ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಭಿವೃದ್ಧಿಯಲ್ಲಿ ಚೀನಾ ಮೀರಿಸುವವರೇ ಇಲ್ಲ..! ‘ಜಿಡಿಪಿ’ ವಿಚಾರದಲ್ಲಿ ಹೊಸ ದಾಖಲೆ..!

|
Google Oneindia Kannada News

ಚೀನಾ ಬೆಳೆದಿದೆ, ಸಾಕಷ್ಟು ಅಭಿವೃದ್ಧಿ ಹೊಂದಿದೆ ಹಾಗೂ ಅಭಿವೃದ್ಧಿ ಹೊಂದುತ್ತಲೇ ಇದೆ. ಎಷ್ಟರಮಟ್ಟಿಗೆ ಎಂದರೆ ಇದೀಗ ನಂಬರ್ 1 ರಾಷ್ಟ್ರವಾಗಿರುವ ಅಮೆರಿಕ ಇನ್ನೇನು ಕೆಲವೇ ದಿನಗಳಲ್ಲಿ ನಂಬರ್ 2 ಆದರೂ ಅಚ್ಚರಿ ಬೇಕಿಲ್ಲ. ಅಷ್ಟರಮಟ್ಟಿಗೆ ಚೀನಾ ಅಭಿವೃದ್ಧಿ ಹೊಂದುತ್ತಿದೆ. 2021ನೇ ಸಾಲಿನ ಮೊದಲ ತ್ರೈಮಾಸಿಕ ವರದಿ ಬಂದಿದ್ದು, ಚೀನಾ ಜಿಡಿಪಿ ಶೇ. 18.3ರಷ್ಟು ಜಿಗಿತ ಕಂಡಿದೆ.

ಈ ಮೂಲಕ 1992ರ ಬಳಿಕ ಚೀನಾದ ಆರ್ಥಿಕತೆ ಮತ್ತೊಂದು ದಾಖಲೆ ಬರೆದಿದೆ. ಕೇವಲ 29 ವರ್ಷಗಳ ಅವಧಿಯಲ್ಲಿ ಚೀನಾ ಜಗತ್ತಿನ ನಂಬರ್ 1 ಅಮೆರಿಕಾವನ್ನೂ ಮೀರಿ ಬೆಳೆಯುತ್ತಿದೆ. ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದ 'ಫೋರ್ಬ್ಸ್' ವರದಿಯಲ್ಲೂ ಚೀನಾ ಶ್ರೀಮಂತಿಕೆ ಬಯಲಾಗಿತ್ತು.

ಕೊರೊನಾ ಕಂಟಕ, ಕಂಡವರ ಚಿತೆ ಮೇಲೆ ಚೀನಾ ಅಭಿವೃದ್ಧಿಕೊರೊನಾ ಕಂಟಕ, ಕಂಡವರ ಚಿತೆ ಮೇಲೆ ಚೀನಾ ಅಭಿವೃದ್ಧಿ

ವಿಶ್ವದ ಅತಿಹೆಚ್ಚು ಬಿಲಿಯನೆರ್ಸ್ ಇರುವ ಪಟ್ಟಿಯಲ್ಲಿ ಚೀನಾ ರಾಜಧಾನಿ ಬೀಜಿಂಗ್ ನಂ. 1 ಸ್ಥಾನ ಅಲಂಕರಿಸಿತ್ತು. ಅಲ್ಲದೆ ಚೀನಾದ ಹಲವು ನಗರಗಳು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದವು. ಇದೀಗ ಜಿಡಿಪಿ ವಿಚಾರದಲ್ಲೂ ಚೀನಾ ಬಹುದೊಡ್ಡ ಸಾಧನೆ ಮಾಡಿದೆ.

2020ರಲ್ಲಿ ಚೀನಾ ಜಿಡಿಪಿ ಬೆಳವಣಿಗೆ 4 ದಶಕಗಳಲ್ಲೇ ಅತ್ಯಂತ ಕಡಿಮೆ2020ರಲ್ಲಿ ಚೀನಾ ಜಿಡಿಪಿ ಬೆಳವಣಿಗೆ 4 ದಶಕಗಳಲ್ಲೇ ಅತ್ಯಂತ ಕಡಿಮೆ

ಅಲ್ಲಾಡಿ ಹೋಗಿದೆ ಅಮೆರಿಕ

ಅಲ್ಲಾಡಿ ಹೋಗಿದೆ ಅಮೆರಿಕ

ಕೊರೊನಾ ಕಾಟಕ್ಕೆ ಸಿಲುಕಿರುವ ಅಮೆರಿಕ ಅಲ್ಲಾಡಿ ಹೋಗಿದೆ. ಈವರೆಗೂ ಅಮೆರಿಕ ಕಂಡು, ಕೇಳರಿಯದ ಆರ್ಥಿಕ ಮುಗ್ಗಟ್ಟು ಎದುರಾಗಿದೆ. ಈ ಹೊತ್ತಲ್ಲೇ ಅಮೆರಿಕದ ಶತ್ರು ಚೀನಾ ಅಭಿವೃದ್ಧಿ ಹೊಂದುತ್ತಿರುವುದು ಸಹಜವಾಗಿ ಅಮೆರಿಕ ನಾಯಕರ ಕಣ್ಣು ಕೆಂಪಾಗಿಸಿದೆ. ಕೊರೊನಾ ವಕ್ಕರಿಸಿದ ಆರಂಭದಲ್ಲಿ ಚೀನಾ ಆರ್ಥಿಕ ಸ್ಥಿತಿ ತೀರಾ ಕುಸಿತ ಕಂಡಿತ್ತು. ಆದರೆ ಕೊರೊನಾ ಹೆಡೆಮುರಿ ಕಟ್ಟುವಲ್ಲಿ ಅಲ್ಲಿನ ಸರ್ಕಾರ ಯಶಸ್ವಿಯಾಗಿತ್ತು. ಬಳಿಕ ಚೀನಾ ಆರ್ಥಿಕ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. 2021ರ ಮೊದಲ ತ್ರೈಮಾಸಿಕದಲ್ಲೇ ಚೀನಾ ಜಿಡಿಪಿ ಶುಭಾರಂಭ ಮಾಡಿದೆ.

ಚೀನಾದಲ್ಲಿ ಬಡವರೇ ಇಲ್ಲ..!

ಚೀನಾದಲ್ಲಿ ಬಡವರೇ ಇಲ್ಲ..!

ಒಂದು ಕಾಲದಲ್ಲಿ ತೀವ್ರ ಬಡತನ ತುಂಬಿದ ರಾಷ್ಟ್ರವಾಗಿದ್ದ ಚೀನಾದಲ್ಲಿ ಈಗ ಬಡವರೇ ಇಲ್ಲ. ಪವರ್ ಫುಲ್ ರಾಷ್ಟ್ರಗಳೇ ಬಡತನದ ಸಂಕೋಲೆಯಲ್ಲಿ ನರಳುತ್ತಿರುವ ಸಂದರ್ಭದಲ್ಲಿ ಚೀನಾ ಮಾತ್ರ ಜಗತ್ತು ಮೆಚ್ಚುವ ಕೆಲಸ ಮಾಡಿದೆ. ಚೀನಾ ತನ್ನ ದೇಶದಲ್ಲಿದ್ದ 77 ಕೋಟಿ ಬಡವರನ್ನು ವಿಷ ವರ್ತುಲದಿಂದ ಹೊರತಂದಿದೆ. ಫೆಬ್ರವರಿ ತಿಂಗಳಲ್ಲಿ ಈ ವಿಚಾರ ಹಂಚಿಕೊಂಡಿದ್ದ ಚೀನಾ, ಸತತ 40 ವರ್ಷಗಳ ಪರಿಶ್ರಮದ ನಂತರ ಗುರಿ ತಲುಪುವಲ್ಲಿ ಯಶಸ್ವಿಯಾಗಿತ್ತು. ಇದರ ಜೊತೆಗೆ ಶ್ರೀಮಂತರ ಪಟ್ಟಿಯಲ್ಲೂ ಚೀನಾ ನಂಬರ್ 1 ಸ್ಥಾನ ಅಲಂಕರಿಸಿದೆ.

ಸ್ವದೇಶಿ ವಸ್ತುಗಳಿಗೆ ಪ್ರಾಮುಖ್ಯತೆ..!

ಸ್ವದೇಶಿ ವಸ್ತುಗಳಿಗೆ ಪ್ರಾಮುಖ್ಯತೆ..!

ಸಾಮಾನ್ಯವಾಗಿ ಜನಸಂಖ್ಯೆಯೇ ದೊಡ್ಡ ಶಾಪ ಎಂದು ಭಾವಿಸುವ ರೂಢಿ ಈ ಜಗತ್ತಿನಲ್ಲಿದೆ. ಆದರೆ ತನ್ನಲ್ಲಿದ್ದ ಅಗಾಧ ಮಾನವ ಸಂಪನ್ಮೂಲವನ್ನೇ ದೊಡ್ಡ ಅಸ್ತ್ರ ಮಾಡಿಕೊಂಡ ಚೀನಾ ನಾಯಕರು, ಅಭಿವೃದ್ಧಿಯ ಪಥದಲ್ಲಿ ಮಹತ್ವದ ಯಶಸ್ಸು ಸಾಧಿಸಿದ್ದಾರೆ. ಎಷ್ಟೆಲ್ಲಾ ಸವಾಲುಗಳು ಇದ್ದರೂ ಬಡವರಿಗೆ ಬೇಕಾದ ಮೂಲಸೌಕರ್ಯ, ಬದಕಲು ಅಗತ್ಯವಿರುವ ವಸ್ತುಗಳ ಜೊತೆಗೆ, ದೇಶಕ್ಕೆ ಕೊಡುಗೆ ನೀಡಬಲ್ಲ ಸಾಮರ್ಥ್ಯವನ್ನೂ ಚೀನಾ ಸರ್ಕಾರ ತನ್ನ ಪ್ರಜೆಗಳಿಗೆ ಕಲಿಸಿಕೊಟ್ಟಿದೆ. ಈ ಎಲ್ಲಾ ಹಂತಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಮಾತ್ರ ಚೀನಾ ಸರ್ಕಾರದ ಸ್ವದೇಶಿ ಮಂತ್ರ. ತೊಡುವ ಬಟ್ಟೆಯಿಂದ ಹಿಡಿದು, ಶೋಕಿ ಮಾಡುವ ಕಾರುಗಳು ಕೂಡ ಅಲ್ಲಿಯೇ ತಯಾರಾದವು. ಇದನ್ನು ಚೀನಿಯರು ಪಾಲಿಸದೇ ಇದ್ದಿದ್ದರೆ ಇಂತಹ ಸಾಧನೆ ಅಸಾಧ್ಯವಾಗುತ್ತಿತ್ತು.

ಬಡವರಿಗೆ ಐಷಾರಾಮಿ ಫ್ಲ್ಯಾಟ್‌ಗಳು..!

ಬಡವರಿಗೆ ಐಷಾರಾಮಿ ಫ್ಲ್ಯಾಟ್‌ಗಳು..!

ಚೀನಾದಲ್ಲಿ ಬಡವರಿಗೆ ವಸತಿ ಒದಗಿಸುವ ಯೋಜನೆ ಜಾರಿಗೆ ಬಂದಾಗ, ಜಗತ್ತಿನ ಇತರ ರಾಷ್ಟ್ರಗಳಂತೆ ಇಲ್ಲೂ ಮಾಮೂಲಿ ಸೂರು ಸಿಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಆ ಊಹೆ ಸುಳ್ಳಾಗಿತ್ತು. ಈಗಲೂ ಬಹುತೇಕ ಕೊಳೆಗೇರಿ ಜನರಿಗೆ ಐಷಾರಾಮಿ ಫ್ಲ್ಯಾಟ್‌ಗಳನ್ನ ಒದಗಿಸಿದೆ ಚೀನಿ ಸರ್ಕಾರ. ಇದಕ್ಕಾಗಿ ಸಾವಿರಾರು ಕೋಟಿ ವೆಚ್ಚ ಮಾಡಿ, ಹತ್ತಾರು ವರ್ಷಗಳ ಪರಿಶ್ರಮವನ್ನೂ ಹಾಕಿದೆ. ಇದರ ಪರಿಣಾಮ ಬಡ ಜನರಿಗೂ ಅತ್ಯುತ್ತಮ ಸೇವೆ ಸಿಗುವಂತಾಗಿದೆ. ಈ ಸಾಧನೆ ಕಂಡಿದ್ದ ಬಹುತೇಕ ಶ್ರೀಮಂತ ರಾಷ್ಟ್ರಗಳು ಶಾಕ್‌ ಆಗಿದ್ದುಂಟು.

ವಾಯುಮಾಲಿನ್ಯ ಕೂಡ ಮಾಯ..!

ವಾಯುಮಾಲಿನ್ಯ ಕೂಡ ಮಾಯ..!

10-15 ವರ್ಷದ ಹಿಂದೆ ಚೀನಾ ಎಂದರೆ ಮಾಲಿನ್ಯ, ಮಾಲಿನ್ಯ ಅಂದ್ರೆ ಚೀನಾ ಎಂದು ಜಗತ್ತು ಜರಿಯುತ್ತಿತ್ತು. ಆದರೆ ಈಗ ಇದೇ ಚೀನಾ ಪ್ರಕೃತಿ ಸೊಬಗಿನ ತವರಾಗಿದೆ. ಅದರಲ್ಲೂ ಚೀನಾ ರಾಜಧಾನಿ ಬೀಜಿಂಗ್ ಎಷ್ಟು ಸುಧಾರಿಸಿದೆ ಎಂದರೆ, ಕೆಲವೇ ವರ್ಷಗಳಲ್ಲಿ ಸಂಪೂರ್ಣ ವಾಯು ಮಾಲಿನ್ಯವನ್ನು ಸರ್ಕಾರ ಕಂಟ್ರೋಲ್‌ಗೆ ತಂದಿದೆ. ಮಾಲಿನ್ಯ ನಿಯಂತ್ರಣದ ಹಿಂದೆ ಹಲವು ಕಠಿಣ ಕ್ರಮಗಳು ಕೂಡ ಪ್ರಭಾವ ಬೀರಿವೆ. ಅದರಲ್ಲೂ ಕಾರ್ಬನ್ ಮತ್ತು ಸಿಎಫ್‌ಸಿ ಅನಿಲ ಹೊರಸೂಸುವ ಯಂತ್ರ, ಮತ್ತಿತರ ವಸ್ತುಗಳಿಗೆ ನಿಷೇಧ ಹೇರಿದ್ದು ಫಲ ನೀಡಿದೆ. ಇನ್ನು ಕೈಗಾರಿಕೆಗಳಿಗೆ ನೀಡಿದ ಖಡಕ್ ವಾರ್ನಿಂಗ್ ಕೂಡ ಚೀನಾದ ಮಾಲಿನ್ಯ ನಿಯಂತ್ರಿಸಿದೆ.

ಯುರೋಪ್ ರಾಷ್ಟ್ರಗಳು ಅಲ್ಲಾಡಿ ಹೋಗಿವೆ..!

ಯುರೋಪ್ ರಾಷ್ಟ್ರಗಳು ಅಲ್ಲಾಡಿ ಹೋಗಿವೆ..!

ಸಾಮಾನ್ಯವಾಗಿ ಜಗತ್ತಿನ ಶ್ರೀಮಂತ ರಾಷ್ಟ್ರಗಳು ಎಂಬ ಮಾತು ಬಂದಾಗ ಬೊಟ್ಟು ಮಾಡುವುದು ಪಾಶ್ಚಿಮಾತ್ಯ ದೇಶಗಳ ಕಡೆಗೆ. ಅದರಲ್ಲೂ ಯುರೋಪ್ ದೇಶಗಳು ಜಗತ್ತನ್ನು ಸುಮಾರು ಅರ್ಧ ಸಾವಿರ ವರ್ಷಗಳ ಕಾಲ ಆಳಿವೆ. ಆದರೆ ಸದ್ಯ ಯುರೋಪ್ ದೇಶಗಳ ಸ್ಥಿತಿ ಕಂಡರೆ ಆಶ್ಚರ್ಯ ಆಗಬಹುದು. ಅಲ್ಲಿ ಎದುರಾದ ಆರ್ಥಿಕ ಸಮಸ್ಯೆ ಬಡತನ ಹೆಚ್ಚುವಂತೆ ಮಾಡಿದೆ. ಯುರೋಪ್‌ನ ಬಹುತೇಕ ದೇಶಗಳಲ್ಲಿ ಲಕ್ಷಾಂತರ ಜನರು ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಇದೆ. ಅದರಲ್ಲೂ ಸೆರ್ಬಿಯಾ, ಉಕ್ರೇನ್, ರೊಮೇನಿಯಾ ಸೇರಿದಂತೆ ಹತ್ತಾರು ದೇಶಗಳು ಕಡುಬಡ ದೇಶಗಳಾಗಿ ಬದುಕುತ್ತಿವೆ.

ಯುರೋಪ್‌ಗೂ ಚೀನಿಯರಿಂದ ಹೆಲ್ಪ್..!

ಯುರೋಪ್‌ಗೂ ಚೀನಿಯರಿಂದ ಹೆಲ್ಪ್..!

ಚೀನಾ ಎಷ್ಟರಮಟ್ಟಿಗೆ ಜಾಗತಿಕವಾಗಿ ಹಿಡಿತ ಸಾಧಿಸಿದೆ ಎಂದರೆ ಯುರೋಪ್ ದೇಶಗಳು ಚೀನಾ ಮೇಲೆಯೇ ಅವಲಂಬಿತವಾಗಿವೆ. ಯುರೋಪ್‌ನ ಹಲವು ಬಡ ರಾಷ್ಟ್ರಗಳಲ್ಲಿ ಚೀನಾ ಸರ್ಕಾರ ಹಾಗೂ ಚೀನಾ ಮೂಲದ ಕಂಪನಿಗಳು ಹೂಡುವ ಬಂಡವಾಳವೇ ಬಹುಮುಖ್ಯ ಎನಿಸಿದೆ. ಇದೇ ಕಾರಣಕ್ಕೆ ಯುರೋಪ್ ಒಕ್ಕೂಟದಲ್ಲಿ ಚೀನಾ ಪರ ಹಾಗೂ ವಿರುದ್ಧದ ಧ್ವನಿ ಮೊಳಗುತ್ತಿರುತ್ತದೆ. ಜರ್ಮನಿ ಮತ್ತು ಫ್ರಾನ್ಸ್ ಸೇರಿದಂತೆ ಈ ಮೊದಲು ಯುರೋಪ್ ಒಕ್ಕೂಟದ ಭಾಗವಾಗಿದ್ದ ಬ್ರಿಟನ್, ಚೀನಾ ಬಗ್ಗೆ ಅಷ್ಟಾಗಿ ಒಲವು ಬೆಳೆಸಿಕೊಂಡಿರಲಿಲ್ಲ. ಆದರೆ ಇದೇ ಒಕ್ಕೂಟದ ಬಡ ರಾಷ್ಟ್ರಗಳು, ತಮ್ಮ ಮೂಲ ಸೌಕರ್ಯದಿಂದ ಹಿಡಿದು ಕೈಗಾರಿಕೆಗಳ ಅಭಿವೃದ್ಧಿವರೆಗೂ ಚೀನಾದ ಬೆನ್ನು ಬಿದ್ದಿವೆ ಎಂದರೆ ಲೆಕ್ಕ ಹಾಕಿ ಡ್ರ್ಯಾಗನ್ ರಾಷ್ಟ್ರ ಎಷ್ಟರಮಟ್ಟಿಗೆ ಬೆಳೆದಿದೆ ಎಂದು.

ಆಫ್ರಿಕಾ ರಾಷ್ಟ್ರಗಳಲ್ಲೂ ಹಪಾಹಪಿ..!

ಆಫ್ರಿಕಾ ರಾಷ್ಟ್ರಗಳಲ್ಲೂ ಹಪಾಹಪಿ..!

ಮಾನವ ಹುಟ್ಟಿದ್ದೇ ಆಫ್ರಿಕಾ ಖಂಡದಲ್ಲಿ ಎಂಬುದು ವಿಜ್ಞಾನಿಗಳ ವಾದ. ಆದರೆ ಮಾನವನ ಜನ್ಮಸ್ಥಳವೇ ಅತೀ ಹೆಚ್ಚು ಬಡವರಿಂದ ಕೂಡಿದೆ. ಆಫ್ರಿಕಾ ಖಂಡದ ಬಹುತೇಕ ದೇಶಗಳು ಬಡತನದ ಬೇಗೆಯಲ್ಲೇ ನರಳುತ್ತಿವೆ. ಇಂತಹ ರಾಷ್ಟ್ರಗಳಿಗೆ ಚೀನಾ ನೆರವಾಗುತ್ತಿದೆ. ಇಲ್ಲಿ ರಸ್ತೆಗಳ ನಿರ್ಮಾಣ ರೈಲು ಹಳಿ, ಬುಲೆಟ್‌ ರೈಲು ಹೀಗೆ ನಾನಾ ಯೋಜನೆಗಳಲ್ಲಿ ಚೀನಾ ಸಕ್ರಿಯ. ಅದರಲ್ಲೂ ನೈಸರ್ಗಿಕ ಸಂಪನ್ಮೂಲ ಹೆಚ್ಚಾಗಿರುವ ಭೂಮಧ್ಯೆ ರೇಖೆ ಆಸುಪಾಸಿನ ರಾಷ್ಟ್ರಗಳಲ್ಲಿ ಚೀನಾ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ. ಇಲ್ಲಿ ಕೂಡ ಅಮೆಜಾನ್‌ ರೀತಿ ಭಾರಿ ಪ್ರಮಾಣದ ಅರಣ್ಯ ಹಬ್ಬಿಕೊಂಡಿದ್ದು, ಟಿಂಬರ್ ಸೇರಿದಂತೆ ಹಲವು ಕೈಗಾರಿಕೆ ಸ್ಥಾಪನೆಗೆ ಚೀನಾ ಸರ್ಕಾರ ಆಫ್ರಿಕಾದ ಬಡ ರಾಷ್ಟ್ರಗಳಿಗೆ ನೆರವಾಗುತ್ತಿದೆ.

English summary
China GDP records 18.3% of growth in first quarter of 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X