• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ವೈರಸ್ ಲಸಿಕೆ ಸಿಕ್ಕ ಬಳಿಕ ಮುಂದೇನು?: ಭಾರತಕ್ಕಿದೆ ಬಹುದೊಡ್ಡ ಸವಾಲುಗಳು

|

ನವದೆಹಲಿ, ಸೆಪ್ಟೆಂಬರ್ 21: ಮುಂದಿನ ವರ್ಷದ ಆರಂಭದಲ್ಲಿ ಕೊರೊನಾ ವೈರಸ್ ಲಸಿಕೆ ಅಭಿವೃದ್ಧಿಯಾಗುವ ನಿರೀಕ್ಷೆಯಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಇತ್ತೀಚೆಗೆ ಸಂಸತ್‌ನಲ್ಲಿ ತಿಳಿಸಿದ್ದಾರೆ. ಲಸಿಕೆಗೆ ಸಕಲ ಸಿದ್ಧತೆ ಮಾಡಲಾಗಿದೆ. ಒಮ್ಮ ವಿಜ್ಞಾನಿಗಳು ಅನುಮತಿ ನೀಡುತ್ತಿದ್ದಂತೆಯೇ ಲಸಿಕೆಯ ಸಾಮೂಹಿಕ ಉತ್ಪಾದನೆ ಶುರುವಾಗಲಿದೆ. ದೇಶದ ಪ್ರತಿಯೊಬ್ಬರಿಗೂ ಕಡಿಮೆ ಅವಧಿಯಲ್ಲಿ ಲಸಿಕೆಯನ್ನು ತಲುಪಿಸುವ ನಕಾಶೆ ಸಿದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರೋತ್ಸವ ಭಾಷಣದಲ್ಲಿ ಹೇಳಿದ್ದರು.

ಆದರೆ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕರಿಗೆ ಲಸಿಕೆ ಲಭ್ಯವಾಗುವಂತೆ ಮಾಡಲು ಸಾಕಷ್ಟು ಸಮಯಬೇಕಾಗುತ್ತದೆ ಎಂದು ಹರ್ಷವರ್ಧನ್ ತಿಳಿಸಿದ್ದಾರೆ. ಕಳೆದ ಎಂಟು ತಿಂಗಳಲ್ಲಿ 90,000ಕ್ಕೂ ಅಧಿಕ ಸಾವು ಮತ್ತು 5.4 ಮಿಲಿಯನ್ ಮಂದಿಗೆ ಸೋಂಕು ಅಂಟಿಸಲು ಕಾರಣವಾದ ಈ ಪಿಡುಗನ್ನು ನಿಯಂತ್ರಿಸಲು ಭಾರತದ ಮುಂದೆ ಬಹುದೊಡ್ಡ ಸವಾಲಾಗಲಿದೆ.

ಕೋವಿಡ್-19 ವಿಮೆ ರಕ್ಷಣೆಯಲ್ಲಿ ದಕ್ಷಿಣ ಭಾರತವೇ ಮುಂದು

ಕೋವಿಡ್ 19 ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸಲು ಮನುಷ್ಯರಲ್ಲಿನ ಪ್ರತಿರಕ್ಷಕ ಮಟ್ಟವನ್ನು ಹೆಚ್ಚಿಸುವ ಲಸಿಕೆಗಳು ಮಾತ್ರವೇ ನೆರವಾಗಬಲ್ಲವು. ಸುರಕ್ಷಿತ, ಪರಿಣಾಮಕಾರಿ ಮತ್ತು ಕೈಗೆಟಗುವ ದರದಲ್ಲಿ ಲಸಿಕೆ ಲಭ್ಯವಾದ ಬಳಿಕ ಅಧಿಕಾರಿಗಳು ಲಸಿಕೆಗಳ ಸಾಮೂಹಿಕ ಉತ್ಪಾದನೆಯನ್ನು ತ್ವರಿತಗೊಳಿಸಬೇಕು. ಜತೆಗೆ ಸಂಬಂಧಿತ ಎಲ್ಲ ನಿಯಂತ್ರಣ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು ಅದು ಮಾರುಕಟ್ಟೆಗೆ ಬರುವಂತೆ ಮಾಡಬೇಕು. ಮುಂದೆ ಓದಿ...

ಕುಗ್ರಾಮಗಳಿಗೆ ತಲುಪಿಸುವ ಸವಾಲು

ಕುಗ್ರಾಮಗಳಿಗೆ ತಲುಪಿಸುವ ಸವಾಲು

ಲಸಿಕೆಗಳನ್ನು ದೇಶದ ಮೂಲೆ ಮೂಲೆಗೆ ತಲುಪಿಸುವುದು ಕೂಡ ಬಹಳ ಮುಖ್ಯ. ಲಸಿಕೆ ಉತ್ಪಾದನಾ ಘಟಕಗಳಿಂದ ಭಾರತದ ಅತ್ಯಂತ ಒಳಭಾಗದ ಪ್ರದೇಶಗಳಾದ ಈಶಾನ್ಯ ರಾಜ್ಯಗಳಲ್ಲಿ ಹಾಗೂ ಹಿಮಾಲಯದ ಲಡಾಖ್‌ನಂತಹ ಸಂಪರ್ಕವೇ ಇಲ್ಲದ ಸ್ಥಳಗಳಿಗೆ ಸಾಗಿಸುವುದು ಸಣ್ಣ ಮಾತಲ್ಲ. ಮುಖ್ಯವಾಗಿ ಲಸಿಕೆಗಳನ್ನು ಕಡಿಮೆ ಉಷ್ಣಾಂಶದಲ್ಲಿ ಇರಿಸಿಕೊಂಡು ಸಾಗಿಸಬೇಕು. ತಾಪಮಾನ ಹೆಚ್ಚಳ ಇರುವಲ್ಲಿ ಲಸಿಕೆ ಸಂಗ್ರಹಿಸಿದರೆ ಅವು ತಮ್ಮ ಸಾಮರ್ಥ್ಯ ಕಳೆದುಕೊಳ್ಳುತ್ತವೆ.

ಲಕ್ಷಾಂತರ ಮಂದಿಗೆ ತರಬೇತಿ

ಲಕ್ಷಾಂತರ ಮಂದಿಗೆ ತರಬೇತಿ

ಲಕ್ಷಾಂತರ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವ ಸಂಬಂಧ ತರಬೇತಿ ನೀಡಬೇಕು. ಬಳಿಕ 130 ಕೋಟಿ ಜನರಿಗೆ ಅದನ್ನು ಒದಗಿಸಲು ಅನುಕೂಲವಾಗುವಂತೆ ಅವರನ್ನು ದೇಶದ ಎಲ್ಲ ಭಾಗಗಳಿಗೆ ನಿಯೋಜಿಸಬೇಕು. ಲಸಿಕೆಗಾಗಿ ಜನರು ಹೆಚ್ಚು ದೂರ ಪ್ರಯಾಣಿಸುವ ಸ್ಥಿತಿ ಉಂಟಾಗದಂತೆ ನೋಡಿಕೊಳ್ಳಬೇಕು. ಹಾಗೆಯೇ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಈ ಸನ್ನಿವೇಶದ ನಡುವೆಯೇ ಇದನ್ನು ನಡೆಸಬೇಕಾದ ಸವಾಲಿದೆ.

ಕೋವಿಡ್‌ ಸೋಂಕಿನಿಂದ ವೈದ್ಯರ ಸಾವು; ಗುಜರಾತ್‌ಗೆ 3ನೇ ಸ್ಥಾನ

ಆದ್ಯತೆ ಮೇರೆಗೆ ಲಸಿಕೆ

ಆದ್ಯತೆ ಮೇರೆಗೆ ಲಸಿಕೆ

ಮುಂಚೂಣಿ ಕಾರ್ಯಕರ್ತರು, 65 ವರ್ಷ ದಾಟಿದ ಜನರು ಮತ್ತು ತೀವ್ರ ಅನಾರೋಗ್ಯ ಸಮಸ್ಯೆಗಳನ್ನು ಉಳ್ಳವರು ಸರ್ಕಾರದ ಆದ್ಯತೆಯಾಗಬಹುದು. ಅವರ ಪ್ರತಿರಕ್ಷಕ ಸಾಮರ್ಥ್ಯ ಹೆಚ್ಚಿಸುವ ಕಾರ್ಯಕ್ರಮಗಳು ಹಲವು ತಿಂಗಳು ಅಥವಾ ಹಲವು ವರ್ಷಗಳನ್ನೇ ತೆಗೆದುಕೊಳ್ಳಬಹುದು ಎಂದು 'ಇಂಡಿಯಾ ಟುಡೆ' ವರದಿ ಮಾಡಿದೆ.

2024ರ ಅಂತ್ಯದವರೆಗೂ ಗುರಿ ಸಾಧ್ಯವಾಗದು

2024ರ ಅಂತ್ಯದವರೆಗೂ ಗುರಿ ಸಾಧ್ಯವಾಗದು

ಭಾರತೀಯ ವಿಜ್ಞಾನಿಗಳು ಮತ್ತು ಸರ್ಕಾರದ ಭರವಸೆ ಪ್ರಕಾರ 2021ರ ಆರಂಭದಲ್ಲಿ ಲಸಿಕೆಯ ಸಾಮೂಹಿಕ ಉತ್ಪಾದನೆ ಸಾಧ್ಯವಾಗಲಿದೆ. ಆದರೆ ಭಾರತದ ಪ್ರತಿಯೊಬ್ಬರಿಗೂ ಸಾಕಾಗುವಷ್ಟು ಕೊರೊನಾ ವೈರಸ್ ಲಸಿಕೆಗಳನ್ನು ತಯಾರಿಸುವುದು 2024ರ ಅಂತ್ಯದವರೆಗೂ ಸಾಧ್ಯವಾಗಲಾರದು ಎಂದು ಜಗತ್ತಿನ ಅತಿ ದೊಡ್ಡ ಲಸಿಕೆ ಉತ್ಪಾದಕ ಸಂಸ್ಥೆ, ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅದಾರ್ ಪೂನಾವಾಲ ಹೇಳಿದ್ದಾರೆ.

ವಿಶ್ವಸಂಸ್ಥೆ ವರದಿಯಲ್ಲಿ ಭಾರತೀಯ ವಲಸೆ ಕಾರ್ಮಿಕರ ಬಿಕ್ಕಟ್ಟಿನ ಉಲ್ಲೇಖ

ಯುನಿವರ್ಸಲ್ ಇಮ್ಯುನೈಸೇಷನ್ ಕಾರ್ಯಕ್ರಮ

ಯುನಿವರ್ಸಲ್ ಇಮ್ಯುನೈಸೇಷನ್ ಕಾರ್ಯಕ್ರಮ

ಯುನಿವರ್ಸಲ್ ಇಮ್ಯುನೈಸೇಷನ್ ಕಾರ್ಯಕ್ರಮ (ಯುಐಪಿ) ಅಡಿ ಭಾರತವು ಎಲೆಕ್ಟ್ರಾನಿಕ್ ವ್ಯಾಕ್ಸಿನ್ ಇಂಟೆಲಿಜೆನ್ಸ್ ನೆಟ್ವರ್ಕ್ (ಇವಿಐಎನ್) ಹೊಂದಿದೆ. ಇದು ಲಸಿಕೆಗಳ ಸಂಗ್ರಹ, ಅವುಗಳ ಸಾಗಾಟವನ್ನು ಟ್ರ್ಯಾಕ್ ಮಾಡುವ ಮತ್ತು ದೇಶದ 25,000 ಶೈತ್ಯ ಸ್ಥಳಗಳಲ್ಲಿನ ತಾಪಮಾನ ಸಂಗ್ರಹಾಗಾರಗಳ ವಾಸ್ತವಾವಧಿ ಮಾಹಿತಿಗಳನ್ನು ಈ ಡಿಜಿಟಲ್ ವ್ಯವಸ್ಥೆ ಒದಗಿಸುತ್ತದೆ. ಇದರಲ್ಲಿ ಸಮುದಾಯ, ವೈದ್ಯಕೀಯ ಮತ್ತು ಕೃಷಿ ಶೈತ್ಯಾಗಾರ ಘಟಕಗಳನ್ನು ಬಳಸಿಕೊಳ್ಳುವ ಅವಕಾಶವೂ ಇದೆ.

ಇವಿಐಎನ್‌ಗಳನ್ನು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಆರೋಗ್ಯಾಧಿಕಾರಿಗಳು ನಿರ್ವಹಣೆ ಮಾಡುತ್ತಾರೆ. ಕೋವಿಡ್ ಲಸಿಕೆಗಳ ಸಾಗಾಟದ ವಿಧಾನ, ಅವುಗಳನ್ನು ತಲುಪಿಸುವ ಬಗೆ ಸೇರಿದಂತೆ ವಿವಿಧ ಸವಾಲುಗಳನ್ನು ಎದುರಿಸಲು ವ್ಯವಸ್ಥೆ ಸುಧಾರಣೆ ಮಾಡಿಕೊಳ್ಳುವ ಅಗತ್ಯವಿದೆ.

  Bangalore ಇನ್ನೂ ಕೆಲವು ದಿನ ಮಳೆ ಮುಂದುವರೆಯಲಿದೆ | Oneindia Kannada
  ತಜ್ಞರ ಸಮಿತಿ ಸಲಹೆ

  ತಜ್ಞರ ಸಮಿತಿ ಸಲಹೆ

  ವಿವಿಧ ಸಚಿವಾಲಯ ಹಾಗೂ ಅಧಿಕಾರಿಗಳು ಲಸಿಕೆಗಳ ಸಂಗ್ರಹ, ನಿರ್ವಹಣೆ ಮತ್ತು ಪೂರೈಕೆಯ ಜಾಲದಲ್ಲಿ ಮಹತ್ವದ ಕಾರ್ಯ ನಿರ್ವಹಿಸಲಿದ್ದಾರೆ. ಲಸಿಕೆಗಳನ್ನು ಯಾರಿಗೆ ನೀಡಲು ಆದ್ಯತೆ ನೀಡಬೇಕು, ಅದನ್ನು ಯಾವ ಯಾಂತ್ರೀಕೃತ ವ್ಯವಸ್ಥೆಯಲ್ಲಿ ಪೂರೈಸಬೇಕು, ನಿರ್ವಹಣೆ ಮಾಡಬೇಕು ಹಾಗೂ ಅದಕ್ಕೆ ಬೇಕಾದ ಮೂಲಸೌಕರ್ಯಗಳ ಕುರಿತು ಲಸಿಕೆ ಆಡಳಿತದ ರಾಷ್ಟ್ರೀಯ ತಜ್ಞರ ತಂಡ ಸರ್ಕಾರಕ್ಕೆ ಮಾರ್ಗದರ್ಶನ ನೀಡಲಿದೆ.

  ಕೋವಿಡ್ ಲಸಿಕೆ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದು ಖಾತರಿಯಾದ ಕೂಡಲೇ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಅದರ ಉತ್ಪಾದನೆ ಶುರುವಾಗಲಿದೆ. 130 ಕೋಟಿ ಜನರಿಗೆ ಆದ್ಯತೆ ಮೇರೆಗೆ ಅದನ್ನು ತಲುಪಿಸಲು ಅನೇಕ ವ್ಯವಸ್ಥೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆಯಾದರೂ ಬೇಡಿಕೆಗೆ ಅನುಗುಣವಾಗಿ ಲಸಿಕೆಯನ್ನು ಒದಗಿಸುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ.

  English summary
  India even after Coronavirus vaccine is ready, has many challenges to reaches it to the 130 crore population.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X