ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದ ಬಹುದೊಡ್ಡ ಸಾಧನೆ! ಬಾಹ್ಯಾಕಾಶ ನಿಲ್ದಾಣಕ್ಕೆ ‘ಎಂಟರ್ ದಿ ಡ್ರ್ಯಾಗನ್’

|
Google Oneindia Kannada News

ಚೀನಾ ಎಲ್ಲಾ ಕ್ಷೇತ್ರಗಳಲ್ಲೂ ಪ್ರಬಲವಾಗಿ ಬೆಳೆಯುತ್ತಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಚೀನಾ ಕಣ್ಣು ಬಾಹ್ಯಾಕಾಶ ಕ್ಷೇತ್ರದ ಮೇಲೆ ಬಿದ್ದಿದೆ. ಹೀಗಾಗಿಯೇ ಪದೇ ಪದೆ ಬಾಹ್ಯಾಕಾಶ ಸಂಬಂಧಿ ಯೋಜನೆಗಳ ಮೇಲೆ ಭಾರಿ ಹೂಡಿಕೆ ಮಾಡುತ್ತಿದೆ ಚೀನಾ. ಹೀಗೆ ಬಾಹ್ಯಾಕಾಶ ನಿಲ್ದಾಣದ ನಿರ್ಮಾಣಕ್ಕೆ ಹಲವು ವರ್ಷ ಪರಿಶ್ರಮ ಹಾಕಿ ಯಶಸ್ಸು ಕಂಡಿದೆ 'ಡ್ರ್ಯಾಗನ್'.

ಬಾಹ್ಯಾಕಾಶ ಕ್ಷೇತ್ರದಲ್ಲೂ ಸಂಚಲನ ಸೃಷ್ಟಿಸಲು ಜೂನ್‌ 17ರಂದು ಚೀನಾ ಮೂವರು ಗಗನಯಾತ್ರಿಗಳನ್ನ ಬಾಹ್ಯಾಕಾಶಕ್ಕೆ ಕಳುಹಿಸಿತ್ತು. ಇದೀಗ ಗಗನಯಾತ್ರಿಗಳು ಸೇಫ್ ಆಗಿ ಚೀನಾ ಬಾಹ್ಯಾಕಾಶ ನಿಲ್ದಾಣ ತಲುಪಿದ್ದಾರೆ. ಭೂಮಿ ಕಕ್ಷೆಯಲ್ಲಿ, ಅಂದ್ರೆ ನೆಲದಿಂದ ಸುಮಾರು 380 ಕಿಲೋ ಮೀಟರ್ ದೂರದಲ್ಲಿ ಭೂಮಿ ಸುತ್ತಲೂ ರೌಂಡ್ ಹಾಕುತ್ತಿರುವ ಸ್ಪೇಸ್ ಸ್ಟೇಷನ್ ತಲುಪಿದೆ ಚೀನಾದ ನೌಕೆ.

ಅಂದ ಹಾಗೆ ಅಮೆರಿಕದ ನಾಸಾ ಸೇರಿದಂತೆ ಇತರ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಸೇರಿ ಸ್ಥಾಪಿಸಿರುವ ನಿಲ್ದಾಣಕ್ಕೆ ಬದಲಾಗಿ ಚೀನಾ ಈ ಯೋಜನೆ ಕೈಗೊಂಡಿತ್ತು. ಚೀನಾ ಯೋಜನೆ ಇದೀಗ ಸಕ್ಸಸ್ ಆಗಿದೆ. ಗಗನಯಾತ್ರಿ ನಿಯೆ ಹೈಶೆಂಗ್, ಲಿಯು ಬೊಮಿಂಗ್ ಹಾಗೂ ಟ್ಯಾಂಗ್ ಹಾಂಗ್ಬೊ ಅವರು ಯಶಸ್ವಿಯಾಗಿ ಬಾಹ್ಯಾಕಾಶ ನಿಲ್ದಾಣ ತಲುಪಿದ್ದಾರೆ.

ಇನ್ನೂ ಸಾಧಿಸುವುದು ಬಾಕಿ ಇದೆ..!

ಇನ್ನೂ ಸಾಧಿಸುವುದು ಬಾಕಿ ಇದೆ..!

ಚೀನಾ ಯಶಸ್ವಿಯಾಗಿ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸಿದ್ದರೂ, ಅದರ ನಿರ್ಮಾಣ ಕಾರ್ಯ ಇನ್ನೂ ಸಾಕಷ್ಟು ಸಮಯ ತೆಗೆದುಕೊಳ್ಳಲಿದೆ. ಚೀನಾದ 'ಟಿಯಾಂಗಾಂಗ್‌' ಬಾಹ್ಯಾಕಾಶ ನಿಲ್ದಾಣಕ್ಕೆ ಲ್ಯಾಬ್, ವಾಸಯೋಗ್ಯ ಕೋಣೆ ಸೇರಿದಂತೆ ಅಗತ್ಯ ವಸ್ತುಗಳ ವಿಭಾಗಗಳನ್ನ ಜೋಡಿಸಬೇಕಿದೆ. ಇದೀಗ ಇದರ ಮೊದಲ ಭಾಗದಲ್ಲಿ ಮಾತ್ರ ಚೀನಾ ಯಶಸ್ಸು ಕಂಡಿದ್ದು, ಮುಂದೆ ಇನ್ನೂ ದೊಡ್ಡ ಸವಾಲುಗಳನ್ನ ಎದುರಿಸಬೇಕಿದೆ. ಆದರೆ ತನ್ನ ಸಾಮರ್ಥ್ಯದಿಂದ ಈ ಸವಾಲುಗಳನ್ನ ಗೆಲ್ಲುವ ವಿಶ್ವಾಸ ಚೀನಾ ವಿಜ್ಞಾನಿಗಳಿಗೆ ಇದೆ. ಬಾಹ್ಯಾಕಾಶ ನಿಲ್ದಾಣಕ್ಕೆ ಮತ್ತಷ್ಟು ಸಾಮರ್ಥ್ಯ ತುಂಬಲು ಚೀನಾ ವಿಜ್ಞಾನಿಗಳು ಕಣ್ಣಿಗೆ ಎಣ್ಣೆ ಬಿಟ್ಕೊಂಡು ಕೆಲಸ ಮಾಡ್ತಿದ್ದಾರೆ.

100 ವರ್ಷಗಳ ಸಂಭ್ರಮ..!

100 ವರ್ಷಗಳ ಸಂಭ್ರಮ..!

ಚೀನಾ ಈ ಯೋಜನೆಗೆ ಮೊದಲು ಕೈಹಾಕಿದಾಗ ಸಹಜವಾಗಿ ಹಲವು ಪ್ರಶ್ನೆಗಳು ಕೇಳಿಬಂದಿದ್ದವು. ಈ ಪೈಕಿ ಬಹುತೇಕರು, ಈಗಾಗಲೇ ಒಂದು ಬಾಹ್ಯಾಕಾಶ ನಿಲ್ದಾಣ ಇದೆ. ಮತ್ತೊಂದು ಏಕೆ ಬೇಕು? ಎಂದುಬಿಟ್ಟಿದ್ದರು. ಆದರೆ ಚೀನಾ ಉದ್ದೇಶ ಬೇರೆಯೇ ಆಗಿದ್ದು, ಸಾವಿರಾರು ವರ್ಷಗಳ ಭವಿಷ್ಯ ಗಮನದಲ್ಲಿ ಇಟ್ಟುಕೊಂಡೇ ಈ ಯೋಜನೆಗೆ ಕೈಹಾಕಿತ್ತು. ಅದರಲ್ಲೂ 'ಚೀನಾ ಕಮ್ಯನಿಸ್ಟ್‌ ಪಾರ್ಟಿ' ಸ್ಥಾಪನೆಯಾಗಿ 100 ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಒಂದು ದೊಡ್ಡ ಸಾಧನೆ ಅತ್ಯಗತ್ಯವಾಗಿತ್ತು. ಮುಂದಿನ ತಿಂಗಳು 'ಚೀನಾ ಕಮ್ಯನಿಸ್ಟ್‌ ಪಾರ್ಟಿ'ಗೆ 100 ವರ್ಷ ತುಂಬುತ್ತಿದ್ದು, ಅದಕ್ಕೂ ಮೊದಲೇ ಚೀನಾ ತನ್ನ ಮಹತ್ವದ ಗುರಿ ಮುಟ್ಟಿದೆ.

3 ತಿಂಗಳು ಅಲ್ಲೇ ವಾಸ..!

3 ತಿಂಗಳು ಅಲ್ಲೇ ವಾಸ..!

ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗುವುದು ಎಂದರೆ ಟೂರ್ ಹೋದಂತೆ ಅಲ್ಲ. ಅಲ್ಲಿಗೆ ಹೋಗುವ ಗಗನಯಾತ್ರಿ ಮತ್ತೊಂದು ಜನ್ಮವನ್ನೇ ಪಡೆಯಬೇಕು. ಯಾವಾಗ ಏನಾಗುತ್ತೋ? ಎಲ್ಲಿ ಜೀವ ಹೋಗುತ್ತೋ? ಭೂಮಿಗೆ ಮತ್ತೆ ಹೋಗ್ತೀವೋ? ಇಲ್ವೋ? ಹೀಗೆ ಬರೀ ಪ್ರಶ್ನೆಗಳ ಸರಮಾಲೆಯೇ ಎದ್ದು ಕಾಣುತ್ತೆ. ಇದೆಲ್ಲಾ ಎದುರಿಸಿ ಸಾಧನೆ ಮಾಡಬೇಕಾಗಿದೆ. ಇದೀಗ ಚೀನಾದ ಗಗನಯಾತ್ರಿ ನಿಯೆ ಹೈಶೆಂಗ್, ಲಿಯು ಬೊಮಿಂಗ್ ಹಾಗೂ ಟ್ಯಾಂಗ್ ಹಾಂಗ್ಬೊ ಅವರು ಇಂಥ ಸವಾಲುಗಳನ್ನ ಎದುರಿಸಿ 3 ತಿಂಗಳು ಅಲ್ಲೇ ಬದುಕಬೇಕಿದೆ. ಬಾಹ್ಯಾಕಾಶ ನಿಲ್ದಾಣದಲ್ಲಿ ಚೀನಾ ಸಾಧನೆಗೆ ಈ ತ್ರಿಮೂರ್ತಿಗಳು ಮುನ್ನುಡಿ ಬರೆಯಲಿದ್ದಾರೆ.

ನಾಸಾ vs ಚೀನಾ..!

ನಾಸಾ vs ಚೀನಾ..!

ಬಾಹ್ಯಾಕಾಶ ಕ್ಷೇತ್ರ ಅದೆಷ್ಟು ವಿಶಾಲ ಎಂದರೆ ನಾವು ಈವರೆಗೂ ಬಾಹ್ಯಾಕಾಶದ ಶೇ. 1ರಷ್ಟು ವಿಚಾರವನ್ನೂ ಅರಿತುಕೊಳ್ಳಲು ಆಗಿಲ್ಲ. ಹೀಗಾಗಿಯೇ ಬಾಹ್ಯಾಕಾಶ ಕ್ಷೇತ್ರವೇ ಭವಿಷ್ಯ ಎಂಬುದನ್ನ ಚೀನಾ ಅರಿತುಕೊಂಡಿದ್ದು, ನಾಸಾ ಜೊತೆಗೆ ಜಿದ್ದಿಗೆ ಬಿದ್ದು ಯೋಜನೆಗಳನ್ನು ಪ್ರಕಟಿಸುತ್ತಿದೆ. ಈಗಾಗಲೇ ಮೊದಲ ಬಾರಿಗೆ ಚಂದ್ರನ ಮೇಲೆ ರೋವರ್ ಇಳಿಸಿದ್ದು, ಮಂಗಳ ಗ್ರಹದ ಮೇಲೆ ರೋವರ್ ಲ್ಯಾಂಡ್ ಮಾಡಿಸಿದ್ದು, ಕ್ಷುದ್ರಗ್ರಹದ ಮೇಲೆಯೂ ಮೈನಿಂಗ್ ಮಾಡಲು ಯೋಜನೆ ರೂಪಿಸಿರುವುದು ಚೀನಾದ ಸಾಧನೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಚೀನಾ ಇದೇ ರೀತಿ ಮುಂದುವರಿದಿದ್ದೇ ಆದರೆ ಮುಂದಿನ 10 ವರ್ಷಗಳಲ್ಲಿ 'ನಾಸಾ' ಸಂಸ್ಥೆಯನ್ನೂ ಹಿಂದಕ್ಕೆ ಹಾಕಲಿದೆ.

English summary
China Astronauts arrived at Tiangong Space Station after 7 hours of journey from the Earth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X