• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೊಡ್ಡವರಷ್ಟೇ ಅಲ್ಲ, ಕೊರೊನಾದಿಂದ ಚೇತರಿಸಿಕೊಂಡ ಮಕ್ಕಳಲ್ಲೂ ಆರೋಗ್ಯ ಸಮಸ್ಯೆ

|
Google Oneindia Kannada News

ನವದೆಹಲಿ, ಜುಲೈ 13: ಕೊರೊನಾ ಸೋಂಕಿನಿಂದ ಗುಣಮುಖರಾದ ನಂತರ ವಯಸ್ಕರಲ್ಲಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ವರದಿಯಾಗಿದ್ದವು. ಆದರೆ ಇದೀಗ ದೆಹಲಿಯಲ್ಲಿ, ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಮಕ್ಕಳಲ್ಲಿಯೂ ಆರೋಗ್ಯ ಸಮಸ್ಯೆಗಳು ಗೋಚರಿಸುತ್ತಿರುವುದಾಗಿ ತಿಳಿದುಬಂದಿದೆ. ಸೋಂಕಿನಿಂದ ಗುಣಮುಖರಾದ ಕೆಲವು ತಿಂಗಳ ನಂತರ ಮಕ್ಕಳಲ್ಲಿ ಹಲವು ರೀತಿಯ ತೊಂದರೆಗಳು ಗೋಚರಿಸುತ್ತಿರುವುದಾಗಿ ದೆಹಲಿ ಖಾಸಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಕೊರೊನಾ ಸೋಂಕಿನಿಂದ ಗುಣಮುಖರಾದ ನಂತರ ಮಕ್ಕಳಲ್ಲಿ ಗ್ಯಾಸ್ಟ್ರಿಕ್, ತಲೆ ನೋವು, ಉಸಿರಾಟ ಸಮಸ್ಯೆ, ಮರೆವು ಕಂಡುಬರುತ್ತಿರುವುದಾಗಿ ವರದಿಯಾಗಿದೆ. ಈ ಸಮಸ್ಯೆ ಹೊತ್ತು ಆಸ್ಪತ್ರೆಗಳಿಗೆ ಎಡತಾಕುವ ಮಕ್ಕಳು ದೆಹಲಿಯಲ್ಲಿ ಹೆಚ್ಚಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮುಂದೆ ಓದಿ...

ಕೊರೊನಾ 3ನೇ ಅಲೆ, ಮಕ್ಕಳಿಗೆ ಗಂಭೀರ ಪರಿಣಾಮ ಅನ್ನೋದೇ ಅವೈಜ್ಞಾನಿಕ ಕೊರೊನಾ 3ನೇ ಅಲೆ, ಮಕ್ಕಳಿಗೆ ಗಂಭೀರ ಪರಿಣಾಮ ಅನ್ನೋದೇ ಅವೈಜ್ಞಾನಿಕ

 ಮಕ್ಕಳಲ್ಲಿ ತಲೆಸುತ್ತು, ತಲೆನೋವು, ಜೀರ್ಣಕ್ರಿಯೆ ಸಮಸ್ಯೆ

ಮಕ್ಕಳಲ್ಲಿ ತಲೆಸುತ್ತು, ತಲೆನೋವು, ಜೀರ್ಣಕ್ರಿಯೆ ಸಮಸ್ಯೆ

ಮಕ್ಕಳಲ್ಲಿ MISC (Multi inflamattory syndrome) ಸಮಸ್ಯೆ ಹೊರತಾಗಿಯೂ ಬೇರೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. "ಕೊರೊನಾ ಸೋಂಕಿನಿಂದ ಗುಣಮುಖರಾದ ನಂತರ ಮಕ್ಕಳಲ್ಲಿ ಗಂಭೀರ ಸಮಸ್ಯೆಗಳು ಗೋಚರಿಸಿಲ್ಲ. ಆದರೆ ಜನ್ಮಜಾತ ಹೃದಯ ಸಮಸ್ಯೆ, ಮೂತ್ರಪಿಂಡ ಸಮಸ್ಯೆ, ಅಸ್ತಮಾ, ಸ್ಥೂಲಕಾಯ ಹೊಂದಿರುವ ಮಕ್ಕಳಲ್ಲಿ ಸಮಸ್ಯೆ ಕಂಡುಬಂದಿದೆ" ಎಂದು ಫೋರ್ಟಿಸ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ರಾಹುಲ್ ನಾಗ್ಪಾಲ್ ತಿಳಿಸಿದ್ದಾರೆ. ಇದರ ಜೊತೆ ಬೇಧಿ, ತಲೆಸುತ್ತು, ತಲೆನೋವು, ಜೀರ್ಣಕ್ರಿಯೆ ಸಮಸ್ಯೆ ಹೊತ್ತು ಬರುತ್ತಿರುವ ಮಕ್ಕಳು ಹೆಚ್ಚಾಗಿರುವುದಾಗಿ ತಿಳಿಸಿದ್ದಾರೆ.

 ಕೊರೊನಾದಿಂದ ಚೇತರಿಸಿಕೊಂಡ ನಂತರ ತಲೆನೋವು

ಕೊರೊನಾದಿಂದ ಚೇತರಿಸಿಕೊಂಡ ನಂತರ ತಲೆನೋವು

"ಕೊರೊನಾ ನಂತರ ಹೆಚ್ಚಿನ ಮಕ್ಕಳಲ್ಲಿ ತಲೆ ನೋವು ಕಂಡುಬರುತ್ತಿದೆ. ಕೊರೊನಾ ಸೋಂಕಿಗೂ, ಮಕ್ಕಳಲ್ಲಿನ ತಲೆನೋವಿಗೂ ಸಂಬಂಧವಿದೆಯೇ ಎಂಬ ಕುರಿತು ಇನ್ನಷ್ಟು ಅಧ್ಯಯನಗಳು ನಡೆಯಬೇಕಿದೆ. ಕೊರೊನಾ ನಂತರ ತಲೆನೋವು ಕಾಣಿಸಿಕೊಳ್ಳುತ್ತಿರುವುದರಿಂದ ಕೊರೊನಾಗೆ ಸಂಬಂಧಿಸಿದ್ದು ಎಂದು ಪ್ರಾಥಮಿಕವಾಗಿ ಭಾವಿಸಲಾಗುತ್ತಿದೆ. ಆದರೆ ಈ ಬಗ್ಗೆ ಅಧ್ಯಯನಗಳು ನಡೆಯಬೇಕಿದೆ" ಎಂದು ಅವರು ಹೇಳಿದ್ದಾರೆ.

ಎಳೆ ಮನಸಿನೊಳಗೆ ಭಯ ನುಸುಳದಂತಿರಲಿ; ಮಕ್ಕಳ ಅಧೈರ್ಯದ ಬಗ್ಗೆ ಒಂದೆರಡು ಮಾತುಎಳೆ ಮನಸಿನೊಳಗೆ ಭಯ ನುಸುಳದಂತಿರಲಿ; ಮಕ್ಕಳ ಅಧೈರ್ಯದ ಬಗ್ಗೆ ಒಂದೆರಡು ಮಾತು

 ಮಕ್ಕಳಲ್ಲಿ ಮರೆವಿನ ಸಮಸ್ಯೆ

ಮಕ್ಕಳಲ್ಲಿ ಮರೆವಿನ ಸಮಸ್ಯೆ

"ಕೆಲವು ಮಕ್ಕಳಲ್ಲಿ ಮರೆವಿನ ಸಮಸ್ಯೆ ಕೂಡ ಕಾಣಿಸಿಕೊಳ್ಳುತ್ತಿದ್ದು, ಮಕ್ಕಳಿಗೆ ತಾವು ಓದಿದ್ದು ಬೇಗನೆ ನೆನಪಾಗುತ್ತಿಲ್ಲ" ಎಂದು ಉಜಾಲಾ ಸಿಗ್ನಸ್ ಗ್ರೂಪ್ ಆಫ್ ಹಾಸ್ಪಿಟಲ್‌ನ ಸಂಸ್ಥಾಪಕರಾದ ಡಾ. ಶುಚಿನ್ ಬಜಾಜ್ ತಿಳಿಸಿದ್ದಾರೆ. ಮಕ್ಕಳಲ್ಲಿ ಕೊರೊನಾ ಬಂದು ಹೋದ ನಂತರ ದೈಹಿಕ ಶಕ್ತಿ ಕಡಿಮೆಯಾಗಿರುವುದು ಕಂಡುಬಂದಿದೆ. ಹೆಚ್ಚಿನ ಪೋಷಕರು ತಮ್ಮ ಮಕ್ಕಳಿಗೆ ಮರೆವಿನ ಸಮಸ್ಯೆ ಉಂಟಾಗಿದೆ ಎಂದು ದೂರಿ ಬರುತ್ತಿರುವುದಾಗಿ ತಿಳಿಸಿದ್ದಾರೆ.

 ಚೇತರಿಕೆಯಾದ ನಾಲ್ಕೈದು ತಿಂಗಳ ನಂತರ ಸಮಸ್ಯೆ

ಚೇತರಿಕೆಯಾದ ನಾಲ್ಕೈದು ತಿಂಗಳ ನಂತರ ಸಮಸ್ಯೆ

ಕೊರೊನಾ ಸೋಂಕಿನಿಂದ ಚೇತರಿಕೆಯಾದ ನಾಲ್ಕೈದು ತಿಂಗಳ ನಂತರ ಮಕ್ಕಳಲ್ಲಿ ಈ ರೀತಿಯ ಸಮಸ್ಯೆಗಳು ಗೋಚರಿಸುತ್ತಿವೆ. ಗೊಂದಲ, ಕಿರಿಕಿರಿ, ಮರೆವು, ಆತಂಕದಂಥ ಮಾನಸಿಕ ಸಮಸ್ಯೆಗಳೂ ಮಕ್ಕಳಿಗೆ ಎದುರಾಗುತ್ತಿವೆ. ಆದರೆ ಇದಕ್ಕೆ ನಿಖರ ಕಾರಣ ಏನು? ಕೊರೊನಾಗೂ, ಈ ಸಮಸ್ಯೆಗಳಿಗೂ ಏನು ಸಂಬಂಧ? ಸೋಂಕಿನಿಂದ ಚೇತರಿಕೆಯಾದ ನಂತರ ಏಕೆ ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ? ಯಾವ ವಯಸ್ಸಿನ ಮಕ್ಕಳಲ್ಲಿ ಈ ಸಮಸ್ಯೆಗಳು ಗೋಚರಿಸುತ್ತಿವೆ, ಇದಕ್ಕೆ ಪರಿಹಾರ ಏನು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಅಧ್ಯಯನಗಳ ಅವಶ್ಯಕತೆಯಿದೆ ಎಂಬುದನ್ನು ಶುಚಿನ್ ಒತ್ತಿ ಹೇಳಿದ್ದಾರೆ.

English summary
Children coming to hospitals in Delhi with post-Covid symptoms like headaches, brain fogging,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X