ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾರ್ ಧಾಮ್ ಯಾತ್ರೆ ಸಂಪನ್ನ, ಬದರಿನಾಥ ದೇಗುಲ ನ.20ಕ್ಕೆ ಬಂದ್

|
Google Oneindia Kannada News

ಡೆಹ್ರಾಡೂನ್, ಅಕ್ಟೋಬರ್ 15: ಕೊರೊನಾವೈರಸ್ ಲಾಕ್‌ಡೌನ್ ಜಾರಿಯಾದಾಗಿನಿಂದ ಹಿಮಾಲಯ ತಪ್ಪಲಿನ ಬದರಿನಾಥ ದೇಗುಲ ಅನೇಕ ಬಾರಿ ಕೂಡಾ ಬಂದ್ ಆಗಿತ್ತು. ಮೇ.15ರಿಂದ ದೇಗುಲಕ್ಕೆ ನಿರ್ಬಂಧಿತ ಪ್ರವೇಶ ಅನುಮತಿ ಸಿಕ್ಕಿತ್ತು. ದೇವಾಲಯದ ಪ್ರಧಾನ ಅರ್ಚಕರು ಸೇರಿದಂತೆ 27 ಮಂದಿ ಪ್ರವೇಶಿಸಿ ಪೂಜಾ ಕೈಂಕರ್ಯ ಕೈಗೊಂಡಿದ್ದರು. ಇದಾದ ಬಳಿಕ ಚಾರ್ ಧಾಮ್ ಯಾತ್ರೆಗೆ ಅನುಮತಿ ಸಿಕ್ಕು, ಬದರಿನಾಥ ದರ್ಶನ ಭಕ್ತರಿಗೆ ಮುಕ್ತವಾಗಿತ್ತು.

ಏಪ್ರಿಲ್‌ನಲ್ಲಿ ನಡೆದ ಕುಂಭಮೇಳದಿಂದಾಗಿ ಕೋವಿಡ್‌ ಸಾಂಕ್ರಾಮಿಕತೆ ವ್ಯಾಪಿಸಿ, ಅದರಿಂದ ಮೇ ತಿಂಗಳಿನಲ್ಲಿ ಸಾವು ನೋವು ಸಂಭವಿಸಿತ್ತು. ಸುಮಾರು 10 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ಕುಂಭ ಮೇಳವು ಉತ್ತರಾಖಂಡ ಮಾತ್ರವಲ್ಲದೇ ದೇಶಾದ್ಯಂತ ಸೂಪರ್ ಸ್ಪ್ರೆಡರ್ ಆಗಿ ಮಾರ್ಪಟ್ಟಿತ್ತು ಎಂದು ವರದಿಗಳು ಬಂದಿತ್ತು, ಈ ಬಗ್ಗೆ ಹೈಕೋರ್ಟ್ ಪೀಠವು ಕಳವಳ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿಡಿಯೋ: ಮೊದಲ ಹಿಮಪಾತ, ಕೇದಾರನಾಥ್, ಬದರಿನಾಥ ಬಂದ್ವಿಡಿಯೋ: ಮೊದಲ ಹಿಮಪಾತ, ಕೇದಾರನಾಥ್, ಬದರಿನಾಥ ಬಂದ್

ಜೂನ್ ತಿಂಗಳಲ್ಲಿ ಚಮೋಲಿ, ರುದ್ರಪ್ರಯಾಗ ಹಾಗೂ ಉತ್ತರಕಾಶಿಯಲ್ಲಿ ಯಾತ್ರೆಗೆ ಸ್ಥಳೀಯರಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು. ಹ ಮಾರ್ಗಸೂಚಿ ಪ್ರಕಟಿಸಲಾಗಿತ್ತು. ಕೊರೊನಾ ನೆಗೆಟಿವ್ ವರದಿ ತರುವುದು ಕಡ್ಡಾಯ ಮಾಡಲಾಗಿತ್ತು. ಕೇದಾರನಾಥಕ್ಕೆ 800 ಮಂದಿ, ಬದರಿನಾಥ 1000, ಗಂಗೋತ್ರಿ 600 ಹಾಗೂ ಯಮುನೋತ್ರಿಗೆ 800 ಮಂದಿಗೆ ಮಾತ್ರ ಪ್ರವೇಶ ಎಂದು ನಿಗದಿ ಮಾಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಲಾಗಿತ್ತು.

ಚಾರ್ ಧಾಮ್ ಯಾತ್ರೆ ಮಂಡಳಿ ಹೊಸ ಮಾರ್ಗಸೂಚಿ

ಚಾರ್ ಧಾಮ್ ಯಾತ್ರೆ ಮಂಡಳಿ ಹೊಸ ಮಾರ್ಗಸೂಚಿ

* ಚಾರ್ ಧಾಮ್ ಯಾತ್ರೆ ಮಂಡಳಿ ವೆಬ್ ತಾಣದಲ್ಲಿ ನೋಂದಣಿ ಕಡ್ಡಾಯಗೊಳಿಸಲಾಗಿದೆ. ಆದರೆ, ದರ್ಶನಕ್ಕೆ ಯಾತ್ರಾ ಇ-ಪಾಸ್ ಅಗತ್ಯವಿಲ್ಲ.
* ಯಾತ್ರಾರ್ಥಿಗಳು ಸಂಪೂರ್ಣವಾಗಿ ಕೊರೊನಾ ಲಸಿಕೆ ಪಡೆದಿರಬೇಕು ಅಥವಾ ಯಾತ್ರೆಗೂ 72 ಗಂಟೆಗಳ ಮುಂಚಿತವಾಗಿ ಕೊರೊನಾ ನೆಗಟಿವ್ ಪ್ರಮಾಣ ಪತ್ರ ಹೊಂದಿರಬೇಕು.
* ಚಮೋಲಿ, ಉತ್ತರ ಕಾಶಿ ಹಾಗೂ ಪ್ರಯಾಗ್ ಜಿಲ್ಲೆಗಳಲ್ಲಿ ಕೋವಿಡ್ 19 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
* ಮುಖ್ಯ ನ್ಯಾಯಮೂರ್ತಿ ಆರ್ ಎಸ್ ಚೌಹಾನ್ ಹಾಗೂ ನ್ಯಾ. ಅಲೋಕ್ ಕುಮಾರ್ ವರ್ಮಾ ಅವರಿದ್ದ ನ್ಯಾಯಪೀಠವು ಈ ಬಗ್ಗೆ ಸ್ಪಷ್ಟ ಮಾಡಿ ನಿರ್ದೇಶನ ನೀಡಿದ್ದು, ಅದರಂತೆ ಲಸಿಕೆ ಪ್ರಮಾಣ ಪತ್ರ, ಕೊವಿಡ್ 19 ಟೆಸ್ಟ್ ವರದಿ ಕಡ್ಡಾಯ.
* ಹೆಚ್ಚಿನ ವಿವರಗಳಿಗೆ ಉತ್ತರಾಖಂಡ ಸರ್ಕಾರದ ಅಧಿಕೃತ ವೆಬ್ ತಾಣದಲ್ಲಿ ಸಂಪೂರ್ಣವಾಗಿ ಮಾರ್ಗಸೂಚಿ ವಿವರ ಪಡೆದುಕೊಳ್ಳುವಂತೆ ಚಾರ್ ಧಾಮ್ ಯಾತ್ರೆ ಮಂಡಳಿ ಕೋರಿದೆ.

ಚಳಿಗಾಲದ ರಜಾ ಅವಧಿಯ ಆರಂಭ

ಚಳಿಗಾಲದ ರಜಾ ಅವಧಿಯ ಆರಂಭ

ಚಾರ್ ಧಾಮ್ ಯಾತ್ರೆಗಳ ಪೈಕಿ ಗಂಗೋತ್ರಿ, ಯಮುನೋತ್ರಿ, ಬದರಿನಾಥ ಹಾಗೂ ಕೇದಾರನಾಥ್ ಯಾತ್ರೆಯನ್ನು ಭಕ್ತರು ಈ ಅವಧಿಯಲ್ಲಿ ಕೈಗೊಳ್ಳುತ್ತಾರೆ. ಅದಿಗುರು ಶಂಕರಾಚಾರ್ಯರು ಸ್ಥಾಪಿಸಿರುವ ಬದ್ರಿನಾಥ್ ದೇಗುಲವು ಸಮುದ್ರಮಟ್ಟದಿಂದ ಸುಮಾರು 10,800 ಅಡಿ ಎತ್ತರದಲ್ಲಿದೆ.

ಈಗ ಬದರಿನಾಥ ದೇಗುಲದ ಚಳಿಗಾಲದ ರಜಾ ಅವಧಿಯ ಆರಂಭ ದಿನಾಂಕ ಪ್ರಕಟಿಸಲಾಗಿದೆ. ನವೆಂಬರ್ 20ರಂದು ಬದರಿನಾಥ ದೇಗುಲ ಬಂದ್ ಆಗಲಿದ್ದು, ಈ ಮೂಲಕ ಅಂದಿನಿಂದಲೇ ಪ್ರಸಕ್ತ ವರ್ಷದ ಚಾರ್ ಧಾಮ್ ಯಾತ್ರೆ ಕೂಡಾ ಸಂಪನ್ನವಾಗಲಿದೆ.

ಚಾರ್ ಧಾಮ್ ಯಾತ್ರೆಯ ಕ್ಯಾಲೆಂಡರ್ ಕೂಡಾ ಬದಲು

ಚಾರ್ ಧಾಮ್ ಯಾತ್ರೆಯ ಕ್ಯಾಲೆಂಡರ್ ಕೂಡಾ ಬದಲು

ಕೋವಿಡ್ 19 ಕಾರಣದಿಂದ ಚಾರ್ ಧಾಮ್ ಯಾತ್ರೆಯ ಕ್ಯಾಲೆಂಡರ್ ಕೂಡಾ ಬದಲಾಗಿದ್ದು, ಪ್ರತಿಕೂಲ ಹವಾಮಾನದ ನಡುವೆಯೂ ಭಕ್ತಾದಿಗಳು ಹಿಮಾಲಯದ ತಪ್ಪಲಿನ ದೇಗುಲಗಳಿಗೆ ತೆರಳಲು ಉತ್ಸಾಹ ತೋರಿದ್ದರು. ಕೇದಾರನಾಥ ಹಾಗೂ ಯಮನೋತ್ರಿ ದೇಗುಲಗಳು ನವೆಂಬರ್ 6ರಂದೇ ಬಂದ್ ಆಗಲಿದ್ದು, ಗಂಗೋತ್ರಿ ದೇಗುಲ ಸಮುಚ್ಚಯಗಳು ನವೆಂಬರ್ 4ರಂದೇ ಮುಚ್ಚಲಿವೆ.

''ಉತ್ತರಾಖಂಡ ಚಾಮೋಲಿ ಜಿಲ್ಲೆಯಲ್ಲಿರುವ ಬದರಿನಾಥ ದೇವಾಲಯವನ್ನು ಚಳಿಗಾಲದ ಕಾರಣ ಮುಚ್ಚಲಾಗುತ್ತೆ, ನವೆಂಬರ್ ತಿಂಗಳಲ್ಲಿ ಹಿಮಪಾತವಾದ ಕಾರಣ ಕೇದಾರನಾಥ, ಬದರಿನಾಥ ದೇಗುಲಗಳನ್ನು ಬಂದ್ ಮಾಡಲಾಗುತ್ತದೆ, ಬದರಿನಾಥ್ ದೇವಾಲಯದ ಪ್ರಧಾನ ಅರ್ಚಕ ಈಶ್ವರಿ ಪ್ರಸಾದ್ ನಂಬೂದರಿ ಅವರು ನವೆಂಬರ್ 20 ಎಂದು ದಿನಾಂಕ ನಿಗದಿ ಮಾಡಿದ್ದಾರೆ,'' ಎಂದು ಜೋಶಿಮಠ ಉಪ ವಿಭಾಗ ಮ್ಯಾಜಿಸ್ಟ್ರೇಟ್ ಅನಿಲ್ ಚನ್ಯಲ್ ಹೇಳಿದ್ದಾರೆ.

ಚಳಿಗಾಲದಲ್ಲಿ ಎಲ್ಲೆಡೆ ಹಿಮಮಳೆ ಜೋರಾಗಲಿದೆ

ಚಳಿಗಾಲದಲ್ಲಿ ಉತ್ತರಕಾಶಿ ಜಿಲ್ಲೆಯ ಗಂಗೋತ್ರಿ, ಹರ್ಸಿಲ್, ಧರಾಲಿ, ಜಾನಕಿಛಟ್ಟಿ, ರಾಣಾಛಟ್ಟಿ ಎಲ್ಲೆಡೆ ಹಿಮಮಳೆ ಜೋರಾಗಲಿದ್ದು, ಈ ಅವಧಿಯಲ್ಲಿ ದೇಗುಲಗಳನ್ನು ಬಂದ್ ಮಾಡಲಾಗುತ್ತದೆ ಎಂದು ಗಂಗೋತ್ರಿ ಮಂದಿರ ಸಮಿತಿ ಅಧ್ಯಕ್ಷ ಸುರೇಶ್ ಸೆಮ್ವಾಲ್ ಹೇಳಿದ್ದಾರೆ.

ಹಿಮಾಲಯದ ಕೆಳಭಾಗದಲ್ಲಿ ಬರುವ ಡೆಹ್ರಾಡೂನ್, ಮಸೌರಿ, ಶಿಮ್ಲಾ ಮುಂತಾದೆಡೆ ಭಾರಿ ಚಳಿ, ಗಾಳಿ ಮಳೆ ನಡುವೆ ಚಮೋಲಿಯಲ್ಲಿ ಔರಿ ಸೈಕಿಂಗ್ ಆಟ, ಸಾಹಸಿಗಳು ಟ್ರೆಕ್ಕಿಂಗ್ ತೆರಳುವುದುಂಟು ಆದರೆ, ಕಳೆದ ವರ್ಷ 56ಕ್ಕೂ ಅಧಿಕ ಮಂದಿ ಭಾರಿ ಕುಳಿರ್ಗಾಳಿಗೆ ಸಿಲುಕಿ ಮೃತಪಟ್ಟ ಬಳಿಕ, ನಿಯಮಾವಳಿಗಳನ್ನು ಜಿಲ್ಲಾಡಳಿತ ಕಠಿಣಗೊಳಿಸಿದೆ.

English summary
Chardham Yatra officilly ends as Badrinath Temple to go Winter Break from November 20, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X