ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಲ್ಲಿ ಚಿನ್ನದ ಜಲಪಾತ: ಅಪರೂಪದ ದೃಶ್ಯ ಕಂಡು ಬೆರಗಾದ ಜಗತ್ತು

|
Google Oneindia Kannada News

ಬೀಜಿಂಗ್ ಜೂ. 1: ಪ್ರಕೃತಿ ಏನನ್ನು ಪರಿಚಯಿಸುತ್ತದೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಹೀಗಾಗಿ ಪ್ರಕೃತಿಯ ಗರ್ಭದಲ್ಲಿ ಹಲವಾರು ರಹಸ್ಯಗಳು ಅಡಗಿವೆ ಎಂದು ಹೇಳಲಾಗುತ್ತದೆ. ಇದನ್ನು ಜಗತ್ತು ಅರ್ಥಮಾಡಿಕೊಳ್ಳಲಾಗಿಲ್ಲ. ಅಂತಹ ಒಂದು ದೃಶ್ಯವು ಚೀನಾದಲ್ಲಿ ಕಂಡುಬಂದಿದೆ. ಅಲ್ಲಿ ಪ್ರಸಿದ್ಧ ಜಲಪಾತವು ಇದ್ದಕ್ಕಿದ್ದಂತೆ ಚಿನ್ನದ ಬಣ್ಣಕ್ಕೆ ಬದಲಾಗಿದೆ. ಈ ಅಪರೂಪದ ದೃಶ್ಯವನ್ನು ಕಂಡು ಜಗತ್ತೇ ಬದಲಾಗಿ ಹೋಗಿದೆ.

ವಿಯೆಟ್ನಾಂ ಗಡಿಯಲ್ಲಿರುವ ಚೀನಾದ ಗುವಾಂಗ್ಕ್ಸಿ ಕ್ಸುವಾಂಗ್ ಸ್ವಾಯತ್ತ ಪ್ರದೇಶದಲ್ಲಿ ಪ್ರಪಂಚದ ಪ್ರಸಿದ್ಧ ಜಲಪಾತ ಡೆಟಿಯನ್ ಇಂಟರ್ನ್ಯಾಷನಲ್ ಫಾಲ್ಸ್ ಹರಿಯುತ್ತದೆ. ಈ ಜಲಪಾತ ಇದ್ದಕ್ಕಿದ್ದಂತೆ ಚಿನ್ನದ ಬಣ್ಣಕ್ಕೆ ತಿರುಗಿದೆ. ಡೆಟಿಯನ್ ಜಲಪಾತ ವಿಶ್ವದ ನಾಲ್ಕನೇ ಅತಿದೊಡ್ಡ ಜಲಪಾತವೆಂದು ಪರಿಗಣಿಸಲ್ಪಟ್ಟಿದೆ. ಇದು ಚೀನಾದಿಂದ ವಿಯೆಟ್ನಾಂಗೆ ಹರಿಯುತ್ತದೆ.(ಚಿತ್ರಕೃಪೆ: chinanews.com)

ಈ ಫ್ರಿಜ್‌ಗೆ ಕರೆಂಟೇ ಬೇಕಿಲ್ಲ; ಎಸ್ಸೆಸ್ಸೆಲ್ಸಿ ಫೇಲ್ಡ್ ವ್ಯಕ್ತಿಯ ಆವಿಷ್ಕಾರಈ ಫ್ರಿಜ್‌ಗೆ ಕರೆಂಟೇ ಬೇಕಿಲ್ಲ; ಎಸ್ಸೆಸ್ಸೆಲ್ಸಿ ಫೇಲ್ಡ್ ವ್ಯಕ್ತಿಯ ಆವಿಷ್ಕಾರ

ಚಿನ್ನದ ಜಲಪಾತದ ರಹಸ್ಯ

ಚಿನ್ನದ ಜಲಪಾತದ ರಹಸ್ಯ

26 ಮೇ 2022 ರಂದು ಡೆಟಿಯನ್ ಜಲಪಾತ ಇದ್ದಕ್ಕಿದ್ದಂತೆ ಚಿನ್ನದ ಬಣ್ಣಕ್ಕೆ ತಿರುಗಿದೆ. ಇದನ್ನು ನೋಡಿದರೆ ಜಲಪಾತದಿಂದ ನೀರಲ್ಲ ಕರಗಿದ ಚಿನ್ನ ಹರಿಯುತ್ತಿದೆ ಎಂದು ತೋರುತ್ತದೆ. ವರದಿಯ ಪ್ರಕಾರ ಡೆಟಿಯನ್ ಜಲಪಾತದಲ್ಲಿನ ನೀರಿನ ಪ್ರಮಾಣ ಇದ್ದಕ್ಕಿದ್ದಂತೆ ಗಮನಾರ್ಹವಾಗಿ ಹೆಚ್ಚಾಯಿತು. ಸೂರ್ಯನ ಬೆಳಕು ಹರಿಯುವ ನೀರಿನ ಮೇಲೆ ಬಿದ್ದಾಗ, ಅದು ಸಂಪೂರ್ಣವಾಗಿ ಚಿನ್ನದಂತೆ ಕಾಣುತ್ತಿದೆ. ಡೆಟಿಯನ್ ಜಲಪಾತದ ನೀರು ಏಕಾಏಕಿ ಚಿನ್ನದ ಬಣ್ಣಕ್ಕೆ ಬದಲಾದ ಕಾರಣ, ಈ ಅಪರೂಪದ ದೃಶ್ಯವನ್ನು ನೋಡಲು ಜನ ಸಾಗರವೇ ನಿತ್ಯ ನೋಡಲು ಹರಿದುಬರುತ್ತಿದೆ ಎನ್ನಲಾಗುತ್ತಿದೆ.

ವಿಶ್ವದ ನಾಲ್ಕನೇ ಅತಿದೊಡ್ಡ ಜಲಪಾತ

ವಿಶ್ವದ ನಾಲ್ಕನೇ ಅತಿದೊಡ್ಡ ಜಲಪಾತ

ಡೆಟಿಯನ್ ಜಲಪಾತ ವಿಶ್ವದ ನಾಲ್ಕನೇ ಅತಿದೊಡ್ಡ ಜಲಪಾತವಾಗಿದೆ. ಜೊತೆಗೆ ಏಷ್ಯಾದ ಅತಿದೊಡ್ಡ ಜಲಪಾತವಾಗಿದೆ. ಇದು ಚೀನಾದಿಂದ ವಿಯೆಟ್ನಾಂಗೆ ಹರಿಯುತ್ತದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಈ ಜಲಪಾತ ಹರಿಯುವ ಪ್ರದೇಶವು ತನ್ನ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಈ ಪ್ರದೇಶವು ಯಾವಾಗಲೂ ಪ್ರವಾಸಿಗರಿಗೆ ಪ್ರಸಿದ್ಧವಾಗಿದ್ದು ನಿತ್ಯ ನೂರಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಅನೇಕ ಪ್ರಸಿದ್ಧ ಶಿಖರಗಳ ನಡುವೆ ಇದು ಹರಿಯುವ ಕಾರಣ ಈ ಜಲಪಾತವನ್ನು ವಿಶ್ವದ ಅತ್ಯಂತ ಆಕರ್ಷಕ ಮತ್ತು ಸುಂದರವಾದ ಜಲಪಾತ ಎಂದೂ ಕರೆಯುತ್ತಾರೆ. ಈ ಜಲಪಾತದ ಫೋಟೋಗಳು ಎಲ್ಲೆಡೆ ಸಾಕಷ್ಟು ವೈರಲ್ ಆಗಿದೆ.

ವಿಡಿಯೋ: 'ಊ ಅಂಟವಾ ಮಾವಾ..' ಅಂದ ವಿದೇಶಿ ಹುಡುಗಿವಿಡಿಯೋ: 'ಊ ಅಂಟವಾ ಮಾವಾ..' ಅಂದ ವಿದೇಶಿ ಹುಡುಗಿ

ಜಲಪಾತವನ್ನು ಎರಡು ಭಾಗಗಳಾಗಿ ವಿಂಗಡನೆ

ಜಲಪಾತವನ್ನು ಎರಡು ಭಾಗಗಳಾಗಿ ವಿಂಗಡನೆ

ಡೆಟಿಯನ್ ಜಲಪಾತವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಚೀನಾದ ಗುಯಿಚುನ್ ನದಿಯಿಂದ ಹುಟ್ಟುವ ಈ ಜಲಪಾತದ ಮುಖ್ಯ ಭಾಗವು ಚೀನಾದಲ್ಲಿಯೇ ಹರಿಯುತ್ತದೆ. ನಂತರ ಅದು ವಿಯೆಟ್ನಾಂನ ನದಿಯೊಂದಿಗೆ ಬೆರೆತು ವಿಯೆಟ್ನಾಂಗೆ ಹರಿಯುತ್ತದೆ. ಈ ಜಲಪಾತವು ವಿಯೆಟ್ನಾಂನ ರಾಜಧಾನಿ ಹನೋಯಿಯಿಂದ ಸುಮಾರು 270 ಕಿ.ಮೀ ದೂರದಲ್ಲಿ ಹರಿಯುತ್ತದೆ. ಸಾವಿರಾರು ವರ್ಷಗಳಿಂದ ಹರಿಯುವ ಈ ಜಲಪಾತದ ಕಲ್ಲುಗಳು ಈಗ ಸಾಕಷ್ಟು ಸವೆದು ಹೋಗಿವೆ.

ಜಲಪಾತದ ಶಬ್ದದಿಂದ ಸಂಗೀತ

ಜಲಪಾತದ ಶಬ್ದದಿಂದ ಸಂಗೀತ

ಡೆಟಿಯನ್ ಜಲಪಾತದ ಸೌಂದರ್ಯವು ನಿರಂತರವಾಗಿ ಬದಲಾಗುತ್ತದೆ. ಈ ಜಲಪಾತ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಮೂರು ಸಮಯದಲ್ಲೂ ವಿಭಿನ್ನವಾಗಿ ಕಾಣುತ್ತದೆ. ಇದರಿಂದ ಇದರ ಸೌಂದರ್ಯ ಮತ್ತಷ್ಟು ಇಮ್ಮಡಿಗೊಂಡಿದೆ. ಮಧ್ಯಾಹ್ನದ ವೇಳೆಗೆ ಸೂರ್ಯನ ಬೆಳಕು ನೀರಿಗೆ ತಾಗಿ ವಿಭಿನ್ನ ಚಿತ್ರಣವೇ ಸೃಷ್ಟಿಯಾಗುತ್ತದೆ. ಈ ಬಾರಿ ನೀರಿನ ಏರಿಕೆಯಿಂದಾಗಿ ಅದು ಚಿನ್ನದ ಬಣ್ಣಕ್ಕೆ ತಿರುಗಿದೆ. 50 ಮೀಟರ್ ಎತ್ತರದಿಂದ ಬೀಳುವ ಕಾರಣದಿಂದಾಗಿ, ಅದರ ಶಬ್ದ ಪರ್ವತಗಳ ನಡುವೆ ಪ್ರತಿಧ್ವನಿಸಿ ಅದು ಕೆಲವು ಸಂಗೀತದಂತೆ ಧ್ವನಿಸುತ್ತದೆ.

ಸಂಜೆ ಬೆಳ್ಳಿ ಬಣ್ಣಕ್ಕೆ ಬದಲಾಗುವ ಜಲಪಾತ

ಸಂಜೆ ಬೆಳ್ಳಿ ಬಣ್ಣಕ್ಕೆ ಬದಲಾಗುವ ಜಲಪಾತ

ಸೂರ್ಯ ಮುಳುಗಿದಾಗ ಸೂರ್ಯನ ಕಿರಣಗಳು ನೇರವಾಗಿ ಜಲಪಾತದ ಮೇಲೆ ಬಿದ್ದಾಗ ಆ ಸಮಯದಲ್ಲಿ ಎತ್ತರದ ಜಲಪಾತವು ಬೆಳ್ಳಿಯ ಪರದೆಯಂತೆ ಕಾಣುತ್ತದೆ. ಸೂರ್ಯಾಸ್ತಕ್ಕೆ ಬೆಳ್ಳಿಯ ಜಲಪಾತ ಕಿತ್ತಳೆ ಬಣ್ಣದಿಂದ ಅದರ ಗ್ಲೋ ಅದ್ಭುತ ದೃಶ್ಯವನ್ನು ಸೃಷ್ಟಿಸುತ್ತದೆ. ಮುಂಜಾನೆ ಕಾಮನಬಿಲ್ಲು ಮತ್ತು ಬೆಳ್ಳಿಯ ಜಲಪಾತದ ಸೌಂದರ್ಯವನ್ನು ಒಂದೇ ಸಮಯದಲ್ಲಿ ಇಲ್ಲಿ ನೋಡಬಹುದು. ಈ ಜಲಪಾತ ಕಣಿವೆಯಲ್ಲಿ ಹರಿದಾಗ ಪರ್ವತದಲ್ಲಿ ಮಂಜನ್ನು ಉಂಟುಮಾಡುತ್ತದೆ. ಆ ಸಮಯದಲ್ಲಿ ಪೂರ್ವದಲ್ಲಿ ಸೂರ್ಯನ ಉದಯದೊಂದಿಗೆ, ಈ ಜಲಪಾತವು ಮಂಜನ್ನು ರೂಪಿಸುತ್ತದೆ. ಇದರಿಂದಾಗಿ ಕಣಿವೆಯ ಮಧ್ಯದಲ್ಲಿ ಮಳೆಬಿಲ್ಲು ರೂಪುಗೊಳ್ಳುತ್ತದೆ. ಇದು ನಿಸರ್ಗದ ಒಂದು ಕಲೆಯೇ ಸರಿ. ಮಾತ್ರವಲ್ಲದೆ ಇದು ನೋಡುಗರನ್ನ ಮೂಕಪ್ರೇಕ್ಷಕರನ್ನಾಗಿ ಮಾಡುತ್ತದೆ.

English summary
Rare 'Gold Waterfall' found in China, world surprised to see amazing pictures, what is the secret of Golden Waterfall?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X