• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾ ಕಣ್ಣು ಬಾಹ್ಯಾಕಾಶದ ಮೇಲೆ, ಮೈನಿಂಗ್‌ಗೆ ಸಿದ್ಧವಾಯ್ತು ‘ರೋಬೋಟ್’

|

ನೆರೆ ದೇಶಗಳ ಜೊತೆ ಗಡಿ ಜಗಳ ಮುಂದುವರಿಸಿರುವ ಚೀನಾ ಬಾಹ್ಯಾಕಾಶದ ವಸ್ತುಗಳ ಮೇಲೂ ಕಣ್ಣು ಹಾಕಿ ಕೂತಿದೆ. ಈ ಬಾರಿ ಚೀನಾ ಕಣ್ಣು ಬಿದ್ದಿರುವುದು ಕ್ಷುದ್ರಗ್ರಹಗಳ ಮೇಲೆ. ಕ್ಷುದ್ರಗ್ರಹಗಳಲ್ಲಿ ಮೈನಿಂಗ್ ಅಥವಾ ಗಣಿಗಾರಿಕೆ ಮಾಡಲು ಸಹಾಯಕವಾಗುವಂತೆ ಚೀನಾದ ಖಾಸಗಿ ಕಂಪನಿ ರೋಬೋಟ್ ತಯಾರಿಸಿದೆ. ಇದೇ ನವೆಂಬರ್‌ನಲ್ಲಿ ಪರೀಕ್ಷೆ ನಡೆಯಲಿದ್ದು, 2021ರ ವೇಳೆಗೆಲ್ಲಾ ಕ್ಷುದ್ರಗ್ರಹಗಳ ಮೇಲೆ ಗಣಿಗಾರಿಕೆ ನಡೆಸುವಷ್ಟು ಶಕ್ತವಾಗಲು ಚೀನಾ ಸ್ಕೆಚ್ ಹಾಕಿದೆ.

'ನಿಯೋ-1' ಹೆಸರಲ್ಲಿ 'ಒರಿಜಿನ್ ಸ್ಪೇಸ್' ಎಂಬ ಬೀಜಿಂಗ್ ಮೂಲದ ಖಾಸಗಿ ಕಂಪನಿ ಈ ಯೋಜನೆಯನ್ನ ಸಿದ್ಧಪಡಿಸಿದೆ. ಅಷ್ಟಕ್ಕೂ ನಮ್ಮ ಬ್ರಹ್ಮಾಂಡದಲ್ಲಿ ಲಕ್ಷಾಂತರ ಕೋಟಿ ಕ್ಷುದ್ರಗ್ರಹಗಳು ಸುತ್ತುಹಾಕುತ್ತಿವೆ. ಒಂದೊಂದು ಕ್ಷುದ್ರಗ್ರಹದಲ್ಲೂ ಟ್ರಿಲಿಯನ್ ಡಾಲರ್‌ಗಳಷ್ಟು ಸಂಪತ್ತು ಅಡಗಿದೆ. ಚಿನ್ನ, ಬೆಳ್ಳಿ, ವಜ್ರ ಸೇರಿದಂತೆ ಭೂಮಿ ಮೇಲೆ ಸಿಗುವ ಎಲ್ಲಾ ಬೆಲೆಬಾಳುವ ಅದಿರು ಹಾಗೂ ಗಣಿ ಸಂಪತ್ತು ಕ್ಷುದ್ರಗ್ರಹದಲ್ಲೂ ಸಿಗುತ್ತದೆ.

ಮತ್ತೊಂದು 'ಭೂಮಿ' ಪತ್ತೆಹಚ್ಚಿದ ಅಮೆರಿಕ ಬಾಹ್ಯಾಕಾಶ ವಿಜ್ಞಾನಿಗಳು

ಇದನ್ನೇ ಬಂಡವಾಳ ಮಾಡಿಕೊಂಡು ಜಗತ್ತಿನ ಶ್ರೀಮಂತ ರಾಷ್ಟ್ರಗಳು ಕ್ರುದ್ರಗ್ರಹಗಳ ಬೇಟೆಗೆ ಇಳಿದಿದ್ದು, ಈ ಸಾಲಿಗೆ ಚೀನಾ ಕೂಡ ಸೇರ್ಪಡೆಯಾಗುತ್ತಿದೆ. ಈ ಮೂಲಕ ಮುಂದಿನ ವರ್ಷದೊಳಗೆ ಬಾಹ್ಯಾಕಾಶದ ಗಣಿ ಸಂಪತ್ತಿನ ಲೂಟಿಗೆ ಚೀನಿ ಗ್ಯಾಂಗ್ ಸಿದ್ಧವಾಗಿ ನಿಂತಿದೆ.

ದಶಕಗಳ ಹಿಂದೆಯೇ ‘ನಾಸಾ’ ಸ್ಕೆಚ್..!

ದಶಕಗಳ ಹಿಂದೆಯೇ ‘ನಾಸಾ’ ಸ್ಕೆಚ್..!

ಈಗ ಚೀನಾ ಮಾಡಲು ಹೊರಟಿರುವ ಕೆಲಸವನ್ನ ಅಮೆರಿಕದ ಸರ್ಕಾರಿ ಬಾಹ್ಯಾಕಾಶ ಸಂಸ್ಥೆ ‘ನಾಸಾ' ಹತ್ತಾರು ವರ್ಷಗಳ ಹಿಂದೆಯೇ ಮಾಡಿತ್ತು. ನಾಸಾ ಪದೇ ಪದೆ ಕ್ಷುದ್ರಗ್ರಹಗಳ ಮೇಲೆ ಮೈನಿಂಗ್ ಮಾಡಲು ಯೋಜನೆ ರೂಪಿಸಿದರೂ ಸಕ್ಸಸ್ ಕಂಡಿಲ್ಲ. ಹೀಗಾಗಿ ಎಲಾನ್ ಮಸ್ಕ್ ಅವರಂತಹ ಖಾಸಗಿ ವ್ಯಕ್ತಿಗಳು ಕೂಡ ಕ್ಷುದ್ರಗ್ರಹ ಬೇಟೆಗೆ ಪ್ರಾಜೆಕ್ಟ್ ಸಿದ್ಧಗೊಳಿಸಿದ್ದಾರೆ. ಈ ಮಧ್ಯೆ ಅಮೆರಿಕದ ಜೊತೆ ಜಿದ್ದಿಗೆ ಬಿದ್ದಿರುವ ಚೀನಾ, ಕ್ಷುದ್ರಗ್ರಹಗಳ ಮೇಲೆ ಗಣಿಗಾರಿಕೆ ಮಾಡಲು ಮುಂದಾಗಿದೆ. ಆದರೆ ಇದರಲ್ಲಿ ಎಷ್ಟರಮಟ್ಟಿಗೆ ಸಕ್ಸಸ್ ಕಾಣುತ್ತೆ ಎಂಬುದನ್ನ ಕಾದು ನೋಡಬೇಕಿದೆ.

ಊಹೆಗೂ ನಿಲುಕದಷ್ಟು ಸಂಪತ್ತು ಸಿಗುತ್ತದೆ..!

ಊಹೆಗೂ ನಿಲುಕದಷ್ಟು ಸಂಪತ್ತು ಸಿಗುತ್ತದೆ..!

ಅಕಸ್ಮಾತ್ ಕ್ಷುದ್ರಗ್ರಹಗಳ ಮೇಲೆ ಮೈನಿಂಗ್ ಸಾಧ್ಯವಾದರೆ ಈವರೆಗೂ ಮನುಕುಲ ಕಾಣದಷ್ಟು ಪ್ರಮಾಣದ ಸಂಪತ್ತು ಭೂಮಿಗೆ ಬರಲಿದೆ. ಭೂಮಿಯ ಅಕ್ಕಪಕ್ಕದ ಕ್ಷುದ್ರಗ್ರಹಗಳ ಮೂಲಕ ಮೈನಿಂಗ್ ಮಾಡಿ, ಭೂಮಿ ಮೇಲೆ ನಡೆಯುವಂತೆ ವ್ಯಾಪಾರ ವಹಿವಾಟು ನಡೆಸಬಹುದು. ಆದರೆ ಈ ಅವಕಾಶ ಖಾಸಗಿ ಕಂಪನಿಗಳಿಗೆ ಸಿಕ್ಕರೆ ವ್ಯತಿರಿಕ್ತ ಪರಿಣಾಮ ಎದುರಾಗುತ್ತದೆ ಎಂಬುದು ಹಿರಿಯ ವಿಜ್ಞಾನಿಗಳ ಆಕ್ಷೇಪ. ಆದರೂ ಜಗತ್ತಿನ ಬಹುಪಾಲು ದೇಶಗಳು ಬಾಹ್ಯಾಕಾಶವನ್ನೂ ಖಾಸಗೀಕರಣ ಮಾಡಲು ಹೊರಟಿವೆ. ಖಾಸಗಿ ಕಂಪನಿಗಳಿಂದ ಮೈನಿಂಗ್ ಮಾಡಿಸಲು ಪ್ರೋತ್ಸಾಹ ನೀಡುತ್ತಿವೆ.

ಶುಕ್ರಗ್ರಹ ನಮಗೆ ಸೇರಿದ್ದು ಅಂತಾ ರಷ್ಯಾ ಕ್ಯಾತೆ..!

ಶುಕ್ರಗ್ರಹಕ್ಕಾಗಿ ದಿಢೀರ್ ಪೈಪೋಟಿ..!

ಶುಕ್ರಗ್ರಹಕ್ಕಾಗಿ ದಿಢೀರ್ ಪೈಪೋಟಿ..!

ಕ್ಷುದ್ರಗ್ರಹಗಳಲ್ಲಿ ಅಪಾರ ಸಂಪತ್ತು ಇದೆ ಎಂಬ ವಿಚಾರ ಗೊತ್ತಾದಂತೆ, ಇತ್ತೀಚೆಗೆ ಶುಕ್ರ ಗ್ರಹದಲ್ಲಿ ಏಲಿಯನ್‌ ಬದುಕಿರುವ ಸಾಧ್ಯತೆಯಿದೆ ಅಂತಾ ವಿಜ್ಞಾನಿಗಳು ಹೇಳಿದ್ದೇ ತಡ ಶುಕ್ರ ಗ್ರಹ (Venus)ಕ್ಕೆ ತೆರಳಲು ಪೈಪೋಟಿ ಶುರುವಾಗಿತ್ತು. ಕೆಲ ದಿನಗಳ ಹಿಂದೆ ‘ನೇಚರ್ ಅಸ್ಟ್ರಾನಮಿ'ಯಲ್ಲಿ ಪ್ರಕಟವಾಗಿದ್ದ ಸಂಶೋಧನಾ ವರದಿಯಲ್ಲಿ ಶುಕ್ರನಲ್ಲಿ ಜೀವಿಗಳು ಬದುಕಿರಬಹುದು ಎನ್ನಲಾಗಿತ್ತು. ಶುಕ್ರನ ವಾತಾವರಣದ ಕಠಿಣ ಆಮ್ಲೀಯ ಮೋಡದಲ್ಲಿ ಫಾಸ್ಫೈನ್ (Phosphine) ಎಂಬ ಜೈವಿಕ ಅನಿಲದ ಕಣ ಕಂಡುಬಂದಿತ್ತು. ಈ ಮೂಲಕ ಭೂಮಿಯಲ್ಲಿರುವ ಫಾಸ್ಫೈನ್ ಗ್ಯಾಸ್‌ನ ಗುಣ ಗಮನಿಸಿದರೆ ಶುಕ್ರನಲ್ಲೂ ಜೀವಿಗಳ ಇರುವಿಕೆಯ ಸುಳಿವು ಸಿಕ್ಕಿತ್ತು.

ಶುಕ್ರಗ್ರಹದಲ್ಲಿ ಬ್ಯಾಕ್ಟೀರಿಯಾ ಬದುಕಿವೆಯಾ..?

ಶುಕ್ರಗ್ರಹದಲ್ಲಿ ಬ್ಯಾಕ್ಟೀರಿಯಾ ಬದುಕಿವೆಯಾ..?

3 ಹ್ರೈಡ್ರೋಜನ್ ಅಣುಗಳ ಜೊತೆ 1 ಫಾಸ್ಫರಸ್ ಅಣು ಸಂಯೋಜನೆಯಾದಾಗ ಈ ಫಾಸ್ಫೈನ್ ಅನಿಲ ಉತ್ಪತ್ತಿಯಾಗುತ್ತದೆ. ಇದು ಮಾನವರಿಗೆ ತುಂಬಾ ವಿಷಕಾರಿ. ಆದರೂ ಆಕ್ಸಿಜೆನ್ ಇಲ್ಲದ ವಾತಾವರಣದಲ್ಲೂ ಬದುಕಬಲ್ಲ ಬ್ಯಾಕ್ಟೀರಿಯಾಗಳಿಂದ ಭೂಮಿಯಲ್ಲಿ ಫಾಸ್ಫೈನ್ ಸೃಷ್ಟಿಯಾಗುತ್ತದೆ. ಹೀಗೆ ಶುಕ್ರ ಗ್ರಹದಲ್ಲಿಯೂ ಜೀವಿಗಳು ಬದುಕಿರಬಹುದು, ಶುಕ್ರನ ಆಸಿಡ್ ಮೋಡಗಳ ಒಳಗೆ ಜೀವಿಗಳು ತೇಲುತ್ತಾ ಬದುಕಿರಬಹುದು ಎಂದು ಅಂದಾಜಿಸಲಾಗಿತ್ತು. ಇದಾದ ಬಳಿಕ ಶುಕ್ರಗ್ರಹ ಇಡೀ ಜಗತ್ತಿನ ಗಮನ ಸೆಳೆಯುತ್ತಿದೆ.

ಶುಕ್ರ ಗ್ರಹದಲ್ಲೂ ಜೀವಿಗಳು, ಭಾರತದಿಂದ ‘ಶುಕ್ರಯಾನ-1'

ಶುಕ್ರ ಗ್ರಹ ಬಿಸಿ ಬಿಸಿ..!

ಶುಕ್ರ ಗ್ರಹ ಬಿಸಿ ಬಿಸಿ..!

ಶುಕ್ರ ಗ್ರಹ ಸೂರ್ಯನಿಗೆ ತೀರಾ ಸಮೀಪದಲ್ಲಿದ್ದು, ಸೌರಮಂಡಲದ ಸಾಲಿನಲ್ಲಿರುವ 2ನೇ ಗ್ರಹವಾಗಿದೆ. ಈ ಗ್ರಹದ ನಂತರ ನಮ್ಮ ಭೂಮಿ ಇದ್ದು, ನಾವು ವಾಸಿಸುವ ಭೂಮಿ 3ನೇ ಗ್ರಹವಾಗಿದೆ. ಹಾಗೆ ನೋಡಿದರೆ ಸೂರ್ಯನಿಗೆ ತುಂಬಾ ಹತ್ತಿರದಲ್ಲಿರುವ ಶುಕ್ರ ಗ್ರಹದಲ್ಲಿ ಭಾರಿ ಉಷ್ಣಾಂಶವಿದೆ. ಶುಕ್ರ ಗ್ರಹದಲ್ಲಿ ಸಾಮಾನ್ಯ ತಾಪಮಾನವೇ 471 ಡಿಗ್ರಿ ಸೆಲ್ಸಿಯಸ್‌ನಷ್ಟು ಇರುತ್ತದೆ. ಏಕೆಂದರೆ ಈ ಗ್ರಹದ ವಾತಾವರಣ ಬಹಳ ದಟ್ಟ ಹಾಗೂ ವಿಷಕಾರಿಯಾಗಿದ್ದು ಸೂರ್ಯನ ಬಿಸಿಲನ್ನು ಹಿಡಿದಿಟ್ಟುಕೊಳ್ಳುತ್ತದೆ. ಆದರೂ ಶುಕ್ರ ಗ್ರಹ ಥೇಟ್ ಭೂಮಿಯಂತ ರಚನೆಯನ್ನೇ ಹೊಂದಿರುವುದು ಭಾರಿ ಕುತೂಹಲ ಕೆರಳಿಸಿದೆ. ಮಂಗಳ ಗ್ರಹವನ್ನು ಬಿಟ್ಟರೆ ನಮ್ಮ ಸೌರಮಂಡದಲ್ಲಿ ಜೀವಿಗಳ ಇರುವಿಕೆ ಸಾಧ್ಯವಿರುವುದು ಶುಕ್ರ ಗ್ರಹದಲ್ಲಿ ಮಾತ್ರ. ಹೀಗೆ ಕ್ಷುದ್ರಗ್ರಹಗಳ ಮೇಲೆ ಸಂಪತ್ತು ಬೇಟೆಯಾಡುವಂತೆ ಶುಕ್ರನಲ್ಲಿ ಜೀವಿಗಳನ್ನು ಹುಡುಕಲು ಸಹ ಪೈಪೋಟಿ ಶುರುವಾಗಿದೆ.

English summary
A Chinese company planning to launch ‘space mining robot’ in November. All set to boost NEO-1, small satellite to 500-kilometre altitude sun-synchronous orbit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X