕುಲದ ಇಂಗಾಲದ ಹೊರಸೂಸುವಿಕೆ ಮತ್ತು ಅದರ ಪರಿಣಾಮಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿದೆ.
47 ದೇಶಗಳ ಸರ್ಕಾರಗಳು 3 ಸಾವಿರಕ್ಕೂ ಹೆಚ್ಚು ಕಾಮೆಂಟ್‌ಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.

 ಪ್ರವಾಹಗಳ ಬಗ್ಗೆ ವಿಜ್ಞಾನಿಗಳು ಏನು ಹೇಳುತ್ತಾರೆ?

ಪ್ರವಾಹಗಳ ಬಗ್ಗೆ ವಿಜ್ಞಾನಿಗಳು ಏನು ಹೇಳುತ್ತಾರೆ?

ಈ ಮಳೆಗಾಲದಲ್ಲಿ ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಇದಲ್ಲದೇ, ಗುಡ್ಡಗಾಡು ಪ್ರದೇಶದಲ್ಲಿ ಅಂದರೆ ಹಿಮಾಚಲಪ್ರದೇಶ ಮತ್ತು ಉತ್ತರಾಖಂಡದಲ್ಲಿ ಭೂಕುಸಿತ ಮತ್ತು ಮೇಘಸ್ಫೋಟ ಘಟನೆಗಳ ವಿಡಿಯೋಗಳನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಿದ್ದೀರಿ. ಇದು ಮಾತ್ರವಲ್ಲ ಕ್ಯಾಲಿಫೋರ್ನಿಯಾದ ಕಾಡುಗಳು ಇನ್ನೂ ಬೆಂಕಿಯಿಂದ ಉರಿಯುತ್ತಿವೆ, ಇತ್ತೀಚೆಗೆ ನಾವು ಜಪಾನ್‌ನಲ್ಲಿ ಮೇಘಸ್ಫೋಟ ಮತ್ತು ಜರ್ಮನಿಯಲ್ಲಿ ಭಾರಿ ಮಳೆಯ ನಂತರ ವಿನಾಶದ ದೃಶ್ಯವನ್ನು ಕೂಡ ನೋಡಿದ್ದೇವೆ.
ಇಂತಹ ಎಲ್ಲಾ ನೈಸರ್ಗಿಕ ವಿದ್ಯಮಾನಗಳನ್ನು ಆಳವಾಗಿ ಅಧ್ಯಯನ ಮಾಡಿರುವ ಐಪಿಸಿಸಿಯ ಕಾರ್ಯನಿರತ ಗುಂಪು 1 ಸೋಮವಾರ ತನ್ನ ವರದಿಯನ್ನು ಬಿಡುಗಡೆ ಮಾಡಿದೆ. ವರದಿಯ ಪ್ರಕಾರ ಭಾರತ ಸೇರಿದಂತೆ ಏಷ್ಯಾದ್ಯಂತ ಬಿಸಿಗಾಳಿ ಅಂದರೆ ಬಿಸಿಗಾಳಿಯ ಪರಿಣಾಂಗಳು ಮುಂದುವರೆದಿದೆ ಎಂದು ಹೇಳಲಾಗಿದೆ.

English summary
United Nation's body, Intergovernmental Panel on Climate Change (IPCC) has today released its report by Working Group I, which is the part of Sixth Assessment Cycle (AR6). A report entitled Climate Change 2021: the Physical Science Basis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X