• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅತ್ಯಂತ ಕಡಿಮೆ ದರದಲ್ಲಿ ಪೆಟ್ರೋಲ್ ಸಿಗುವುದು ಯಾವ ದೇಶದಲ್ಲಿ ಗೊತ್ತೇ?

|
Google Oneindia Kannada News

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಭಾರತದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಭಾರತದ ಮೂಲಕ ತೈಲ ಆಮದು ಮಾಡಿಕೊಳ್ಳುತ್ತಿರುವ ನೆರೆಯ ನೇಪಾಳ, ಭೂತಾನ್ ದೇಶಗಳಲ್ಲಿಯೂ ಭಾರತಕ್ಕಿಂತ ಕಡಿಮೆ ದರದಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಜನಸಾಮಾನ್ಯರಿಗೆ ಎಟುಕುತ್ತಿದೆ. ಕೆಲವು ರಾಜ್ಯಗಳಲ್ಲಿ ಈಗಾಗಲೇ ಲೀಟರ್ ಪೆಟ್ರೋಲ್ ಬೆಲೆ 100 ರೂಪಾಯಿಗಿಂತಲೂ ಅಧಿಕವಾಗಿದೆ.

ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 91 ರೂ ಆಸುಪಾಸಿನಲ್ಲಿದ್ದರೆ, ಬೆಂಗಳೂರಿನಲ್ಲಿ 93ರ ಗಡಿ ದಾಟಿದೆ. ಒಂದು ಕಾಲದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ನಡುವೆ ಸಾಕಷ್ಟು ಅಂತರವಿತ್ತು. ಆದರೆ ಈಗ ಈ ಅಂತರ ಕೂಡ ಕಡಿಮೆಯಾಗಿದೆ. ಪೆಟ್ರೋಲ್ ಬೆಲೆಯನ್ನು ಡೀಸೆಲ್ ಹಿಂಬಾಲಿಸುತ್ತಿದೆ. ಬಹುತೇಕ ರಾಜ್ಯಗಳಲ್ಲಿ ಡೀಸೆಲ್ ಬೆಲೆ ಕೂಡ 90ರ ಗಡಿ ಸಮೀಪಿಸಿದೆ.

ಬುಧವಾರ ತೈಲ ಬೆಲೆಯಲ್ಲಿ ಸ್ಥಿರತೆ: ಯಾವ ನಗರದಲ್ಲಿ ಎಷ್ಟು ದರ?ಬುಧವಾರ ತೈಲ ಬೆಲೆಯಲ್ಲಿ ಸ್ಥಿರತೆ: ಯಾವ ನಗರದಲ್ಲಿ ಎಷ್ಟು ದರ?

ಫೆಬ್ರವರಿ 9ರಿಂದಲೂ ದೇಶದಲ್ಲಿ ಸತತವಾಗಿ ತೈಲ ಬೆಲೆ ಏರಿಕೆಯಾಗುತ್ತಿದೆ. ಒಂದೆರಡು ದಿನ ಏರಿಕೆಯಾಗದೆ ಇದ್ದರೂ, ಗ್ರಾಹಕರ ಜೇಬಿನ ಭಾರವನ್ನಂತೂ ತಗ್ಗಿಸಿಲ್ಲ. 12 ದಿನಗಳಲ್ಲಿ ಪೆಟ್ರೋಲ್ ಬೆಲೆ 3.63 ರೂದಷ್ಟು ಹೆಚ್ಚಾಗಿದ್ದರೆ, ಡೀಸೆಲ್ ದರ ಪ್ರತಿ ಲೀಟರ್‌ಗೆ 3.84 ರೂಪಾಯಿಯಷ್ಟು ಹೆಚ್ಚಾಗಿದೆ. ಅಂದಹಾಗೆ ಕೆಲವು ದೇಶಗಳಲ್ಲಿ ಈ ಹನ್ನೆರಡು ದಿನಗಳಲ್ಲಿ ಭಾರತದಲ್ಲಿ ಏರಿಕೆಯಾದ ಒಟ್ಟು ಮೊತ್ತಕ್ಕಿಂತಲೂ ಕಡಿಮೆ ದರದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮಾರಾಟವಾಗುತ್ತಿದೆ ಎಂದರೆ ಅಚ್ಚರಿಯಾಗಬಹುದು. ನಿಜ. ಅನೇಕ ದೇಶಗಳಲ್ಲಿ ತೈಲ ಬೆಲೆ ತೀರಾ ಕಡಿಮೆ ಇದೆ. ಅಂತಹ ಕೆಲವು ದೇಶಗಳ ಪಟ್ಟಿ ಇಲ್ಲಿದೆ.

ಅತ್ಯಂತ ಅಗ್ಗದ ಪೆಟ್ರೋಲ್ ಸಿಗುವುದು ಇಲ್ಲಿ

ಅತ್ಯಂತ ಅಗ್ಗದ ಪೆಟ್ರೋಲ್ ಸಿಗುವುದು ಇಲ್ಲಿ

ಗ್ಲೋಬಲ್ ಪೆಟ್ರೋಲ್ ಪ್ರೈಸಸ್ ವೆಬ್‌ಸೈಟ್‌ನ ಅಂಕಿ ಅಂಶಗಳ ಪ್ರಕಾರ ಇಡೀ ಜಗತ್ತಿನಲ್ಲಿಯೇ ಅತಿ ಕಡಿಮೆ ದರಕ್ಕೆ ಪೆಟ್ರೋಲ್ ಲಭ್ಯವಾಗುತ್ತಿರುವುದು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ವೆನೆಜುವೆಲಾದಲ್ಲಿ. ವೆನೆಜುವೆಲಾದಲ್ಲಿ ಫೆ. 24ರಂದು ಪೆಟ್ರೋಲ್ ದರ ಪ್ರತಿ ಲೀಟರ್‌ಗೆ ಭಾರತೀಯ ಕರೆನ್ಸಿ ಲೆಕ್ಕದಲ್ಲಿ ಕೇವಲ 1.45 ರೂ. ಅಮೆರಿಕನ್ ಡಾಲರ್ ಲೆಕ್ಕದಲ್ಲಿ 0.020 ಡಾಲರ್.

ಇರಾನ್‌ನಲ್ಲಿ ಎಷ್ಟಿದೆ?

ಇರಾನ್‌ನಲ್ಲಿ ಎಷ್ಟಿದೆ?

ವೆನೆಜುವೆಲಾ ಬಳಿಕ ಅತ್ಯಂತ ಅಗ್ಗದ ದರದಲ್ಲಿ ಪೆಟ್ರೋಲ್ ದೊರಕುವುದು ಇರಾನ್‌ನಲ್ಲಿ. ಇಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 0.061 ಅಮೆರಿಕನ್ ಡಾಲರ್ ಇದೆ. ಅಂದರೆ ಭಾರತದ ಕರೆನ್ಸಿ ಲೆಕ್ಕದಲ್ಲಿ ಲೀಟರ್ ಪೆಟ್ರೋಲ್ ಬೆಲೆ 4.41 ರೂ. ಇದು ಕಳೆದ ಎರಡು ವಾರಗಳಲ್ಲಿ ಭಾರತದಲ್ಲಿ ಉಂಟಾದ ಒಟ್ಟು ಪೆಟ್ರೋಲ್ ಬೆಲೆ ಏರಿಕೆಗಿಂತ ಕೊಂಚ ಅಧಿಕವಷ್ಟೇ!

ಫೆ.24ರಂದು ಕರ್ನಾಟಕದ ಪಟ್ಟಣಗಳಲ್ಲಿ ಪೆಟ್ರೋಲ್, ಡೀಸೆಲ್ ದರಫೆ.24ರಂದು ಕರ್ನಾಟಕದ ಪಟ್ಟಣಗಳಲ್ಲಿ ಪೆಟ್ರೋಲ್, ಡೀಸೆಲ್ ದರ

ಅಂಗೋಲಾದಲ್ಲಿ ಪೆಟ್ರೋಲ್ ದರ

ಅಂಗೋಲಾದಲ್ಲಿ ಪೆಟ್ರೋಲ್ ದರ

ವೆಬ್‌ಸೈಟ್ ನೀಡಿರುವ ಮಾಹಿತಿ ಪ್ರಕಾರ ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ ಅಂಗೋಲಾ, ಅತಿ ಕಡಿಮೆ ಬೆಲೆಯಲ್ಲಿ ಪೆಟ್ರೋಲ್ ದೊರಕುವ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ ಮಂಗಳವಾರದ ದರ 0.246 ಡಾಲರ್. ಅಂದರೆ ಭಾರತದ ರೂಪಾಯಿ ಲೆಕ್ಕದಲ್ಲಿ 17.79 ರೂ ಮಾತ್ರ.

ಅಲ್ಜೀರಿಯಾದಲ್ಲಿಯೂ ಅಗ್ಗ

ಅಲ್ಜೀರಿಯಾದಲ್ಲಿಯೂ ಅಗ್ಗ

ಮೆಡಿಟರೇನಿಯನ್ ಸಮುದ್ರ ಕರಾವಳಿ ಹಾಗೂ ಸಹರಾ ಮರುಭೂಮಿಯ ಜತೆ ಹರಡಿಕೊಂಡಿರುವ ಉತ್ತರ ಆಫ್ರಿಕಾದ ಅಲ್ಜೀರಿಯಾ ದೇಶದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 25.02 ರೂಪಾಯಿ ಇದೆ. ಅಮೆರಿಕನ್ ಡಾಲರ್ ಲೆಕ್ಕದಲ್ಲಿ ಇದು 0.346 ಡಾಲರ್. ಭಾರತಕ್ಕೆ ಒಪೆಕ್‌ನಿಂದ ಪೂರೈಕೆಯಾಗುವ ಕಚ್ಚಾ ತೈಲದ ದರಕ್ಕಿಂತಲೂ ಕಡಿಮೆ ಬೆಲೆಗೆ ಇಲ್ಲಿ ಪೆಟ್ರೋಲ್ ಲಭ್ಯ.

ತೈಲ ಬೆಲೆ ಏರಿಕೆಗೆ ಎರಡು ಕಾರಣ ನೀಡಿದ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ತೈಲ ಬೆಲೆ ಏರಿಕೆಗೆ ಎರಡು ಕಾರಣ ನೀಡಿದ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್

ಕುವೈತ್‌ನಲ್ಲಿ ಪೆಟ್ರೋಲ್ ದರ

ಕುವೈತ್‌ನಲ್ಲಿ ಪೆಟ್ರೋಲ್ ದರ

ಇನ್ನು ತೈಲ ಉತ್ಪಾದನೆಯ ಕೊಲ್ಲಿ ದೇಶಗಳಲ್ಲಿ ಒಂದಾದ ಕುವೈತ್‌ನಲ್ಲಿ ಸಹಜವಾಗಿಯೇ ಪೆಟ್ರೋಲ್ ಬೆಲೆ ಕಡಿಮೆ ಇದೆ. ಇಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 0.347 ಡಾಲರ್, ಅಂದರೆ 25.09 ರೂಪಾಯಿ ಇದೆ.

ಕಡಿಮೆ ದರದ ಇತರೆ ದೇಶಗಳು

ಕಡಿಮೆ ದರದ ಇತರೆ ದೇಶಗಳು

ಸುಡಾನ್‌ನಲ್ಲಿ 0.379 ಡಾಲರ್ ಅಥವಾ 27.40 ರೂಪಾಯಿ ದರವಿದೆ. ಕಜಕಿಸ್ತಾನದಲ್ಲಿ ಪೆಟ್ರೋಲ್ ದರ ಭಾರತೀಯ ಕರೆನ್ಸಿಯಲ್ಲಿ 29.64 ರೂ. ಇದೆ. ಕತಾರ್‌ನಲ್ಲಿ 29.79 ರೂ, ತುರ್ಕ್‌ಮೆನಿಸ್ತಾನ್‌ನಲ್ಲಿ 31.02, ನೈಜೀರಿಯಾದಲ್ಲಿ 31.52 ರೂ., ಈಕ್ವೆಡಾರ್‌ನಲ್ಲಿ 33.55 ರೂ., ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ಕಿರ್ಗಿಸ್ತಾನ್‌ನಲ್ಲಿ 35.43 ರೂ., ಮಲೇಷ್ಯಾದಲ್ಲಿ 35.79 ರೂಪಾಯಿ ಇದೆ.

ಈ ದೇಶಗಳಲ್ಲಿ ಬಲು ದುಬಾರಿ

ಈ ದೇಶಗಳಲ್ಲಿ ಬಲು ದುಬಾರಿ

ಭಾರತದಲ್ಲಿ ಪೆಟ್ರೋಲ್ ದರ ಬಹಳ ದುಬಾರಿ ಎಂಬ ಆರೋಪವಿದೆ. ಆದರೆ ಭಾರತಕ್ಕಿಂತಲೂ ತೈಲ ಬೆಲೆ ಅಧಿಕವಾಗಿರುವ ದೇಶಗಳಿವೆ. ಹಾಂಕಾಂಗ್‌ನಲ್ಲಿ ಬುಧವಾರದ ವೇಳೆಗೆ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 175.26 ರೂ (2.424 ಡಾಲರ್) ಇದೆ. ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್‌ನಲ್ಲಿ ಪೆಟ್ರೋಲ್ ಬೆಲೆ 147.64 ರೂಪಾಯಿ. ಇನ್ನು ನೆದರ್‌ಲ್ಯಾಂಡ್ಸ್‌ನಲ್ಲಿ 147.28 ರೂ ದರವಿದೆ. ನಾರ್ವೆಯಲ್ಲಿ 143.59 ರೂಪಾಯಿ ಇದೆ. 50ಕ್ಕೂ ಅಧಿಕ ದೇಶಗಳಲ್ಲಿ ಪೆಟ್ರೋಲ್ ಬೆಲೆ ಭಾರತಕ್ಕಿಂತ ಹೆಚ್ಚಿದೆ.

English summary
Petrol is still available for very cheap prices in some countries and more costlier than India in some other countries. Here is the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X