• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ಯಾಂಗೊಂಗ್ ತ್ಸೊ ನೆಪವಷ್ಟೇ, ಚೀನಾದ ಕಣ್ಣು ದೆಪ್ಸಾಂಗ್ ಮೇಲೆ

|

ನವದೆಹಲಿ, ಸೆಪ್ಟೆಂಬರ್ 18: ಲಡಾಖ್‌ನ ಪ್ಯಾಂಗೊಂಗ್ ತ್ಸೊ ಸರೋವರದ ಬಳಿ ಚೀನಾ ಸೇನೆ ಬೀಡುಬಿಟ್ಟಿದೆ. ಅಲ್ಲಿಂದ ಮುಂದೆ ಬಾರದಂತೆ ಭಾರತದ ಸೇನೆ ಚೀನಾಕ್ಕೆ ಅಡ್ಡಿಪಡಿಸುತ್ತಿದೆ. ಆದರೆ ಚೀನಾದ ಕಣ್ಣು ಇರುವುದು ದೆಪ್ಸಾಂಗ್ ಪ್ರದೇಶದ ಮೇಲೆ. ಪ್ಯಾಂಗೊಂಗ್ ತ್ಸೊ ಇಲ್ಲಿ ನೆಪವಷ್ಟೇ ಎನ್ನುವುದು ಗೊತ್ತಾಗಿದೆ.

ಏಪ್ರಿಲ್‌ ತಿಂಗಳಿನಿಂದಲೂ ಇಲ್ಲಿ ಭಾರತೀಯ ಸೇನೆಯ ಪಹರೆಗೆ ಚೀನಾ ಸೈನಿಕರು ಅಡ್ಡಿಪಡಿಸುತ್ತಿದ್ದಾರೆ. ಜತೆಗೆ ಈ ಪ್ರದೇಶದಲ್ಲಿ ಚೀನಾದ ಪಿಎಲ್‌ಎ ಮತ್ತು ಭಾರತೀಯ ಸೇನೆ ಅಪಾರ ಪ್ರಮಾಣದಲ್ಲಿ ಪಡೆಗಳನ್ನು ನಿಯೋಜಿಸುತ್ತಿದೆ. ಆದರೆ ಈ ಬಗ್ಗೆ ಸಂಸತ್‌ನ ಉಭಯ ಸದನಗಳಲ್ಲಿ ಹೇಳಿಕೆ ನೀಡುವ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಯಾವುದೇ ಉಲ್ಲೇಖ ಮಾಡಿರಲಿಲ್ಲ.

ಲೌಡ್ ಸ್ಪೀಕರ್‌ನಲ್ಲಿ ಪಂಜಾಬಿ ಹಾಡು ಹಾಕಿದ ಚೀನಾ ಸೈನಿಕರು

'ದೆಪ್ಸಾಂಗ್ ಬಹಳ ಹಿಂದಿನ ಕಾಲದಿಂದ ಉಳಿದುಕೊಂಡಿರುವ ಸಮಸ್ಯೆ. ಇದನ್ನು ಪ್ಯಾಂಗೊಂಗ್ ತ್ಸೊ-ಚುಷುಲ್, ಗೊಗ್ರಾ-ಹಾಟ್‌ಸ್ಪ್ರಿಂಗ್ಸ್ ಮತ್ತು ಗಾಲ್ವಾನ್ ಕಣಿವೆಯ ಸಂಘರ್ಷಗಳೊಂದಿಗಿನ ಈ ವರ್ಷದ ಹೊಸ ಸಂಘರ್ಷಗಳ ನಡುವೆ ಸಮವಾಗಿ ಕಲ್ಪಿಸಲು ಸಾಧ್ಯವಾಗುವುದಿಲ್ಲ' ಎಂದು ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಮುಂದೆ ಓದಿ.

ಹೊಸ ಬಿಕ್ಕಟ್ಟು ಇಲ್ಲ

ಹೊಸ ಬಿಕ್ಕಟ್ಟು ಇಲ್ಲ

ದೆಪ್ಸಾಂಗ್‌ನಲ್ಲಿ ಈಗಲೇ ಯಾವ ಸೇನಾ ಬಿಕ್ಕಟ್ಟು ಉಂಟಾಗಿಲ್ಲ. ವಾಸ್ತವ ಗಡಿ ನಿಯಂತ್ರಣ ರೇಖೆಯ ಬಗ್ಗೆ ದೊಡ್ಡ ಮಟ್ಟದಲ್ಲಿ ಪ್ರತಿಪಾದನೆಗಳು ಉಭಯ ದೇಶಗಳಿಂದ ನಡೆಯುತ್ತಿವೆ. ಅಲ್ಲಿನ ಯಥಾಸ್ಥಿತಿ ಬದಲಾಯಿಸುವ ಯಾವುದೇ ಹೊಸ ಪ್ರಯತ್ನಗಳು ನಡೆದಿಲ್ಲ.

ಭಾರತದ ಗಮನ ಬದಲಿಸುವ ಪ್ರಯತ್ನ

ಭಾರತದ ಗಮನ ಬದಲಿಸುವ ಪ್ರಯತ್ನ

ಆದರೆ, ಚೀನಾವು ಪ್ಯಾಂಗೊಂಗ್ ತ್ಸೊ-ಚುಷುಲ್ ಹಾಗೂ ಲಡಾಖ್ ಮುಂಚೂಣಿ ನೆಲೆಯಲ್ಲಿನ ಇತರೆ ಕೆಳಮಟ್ಟದ ಪ್ರದೇಶಗಳಲ್ಲಿ ಆಕ್ರಮಣಕಾರಿ ರೀತಿಯಲ್ಲಿ ಸೇನಾ ಚಟುವಟಿಕೆಗಳನ್ನು ನಡೆಸುವುದರ ಮೂಲಕ ದೆಪ್ಸಾಂಗ್ ಪ್ರದೇಶದಿಂದ ಭಾರತದ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ನಡೆಸುತ್ತಿದೆ ಎಂಬ ಕಳವಳ ಭದ್ರತಾ ವಲಯದಲ್ಲಿ ಉಂಟಾಗಿದೆ.

ಚೀನಾ ಹೇಳುವುದು ಒಂದು ಮಾಡುವುದು ಇನ್ನೊಂದು: ರಾಜನಾಥ್ ಸಿಂಗ್ ಆರೋಪ

ಭಾರತದ ಪಡೆಗಳಿಗೆ ಚೀನಾ ತಡೆ

ಭಾರತದ ಪಡೆಗಳಿಗೆ ಚೀನಾ ತಡೆ

ದೆಪ್ಸಾಂಗ್‌ನ ಸಾಂಪ್ರದಾಯಿಕ ಗಸ್ತು ಕೇಂದ್ರಗಳಾದ 10,11, 11A, 12 ಮತ್ತು 13ಗಳಿಗೆ ತೆರಳುವುದಕ್ಕೆ ಭಾರತೀಯ ಸೇನೆಗೆ ಚೀನಾ ಪಡೆಗಳು ಕಳೆದ ಐದು ತಿಂಗಳಿಂದ ನಿರಂತರವಾಗಿ ಅಡ್ಡಿಪಡಿಸುತ್ತಿವೆ. ಈ ಪ್ರದೇಶಗಳು ಭಾರತವು ತನ್ನದೆಂದು ಪ್ರತಿಪಾದಿಸಿರುವ ಎಲ್ಎಸಿಯ ಭಾಗಕ್ಕಿಂತಲೂ ಒಳಗಿದೆ.

972 ಚದರ ಕಿ.ಮೀ ತನ್ನದೆಂದ ಚೀನಾ

972 ಚದರ ಕಿ.ಮೀ ತನ್ನದೆಂದ ಚೀನಾ

ದೆಪ್ಸಾಂಗ್ ಪ್ರದೇಶದ 'ವೈ-ಜಂಕ್ಷನ್' ಅಥವಾ 'ಬಾಟಲ್‌ನೆಕ್'ನಲ್ಲಿ ಪಿಎಲ್‌ಎ ಪಡೆಗಳು ನೆಲೆಯೂರಿವೆ. ಇದು ಭಾರತವು ತನ್ನ ಗಡಿ ಪ್ರಾರಂಭವೆಂದು ಹೇಳಿಕೊಂಡಿರುವ ಪ್ರದೇಶದಿಂದಲೂ 18 ಕಿ.ಮೀ. ಒಳಭಾಗದಲ್ಲಿದೆ. ಈ ಭಾಗದಲ್ಲಿ 972 ಚದರ ಕಿ.ಮೀ ಭಾಗವನ್ನು ತನ್ನದೆಂದು ಚೀನಾ ಪ್ರತಿಪಾದಿಸಿದೆ. ದೆಪ್ಸಾಂಗ್-ದೌಲತ್ ಬೆಗ್ ಓಲ್ಡೀ (ಡಿಬಿಒ) ವಲಯವು ಟಿಬೆಟ್‌ನ ಸ್ವಾಯತ್ತ ಪ್ರದೇಶದಿಂದ ಕ್ಸಿಂಜಿಯಾಂಗ್‌ಗೆ ಸಂಪರ್ಕಿಸುವ ಚೀನಾದ ಪಶ್ಚಿಮ ಹೆದ್ದಾರಿ ಜಿ-219 ಸಮೀಪದಲ್ಲಿಯೇ ಇದೆ.

ಭಾರತ-ಚೀನಾ ನಡುವೆ ಎಚ್ಚರಿಕೆಗೂ ಮೀರಿದ ಗುಂಡಿನ ಸದ್ದು

ಭಾರತೀಯ ಸೇನೆ ನಿಯೋಜನೆ

ಭಾರತೀಯ ಸೇನೆ ನಿಯೋಜನೆ

ಎಲ್‌ಎಸಿಯ ಇನ್ನಷ್ಟು ಒಳಭಾಗದಲ್ಲಿ ತನ್ನ ನಾಲ್ಕನೇ ಮೊಟೊರೈಸ್ಡ್ ಇನ್‌ಫೆಂಟ್ರಿ ವಿಭಾಗದಿಂದ ಮತ್ತು ಆರನೇ ಮೆಕಾನೈಸ್ಡ್ ಇನ್‌ಫೆಂಟ್ರಿ ವಿಭಾಗದಿಂದ ಟ್ಯಾಂಗ್ ಹಾಗೂ ಆರ್ಟಿಲರಿ ಗನ್‌ಗಳನ್ನು ಒಳಗೊಂಡ 12 ಸಾವಿರ ಸೈನಿಕರನ್ನು ಇಲ್ಲಿ ನಿಯೋಜಿಸಿದೆ. 16,000 ಅಡಿ ಎತ್ತರವಿರುವ ದೆಪ್ಸಾಂಗ್ ಪ್ರದೇಶದ ಪ್ರಸ್ಥಭೂಮಿಯಲ್ಲಿ ಭಾರತವು ಚೀನಾಕ್ಕೆ ಎದಿರೇಟು ನೀಡಲು 3,000 ಪಡೆಗಳ ಎರಡು ಹೆಚ್ಚುವರಿ ಬ್ರಿಗೇಡ್‌ಗಳನ್ನು ಜಮಾವಣೆ ಮಾಡಿದೆ.

English summary
Chinese PLA deploying its troops in Pangong Tso area. But sources said, its actual target is Depsang and not Pangong.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X