ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್‌ ಸಮಯದಲ್ಲಿ ಮಕ್ಕಳಲ್ಲಿ ಹೆಚ್ಚಿದೆ ದೃಷ್ಟಿದೋಷ; ಅಧ್ಯಯನ

|
Google Oneindia Kannada News

ಕೊರೊನಾ ಸೋಂಕು ಶೈಕ್ಷಣಿಕ ವ್ಯವಸ್ಥೆ ಮೇಲೆ ಅತಿ ಹೆಚ್ಚಿನ ಪರಿಣಾಮ ಬೀರಿದೆ. ಸೋಂಕು ಹರಡುವಿಕೆ ತಡೆಯಲು ವರ್ಷಗಟ್ಟಲೆ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದ್ದು, ಮಕ್ಕಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಇದರೊಂದಿಗೆ ಲಾಕ್‌ಡೌನ್ ಅವಧಿಯಲ್ಲಿ ಮಕ್ಕಳಲ್ಲಿ ದೃಷ್ಟಿದೋಷ ಹೆಚ್ಚಾಗಿರುವುದಾಗಿ ಅಧ್ಯಯನವೊಂದು ತಿಳಿಸಿದೆ.

ಆನ್‌ಲೈನ್ ತರಗತಿಗಳು, ಹೊರಾಂಗಣ ಚಟುವಟಿಕೆಗಳ ಕೊರತೆ ಮಕ್ಕಳಲ್ಲಿ ದೃಷ್ಟಿದೋಷ ಹೆಚ್ಚಾಗಲು ಕಾರಣವಾಗಿದೆ ಎಂದು ಚೀನಾದಲ್ಲಿ ನಡೆದ ಅಧ್ಯಯನವೊಂದು ಹೇಳಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಮಕ್ಕಳಲ್ಲಿ ದೃಷ್ಟಿದೋಷ ಹೆಚ್ಚಾಗಿರುವುದಾಗಿ 'ಜಾಮಾ ಆಫ್ತಾಲ್ಮಾಲೊಜಿ'ಯಲ್ಲಿ ಪ್ರಕಟಗೊಂಡ ಅಧ್ಯಯನದಲ್ಲಿ ಉಲ್ಲೇಖಿಸಿದೆ.

ಕೊರೊನಾ ಸೋಂಕು ನಿಯಂತ್ರಿಸಲು 6 ಅಡಿಗಳ ಅಂತರ ಸಾಲದು ಕೊರೊನಾ ಸೋಂಕು ನಿಯಂತ್ರಿಸಲು 6 ಅಡಿಗಳ ಅಂತರ ಸಾಲದು

ಸನ್ ಯಾತ್ ಸೇನ್ ಯೂನಿವರ್ಸಿಟಿ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ ನಡೆಸಿದ ಅಧ್ಯಯನವು, 2018ರಿಂದ 2020ರವರೆಗೆ ಚೀನಾದ ಗುವಾಂಗ್‌ಜೌನಲ್ಲಿನ ಪ್ರಾಥಮಿಕ ಶಾಲೆಗಳ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳ ವಾರ್ಷಿಕ ಕಣ್ಣಿನ ಪರೀಕ್ಷೆಯ ಮಾಹಿತಿಯನ್ನು ಆಧರಿಸಿದೆ.

Children Eyesight May Have Worsened In Lockdown Says China Study

ಅಧ್ಯಯನದ ಪ್ರಕಾರ, 2018ರಲ್ಲಿ ಕಣ್ಣಿನ ಪರೀಕ್ಷೆಗೆ ಒಳಗಾಗಿದ್ದ ಸುಮಾರು 13% ವಿದ್ಯಾರ್ಥಿಗಳು 2019ರ ವೇಳೆಗೆ ಸಮೀಪ ದೃಷ್ಟಿ ಸಮಸ್ಯೆಗೆ ಒಳಗಾಗಿದ್ದಾರೆ. ಈ ಅಂಕಿ ಸಂಖ್ಯೆಯನ್ನು ಹೋಲಿಕೆ ಮಾಡಿದಾಗ, 2019ರಲ್ಲಿ ಕಣ್ಣಿನ ಪರೀಕ್ಷೆಗೆ ಒಳಗಾಗಿದ್ದ ಸುಮಾರು 20% ವಿದ್ಯಾರ್ಥಿಗಳು 2020ರಲ್ಲಿ ಸಮೀಪ ದೃಷ್ಟಿ ದೋಷಕ್ಕೆ ಒಳಗಾಗಿರುವುದು ಕಂಡುಬಂದಿದೆ. ಎರಡರ ಹೋಲಿಕೆಯಲ್ಲಿ ಸುಮಾರು 7% ವಿದ್ಯಾರ್ಥಿಗಳು ಸಮೀಪದೃಷ್ಟಿ ಸಮಸ್ಯೆಗೆ ಒಳಗಾಗಿರುವುದು ಕಂಡುಬಂದಿದೆ.

ಸೋಂಕಿತರ ಕಣ್ಣೀರು ಕೂಡ ಕೊರೊನಾ ಸೋಂಕು ಹರಡಬಹುದುಸೋಂಕಿತರ ಕಣ್ಣೀರು ಕೂಡ ಕೊರೊನಾ ಸೋಂಕು ಹರಡಬಹುದು

ಒಂಬತ್ತು ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳಲ್ಲಿ ದೃಷ್ಟಿ ದೋಷ ಹೆಚ್ಚಿನ ಮಟ್ಟದಲ್ಲಿಲ್ಲ. ಒಂಬತ್ತಕ್ಕೂ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಹೆಚ್ಚಾಗಿ ಈ ದೃಷ್ಟಿ ಸಮಸ್ಯೆ ಕಂಡುಬಂದಿದೆ ಎಂದು ಸಂಶೋಧಕರು ಹೇಳಿದ್ದಾರೆ. ಚಿಕ್ಕ ಮಕ್ಕಳಲ್ಲಿಯೇ ದೃಷ್ಟಿ ದೋಷ ಹೆಚ್ಚಾಗಿದೆ ಎಂದಿದ್ದಾರೆ.

Children Eyesight May Have Worsened In Lockdown Says China Study

ಆನ್‌ಲೈನ್ ಕಲಿಕೆ ಭಾಗವಾಗಿ ಕಂಪ್ಯೂಟರ್ ಪರದೆ ಮುಂದೆ ಮಕ್ಕಳು ಕಳೆದ ಸಮಯವನ್ನು ಅಥವಾ ಪುಸ್ತಕ ಓದುವ ಸಮಯವನ್ನು ಅಧ್ಯಯನದಲ್ಲಿ ಒಳಪಡಿಸಿಲ್ಲ. ಹೀಗಾಗಿ ಕಂಪ್ಯೂಟರ್ ನೋಡುವುದೊಂದೇ ದೃಷ್ಟಿದೋಷಕ್ಕೆ ಕಾರಣ ಎಂಬುದರ ಕುರಿತು ಅಭಿಪ್ರಾಯಕ್ಕೆ ಬರಲು ಸಾಧ್ಯವಿಲ್ಲ ಎನ್ನಲಾಗಿದೆ.

ಹಾಂಕಾಂಗ್, ಸಿಂಗಾಪುರ, ಚೀನಾದಲ್ಲಿ ನಡೆದ ಅಧ್ಯಯನಗಳು ಸಹ ಈ ಲಾಕ್‌ಡೌನ್ ಅವಧಿ ಮಕ್ಕಳ ದೃಷ್ಟಿ ಮೇಲೆ ಋಣಾತ್ಮಕ ಪರಿಣಾಮ ಬೀರಿರುವುದನ್ನು ದೃಢಪಡಿಸಿವೆ ಎಂದು ಫಿಲಿಪ್ಪೀನ್ ಸೊಸೈಟಿಯ ಮಕ್ಕಳ ತಜ್ಞ ಡಾ. ಕಾರ್ಲೋಸ್ ಎಮನೋಲ್ ಚುವಾ ತಿಳಿಸಿದ್ದಾರೆ.

ಈ ಲಾಕ್‌ಡೌನ್ ಸಮಯದಲ್ಲಿ ಮಕ್ಕಳು ದೀರ್ಘಾವಧಿ ಮನೆಯೊಳಗೇ ಇದ್ದಿದ್ದರಿಂದ, ಆನ್‌ಲೈನ್ ತರಗತಿಗಳಿಂದ ಅಥವಾ ಕಣ್ಣಿನ ಪರೀಕ್ಷೆ ಮಾಡಿಸಲು ವೈದ್ಯರನ್ನು ದೀರ್ಘಾವಧಿ ಕಾಣಲು ಸಾಧ್ಯವಾಗದೇ ಇದ್ದುರಿಂದ ಹೆಚ್ಚಿನ ಮಕ್ಕಳಿಗೆ ಸಮೀಪದೃಷ್ಟಿ ದೋಷ ಕಂಡುಬಂದಿರಬಹುದು ಎಂದು ಹೇಳಿದ್ದಾರೆ.

ದಿನಕ್ಕೆ ಕೆಲವೇ ಗಂಟೆಗಳ ಕಾಲ ಹೊರಾಂಗಣ ಚಟುವಟಿಕೆಗಳು ಮಕ್ಕಳಲ್ಲಿ ಸಮೀಪದೃಷ್ಟಿ ಅಪಾಯವನ್ನು ಕಡಿಮೆ ಮಾಡಲು ಸಹಕಾರಿ ಎಂಬುದನ್ನು 2018ರಲ್ಲಿ ಆಸ್ಟ್ರೇಲಿಯಾ, ಸಿಂಗಾಪುರದಲ್ಲಿ ನಡೆಸಿದ್ದ ಅಧ್ಯಯನ ತಿಳಿಸಿದ್ದವು. ಇದೇ ಕಾರಣಕ್ಕೆ ಮಕ್ಕಳ ಆರೋಗ್ಯ ದೃಷ್ಟಿಯಿಂದ ಮಕ್ಕಳನ್ನು ಹೊರಗೆ ಆಟವಾಡಲು ಪ್ರೇರೇಪಿಸಲು ಕೋವಿಡ್ ಪೂರ್ವ ಅಭಿಯಾನವನ್ನು ಫಿಲಿಪ್ಪೀನ್ಸ್‌ನ ಮಕ್ಕಳ ನೇತ್ರತಜ್ಞರು ಆರಂಭಿಸಿದ್ದರು.

ಶಾಲೆಗಳು ಇನ್ನೂ ತೆರೆಯದ ಕೆಲವೇ ದೇಶಗಳಲ್ಲಿ ಫಿಲಿಪ್ಪೀನ್ಸ್‌ ಕೂಡ ಒಂದು. ಮಕ್ಕಳು ಇಲ್ಲಿ ಇನ್ನೂ ಆನ್‌ಲೈನ್ ತರಗತಿಗಳಲ್ಲಿ ತೊಡಗಿಕೊಂಡಿದ್ದಾರೆ.

ಹೊರಾಂಗಣದ ಚಟುವಟಿಕೆಯು ಮಕ್ಕಳಲ್ಲಿ ಸಮೀಪದೃಷ್ಟಿಯ ಅಪಾಯವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಮಕ್ಕಳು ವಿರಾಮ ಪಡೆದುಕೊಳ್ಳುವುದು ಅವಶ್ಯಕ ಎಂದು ಅಧ್ಯಯನ ಸಲಹೆ ನೀಡಿದೆ. ಸೋಂಕಿನ ಸುರಕ್ಷತಾ ನಿಯಮಗಳ ಪಾಲನೆಯೊಂದಿಗೆ ಹೊರಾಂಗಣದಲ್ಲಿಯೂ ಮಕ್ಕಳಿಗೆ ಚಟುವಟಿಕೆ ನಡೆಸಲು ಅವಕಾಶ ನೀಡಬೇಕು ಎಂದು ಹೇಳಿದೆ.

English summary
Young students who recently endured a year of pandemic lockdowns may have suffered deteriorating eyesight, according to a study published Thursday in Jama Ophthalmology,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X