• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಡಿಯೊ: ನಾಯಿಯ ಬಾಯಾರಿಕೆ ನೀಗಿಸಿದ ಮಗು

|
Google Oneindia Kannada News

ಹೊಸದಿಲ್ಲಿ ಡಿಸೆಂಬರ್ 09: ಸಾಮಾಜಿಕ ಜಾಲತಾಣಗಳಲ್ಲಿ ಯಾವಾಗ ಯಾವ ವಿಡಿಯೊ ವೈರಲ್ ಆಗುತ್ತದೋ ಯಾರಿಗೂ ಗೊತ್ತಿಲ್ಲ. ಆದರೆ ಜನರು ಅಂತಹ ಕುತೂಹಲಕಾರಿ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ ಎನ್ನುವುದು ಮಾತ್ರ ಸುಳ್ಳಲ್ಲ. ಹೀಗೊಂದು ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ವಿಡಿಯೊ ನೋಡಿದ ನಂತರ ನೀವು ನಗುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ಈ ವಿಡಿಯೊ ಚಿಕ್ಕ ಮಕ್ಕಳು ಹಾಗೂ ಪ್ರಾಣಿಗಳ ನಡುವಿನ ಉತ್ತಮ ಭಾಂದವ್ಯಕ್ಕೆ ಸಾಕ್ಷಿಯಾಗಿದೆ. ಇಂತಹದೊಂದು ಹೃದಯಸ್ಪರ್ಶಿ ವಿಡಿಯೊ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಪುಟ್ಟ ನಾಯಿ ಮೇಲೆ ಪುಟ್ಟ ಮಗುವಿನ ಪ್ರೀತಿ

ಪುಟ್ಟ ನಾಯಿ ಮೇಲೆ ಪುಟ್ಟ ಮಗುವಿನ ಪ್ರೀತಿ

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೊದಲ್ಲಿ ಮುಗ್ಧ ಮಗುವೊಂದು ನಾಯಿಗೆ ನೀರು ಕುಡಿಸಲೆಂದು ಕೈ ಪಂಪ್ ಮಾಡುತ್ತದೆ. ನಾಯಿ ನೀರಿಗಾಗಿ ಶ್ರಮಿಸುತ್ತಿರುವುದನ್ನು ಕಂಡು ಮಗು ಪಂಪ್ ಮಾಡುವ ಮೂಲಕ ನಾಯಿ ನೀರು ಕುಡಿಯಲು ಸಹಾಯ ಮಾಡುತ್ತದೆ. ಇದು ನಿಜಕ್ಕೂ ಎಲ್ಲರಲ್ಲೂ ಆಶ್ಚರ್ಯ ಪಡುವಂತೆ ಮಾಡಿದೆ. ಮಗು ಜನರ ಹೃದಯವನ್ನು ಗೆದ್ದಿದೆ. ಈ ಚಿಕ್ಕ ಮಗು ಮಾನವೀಯತೆ ತೋರಿದ ರೀತಿ ಪ್ರಶಂಸೆಗೆ ಅರ್ಹವಾಗಿದೆ. ಹೀಗಾಗಿ ಇದೀಗ ಮುಗ್ಧ ಮಗುವಿನ ಈ ವಿಡಿಯೊ ನೋಡಿದ ಜನ ಮಗುವನ್ನು ಹೊಗಳಿ ಕೊಂಡಾಡಿದ್ದಾರೆ.

ಟ್ವೀಟ್‌ನಿಂದ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಮುಗ್ಧ ಮಗುವಿನ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ಟ್ವೀಟ್ ಮಾಡಿದ್ದಾರೆ. ವಿಡಿಯೋವನ್ನು ಟ್ವೀಟ್ ಮಾಡುವುದರ ಜೊತೆಗೆ ಶೀರ್ಷಿಕೆಯಲ್ಲಿ ತುಂಬಾ ಮುದ್ದಾದ ಸಾಲುಗಳನ್ನೂ ಬರೆದಿದ್ದಾರೆ. ಅವರು ಶೀರ್ಷಿಕೆಯಲ್ಲಿ ಬರೆದಿರುವುದು ಹೀಗಿದೆ- 'ಪ್ರತಿಯೊಬ್ಬರೂ ಎತ್ತರದಲ್ಲಿ ಎಷ್ಟೇ ಚಿಕ್ಕವನಾದರೂ ಯಾರಿಗಾದರೂ ಸಾಧ್ಯವಾದಷ್ಟು ಸಹಾಯ ಮಾಡಬಹುದು' ಎಂದು ಬರೆದಿದ್ದಾರೆ. ಆದರೆ ಈ ವಿಡಿಯೊ ಎಲ್ಲಿಯದ್ದು ಎಂಬುದು ತಿಳಿದು ಬಂದಿಲ್ಲ.

ಮಗು ಬಗ್ಗೆ ಶ್ಲಾಘನೆ

ಮಗು ಬಗ್ಗೆ ಶ್ಲಾಘನೆ

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಪುಟ್ಟ ಮಗುವೊಂದು ಹ್ಯಾಂಡ್ ಪಂಪ್ ಮಾಡುತ್ತಿರುವುದನ್ನು ನೋಡಬಹುದು. ಮಗು ತುಂಬಾ ಚಿಕ್ಕದಾಗಿದೆ. ಆದ್ದರಿಂದ ಕೈ ಪಂಪ್ ಅನ್ನು ನಿರ್ವಹಿಸಲು ಅವನು ತುಂಬಾ ಶ್ರಮಿಸಬೇಕು. ಕಷ್ಟಪಟ್ಟರೂ ನಾಯಿ ಬಾಯಾರಿಕೆ ನೀಗಿಸಲು ಮಗು ಜಿಗಿದು ಹ್ಯಾಂಡ್ ಪಂಪ್ ಮಾಡುತ್ತದೆ. ಚಿಕ್ಕ ನಾಯಿಯೊಂದು ಕೈ ಪಂಪ್ ಟ್ಯಾಪ್‌ನಲ್ಲಿ ಬಾಯಿ ಹಾಕಿಕೊಂಡು ವೇಗವಾಗಿ ನೀರು ಕುಡಿಯುವುದನ್ನು ನೀವು ನೋಡಬಹುದು.

ವಿಡಿಯೋ ಮೆಚ್ಚಿಕೊಂಡ ನೆಟ್ಟಿಗರು

ವಿಡಿಯೋ ಮೆಚ್ಚಿಕೊಂಡ ನೆಟ್ಟಿಗರು

ಮಗುವಿನ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ ಮೆಚ್ಚಿಕೊಂಡಿದ್ದಾರೆ. ನಾಯಿಯ ದಾಹ ನೀಗಿಸಲು ಮಗು ಕಷ್ಟಪಡುವುದನ್ನು ನೋಡಿ ಎಲ್ಲರ ಮನ ಒಡೆದಿದೆ. ಈ ವೀಡಿಯೊವನ್ನು ಇದುವರೆಗೆ 18 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಈ ವಿಡಿಯೋಗೆ ಜನರು ಸಾಕಷ್ಟು ಕಾಮೆಂಟ್ ಮಾಡುತ್ತಿದ್ದು, ಮಗುವನ್ನು ತೀವ್ರವಾಗಿ ಹೊಗಳುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮಗು ಬಗ್ಗೆ ಮೆಚ್ಚುಗೆ

ಸಾಮಾಜಿಕ ಜಾಲತಾಣದಲ್ಲಿ ಮಗು ಬಗ್ಗೆ ಮೆಚ್ಚುಗೆ

ಒಬ್ಬ ಬಳಕೆದಾರರು ಹೀಗೆ ಬರೆದಿದ್ದಾರೆ - ಅತ್ಯಂತ ಸುಂದರವಾದ ಮಾನವ ಮತ್ತು ಪ್ರಾಣಿಗಳ ಪ್ರೀತಿ ಯಾವಾಗಲೂ ಹೀಗೆ ಇರಲಿ. ಮತ್ತೊಬ್ಬರು ಬರೆದರು - ಸಹಯಕ್ಕೆ ಎತ್ತರ ಮುಖ್ಯವಲ್ಲ. ಸಹಾಯ ಮಾಡಬೇಕು ಅಂದುಕೊಂಡರೆ ಅವನು ಅದನ್ನು ಯೋಚಿಸುವುದಿಲ್ಲ. ಇಂಥಹ ಮನೋಭಾವ ವ್ಯಕ್ತಿ ದೊಡ್ಡವನೋ ಚಿಕ್ಕವನೋ ಎಂಬುದರ ಮೇಲೆ ಅವಲಂಬಿತವಾಗಿರುವುದಿಲ್ಲ ಮನಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ ಎಂದು ಬರೆದಿದ್ದಾರೆ. 'ಮಕ್ಕಳು ಮತ್ತು ಪ್ರಾಣಿಗಳ ನಡುವಿನ ಪ್ರೀತಿ ವಿಶಾಲವಾದದ್ದು. ಇದರಲ್ಲಿ ಯಾವುದೇ ಕಲ್ಮಶವಿರುವುದಿಲ್ಲ' ಎಂದು ಮತ್ತೊಬ್ಬ ಬಳಕೆದಾರ ಬರೆದಿದ್ದಾರೆ.

English summary
In this video that has gone viral on social media, an innocent child is jumping and running a hand pump so that the dog can drink water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X