ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳ ಡಿಜಿಟಲ್ ಬಳಕೆಯ ಬಗ್ಗೆ ಆತಂಕವೇ? ಇದಕ್ಕೆ ತಜ್ಞರ ಸಲಹೆ ಏನು?

|
Google Oneindia Kannada News

ಡಿಜಿಟಲ್‌ ಯುಗ ಹಲವಾರು ಲಾಭಗಳನ್ನು ತಂದಿದೆ. ಇದು ಮಕ್ಕಳು ಭವಿಷ್ಯದ ಅತ್ಯಂತ ಚಲನಶೀಲ ಹಾಗೂ ಸವಾಲುಗಳನ್ನು ಎದುರಿಸಲು ಸಿದ್ಧವಾಗಿ ಸಮಗ್ರ ನಾಗರಿಕರಾಗಲು ನೆರವು ನೀಡುತ್ತಿದೆ. ಹೀಗಾಗಿ ಕಲಿಕೆ ವಿಚಾರದಲ್ಲಿ ಮಕ್ಕಳು ಶಾಲೆಯ ಕಲಿಕೆಗಿಂತ ಹೆಚ್ಚಾಗಿ ಅಂತಾರ್ಜಾಲವನ್ನು ಬಳಕೆ ಮಾಡಲು ಬಯಸುತ್ತಾರೆ. ಒಂದೇ ಪರದೆ ಮೇಲೆ ಹಲವಾರು ವಿಚಾರಗಳನ್ನು ಅವರು ತಿಳಿಯಬಹುದು. ಜೊತೆಗೆ ಕಲಿಕೆ ಬೇಸರ ತಂದರೆ ಅದರಲ್ಲೇ ಆಟ ಕೂಟ ಆಡಬಹುದು. ಹೀಗಾಗಿ ಮಕ್ಕಳು ತಮ್ಮ ಬಹುತೇಕ ಬಿಡುವಿನ ಸಮಯವನ್ನು ಮೊಬೈಲ್, ಟ್ಯಾಬ್, ಲ್ಯಾಪ್‌ಟ್ಯಾಪ್‌ನಂತಹ ವಿದ್ಯುನ್ಮಾನ ಸಾಧನಗಳಲ್ಲಿ ಕಳೆಯುತ್ತಾರೆ. ಅದರಲ್ಲೂ ವಯಸ್ಸಿಗೆ ಅನುಗುಣವಾಗಿ ಮಕ್ಕಳು ವಿದ್ಯುನ್ಮಾನ ಸಾಧನಗಳಲ್ಲಿ ಸಮಯ ಕಳೆಯುತ್ತಾರೆ. ಈ ಹಿನ್ನೆಲೆಯಲ್ಲಿ ಡಿಜಿಟಲ್‌ ಯುಗದೊಂದಿಗೆ ಯಾವ ರೀತಿ ಮಕ್ಕಳನ್ನು ಬೆಳೆಸಬೇಕು? ಇದಕ್ಕೆ ತಜ್ಞರು ನೀಡುವ ಸಲಹೆಗಳೇನು? ತಿಳಿಯಿರಿ.

ವಿಭಿನ್ನ ದೃಷ್ಟಿಕೋನಗಳಿಂದ ವಿಭಿನ್ನ ವಯಸ್ಸಿನ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ನಿರತರಾಗಿರುತ್ತಾರೆ. ವಯಸ್ಸಿಗನುಸಾರ ಅಂತರ್ಜಾಲದಲ್ಲಿ ಮಕ್ಕಳು ತೊಡಗಿಕೊಳ್ಳುತ್ತಾರೆ. ಹಾಗಾದರೆ ಯಾವ ವಯಸ್ಸಿನ ಮಕ್ಕಳು ಯಾವ ಕಾರಣಕ್ಕಾಗಿ ಸ್ಕ್ರೀನ್ ಟೈಮ್ ಬಳಕೆ ಮಾಡುತ್ತಾರೆ? ಮಕ್ಕಳು ಪರದೆಯ ಮುಂದೆ ಇರುವಾಗ ಮಾಡುವ ವಿಭಿನ್ನ ಕಾರ್ಯಗಳೇನು?

ಅಪರಿಚಿತರೊಂದಿಗೆ ವಿಡಿಯೋ ಕಾಲ್ ಮಾಡಬಹುದಾದ Omegle ಸುರಕ್ಷಿತವೇ?ಅಪರಿಚಿತರೊಂದಿಗೆ ವಿಡಿಯೋ ಕಾಲ್ ಮಾಡಬಹುದಾದ Omegle ಸುರಕ್ಷಿತವೇ?

ಮಕ್ಕಳು ಪರದೆಯ ಮುಂದೆ ಇರುವಾಗ ಮಾಡುವ ವಿಭಿನ್ನ ಕೆಲಸಗಳಿವು-

ನಿಷ್ಕ್ರಿಯ ಬಳಕೆ: ಟಿವಿ ನೋಡುವುದು, ಓದುವುದು ಮತ್ತು ಸಂಗೀತವನ್ನು ಕೇಳುವುದು

ಸಂವಾದಾತ್ಮಕ ಬಳಕೆ: ಆಟಗಳನ್ನು ಆಡುವುದು ಮತ್ತು ಇಂಟರ್ನೆಟ್ ಬ್ರೌಸ್ ಮಾಡುವುದು

ಸಂವಹನ ಬಳಕೆ: ವಿಡಿಯೊ ಚಾಟ್ ಮಾಡುವುದು

Children and Internet use : Effects, Reasons and Expert Advice in Kannada

ವಿಷಯ ರಚನೆ: ಡಿಜಿಟಲ್ ಕಲೆ ಅಥವಾ ಸಂಗೀತಕ್ಕಾಗಿ ಸಾಧನಗಳನ್ನು ಬಳಸುವುದು

ಅಂತರ್ಜಾಲ ನೋಡಲು ಕಾರಣಗಳೇನು?

*ಯುವಜನರು ತಮ್ಮ ಅಭಿರುಚಿಗೆ ತಕ್ಕಂತೆ ಅಂತರ್ಜಾಲದಲ್ಲಿ ನಿರತರಾಗಿರುತ್ತಾರೆ. ಇದರಿಂದ ತಿಳುವಳಿಕೆಯನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಾರೆ.

*47% ಯುವಕರು ಮತ್ತೊಬ್ಬರನ್ನು ಬೆಂಬಲಿಸಲು ಮತ್ತು ಉತ್ತೇಜಿಸಲು ತಂತ್ರಜ್ಞಾನವನ್ನು ಬಳಸುತ್ತಾರೆ (ಉದಾಹರಣೆಗೆ, ಬೇರೊಬ್ಬರ ಪೋಸ್ಟ್ ಅನ್ನು ಇಷ್ಟಪಡುವುದು ಅಥವಾ ಹಂಚಿಕೊಳ್ಳುವುದು, ಬೆಂಬಲಿತ ಕಾಮೆಂಟ್‌ಗಳನ್ನು ಪೋಸ್ಟ್ ಮಾಡುವುದು ಮತ್ತು ಆನ್‌ಲೈನ್ ಅರ್ಜಿಗೆ ಸಹಿ ಮಾಡುವುದು).ಇದರಿಂದ ಸಾಮಾಜಿಕ ಮಾಧ್ಯಮದ ಪ್ರಭಾವ ಅವರ ಮೇಲೆ ಹೆಚ್ಚಾಗುತ್ತದೆ.

ಮಕ್ಕಳ ಕೈಲಿ ಯಾವಾಗಲೂ ಮೊಬೈಲ್: ಒಳ್ಳೆಯದೋ, ಕೆಟ್ಟದೋ.. ತಜ್ಞರ ಅಭಿಪ್ರಾಯ ಇಲ್ಲಿದೆಮಕ್ಕಳ ಕೈಲಿ ಯಾವಾಗಲೂ ಮೊಬೈಲ್: ಒಳ್ಳೆಯದೋ, ಕೆಟ್ಟದೋ.. ತಜ್ಞರ ಅಭಿಪ್ರಾಯ ಇಲ್ಲಿದೆ

*ಸಾಮಾಜಿಕ ಮಾಧ್ಯಮವು ತಮ್ಮ ಕಲಿಕೆಯ ಯೋಗಕ್ಷೇಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಮಕ್ಕಳು ನಂಬುತ್ತಾರೆ. ಹೀಗಾಗಿ ಮಕ್ಕಳು ವಯಸ್ಸಾದಂತೆ ಸಾಮಾಜಿಕ ಮಾಧ್ಯಮದ ಮೇಲೆ ಹೆಚ್ಚು ಅವಲಂಬಿಸುತ್ತಾರೆ.

Children and Internet use : Effects, Reasons and Expert Advice in Kannada

* ಜೊತೆಗೆ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಲು, ಸ್ನೇಹಿತರು ಮಾಡಿದ ಕೆಲಸಗಳನ್ನು ಮಾಡಲು ಹಾಗೂ ಮನರಂಜನೆಗಾಗಿ ಸಾಮಾಜಿಕ ಮಾಧ್ಯಮವನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ.

*ವಿಶೇಷವಾಗಿ 8 - 11 ವರ್ಷ ವಯಸ್ಸಿನವರೆಗಿನ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ.

ಪೋಷಕರಿಗೆ ಮಕ್ಕಳ ಡಿಜಿಟಲ್ ಬಳಕೆಯ ಬಗೆಗಿನ ಆತಂಕಗಳು-

*ಮಕ್ಕಳು ಅಪರಿಚಿತರೊಂದಿಗೆ ಮಾತನಾಡುವುದು

*ಅಪರಿಚಿತರೊಂದಿಗೆ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವುದು

*ಮಗುವಿನ ಮಾನಸಿಕ ಯೋಗಕ್ಷೇಮದ ಮೇಲೆ ಸಾಮಾಜಿಕ ಮಾಧ್ಯಮದ ಪ್ರಭಾವ ಬೀರುವ ಆತಂಕ

*ಶಾಲೆ ಕಲಿಕೆಯಿಂದ ದೂರ ಉಳಿಯುವ ಚಿಂತೆ

Children and Internet use : Effects, Reasons and Expert Advice in Kannada

*ಕುಟುಂಬದೊಂದಿಗೆ ಸಮಯ ನೀಡದೇ ಆನ್‌ಲೈನ್‌ನಲ್ಲೇ ಮಗ್ನರಾಗುವ ಯೋಚನೆ

*ಇನ್ನಿತರ ಮಕ್ಕಳೊಂದಿಗೆ ಬೆರೆಯದೆ, ಆಡದೆ, ಸಹಜ ಚಟುವಟಿಕೆಗಳಿಂದ ದೂರವಾಗುವ ಬಗ್ಗೆ ಆಲೋಚನೆ

ಸ್ಕ್ರೀನ್ ಟೈಮ್ ಬಗ್ಗೆ ತಜ್ಞರು ಸಲಹೆ -

Recommended Video

RCB ಸೋತಿದ್ದು, Playoffs ಕನಸಿಗೆ ಬಿದ್ದ ದೊಡ್ಡ ಪೆಟ್ಟು | Oneindia Kannada

ಮಕ್ಕಳು ಪರದೆಯನ್ನು ನೋಡುವುದು ತಪ್ಪೋ ಸರಿಯೋ ಎಂದು ಯೋಚಿಸುವುದಕ್ಕಿಂತ ಮಕ್ಕಳು ಪರದೆ ಮೇಲೆ ಏನನ್ನು ನೋಡುತ್ತಾರೆ ಎಂಬುದನ್ನು ಗಮನದಲ್ಲಿಡುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಯಾಕೆಂದರೆ ಆಧುನಿಕ ಯುಗದಲ್ಲಿ ಹೊಸ ವಿಚಾರಗಳನ್ನು ಕಲೆ ಹಾಕಲು ಜೊತೆಗೆ ವೇಗವಾಗಿ ಅವುಗಳನ್ನು ಪಡೆಯಲು ಅಂತರ್ಜಾಲ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಹೀಗಾಗಿ ಇದನ್ನು ಬೇಡ ಎಂದೇಳಲು ಸಾಧ್ಯವಿಲ್ಲ. ಆರೋಗ್ಯದ ದೃಷ್ಟಿಯಿಮದ ಮಕ್ಕಳನ್ನು ಕಾಪಾಡಲು ಪರದೆ ವೀಕ್ಷಣೆಗೆ ಒಂದು ಸಮಯ ನಿಗಧಿಪಡಿಸುವುದು ಅಥವಾ ಅದರಲ್ಲಿ ಮಕ್ಕಳು ಏನನನ್ನು ವೀಕ್ಷಿಸುತ್ತಾರೆಂದು ನಿಗಾ ವಹಿಸುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ತಜ್ಞರು ಸಲಹೆ ನೀಡುತ್ತಾರೆ.

English summary
Parent and Teen Internet Use : Read on to know Effects, Reasons and Expert Advice in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X