ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸದಾ' ಬಾಲ್ಯದ ನೆನಪು : ಕಳ್ಳಾಟ ಒಳ್ಳೇವ್ರಿಗಲ್ಲ..!

By ಸದಾ ಸಕಲೇಶಪುರ
|
Google Oneindia Kannada News

ಮರುದಿನ ನಡೆಯಬೇಕಿದ್ದ ಪರೀಕ್ಷೆಯೊಂದರ ಪ್ರಶ್ನಾಪತ್ರಿಕೆ ನಮ್ಮ ಉಂಡಾಡಿಗುಂಡರ ಸಂಘದ ಸದಸ್ಯರ ಕೈಗೆ ಸಿಕ್ಕಿತ್ತು. ಗುಂಪುಗೂಡಿ ಕ್ವಶ್ಚನ್ ಪೇಪರ್ಗಳನ್ನು ಕಿತ್ತಾಡಿಕೊಂಡು ದಿಟ್ಟಿಸುತ್ತಿದ್ದ ಎಲ್ಲರ ಕೈಕಾಲುಗಳೂ ಥರಥರ ನಡುಗುತ್ತಿದ್ದವು. ನಾವು ತರ್ಲೆಗಳು ಹೌದು; ಆದ್ರೆ ನಿರುಪದ್ರವಿ ತರ್ಲೆಗಳು. ಇಂಥ ಘನಂಧಾರಿ ಕೆಲಸಗಳನ್ಯಾವತ್ತೂ ಮಾಡಿರ್ಲಿಲ್ಲ..

ಕಿರುಪರೀಕ್ಷೆಗಳಿಗೆಲ್ಲಾ ಕ್ಯಾರೇ ಅನ್ನದ ವಿಚಿತ್ರ ಜಾಯಮಾನದ ಗ್ಯಾಂಗು ನಮ್ಮದು. ನಮ್ಮದೇನಿದ್ರೂ ಫೈನಲ್ ಮ್ಯಾಚಿನಲ್ಲಷ್ಟೇ ಹೊಡಿಬಡಿದಾಟ. ಮೇನ್ ಎಕ್ಸಾಮಿನ ಮುಂಜಾನೆಯಷ್ಟೇ ಒಂಚೂರು ಬುಕ್ಕಿನ ಮೂತಿ ನೋಡ್ತಿದ್ವಿ. ಇಷ್ಟಿದ್ರೂ ಫೈನಲ್ ಎಕ್ಸಾಮಿನಲ್ಲಿ ಕೆಲ ಸಬ್ಜೆಕ್ಟುಗಳಲ್ಲಿ ಕ್ಲಾಸಿನ Rank ಸ್ಟೂಡೆಂಟ್ಸಿಗೂ ಬಿಸಿ ಮುಟ್ಟಿಸಿದ್ದಿದೆ. ಕಿರು ಪರೀಕ್ಷೆಗಳಲ್ಲಿ ಎರಡು ಮೂರು ಮಾರ್ಕ್ಸ್ ಬಂದಿದ್ದಕ್ಕೆ ಸಿಡಿಗಣ್ಣು ಮಾಡೋ ಟೀಚರ್ಸು ಇಂಟರ್ನಲ್ ಮಾರ್ಕ್ಸು ಹಾಕುವಾಗ ಸೇಡನ್ನು ತೀರಿಸಿಕೊಳ್ಳದೇ ಇರುತ್ತಿದ್ದರೆ ಬಹುಶಃ ನಮ್ಮ ಕ್ಲಾಸಿನ Rank ಸ್ಟೂಡೆಂಟ್ಸು Rank ಬಾರದೆ ಸೂಸೈಡ್ ಮಾಡ್ಕೋಬೇಕಿತ್ತು ಅನ್ನೋ ರೀತೀಲಿ ಬದುಕಿದ್ದ ಉಂಡಾಡಿ ಗುಂಡಾಗಳು ನಾವು.

ವಿಕ್ರಮಾದಿತ್ಯನ ವಿಲನ್ ಬೇತಾಳಕ್ಕೆ ಭೀಮ ಯಾಕೆ ಗತಿ ಕಾಣಿಸಬಾರದು? ವಿಕ್ರಮಾದಿತ್ಯನ ವಿಲನ್ ಬೇತಾಳಕ್ಕೆ ಭೀಮ ಯಾಕೆ ಗತಿ ಕಾಣಿಸಬಾರದು?

ಆದ್ರೂ ಟೀಚರ್ಸ್ಗೆ ನಮ್ಮ ಮೇಲೆ ಎಂಥದ್ದೋ ಪ್ರೀತಿ. ನಮ್ಮ ಗ್ಯಾಂಗಿನಲ್ಲಿ ಸ್ಪೋರ್ಟ್ಸ್, ಕಲ್ಚರಲ್ ಇವೆಂಟ್ಸುಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಟ್ಯಾಲೆಂಟೆಡ್ ತರ್ಲೆಗಳು ಯಥೇಚ್ಛವಾಗಿದ್ದಕ್ಕೇ ಮೇಷ್ಟ್ರು ಟೀಚರ್ಸುಗಳಿಗೆ ನಾವು ಅಚ್ಚುಮೆಚ್ಚು ಆಗಿದ್ದೆವೋ ಏನೋ. ಒಟ್ಟಿನಲ್ಲಿ ನಮ್ಮನ್ನು ತುಂಬಾ ಆದರದಿಂದ ಕಾಣುತ್ತಿದ್ದರು.

{blurb}
ಕ್ಲಾಸಿನಲ್ಲಿ ಕ್ವಶ್ಚನ್ ಕೇಳುವಾಗೆಲ್ಲ ತಲೆ ಕೆರೆದುಕೊಂದು ಎದ್ದು ನಿಲ್ಲುತ್ತಿದ್ದ ನಮ್ಮ ಮೇಲೆ ಕನಿಕರ ಬಂದು ಮತ್ತೊಂದು ಈಸೀ ಕ್ವಶ್ಚನ್ನು ಎಸೆದು ಕುಳ್ಳಿರಿಸುತ್ತಿದ್ದರು. ಪಕ್ಕಾ ತರ್ಲೆಗಳಾಗಿದ್ದ ನಾವು ಟೀಚರ್ಸ್ಗೆ ಮಾತ್ರ ನಂಬಿಕೆಯ ಬಂಟರಾಗಿದ್ದೆವು. ಅದಕ್ಕೆ ಪುರಾವೆಯಾಗಿ ಇಡೀ ಶಾಲೆಯ ಕೀಗೊಂಚಲು ಹೆಚ್ಚಿನ ಸಾರಿ ನಮ್ಮ ಕೈಯಲ್ಲೇ ಇರುತ್ತಿತ್ತು.

childhood memories: cheating in maths exam

ಕೀ ಗೊಂಚಲು ನಮ್ಮ ಬಳಿ : ಅವತ್ತು ಭಾನುವಾರ. ಶಾಲೆಯ ಪಕ್ಕದಲ್ಲೇ ನಮ್ಮ ಬಿಸಿಎಂ ಹಾಸ್ಟೆಲ್. ಪ್ರಾಧ್ಯಾಪಕರೊಬ್ಬರು ಶಾಲಾ ಸ್ಟಾಫ್ ರೂಮನ್ನು ಕ್ಲೀನ್ ಮಾಡೋಕೆ ಹೇಳಿದನ್ನು ನೆನಪು ಮಾಡಿಕೊಂಡ ನಾವು ಕೀ ಗೊಂಚಲು ಹಿಡಿದು ಶಾಲೆಯತ್ತ ನಡೆದ್ವಿ. ಸ್ಟಾಫ್ ರೂಮಿನ ಬೀಗ ತೆಗದು ರೂಮು ಗುಡಿಸಿ ಸ್ವಚ್ಛ ಮಾಡಿದ್ವಿ. ಸ್ವಚ್ಛತಾ ಕಾರ್ಯ ಮುಗಿದ ಮೇಲೆ ನಮ್ಮದೇ ಸಾಮ್ರಾಜ್ಯ ಅನ್ನೋಹಾಗೆ ಸ್ಟಾಫು ರೂಮಿನ ತುಂಬೆಲ್ಲಾ ಓಡಾಟ ಶುರುವಾಯ್ತು. ಒಬ್ಬಾತ ಗಣಿತ ಮೇಸ್ಟ್ರು ಬಾಬು ಸರ್ರ ಕುರ್ಚೀಲಿ ಕೂತು ಬಾಬು ಸರ್ರನ್ನು ಅನುಕರಣೆ ಮಾಡಿದರೆ ಇನ್ನೊಬ್ಬ ಬೆತ್ತ ಹಿಡುಕೊಂಡು ಹಿಂದೀ ಮೇಷ್ಟ್ರು ತಿಪ್ಪೇಸ್ವಾಮಿಯ ಡೈಲಾಗು ಹೊಡೆಯುತ್ತಿದ್ದ. ಉಳಿದೋರಿಗೆ ಅವರಿಬ್ಬರ ಅನುಕರಣೆ ನೋಡುತ್ತ ಹಲ್ಲು ಕಿಸಿಯುವ ಕೆಲಸ.

ಬಾಲ್ಯದ ನೆನಪು: ಹೊರಗೆ ಮಳೆ, ಒಳಗೆ ಆಹಾ! ಪತ್ರೊಡೆ, ಕಳಲೆ ಬಾಲ್ಯದ ನೆನಪು: ಹೊರಗೆ ಮಳೆ, ಒಳಗೆ ಆಹಾ! ಪತ್ರೊಡೆ, ಕಳಲೆ

ಅಂತೂ ನಮ್ಮ ಮಾಕ್ ಪ್ರೆಸಿನಲ್ಲಿ ಎಲ್ಲಾ ಪ್ರಾಧ್ಯಾಪಕರೂ ಒಂದುಸಾರಿ ಬಂದು ಹೋದ್ರು. ಅದು ಮುಗಿದ ಮೇಲೆ ಸ್ಟಾಫು ರೂಮಿನಲ್ಲಿ ಏನೆಲ್ಲಾ ಇಟ್ಟವರೆ ಅಂತ ಕೆಟ್ಟ ಕುತೂಹಲದಿಂದ ಹುಡುಕಾಡಿದ್ವಿ. ಹಿಂದಿನ ಸಾರಿಯ ಕಿರು ಪರೀಕ್ಷೇಲಿ ಐದರೊಳಗೆ ಮಾರ್ಕ್ಸ್ ಬಂದಿದ್ದ ನಮ್ಮ ನಮ್ಮ ಆನ್ಸರ್ರು ಪೇಪರ್ರುಗಳನ್ನು ದಿಟ್ಟಿಸಿ ಒಬ್ಬರಿಗೊಬ್ರು ಹಲ್ಲು ಪ್ರದರ್ಶನ ಮಾಡಿದ್ದೂ ಆಯ್ತು. ಕೋಳಿ ಹೆಕ್ಕುವಂತೆ ಇನ್ನೂ ಏನಾದರೂ ಸಿಕ್ಕೀತೋ ಅಂತ ಹುಡುಕಾಡುತ್ತಿದ್ದ ಸ್ನೇಹಿತನೊಬ್ಬನಿಗೆ ಮರುದಿನ ನಡೆಯಲಿದ್ದ ಗಣಿತ ಕಿರು ಪರೀಕ್ಷೆಯ ಕ್ವಶ್ಚನ್ ಪೇಪರ್ ಸಿಗಬೇಕೆ?!

ಚೇಳಿನ ಬಾಲಕ್ಕೆ ದಾರ ಕಟ್ಟುವವರ್ಯಾರು? ಬಾಲ್ಯದ ಆಟ ಆ ಹುಡುಗಾಟ..! ಚೇಳಿನ ಬಾಲಕ್ಕೆ ದಾರ ಕಟ್ಟುವವರ್ಯಾರು? ಬಾಲ್ಯದ ಆಟ ಆ ಹುಡುಗಾಟ..!

ಗುಂಪುಗೂಡಿ ಕ್ವಶ್ಚನ್ ಪೇಪರ್ಗಳನ್ನು ಕಿತ್ತಾಡಿಕೊಂಡು ದಿಟ್ಟಿಸುತ್ತಿದ್ದ ಎಲ್ಲರ ಕೈಕಾಲುಗಳೂ ಥರಥರ ನಡುಗುತ್ತಿದ್ದವು. ನಾವು ತರ್ಲೆಗಳು ಹೌದು; ಅದ್ರೆ ನಿರುಪದ್ರವಿ ತರ್ಲೆಗಳು. ಇಂಥ ಘನಂಧಾರಿ ಕೆಲಸಗಳನ್ಯಾವತ್ತೂ ಮಾಡಿರ್ಲಿಲ್ಲ.

ಒಬ್ಬಾತ 'ಕ್ವಶ್ಚನ್ಸ್ ನೋಡ್ಕೊಳ್ಳೋದು ಬೇಡ, ಹಾಗೆ ಇಡ್ರೋ' ಅಂದ. ಇನ್ನೊಬ್ಬ, 'ಏ ಸುಮ್ನಿರು ಮಚ್ಚಾ, ಈ ಸಾರಿನಾದ್ರೂ ಕಿರುಪರಿಕ್ಷೇಲಿ ಒಳ್ಳೇ ಮಾರ್ಕ್ಸ್ ತೆಗೆಯೋಣ' ಅನ್ನುತ್ತ ಕ್ವಶ್ಚನ್ ಪೇಪರನ್ನೇ ಕಿತ್ತು ತಿನ್ನೋ ಹಾಗೆ ನೋಡುತ್ತಿದ್ದ. ಮತ್ತೊಬ್ಬ, 'ಒಂದು ಪೇಪರನ್ನ ಹಾಸ್ಟಲ್ಗೆ ಹಿಡ್ಕೊಂಡು ಹೋಗೋಣ ಮಚ್ಚಾ, ಓದ್ಕೊಳ್ಳೋಕೆ ಈಸೀಯಾಗುತ್ತೆ' ಅಂದ.

ನಾನು 'ಬೇಡ ಬೇಡ, ಕ್ವಶ್ಚನ್ ಪೇಪರ್ ಕಮ್ಮಿಯಿದ್ರೆ ಮೇಸ್ಟ್ರಿಗೆ ಡೌಟ್ ಬರುತ್ತೆ' ಅಂತ ಎಚ್ಚರಿಸಿದೆ. ಕೊನೆಗೆ ಬೇರೊಂದು ಶೀಟಿನಲ್ಲಿ ಕ್ವಶ್ಚನ್ಸ್ ಬರೆದುಕೊಂಡು ಹೋಗೋಣ ಅಂತ ಎಲ್ಲರೂ ತೀರ್ಮಾನಕ್ಕೆ ಬಂದೆವು. ಹಾಗೇ ಕ್ವಶ್ಚನ್ಸ್ನೆಲ್ಲಾ ಬೇರೊಂದು ಶೀಟಿಗೆ ಭಟ್ಟಿ ಇಳಿಸಿ ಹಾಸ್ಟೆಲ್ಗೆ ಹೋದ್ವಿ. ಹಾಸ್ಟೆಲ್ನಲ್ಲಿ ನಮ್ಮ ಕ್ಲಾಸಿನವರೆಲ್ಲಾ ಒಂದೆಡೆ ಸೇರಿಕೊಂಡು ಅಭ್ಯಾಸ ಮಾಡಿದ್ವಿ.

Childhood memories: cheating in maths exam

ಮರುದಿನ ಮಧ್ಯಾಹ್ನ ಗಣಿತ ಎಕ್ಸಾಮ್. ಶಾಲೆಗೆ ಹೋಗಿ ಎಕ್ಸಾಮ್ ಹಾಲಿನಲ್ಲಿ ತೆಪ್ಪಗೆ ಕೂತ್ವಿ. ನಂಗಂತೂ ಇನ್ನಿಲ್ಲದ ಭಯ. ಕ್ವಶ್ಚನ್ ಪೇಪರ್ ಕದ್ದು ನೋಡಿದ್ದು ಮೇಷ್ಟ್ರಿಗೆ ಹೇಗಾದ್ರೂ ಗೊತ್ತಾಗಿದ್ರೆ ಕುಂಡೆ ಮೇಲೆ ಬಾಸುಂಡೆ ಬೀಳೋದು ಗ್ಯಾರಂಟಿ ಅನ್ನಿಸ್ತಿತ್ತು. ಗಣಿತ ಮೇಷ್ಟ್ರು ಬೇರೆ ಭಯಂಕರ ಸ್ಟ್ರಿಕ್ಟು. ಅವರಂದ್ರೆ ಇಡೀ ಶಾಲೇನೆ ನಡುಗುತ್ತೆ, ಅಂತದ್ರಲ್ಲಿ ನಮ್ಗಿದು ಬೇಕಿತ್ತಾ ಅನ್ಕೊಳ್ತ ಭಯದಿಂದಲೇ ಕೂತ್ಕೊಂಡಿದ್ದೆ. ಬಾಬು ಸಾರ್ ಬಂದು ಕ್ವಶ್ಚನ್ ಪೇಪರ್ ಡಿಸ್ಟ್ರಿಬ್ಯೂಟ್ ಮಾಡಿದ್ರು. ಅದೇ ಸೇಮ್ ಪೇಪರ್ಸ್. ಆದ್ರೂ ಭಯ. ಕೈ ಕಾಲು ಅಲುಗಾಡೋದನ್ನು ನಿಲ್ಲಿಸಿರ್ಲಿಲ್ಲ.

ಆನ್ಸರ್ರು ಬರೆಯೋಕೆ ಶುರು ಮಾಡಿದೆ. ಭಯದಿಂದ ಒಂದು ಲೆಕ್ಕಾನೂ ಬಿಡಿಸೋಕಾಗ್ಲಿಲ್ಲ. ಅರೆ! ಇದೇನಪ್ಪ ಬಂತು ಗ್ರಹಚಾರ?! ಅಷ್ಟು ಸಾರಿ ಇದೇ ಕ್ವಶ್ಚನ್ನಿಗೆ ಆನ್ಸರ್ರು ಪ್ರ್ಯಾಕ್ಟೀಸು ಮಾಡಿದ್ದೀನಿ, ಅದ್ಯಾಕೆ ಈಗ ಉತ್ರ ಸಿಗ್ತಿಲ್ಲಾಂತ ತಲೆ ಕೆರ್ಕೊಂಡ್ ಬರೆದಿದ್ದೇ ಬಂತು, ಒಂದು ಕ್ವಶ್ಚನ್ನಿಗೂ ಆನ್ಸರ್ ಸರಿ ಬಂದಂತೆ ಕಾಣಲಿಲ್ಲ. ಸತ್ ಹೋಗ್ಲಿ ಅತ್ಲಾಗೆ ಅಂತ ತೋಚಿದ್ದನ್ನು ಗೀಚಿ ಎಕ್ಸಾಂ ಹಾಲ್ನಿಂದ ಸೀದಾ ಹಾಸ್ಟೆಲ್ಗೆ ನಡೆದೆ.

ಹಾಸ್ಟೆಲ್ನಲ್ಲಿ ಹೋಗಿ ನೋಡೋದೇನು?; ನನ್ ಸ್ನೇಹಿತರೂ ಬೆವರು ಒರಿಸ್ಕೋತಾ ನಿಂತಿದ್ರು. ಏನೂಂತ ಕೇಳಿದ್ರೆ ಅವ್ರದ್ದೂ ಸೇಮ್ ಪ್ರಾಬ್ಲಂ ಅಂತೆ! ನಾಲ್ಕು ದಿನ ಬಿಟ್ಟು ಗಣಿತ ಪರೀಕ್ಷೆಯ ಆನ್ಸರ್ ಶೀಟ್ ಕೊಟ್ಟಾಗ ನಾವಂತೂ ಮತ್ತದೆ ಹಳೇ ಐದರೊಳಗಿನ ಮಾರ್ಕನ್ನು ನೋಡಿ ಬಿದ್ದೂ ಬಿದ್ದೂ ನಕ್ಕಿದ್ವಿ. ನಾವು ನಗುತ್ತಿರೋದ್ಯಾಕೆ ಅನ್ನೋದು ಅರ್ಥವಾಗದೆ ಕ್ಲಾಸಿನೋರೆಲ್ಲಾ ಮಂಗನ ಹಾಗೆ ನಮ್ಮನ್ನೇ ನೋಡ್ತಿದ್ರು.

ಎಂಟನೇ ತರಗತಿಯಲ್ಲಿ ಮಾಡಿದ ಆ ಹುಚ್ಚಾಟವೇ ಕೊನೆ. ಅಲ್ಲಿಂದ ಸ್ನಾತಕೋತ್ತರ ಪದವಿ ಮುಗಿಸುವವರೆಗೂ ಎಕ್ಸಾಮಿನಲ್ಲಿ ಕಳ್ಳಾಟವಾಡುವ ದುಸ್ಸಾಹಸಕ್ಕೆ ಮತ್ತೆ ಕೈ ಹಾಕಲಿಲ್ಲ. ಓದದೆ ಎಕ್ಸಾಮು ಹಾಲಿನಲ್ಲಿ ಕೂತು, ಆನ್ಸರ್ರು ಶೀಟು ವಿತರಿಸಿದ ಎರಡೇ ನಿಮಿಷದಲ್ಲಿ ಅದೇ ಬ್ಲ್ಯಾಂಕ್ ಶೀಟನ್ನು ಲೆಕ್ಚರರ್ಗೆ ಹಿಂದಿರುಗಿಸಿದ್ದ ಕತೆ ಹತ್ತಾರು ಸಾರಿ ನಡೆದಿದ್ದಿದೆ. ಆದ್ರೆ ಕಳ್ಳಾಟದ ಗೋಜಿಗಂತೂ ಮತ್ಯಾವತ್ತೂ ಹೋಗಿಲ್ಲ. ಯಾಕೇಂದ್ರೆ ಕಳ್ಳಾಟ ಒಳ್ಳೇವ್ರಿಗೆ ಆಗ್ಬರಲ್ಲಾಂತೆ ನೋಡಿ!

English summary
Childhood memories: One time I tried to cheat in the exam. But that's the end. Again, I did not put my effort back. Here is memories from Sada Sakleshpur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X