ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಮುಂದೆ ಸರ್ಕಾರದ ವತಿಯಿಂದಲೇ ಚಿಕನ್, ಮಟನ್ ಭಾಗ್ಯ!

|
Google Oneindia Kannada News

ಮೈಸೂರು, ಡಿಸೆಂಬರ್ 11 : ರಾಜ್ಯ ಸರ್ಕಾರದ ವತಿಯಿಂದ ಕೃಷಿ ಭಾಗ್ಯ, ಸಾಲಮನ್ನಾ ಭಾಗ್ಯ, ಕ್ಷೇರಭಾಗ್ಯ, ಸೈಕಲ್ ಭಾಗ್ಯ ಸೇರಿದಂತೆ ಮತ್ತೆ ಹತ್ತು ಹಲವು ಭಾಗ್ಯಗಳನ್ನು ನೀಡಿದ ಸರ್ಕಾರ ಮತ್ತೊಂದು ಹೊಸ ಯೋಜನೆಗೆ ಸಜ್ಜಾಗಿದೆ. ಅದೇ ಮನೆ - ಮನೆಗೂ ಸರಕಾರದ ವತಿಯಿಂದಲೇ ಚಿಕನ್, ಮಟನ್ ತಲುಪಿಸುವ ವ್ಯವಸ್ಥೆಯ ಯೋಜನೆ.

ಇನ್ಮುಂದೆ ನಾವು ದೈನಂದಿನ ತರಹ ತರಕಾರಿ, ಸೊಪ್ಪು ಖರೀದಿಸುವ ಹಾಗೇ ಮನೆಯ ಮುಂದೆಯೇ ಮಾಂಸಾಹಾರವನ್ನು ಖರೀದಿಸಬಹುದು. ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಈ ಯೋಜನೆಯು ಇನ್ನೇನು ಕೆಲವೇ ದಿನಗಳಲ್ಲಿ ಜಾರಿಗೆ ಬರಲಿದೆ.

ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಹಿ ಸುದ್ದಿ: ಇನ್ಮುಂದೆ ಕೆಲಸ ಕಡಿಮೆ ಆಗುತ್ತೆಅಂಗನವಾಡಿ ಕಾರ್ಯಕರ್ತೆಯರಿಗೆ ಸಿಹಿ ಸುದ್ದಿ: ಇನ್ಮುಂದೆ ಕೆಲಸ ಕಡಿಮೆ ಆಗುತ್ತೆ

ಕೇವಲ ಮಾಂಸ ಮಾತ್ರವಲ್ಲದೇ ಮಾಂಸದಿಂದ ತಯಾರಿಸಿದಖಾದ್ಯಗಳ ಮಾರಾಟಕ್ಕೆ ಸಂಚಾರಿ ಘಟಕ ತೆರೆಯಲು ಸಹಾಯಧನ ನೀಡಲಾಗುತ್ತಿದೆ. ಹೀಗಾಗಿ, ಮಟನ್ ಸಿಗುವ ಬೀದಿ ಅಂಗಡಿಗಳನ್ನುಹುಡುಕಿ ಹೋಗಬೇಕಾದ ಕಷ್ಟ ತಪ್ಪಲಿದೆ.

ತಾಜಾ ಮಾಂಹಾರವನ್ನು ಮಾರಾಟ ಮಾಡಲು ಪಿಕ್ ಅಪ್‌ವ್ಯಾನ್‌ ರೀತಿಯ ವಾಹನಕ್ಕೆ 6 ಲಕ್ಷ, ಸ್ಟೀಲ್ ಫ್ಯಾಬ್ರಿಕೇಷನ್ ಗೆ3.1ಲಕ್ಷ, ಎಲೆಕ್ಟ್ರಿಕಲ್ ಜನರೇಟರ್ ಸೆಟ್‌ ಗಾಗಿ 60 ಸಾವಿರ,ಇನ್ನಿತರೇ ಯುನಿಟ್‌ ಗಾಗಿ 80 ಸಾವಿರ, ಗ್ಯಾಸ್‌ ಸ್ಟವ್ ಗಾಗಿ 20ಸಾವಿರ, ಅಡುಗೆ ಪಾತ್ರೆಗಳಿಗೆ 30 ಸಾವಿರ ಒಟ್ಟು 11 ಲಕ್ಷ ರೂ.ವೆಚ್ಚದ ಯೋಜನೆ ಇದಾಗಿದೆ.

ಶೇ.75ರಷ್ಟು ಸಹಾಯಧನ

ಶೇ.75ರಷ್ಟು ಸಹಾಯಧನ

ಇದರಲ್ಲಿ ಪರಿಶಿಷ್ಟ ಜಾತಿ,ಪಂಗಡದವರಿಗೆ ಶೇ.75ರಷ್ಟು ಅಂದರೆ 8, 250, 000 ರೂ. ಸಹಾಯಧನ ಸಿಗಲಿದೆ. ಬಾಕಿ 2,75.000 ರೂ.ಗಳನ್ನು ಬ್ಯಾಂಕ್‌ನಿಂದ ಸಾಲದರೂಪದಲ್ಲಿ ಈ ಯೋಜನೆಯಲ್ಲಿ ಪಡೆದುಕೊಳ್ಳಬಹುದಾಗಿದೆ.

ಮಹಿಳೆಯರಿಗೆ ಶೇ.33

ಮಹಿಳೆಯರಿಗೆ ಶೇ.33

ಸದ್ಯ ಮೊದಲು ಈ ಯೋಜನೆಯನ್ನು ಎಸ್‌ಟಿ, ಎಸ್‌ಸಿ ಫಲಾನುಭವಿಗಳಿಗೆ ಈಗಾಗಲೇ ಮಾಂಸ ಮಾರಾಟ ಹಾಗೂ ಮಾಂಸದಿಂದ ತಯಾರಿಸಿದ ಖಾದ್ಯ ವಸ್ತುಗಳ ಮಾರಾಟದಲ್ಲಿಹೆಚ್ಚು ತೊಡಗಿಸಿಕೊಂಡವರಿಗೆ ಮೊದಲ ಆದ್ಯತೆಯಾಗಿ ಹಣವನ್ನು ಸರ್ಕಾರ ನೀಡಲು ಮುಂದಾಗಿದೆ. ಅದರಲ್ಲೂಮಹಿಳೆಯರಿಗೆ ಶೇ.33, ವಿಕಲಚೇತನರಿಗೆ ಶೇ.3ರಷ್ಟು ಮೀಸಲಾತಿ ಇದೆ.

ರೈತರ ಸಾಲಮನ್ನಾಕ್ಕೆ ಚಾಲನೆ, 477 ರೈತರಿಗೆ ಋಣ ಮುಕ್ತ ಪತ್ರ ವಿತರಣೆರೈತರ ಸಾಲಮನ್ನಾಕ್ಕೆ ಚಾಲನೆ, 477 ರೈತರಿಗೆ ಋಣ ಮುಕ್ತ ಪತ್ರ ವಿತರಣೆ

ಫಲಾನುಭವಿಯೇ ಹೊಣೆ

ಫಲಾನುಭವಿಯೇ ಹೊಣೆ

ಫಲಾನುಭವಿಗಳು ಲಘು ಸಾರಿಗೆ ವಾಹನದ ಚಾಲನಾ ಪ್ರಮಾಣಪತ್ರ ಹೊಂದಿರಬೇಕು. ಗುಣಮಟ್ಟದ ಆಹಾರ ಒದಗಿಸಬೇಕು. ಕಡಿಮೆ ಗುಣಮಟ್ಟದ ಆಹಾರದಿಂದ ಸಾರ್ವಜನಿಕರ ಆರೋಗ್ಯಕ್ಕೆ ಹಾನಿಯಾದಲ್ಲಿ ಫಲಾನುಭವಿಯೇ ಅದಕ್ಕೆ ಹೊಣೆಯಾಗಿರುತ್ತಾನೆ. ವಾಹನಪರಿಕರಗಳನ್ನು ಕನಿಷ್ಠ 5 ವರ್ಷದವರೆಗೆ ಯಾರಿಗೂ ಬಾಡಿಗೆ ನೀಡುವಂತಿಲ್ಲ . ಇವಕ್ಕೆಲ್ಲ ಒಪ್ಪಿದರೆ ಮಾತ್ರಸಹಾಯಧನ ಸಿಗಲಿದೆ.

2017ರ ಫೇವರಿಟ್ : ಚಿಕನ್ ಬಿರಿಯಾನಿಗೆ ಚಿನ್ನ, ಮಸಾಲೆ ದೋಸೆಗೆ ಬೆಳ್ಳಿ 2017ರ ಫೇವರಿಟ್ : ಚಿಕನ್ ಬಿರಿಯಾನಿಗೆ ಚಿನ್ನ, ಮಸಾಲೆ ದೋಸೆಗೆ ಬೆಳ್ಳಿ

ಕಾದು ನೋಡಬೇಕಿದೆ

ಕಾದು ನೋಡಬೇಕಿದೆ

ಸದ್ಯ ಈ ಯೋಜನೆಗೆ ಬೆಂಗಳೂರು ನಗರ3, ಗ್ರಾಮಾಂತರ 3, ಚಿತ್ರದುರ್ಗ 3, ಚಿಕ್ಕಬಳ್ಳಾಪುರ 2, ದಾವಣಗೆರೆ5, ಕೋಲಾರ 3, ರಾಮನಗರ 5, ಶಿವಮೊಗ್ಗ 3, ತುಮಕೂರು 5,ಮೈಸೂರು 6, ಚಾಮರಾಜನಗರ 4, ಚಿಕ್ಕಮಗಳೂರು 3, ದಕ್ಷಿಣಕನ್ನಡ 2, ಹಾಸನ 5, ಕೊಡಗು 1, ಮಂಡ್ಯ 5, ಉಡುಪಿ 1,ಬೆಳಗಾವಿ 5, ಬಾಗಲಕೋಟೆ 3, ಧಾರವಾಡ 1, ಗದಗ 2, ಹಾವೇರಿ 3,ಉತ್ತರ ಕನ್ನಡ 1, ವಿಜಯಪುರ 4, ಕಲಬುರಗಿ 7, ಬಳ್ಳಾರಿ 6,ಬೀದರ್‌ 5, ಕೊಪ್ಪಳ 4, ರಾಯಚೂರು 13, ಯಾದಗಿರಿಯಲ್ಲಿ 8ಫಲಾನುಭವಿಗಳಿಗೆ ಅವಕಾಶ ಸಿಗಲಿದೆ.

ಈಗಾಗಲೇ ಹಲವು ಯೋಜನೆಗಳನ್ನು ನೀಡಿರುವ ಸರ್ಕಾರ ಈ ಯೋಜನೆಯಿಂದ ಯಾವ ಸವಾಲುಗಳನ್ನು ಎದುರಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.

English summary
Chicken, mutton delivery system is being Planned by the State Governamnet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X