• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದ ಬ್ರಹ್ಮೋಸ್ ಗೆ ಆತಂಕ ತಂದೊಡ್ಡಲಿರುವ ಕ್ಷಿಪಣಿ ಪಾಕ್ ಗೆ ಸೇರ್ಪಡೆ!

By ಅನಿಲ್ ಆಚಾರ್
|

ಚೀನಾದ ನೌಕೆಗಳ ಕ್ಷಿಪಣಿ ನಿರೋಧಕವು ಪಾಕಿಸ್ತಾನ ಪಾಲಿಗೆ ರಟ್ಟೆ ಬಲ ಆಗಲಿದೆ. ಶಬ್ದದ ವೇಗಕ್ಕಿಂತ ಮೂರು ಪಟ್ಟು ಹೆಚ್ಚು ವೇಗವಾಗಿ ಹಾರುವ ಸಾಮರ್ಥ್ಯವನ್ನು ಇವು ಹೊಂದಿದೆ. 2005ರಿಂದ ಪಾಕಿಸ್ತಾನದ ನೌಕಾ ಬಲಕ್ಕಿಂತ ಮೇಲುಗೈ ಸಾಧಿಸಿರುವ ಭಾರತಕ್ಕೆ ಇನ್ನು ಆ ಕ್ಷಿಪಣಿ ಸಾಮರ್ಥ್ಯದಲ್ಲಿ ಹಿನ್ನಡೆ ಆಗಬಹುದು.

ಇದೀಗ ಚೀನಾವು ಪಾಕಿಸ್ತಾನಕ್ಕಾಗಿ ತಯಾರಿಸುತ್ತಿರುವ ನಾಲ್ಕು ಅತ್ಯಾಧುನಿಕ ಯುದ್ಧ ನೌಕೆಯಲ್ಲಿ YJ-12 ಕ್ಷಿಪಣಿ ಹಾಗೂ CM-302 ಪ್ರಾಥಮಿಕ ಶಸ್ತ್ರಾಸ್ತ್ರವಾಗಿ ಇರಲಿದೆ. CM-302 ಸಾಮರ್ಥ್ಯ ಎಷ್ಟಿದೆಯೆಂದರೆ, ಅದು ಸೂಪರ್ ಸಾನಿಕ್ ವೇಗಕ್ಕೆ ಹಾಗೂ ಭಾರತೀಯ ನೌಕಾ ಸೇನೆಯ ನೌಕಾನಿರೋಧಕ ಕ್ಷಿಪಣಿಗೆ ವ್ಯಾಪ್ತಿಗೆ ಸರಿಸಮವಾಗಿದೆ. ಬ್ರಹ್ಮೋಸ್ ಅನ್ನೇ ಹಲವು ಕಡೆ ಮುಂಚೂಣಿಯಲ್ಲಿ ನೌಕಾ ಸೇನೆ ಬಲವಾಗಿ ನಿಯೋಜನೆ ಮಾಡಲಾಗಿದೆ.

'ಅಣ್ವಸ್ತ್ರ ಹೊಂದಿದ ಎರಡು ದೇಶಗಳ ಮಧ್ಯೆ ಕದನ ಆತ್ಮಹತ್ಯೆಗೆ ಸಮ'

ಚೀನಾವು ಪಾಕಿಸ್ತಾನಕ್ಕೆ ನೀಡಲಿರುವ ಯುದ್ಧ ನೌಕೆ ಬಗ್ಗೆ ಸೇನಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, CM-302 ಹೊಂದಿರುವ ನೌಕೆಯು ಭಾರತದ ಪಾಲಿಗೆ ಹೊಸ ಆತಂಕ. ಏಕೆಂದರೆ ಅದರ ಸಾಮರ್ಥ್ಯ ಅಗಾಧವಾದದು. ಭಾರತೀಯ ನೌಕಾ ಸೇನೆ ಸಾಮರ್ಥ್ಯವನ್ನು ಸರಿಗಟ್ಟಲು ಪಾಕ್ ಗೆ ಬಹಳ ಸಮಯ ಬೇಕಿತ್ತು. ಆದರೆ ಈಗ ಚೀನಾ ತಯಾರಿಸುತ್ತಿರುವ ಯುದ್ಧ ನೌಕೆ ನಿಜವಾಗಲೂ ಆತಂಕಕಾರಿ. ಈ ವರೆಗೆ ಪಾಕ್ ನ ಬಳಿ ದೂರ ವ್ಯಾಪ್ತಿಯ ಸೆನ್ಸಾರ್ ಇಲ್ಲ ಎಂದಿದ್ದಾರೆ.

ಹೊಸ ಯುದ್ಧ ನೌಕೆಗೆ ಎದುರು ನೋಡುತ್ತಿದೆ ಪಾಕಿಸ್ತಾನ

ಹೊಸ ಯುದ್ಧ ನೌಕೆಗೆ ಎದುರು ನೋಡುತ್ತಿದೆ ಪಾಕಿಸ್ತಾನ

ಗುರಿಯನ್ನು ನಿಖರವಾಗಿ ತಲುಪಬಹುದಾದ ಮಾಹಿತಿ, ಸರ್ವೇಲನ್ಸ್ ಸಾಮರ್ಥ್ಯ ಹಾಗೂ ಭಾರತೀಯ ನೌಕಾ ಸೇನೆಗೆ ಉತ್ತರ ನೀಡುವ ಸಂಕೀರ್ಣ ಸಾಮರ್ಥ್ಯ ಚೀನಾದ ಯುದ್ಧ ನೌಕೆ ಒಳಗೊಂಡಿದೆ. ಆ ಕಾರಣಕ್ಕೆ ಪಾಕಿಸ್ತಾನವು ಕ್ಷಿಪಣಿ ಉಡಾವಣೆ ಪ್ರಯತ್ನದ ಮುಂಚೆ ಈ ಹೊಸ ಯುದ್ಧ ನೌಕೆಗಾಗಿ ಎದುರು ನೋಡುತ್ತಿದೆ.

ಶಬ್ದಕ್ಕಿಂತ ಮೂರು ಪಟ್ಟು ವೇಗವಾಗಿ ಚಲಿಸುತ್ತದೆ

ಚೀನಾವು ಹೊಸದಾಗಿ ನಿರ್ಮಿಸುತ್ತಿರುವ CM-302 ಪಾಕಿಸ್ತಾನದ ನೌಕಾ ಸೇನೆಗೆ ಸೇರುವುದು 2021ನೇ ಇಸವಿ ಹೊತ್ತಿಗೆ. ಆನ್ ಲೈನ್ ಮೂಲವೊಂದರ ಪ್ರಕಾರ, YJ-12 ಕ್ಷಿಪಣಿ ಎಷ್ಟು ದೂರಕ್ಕೆ ಚಿಮ್ಮಬಲ್ಲದು ಎಂಬುದು ಆತಂಕವಲ್ಲ. ಆದರೆ ಇದರ ವೇಗವೇ ಅಪಾಯಕಾರಿ. ಮುನ್ನೂರು ಕಿ.ಮೀ. ವೇಗವನ್ನು ಶಬ್ದಕ್ಕಿಂತ ಮೂರು ಪಟ್ಟು ವೇಗದಲ್ಲಿ ತಲುಪಬಹುದು. ಅಥವಾ ನಾನೂರು ಕಿ.ಮೀ. ದೂರವನ್ನು ಶಬ್ದಕ್ಕಿಂತ ವೇಗದಲ್ಲಿ ತಲುಪಬಲ್ಲದು.

ಪಾಕ್ ನ ನೌಕಾ ಬಲ ದುಪ್ಪಟ್ಟು ಮಾಡಲು ಸಿದ್ಧಗೊಳ್ಳುತ್ತಿದೆ ಅತ್ಯಾಧುನಿಕ ಯುದ್ಧ ನೌಕೆ

ಚೀನಾ ಸಾಮರ್ಥ್ಯದ ಮುಂದೆ ಅಮೆರಿಕವೂ ಹಿಂದೆ

ಚೀನಾ ಸಾಮರ್ಥ್ಯದ ಮುಂದೆ ಅಮೆರಿಕವೂ ಹಿಂದೆ

ಅಮೆರಿಕದ ತಜ್ಞರಾದ ರಾಬರ್ಟ್ ಹಾಡಿಕ್ ಅವರ ಪ್ರಕಾರ, YJ-12 ಹಡಗು ನಿರೋಧಕ ಕ್ಷಿಪಣಿಯು ಈ ವರೆಗೆ ಚೀನಾ ಉತ್ಪಾದಿಸಿರುವ ಕ್ಷಿಪಣಿಗಳಲ್ಲೇ ಹೆಚ್ಚು ಅಪಾಯಕಾರಿಯಾದದ್ದು. ಇನ್ನು ಅಮೆರಿಕದ ನೌಕಾ ಶಕ್ತಿಯೇ ಈ ಮೂಲಕ ಚೀನಾಗಿಂತ ಹಿಂದೆ ಉಳಿಯುವಂತೆ ಮಾಡಬಲ್ಲ ಸಾಮರ್ಥ್ಯ ಇದಕ್ಕಿದೆ.

ಯಾರದ್ದೋ ಯುದ್ಧಕ್ಕಾಗಿ ಅಮೆರಿಕ ನಮ್ಮನ್ನು ಬಳಸಿಕೊಂಡಿತು: ಇಮ್ರಾನ್ ಖಾನ್

ಊಹೆಯೋ ಅಥವಾ ಅಧಿಕೃತ ಚಿತ್ರವೋ ಗೊತ್ತಿಲ್ಲ

ಊಹೆಯೋ ಅಥವಾ ಅಧಿಕೃತ ಚಿತ್ರವೋ ಗೊತ್ತಿಲ್ಲ

ಚೀನಾ ಸ್ಟೇಟ್ ಶಿಪ್ ಬಿಲ್ಡಿಂಗ್ ಕಾರ್ಪೊರೇಷನ್ ನಿಂದ YJ-12/CM-302 ನಿರ್ಮಾಣ ಆಗುತ್ತಿದೆ. ಇದನ್ನು ಪಾಕಿಸ್ತಾನದ ಸಲುವಾಗಿಯೇ ನಿರ್ಮಾಣ ಆಗುತ್ತಿದ್ದು, ಈ ಬಗ್ಗೆ ಕಳೆದ ತಿಂಗಳು ಟ್ವಿಟ್ಟರ್ ನಲ್ಲಿ ಫೋಟೋ ಕೂಡ ಹಾಕಲಾಗಿತ್ತು. ಆದರೆ ಈ ಫೋಟೋ ತಜ್ಞರು ಬಿಡುಗಡೆ ಮಾಡಿದ ಊಹಾತ್ಮಕ ಚಿತ್ರವೋ ಅಥವಾ ಅಧಿಕೃತ ಚಿತ್ರವೋ ಸ್ಪಷ್ಟವಾಗಿಲ್ಲ.

ರಷ್ಯಾದ ಜತೆ ಸೇರಿ ನಿರ್ಮಿಸಿದ ಕ್ಷಿಪಣಿ ಈಗ ಇಂಡೋನೇಷ್ಯಾಗೆ ಮಾರಾಟ

ರಷ್ಯಾದ ಜತೆ ಸೇರಿ ನಿರ್ಮಿಸಿದ ಕ್ಷಿಪಣಿ ಈಗ ಇಂಡೋನೇಷ್ಯಾಗೆ ಮಾರಾಟ

ಭಾರತವು ಬ್ರಹ್ಮೋಸ್ ಕ್ಷಿಪಣಿಯನ್ನು ರಷ್ಯಾದ ಸಹಕಾರದ ಜತೆಗೆ ಅಭಿವೃದ್ಧಿ ಪಡಿಸಿದ್ದು, ಇದೀಗ ಆ ಕ್ಷಿಪಣಿಯನ್ನು ಇಂಡೋನೇಷ್ಯಾಗೆ ಮಾರಾಟ ಮಾಡಲು ಮುಂದಾಗಿದೆ. ಬ್ರಹ್ಮೋಸ್ ಕ್ಷಿಪಣಿಯು ನಾನೂರು ಕಿ.ಮೀ. ದೂರದ ಗುರಿಯನ್ನು ಕೂಡ ತಲುಪಬಲ್ಲ ಸಾಮರ್ಥ್ಯ ಹೊಂದಿದ್ದು, ಶಬ್ದಕ್ಕಿಂತ ಮೂರು ಪಟ್ಟು ವೇಗವಾಗಿ ಚಲಿಸುವ ಸಾಮರ್ಥ್ಯ ಹೊಂದಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನವು CM-302 ಕ್ಷಿಪಣಿ ಸೇರ್ಪಡೆ ಮಾಡಿಕೊಳ್ಳಲು ಮುಂದಾಗಿದೆ ಎಂದು ವರದಿಯಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A game-changing Chinese anti-ship missile, capable of flying at three times the speed of sound, could erode a key missile advantage the Indian Navy has enjoyed over the Pakistani Navy since 2005.An export variant of the YJ-12 missile, the CM-302, is likely to be the primary weapon on board four new Chinese frigates being built for the Pakistan Navy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more