• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇದೇನಪ್ಪಾ ಹೊಸ ರೋಗ?: ಕೋತಿಗಳ ಕಚ್ಚುವಿಕೆಯಿಂದ 'ಮಂಕಿ ಬಿ ವೈರಸ್'!

|
Google Oneindia Kannada News

ನವದೆಹಲಿ, ಜುಲೈ 19: ಜಗತ್ತಿಗೆ ಕೊರೊನಾವೈರಸ್ ಸೋಂಕು ಹರಡಿಸಿದ ಚೀನಾದಲ್ಲಿ ಹೊಸ ವೈರಸ್ ಪತ್ತೆಯಾಗಿದೆ. ಮಂಕಿ ಬಿ ವೈರಸ್ ರೋಗಕ್ಕೆ ಚೀನಾದಲ್ಲಿ ಮೊದಲ ಪಶುವೈದ್ಯರೊಬ್ಬರು ಪ್ರಾಣ ಬಿಟ್ಟಿದ್ದಾರೆ ಎಂದು ವರದಿಯಾಗಿದೆ.

2021ರ ಮಾರ್ಚ್ ತಿಂಗಳಿನಲ್ಲಿ ಮೊದಲ ಬಾರಿಗೆ ಮಂಕಿ ಬಿ ವೈರಸ್ ಸೋಂಕಿನ ಮೊದಲ ಪ್ರಕರಣ ವರದಿಯಾಗಿದೆ. ಕಳೆದ ವಾರವಷ್ಟೇ ಚೀನಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಈ ಬಗ್ಗೆ ಮಾಹಿತಿ ನೀಡಿದೆ. ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಒಳಗಾದ ಸೋಂಕಿತ ಪಶುವೈದ್ಯ ಮೇ ತಿಂಗಳಿನಲ್ಲಿ ಮೃತಪಟ್ಟಿದ್ದಾನೆ. ವರದಿಗಳ ಪ್ರಕಾರ, ರೋಗಿಯಿಂದ ಸೆರೆಬ್ರೊಸ್ಪೈನಲ್ ದ್ರವ್ಯವನ್ನು ವೈದ್ಯಕೀಯ ವಿಶ್ಲೇಷಣೆಗೆ ಒಳಪಡಿಸಿದಾಗ ಅದು ಆಲ್ಫಾಹೆರ್ಪಿಸ್ ವೈರಸ್ ಸೋಂಕಿನ ಬಗ್ಗೆ ಸೂಚಿಸುತ್ತದೆ.

Explained: ಕುಟುಂಬದಲ್ಲಿ ಒಬ್ಬರಿಗೆ ಕೊರೊನಾ ಅಂಟಿದರೆ ಉಳಿದವರ ಕಥೆ!?Explained: ಕುಟುಂಬದಲ್ಲಿ ಒಬ್ಬರಿಗೆ ಕೊರೊನಾ ಅಂಟಿದರೆ ಉಳಿದವರ ಕಥೆ!?

ಮೃತ ಪಶುವೈದ್ಯನ ದೇಹದ ಮೇಲಿನ ಗುಳ್ಳೆಯ ದ್ರವ್ಯ, ರಕ್ತ, ಮೂಗಿನ ದ್ರವ್ಯ, ಗಂಟಲು ದ್ರವ್ಯ ಮತ್ತು ಪ್ಲಾಸ್ಮಾ ಅನ್ನು ಸಂಗ್ರಹಿಲಾಗಿದ್ದು, ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಈ ಮಾದರಿಯನ್ನು ರಾಷ್ಟ್ರೀಯ ಸೂಕ್ಷ್ಮಾಣು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಸಂಸ್ಥೆಗೆ ಕಳುಹಿಸಿ ಕೊಡಲಾಗಿತ್ತು. ಈ ವೇಳೆ ಈ ರೋಗವನ್ನು ಮಂಕಿ ಬಿ ವೈರಸ್ ಎಂದು ಗುರುತಿಸಲಾಗಿದೆ. ಚೀನಾದಲ್ಲಿ ಇದೀಗ ಸದ್ದು ಮಾಡುತ್ತಿರುವ ಈ ಮಂಕಿ ಬಿ ವೈರಸ್ ಎಂದರೇನು. ಈ ರೋಗದ ಲಕ್ಷಣಗಳೇನು ಹಾಗೂ ಮಂಕಿ ವಿ ವೈರಸ್ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

ಮಂಕಿ ಬಿ ವೈರಸ್ ಬಗ್ಗೆ ನಿಮಗೇನು ಗೊತ್ತು?

ಮಂಕಿ ಬಿ ವೈರಸ್ ಬಗ್ಗೆ ನಿಮಗೇನು ಗೊತ್ತು?

ಮಂಕಿ ಬಿವಿ ಮಕಾಕ್‌ಗಳಿಂದ ಉಂಟಾಗುತ್ತದೆ. ಜಗತ್ತಿನ ಹಳೆಯ ಕೋತಿಗಳ ಕುಲದಿಂದ ಈ ಸೋಂಕು ಹರಡುತ್ತದೆ. ಮಕಾಕ್, ಚಿಂಪಾಂಜಿ ಮತ್ತು ಕ್ಯಾಪುಚಿನ್ ಕೋತಿಗಳಿಗೆ ಸೋಂಕು ಅಂಟಿಕೊಂಡಿದ್ದು, ಮೃತಪಟ್ಟಿವೆ. ಸಾಮಾನ್ಯವಾಗಿ ಬಿ ವೈರಸ್ ಅನ್ನು ಹರ್ಪಿಸ್ ಬಿ, ಮಂಕಿ ಬಿ ವೈರಸ್, ಹರ್ಪಿಸ್ ವೈರಸ್ ಸಿಮಿಯ ಮತ್ತು ಹರ್ಪಿಸ್ ವೈರಸ್ ಬಿ ಎಂದೂ ಕರೆಯಲಾಗುತ್ತದೆ. ಯುನೈಟೆಡ್ ಸ್ಟೇಟ್ಸ್ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ನೀಡಿರುವ ಮಾಹಿತಿ ಪ್ರಕಾರ, ಮಂಕಿ ಬಿ ವೈರಸ್ ಎಂಬ ರೋಗವು ಮನುಷ್ಯರಿಗೆ ಅಂಟಿಕೊಳ್ಳುವುದು ತೀರಾ ವಿರಳ. 1932ರಲ್ಲಿ ಮೊದಲ ಬಾರಿಗೆ ವ್ಯಕ್ತಿಯೊಬ್ಬರಿಗೆ ಈ ಮಂಕಿ ಬಿ ವೈರಸ್ ರೋಗ ಕಾಣಿಸಿಕೊಂಡಿತ್ತು. ಮಂಕಿ ಬಿ ವೈರಸ್ ಅಂಟಿಕೊಂಡ 50 ಜನರಲ್ಲಿ 21 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.

ಪಶುವೈದ್ಯರ ಪ್ರಾಥಮಿಕ ಸಂಪರ್ಕಿತರಿಗಿಲ್ಲ ಮಂಕಿ ಬಿ ವೈರಸ್

ಪಶುವೈದ್ಯರ ಪ್ರಾಥಮಿಕ ಸಂಪರ್ಕಿತರಿಗಿಲ್ಲ ಮಂಕಿ ಬಿ ವೈರಸ್

ಚೀನಾದಲ್ಲಿ ಮಂಕಿ ಬಿ ವೈರಸ್ ರೋಗದಿಂದ ಪಶುವೈದ್ಯ ಪ್ರಾಣ ಬಿಟ್ಟಿದ್ದಾರೆ. ಆದರೆ ವ್ಯಕ್ತಿಯಿಂದ ವ್ಯಕ್ತಿಗೆ ಈ ಸೋಂಕು ಹರಡುತ್ತದೆ ಎಂಬುದಕ್ಕೆ ಯಾವುದೇ ಉದಾಹರಣೆ ಸಿಕ್ಕಿಲ್ಲ. ಪಶುವೈದ್ಯನ ಜೊತೆಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಯಾರೊಬ್ಬರಿಗೂ ರೋಗದ ಲಕ್ಷಣ ಕಂಡು ಬಂದಿಲ್ಲ. 1932ರಿಂದ ಈವರೆಗೂ ಕೋತಿಯಿಂದ ಕಚ್ಚಿಸಿಕೊಂಡ ಹಾಗೂ ಪರಚಿಸಿಗೊಂಡ 50 ಜನರಲ್ಲಿ ಮಾತ್ರ ಈ ಮಂಕಿ ಬಿ ವೈರಸ್ ಪತ್ತೆಯಾಗಿದೆ.

ಸಾಮಾನ್ಯವಾಗಿ ಮಂಕಿ ಬಿ ವೈರಸ್ ಹರಡುವುದು ಹೇಗೆ?

ಸಾಮಾನ್ಯವಾಗಿ ಮಂಕಿ ಬಿ ವೈರಸ್ ಹರಡುವುದು ಹೇಗೆ?

ಮಕಾಕ್‌ಗಳ ದೇಹದಲ್ಲಿ ಇರುವ ಲಾಲಾರಸ, ಮಲ, ಮೂತ್ರ, ಮೆದುಳು ಅಥವಾ ಬೆನ್ನುಹುರಿ ಅಂಗಾಂಶಗಳು ಹಾಗೂ ಮೇಲ್ಮೈ ಭಾಗಗಳಲ್ಲಿ ಈ ವೈರಸ್ ಇರುತ್ತದೆ. ಸಾಮಾನ್ಯ ವ್ಯಕ್ತಿಗಳಿಗೆ ಈ ಮಂಕಿ ಬಿ ವೈರಸ್ ರೋಗವು ಅಂಟಿಕೊಳ್ಳುವುದು ತೀರಾ ವಿರಳವಾಗಿರುತ್ತದೆ. ಈ ರೋಗವು ವೈದ್ಯಕೀಯ ಪ್ರಯೋಗಾಲಯಗಳಲ್ಲಿ ಕಾರ್ಯ ನಿರ್ವಹಿಸುವವರು, ಪಶುವೈದ್ಯರು ಸೇರಿದಂತೆ ಕೋತಿಗಳಿಗೆ ಚಿಕಿತ್ಸೆ ನೀಡುವ ಕಾರ್ಯದಲ್ಲಿ ತೊಡಗಿರುವವರಲ್ಲಿ ಈ ಸೋಂಕು ಹೆಚ್ಚಾಗಿ ಹರಡುವ ಸಾಧ್ಯತೆ ಇರುತ್ತದೆ.

ಮಂಕಿ ಬಿ ವೈರಸ್ ರೋಗದ ಲಕ್ಷಣಗಳು

ಮಂಕಿ ಬಿ ವೈರಸ್ ರೋಗದ ಲಕ್ಷಣಗಳು

ಕೊರೊನಾವೈರಸ್ ರೋಗದ ರೀತಿಯಲ್ಲೇ ಮಂಕಿ ಬಿ ವೈರಸ್ ರೋಗವನ್ನು ಗುರುತಿಸುವುದಕ್ಕೂ ಕೆಲವು ಲಕ್ಷಣಗಳಿವೆ. ಒಂದು ದಿನದಿಂದ ಮೂರು ವಾರಗಳವರೆಗೂ ಈ ರೋಗದ ಲಕ್ಷಣಗಳು ಗೋಚರಿಸುತ್ತವೆ ಎಂದು ತಿಳಿದು ಬಂದಿದೆ. ಆ ರೋಗದ ಲಕ್ಷಣಗಳನ್ನು ಮುಂದೆ ಪಟ್ಟಿ ಮಾಡಲಾಗಿದೆ.

* ಜ್ವರ ಮತ್ತು ಶೀತ

* ಸ್ನಾಯು ನೋವು ಆಯಾಸ,

* ತಲೆನೋವು

* ವೈರಸ್ ಸೋಂಕಿತ ವ್ಯಕ್ತಿಯು ಗಾಯದಲ್ಲಿ ಸಣ್ಣ ಗುಳ್ಳೆಗಳು

* ಉಸಿರಾಟದ ತೊಂದರೆ

* ವಾಕರಿಕೆ ಮತ್ತು ವಾಂತಿ

* ಹೊಟ್ಟೆ ನೋವು

ಮಂಕಿ ಬಿ ವೈರಸ್ ಸೋಂಕಿತರ ಆರೋಗ್ಯದ ಮೇಲೆ ಪರಿಣಾಮ?

ಮಂಕಿ ಬಿ ವೈರಸ್ ಸೋಂಕಿತರ ಆರೋಗ್ಯದ ಮೇಲೆ ಪರಿಣಾಮ?

ಒಂದು ಬಾರಿ ಮಂಕಿ ಬಿ ವೈರಸ್ ಸೋಂಕು ಅಂಟಿಕೊಂಡ ವ್ಯಕ್ತಿಯಲ್ಲಿ ಹಲವು ರೀತಿ ಆರೋಗ್ಯ ಸಮಸ್ಯೆಗಳು ಗೋಚರಿಸುತ್ತವೆ. ಅದೇ ರೀತಿ ಸೋಂಕಿನಲ್ಲಿ ಮೆದುಳು ಮತ್ತು ಬೆನ್ನು ಹುರಿ ಊತಕ್ಕೆ ಕಾರಣವಾಗುತ್ತದೆ. ಸ್ನಾಯುಗಳ ಸಮನ್ವಯತೆ ಕೊರತೆ, ನರಮಂಡಲ ಮತ್ತು ಮೆದುಳಿಗೆ ತೀವ್ರ ಹಾನಿ ಉಂಟಾಗುವುದರಿಂದ ಸೋಂಕಿನ ಸಾವು ಸಂಭವಿಸುತ್ತದೆ ಎಂದು ರೋಗ ನಿಯಂತ್ರಣ ಸಂಸ್ಥೆ ತಿಳಿಸಿದೆ.

ಮಂಕಿ ಬಿ ವೈರಸ್ ಸೋಂಕಿತರ ಚಿಕಿತ್ಸೆ ನೀಡುವುದು ಹೇಗೆ?

ಮಂಕಿ ಬಿ ವೈರಸ್ ಸೋಂಕಿತರ ಚಿಕಿತ್ಸೆ ನೀಡುವುದು ಹೇಗೆ?

ಜಗತ್ತಿನಲ್ಲಿ ಸದ್ಯಕ್ಕೆ ಮಂಕಿ ಬಿ ವೈರಸ್ ರೋಗಕ್ಕೆ ಯಾವುದೇ ಲಸಿಕೆಗಳು ಮತ್ತು ಔಷಧಿಗಳಿಲ್ಲ. ಪ್ರತಿಕಾಯ ವ್ಯವಸ್ಥೆಯನ್ನು ಹೆಚ್ಚಿಸುವ ಔಷಧಿಗಳಿಂದಲೇ ಸೋಂಕಿತರನ್ನು ಸಾವಿನಿಂದ ರಕ್ಷಿಸಬಹುದು. ಕೋತಿಗಳಿಂದ ಕಚ್ಚಿಸಿಕೊಂಡ ಸಂದರ್ಭದಲ್ಲಿ ಯಾವ ರೀತಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂಬುದಕ್ಕೆ ವೈದ್ಯರು ಕೆಲವು ಸಲಹೆಗಳನ್ನು ನೀಡಿದ್ದಾರೆ.

* ಸೋಪ್, ಡಿಟರ್ಜೆಂಟ್ ಅಥವಾ ಅಯೋಡಿನ್ ನೊಂದಿಗೆ 15 ನಿಮಿಷಗಳ ಕಾಲ ಗಾಯವನ್ನು ನಿಧಾನವಾಗಿ ತೊಳೆಯಿರಿ

* 15 ರಿಂದ 20 ನಿಮಿಷಗಳ ಕಾಲ ಗಾಯ ಅಥವಾ ಗಾಯದ ಸುತ್ತಲಿನ ಭಾಗದ ಮೇಲೆ ನೀರನ್ನು ಹಾಕಿರಿ

* ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಿರಿ

English summary
China Reports First Human Death From Monkey B Virus; Know What It Is, Symptoms And Treatment In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X