• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಕ್ತದ ಗುಂಪಿನ ಆಧಾರದಲ್ಲಿ ವ್ಯಕ್ತಿತ್ವ, ಗುಣ-ಸ್ವಭಾವ ತಿಳಿಯಿರಿ

By ಅನಿಲ್ ಆಚಾರ್
|

ನಿಮ್ಮ ಬ್ಲಡ್ ಗ್ರೂಪ್ ಯಾವುದು? ಆ ಮೂಲಕ ನಿಮ್ಮ ಗುಣ ಹೇಳಬಹುದು. "ಅವೆಲ್ಲ ನಮ್ಮ ರಕ್ತದಲ್ಲೇ ಇದೆ"ಎಂದು ಯಾರಾದರೂ ಹೇಳಿದರೆ, ಹೌದು ಎಂದು ಒಪ್ಪಿಕೊಳ್ಳಬೇಕಾಗುತ್ತದೆ. ಗುಣ-ಸ್ವಭಾವಕ್ಕೂ ರಕ್ತದ ಗುಂಪಿಗೂ ನೇರ ಸಂಬಂಧವಿದೆ ಎಂಬುದು ಸಾರ್ವತ್ರಿಕವಾದ ಅಭಿಪ್ರಾಯ. ಅದು ಎಷ್ಟರ ಮಟ್ಟಿಗೆ ನಿಜ ಎಂದು ನೀವೇ ಹೇಳಬೇಕು.

ಎ, ಬಿ, ಎಬಿ ಹಾಗೂ ಒ ಹೀಗೆ ನಾಲ್ಕು ಬಗೆಯ ಮುಖ್ಯ ರಕ್ತದ ಗುಂಪುಗಳಿವೆ. ಅವುಗಳಲ್ಲಿ ಪಾಸಿಟಿವ್ ಹಾಗೂ ನೆಗೆಟಿವ್ ಅಂತಲೂ ಇದೆ. ಒ ಹಾಗೂ ಎ ಗುಂಪಿನ ರಕ್ತದವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಆ ನಂತರ ಬಿ, ಎಬಿ ಗುಂಪಿನವರು ಎಂಬುದು ಶೇಕಡಾ ಪ್ರಮಾಣವನ್ನು ಗಮನಿಸಿದಾಗ ತಿಳಿಯುತ್ತದೆ.

ಯಾವ ಸಮಯದಲ್ಲಿ ಹುಟ್ಟಿದವರ ಗುಣ ಹೇಗೆ? ಯಾವ ಉದ್ಯೋಗ-ವೃತ್ತಿ ಸೂಕ್ತ?

ಈ ಲೇಖನದಲ್ಲಿ ಯಾವ್ಯಾವ ರಕ್ತದ ಗುಂಪಿನವರು ಹೇಗೆ ಎಂಬುದನ್ನು ತಿಳಿಸಿಕೊಡಲಾಗಿದೆ. ನಿಮ್ಮ ರಕ್ತದ ಗುಂಪು ಯಾವುದು ಎಂಬುದನ್ನು ಹೋಲಿಸಿಕೊಳ್ಳಿ. ಎಷ್ಟರ ಮಟ್ಟಿಗೆ ಹೋಲಿಕೆ ಆಗುತ್ತಿದೆ ಎಂಬುದನ್ನು ನಮಗೆ ತಿಳಿಸಿ. ಇನ್ನೂ ಹೆಚ್ಚು ಪೀಟಿಕೆ ಬೇಡ. ಮುಖ್ಯ ಲೇಖನಕ್ಕಾಗಿ ಮುಂದೆ ಓದಿ.

ಒ ರಕ್ತದ ಗುಂಪು

ಒ ರಕ್ತದ ಗುಂಪು

ಜಗತ್ತಿನಲ್ಲಿ ಒ ಪಾಸಿಟಿವ್ ಗುಂಪಿನ ರಕ್ತದವರು 38% ನಷ್ಟಿದ್ದರೆ, ನೆಗೆಟಿವ್ ಗುಂಪಿನವರು 6% ಇದ್ದಾರೆ. ಇವರಿಗೆ ಆತ್ಮವಿಶ್ವಾಸ ಹೆಚ್ಚು. ತಮ್ಮ ಬಗ್ಗೆಯೇ ಒಂದು ಬಗೆಯ ಹೆಮ್ಮೆ ಇರುತ್ತದೆ. ಚಟುವಟಿಕೆಯಿಂದ ಇರುವ ಇವರು, ಇತರರ ಜತೆಗೆ ಚೆನ್ನಾಗಿ ಬೆರೆಯುತ್ತಾರೆ. ನೇರವಂತರು. ಉದಾರಿಗಳು. ಸಕಾರಾತ್ಮಕ ಆಲೋಚನೆ ಇರುವವರು. ಸ್ವತಂತ್ರರು. ಅಪಾಯ ಎದುರಿಸುವವರು. ಆದೇಶಗಳನ್ನು ಪಾಲಿಸಲು ಸಾಧ್ಯವಿಲ್ಲದವರು. ತಮ್ಮ ಬಗ್ಗೆಯೇ ಹೆಚ್ಚು ಯೋಚಿಸುವವರು.

ಇತರರನ್ನು ಬಹಳ ಬೇಗ ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತಾರೆ. ಸಮಯಕ್ಕೆ ತಕ್ಕ ಬದಲಾವಣೆ ಮಾಡಿಕೊಂಡು ಅವಕಾಶ ಬಾಚಿಕೊಳ್ಳುತ್ತಾರೆ. ಹೊಸ ಯೋಜನೆ ಆರಂಭಿಸುವುದರಲ್ಲಿ ಹಾಗೂ ಬೆನ್ನಟ್ಟುವುದರಲ್ಲಿ ಬಹಳ ಚುರುಕು. ಸಂಘಟನಾ ಸಾಮರ್ಥ್ಯ ಹೆಚ್ಚಿರುತ್ತದೆ. ತುಂಬ ದೀರ್ಘಕಾಲ ಏಕಾಗ್ರತೆ ಇರುವುದಿಲ್ಲ. ತಮ್ಮ ಭಾವನೆಗಳನ್ನು ಪ್ರಬಲವಾಗಿ ವ್ಯಕ್ತಪಡಿಸುತ್ತಾರೆ.

ಇವರ ವಿರುದ್ಧವಾದ ಆಲೋಚನೆಗಳು ಮನಸಿನಲ್ಲಿ ಇಳಿದುಹೋಗುತ್ತದೆ. ಉದ್ಯಮಶೀಲತಾ ಗುಣ ಹೆಚ್ಚಾಗಿರುತ್ತದೆ. ತಮ್ಮ ಮನಸಿನ ಭಾವನೆ ಹೊರಗೆ ಹಾಕುವುದಕ್ಕೆ ಹೆಚ್ಚು ಯೋಚಿಸುವುದಿಲ್ಲ. ಬಹಳ ಮಹತ್ವಾಕಾಂಕ್ಷಿಗಳು. ಸಾಮಾಜಿಕ ಜೀವನದಲ್ಲೂ ಚಟುವಟಿಕೆಯಿಂದ ಕಾಣಿಸಿಕೊಳ್ಳುತ್ತಾರೆ. ಆದರೆ ಯಾವುದೇ ವಿಷಯದಲ್ಲಿ ಆಳವಾಗಿ ಯೋಚಿಸುವುದಿಲ್ಲ.

ಎ ರಕ್ತದ ಗುಂಪು

ಎ ರಕ್ತದ ಗುಂಪು

ಎ ಪಾಸಿಟಿವ್ ಗುಂಪಿನ ರಕ್ತದವರು ಜಗತ್ತಿನಲ್ಲಿ ಶೇಕಡಾ 34ರಷ್ಟಿದ್ದರೆ, ನೆಗೆಟಿವ್ ಗುಂಪಿನವರು ಶೇ 6 ರಷ್ಟಿದ್ದಾರೆ. ಇವರು ಬಹಳ ವಿಧೇಯರು. ಇತರರ ಬಗ್ಗೆ ಕಾಳಜಿ ಉಳ್ಳವರು. ತ್ಯಾಗ ಮನೋಭಾವದವರು. ನಮ್ರತೆ ಇದ್ದು, ಪ್ರಾಮಾಣಿಕರು. ಭಾವನಾತ್ಮಕ ಜೀವಿಗಳು. ಅಂತರ್ಮುಖಿಗಳು ಹಾಗೂ ಭಯ ಸ್ವಭಾವದವರು.

ಯಾವುದೇ ವಿಚಾರವನ್ನು ಸುಲಭಕ್ಕೆ ಬಾಯಿ ಬಿಟ್ಟು ಮಾತನಾಡುವವರಲ್ಲ. ಬೇಗ ಸಿಟ್ಟು ಬರುತ್ತದೆ. ಸಾರ್ವಜನಿಕ ಅಭಿಪ್ರಾಯದ ಬಗ್ಗೆ ಸೂಕ್ಷ್ಮತೆ ಇರುತ್ತದೆ. ಆದರೆ ಅಂತರ್ಮುಖಿಗಳು. ನಾಚಿಕೆ ಸ್ವಭಾವದವರು. ಇತರರ ಜತೆ ವ್ಯವಹರಿಸುವಾಗ ಬಹಳ ಮುಜುಗರಕ್ಕೆ ಒಳಗಾಗುತ್ತಾರೆ. ಅದಕ್ಕೆ ಇವರ ನಿರಾಶಾವಾದ ಕಾರಣವಾಗಿರುತ್ತದೆ.

ಸಂಬಂಧಗಳನ್ನು ಗೌರವಿಸುತ್ತಾರೆ ಹಾಗೂ ಪ್ರಾಮಾಣಿಕರಾಗಿರುತ್ತಾರೆ. ಬದಲಾವಣೆಗೆ ಹೊಂದಿಕೊಳ್ಳುವ ಪೈಕಿ ಅಲ್ಲ. ಪ್ರಕೃತಿ ಪ್ರಿಯರಾದ ಇವರಿಗೆ ಗುಂಪಿನ ಮಧ್ಯೆ ಇರುವುದು ಕಷ್ಟವಾಗುತ್ತದೆ. ಏಕಾಂತವಾಗಿರಲು ಬಯಸುವ ಇವರು, ರಹಸ್ಯ ಸ್ಥಳಗಳಲ್ಲಿ ದಿನಗಟ್ಟಲೆ ಇದ್ದು ಬಿಡಲು ಇಷ್ಟಪಡುತ್ತಾರೆ. ತಂಡವಾಗಿ ಒಳ್ಳೆ ಕೆಲಸ ಮಾಡುತ್ತಾರೆ. ಆದೇಶಗಳನ್ನು ಚೆನ್ನಾಗಿ ಜಾರಿ ತರುತ್ತಾರೆ.

ನೆಚ್ಚಿನ ಬಣ್ಣ ನಿಮ್ಮ ಗುಣ ಹೇಗೆ ಅಂತಲೂ ಹೇಳುತ್ತೆ ಕೇಳಿ..!

ಬಿ ರಕ್ತದ ಗುಂಪು

ಬಿ ರಕ್ತದ ಗುಂಪು

ಜಗತ್ತಿನಲ್ಲಿ ಬಿ ಪಾಸಿಟಿವ್ ಗುಂಪಿನವರು ಶೇ 9ರಷ್ಟು ಇದ್ದರೆ, ನೆಗೆಟಿವ್ ಗುಂಪಿನವರು ಶೇ 2ರಷ್ಟು ಇದ್ದಾರೆ. ಇವರು ಸದಾ ಉತ್ಸಾಹದಿಂದ ಕೂಡಿರುತ್ತಾರೆ. ಆಶಾವಾದಿಗಳು. ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿರುತ್ತಾರೆ. ಸೂಕ್ಷ್ಮ ಸ್ವಭಾವದವರು. ವಿನಯವಂತರು. ಇತರರನ್ನು ಕ್ಷಮಿಸುವ ಸ್ವಭಾವದವರು.

ಆದರೆ, ಯಾವುದರ ಬಗ್ಗೆಯೂ ಮುಂಚಿತವಾಗಿ ಯೋಜನೆ ಮಾಡಿಕೊಳ್ಳುವುದಿಲ್ಲ. ಜಗಳಕ್ಕೆ ನಿಲ್ಲುತ್ತಾರೆ. ಅಹಂಕಾರದ ಸ್ವಭಾವ ಇರುತ್ತದೆ. ತಮ್ಮ ಗುರಿ ತಲುಪಲು ಸಾಮರ್ಥ್ಯವನ್ನೆಲ್ಲ ಹಾಕುತ್ತಾರೆ. ಕೆಲಸದಲ್ಲೇ ಸದಾ ಮಗ್ನರಾಗಿರುತ್ತಾರೆ. ಆದರೆ ಒಂದು ತಂಡವಾಗಿ ಕೆಲಸ ಮಾಡುವುದು ಇವರಿಗೆ ಸಾಧ್ಯವಿಲ್ಲ.

ಒಬ್ಬರೇ ಕೆಲಸ ಮಾಡುವಂಥವರು ಇವರು. ತಮ್ಮದೇ ಜಾಗದಲ್ಲಿ ಕೆಲಸ ಮಾಡುವುದು ಇವರಿಗೆ ಸಲೀಸು. ಸಾಹಸ ಕಾರ್ಯಗಳನ್ನು ಮಾಡುವುದರಲ್ಲಿ ಆಸಕ್ತಿ ಜಾಸ್ತಿ ಇರುತ್ತದೆ. ತಮ್ಮದೇ ಹಾದಿಯಲ್ಲಿ ಸಾಗಲು ಇಷ್ಟಪಡುತ್ತಾರೆ. ಸಾಮಾಜಿಕವಾಗಿ ಜನರ ಮಧ್ಯೆ ಇರಲು ಇಷ್ಟಪಡುತ್ತಾರೆ. ಖುಷಿಯಿಂದ ಇರಲು ಬಯಸುತ್ತಾರೆ.

ಎಬಿ ರಕ್ತದ ಗುಂಪು

ಎಬಿ ರಕ್ತದ ಗುಂಪು

ಜಗತ್ತಿನಲ್ಲಿ ಎಬಿ ಪಾಸಿಟಿವ್ ರಕ್ತದ ಗುಂಪಿನವರು ಶೇಕಡಾ 4ರಷ್ಟು ಇದ್ದರೆ, ನೆಗೆಟಿವ್ ಗುಂಪು ಶೇ 1ರಷ್ಟಿದೆ. ಜನರ ಮಧ್ಯೆ ಇರುವುದನ್ನು ಇವರು ಬಹಳ ಇಷ್ಟಪಡುತ್ತಾರೆ. ಎಲ್ಲವನ್ನೂ ಸಲೀಸಾಗಿ ತೆಗೆದುಕೊಳ್ಳುತ್ತಾರೆ. ಮತ್ತೊಬ್ಬರ ಬಗ್ಗೆ ಕನಿಕರ ಇರುತ್ತದೆ. ಯಾವುದೇ ಸಂದರ್ಭದಲ್ಲೂ ಸಮತೋಲನದ ಮಾತನಾಡುತ್ತಾರೆ.

ನಿರುಮ್ಮಳರಾಗಿರುತ್ತಾರೆ. ಕ್ರಿಯೇಟಿವ್. ಊಹಿಸಲು ಸಾಧ್ಯವಾಗದಂಥ ನಡೆ ಇವರದು. ಕಲಾವಿದ ಮನಸು ಇರುತ್ತದೆ. ಎಲ್ಲಕ್ಕೂ ಹೊಂದಿಕೊಳ್ಳುವ ಸ್ವಭಾವ ಇದ್ದರೂ ಸ್ವಲ್ಪ ಗ್ಯಾನ ಬಂದ ಗಿರಾಕಿಗಳು. ಅಂದರೆ ಮೂಡಿಗಳು. ಇವರ ಗುಣ ಸ್ವಭಾವದಲ್ಲಿ ವೈರುಧ್ಯಗಳನ್ನು ಕಾಣಬಹುದು. ಸಂಕೋಚ-ದಿಟ್ಟ ಸ್ವಭಾವ ಹೀಗೆ.

ಕೆಲವು ಸಲ ಎಲ್ಲರ ಜತೆ ಬೆರೆಯುತ್ತಾರೆ. ಮತ್ತೆ ಕೆಲ ಸಲ ಒಳಮುಚ್ಚುಗರಂತೆ ಇರುತ್ತಾರೆ. ಹೊರಗಿನಿಂದ ನೋಡುವಾಗ ಬಹಳ ಸಮಾಧಾನದಿಂದ ಇರುವಂತೆ ಕಂಡುಬರುತ್ತಾರೆ. ಸಮಸ್ಯೆಗಳನ್ನು ಗುರುತಿಸುವುದರಲ್ಲಿ ಹಾಗೂ ನಿವಾರಿಸುವುದರಲ್ಲಿ ಎತ್ತಿದ ಕೈ. ನಗರ ಕೇಂದ್ರೀತ ಜೀವನವನ್ನು ಇಷ್ಟ ಪಡುತ್ತಾರೆ. ಯಾವುದೇ ಸಂಗತಿ ಬಹಳ ಬೇಗ ಬೇಸರ ಮೂಡಿಸುತ್ತದೆ. ಬಹಳ ನಿಗೂಢವಾಗಿ ಕಾಣಿಸಿಕೊಳ್ಳುವ ಇವರು, ಸಮಾಜದಲ್ಲಿ ಶಾಂತಿ-ನೆಮ್ಮದಿ ನೆಲೆಸಲು ಕೊಡುಗೆ ನೀಡುತ್ತಾರೆ.

ಜನ್ಮದಿನಾಂಕದ ಪ್ರಕಾರ ನಿಮ್ಮ ಗುಣ-ಸ್ವಭಾವ ಹೇಗೆ?

English summary
Here is the interesting facts. Which explains characteristics of people according to blood group O, A, B, AB.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X