ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

21ನೇ ಶತಮಾನದ ದೀರ್ಘಾವಧಿ ಚಂದ್ರಗ್ರಹಣ, ಭೂಮಿ ಸಮೀಪ ಮಂಗಳ ಠಿಕಾಣಿ

By ಒನ್ಇಂಡಿಯಾ ಡೆಸ್ಕ್
|
Google Oneindia Kannada News

ನಕ್ಷತ್ರಗಳ ಬಗ್ಗೆ ಅಧ್ಯಯನ ಮಾಡುವ ಅಥವಾ ಬಾಹ್ಯಾಕಾಶ ವಿದ್ಯಮಾನಗಳ ಬಗೆಗಿನ ಕುತೂಹಲಿಗಳು, ತಮ್ಮ ಟೆಲಿಫೋಟೋ ಲೆನ್ಸ್ ಗಳ ಸಾಮರ್ಥ್ಯ ಪರೀಕ್ಷೆ ಮಾಡಬೇಕು ಅನ್ನುವ ಇರಾದೆಯಲ್ಲಿರುವವರು ಸಿದ್ಧರಾಗಿ. ಏಕೆಂದರೆ, ಅವುಗಳನ್ನು ಬಳಸುವ ಅವಶ್ಯಕತೆ ಬರುವಂಥ ಅಪರೂಪದ ಘಟನೆ ಮುಂದಿನ ತಿಂಗಳು ಸಂಭವಿಸಲಿದೆ.

ಇಪ್ಪತ್ತೊಂದನೇ ಶತಮಾನದಲ್ಲೇ ಅತ್ಯಂತ ದೀರ್ಘಾವಧಿಯ ಚಂದ್ರಗ್ರಹಣವು ಜುಲೈ 27- 28ರಂದು ಸಂಭವಿಸಲಿದೆ. 103 ನಿಮಿಷಗಳ ಕಾಲ ಸಂಭವಿಸುವ ಇದನ್ನು 'ಬ್ಲಡ್ ಮೂನ್' ಅಂತೇನೋ ಹೇಳ್ತಾರೆ. ಆದರೆ ಇದು ವೈಜ್ಞಾನಿಕವಾದ ಹೆಸರಲ್ಲ. ಪೂರ್ಣ ಪ್ರಮಾಣದ ಚಂದ್ರ ಗ್ರಹಣ ಎಂಬುದನ್ನು ಹೀಗೆ ಬ್ಲಡ್ ಮೂನ್ ಅನ್ನೋದು ರೂಢಿ.

ಜುಲೈ 27ಕ್ಕೆ ಮಕರದಲ್ಲಿ ಕೇತುಗ್ರಸ್ತ ಚಂದ್ರಗ್ರಹಣ, ಆಚರಣೆ ವಿಚಾರಜುಲೈ 27ಕ್ಕೆ ಮಕರದಲ್ಲಿ ಕೇತುಗ್ರಸ್ತ ಚಂದ್ರಗ್ರಹಣ, ಆಚರಣೆ ವಿಚಾರ

ಈ ವರ್ಷದ ಗ್ರಹಣದಲ್ಲಿ ಚಂದ್ರ ಸಂಪೂರ್ಣವಾಗಿ ಕಾಣದಂತೇನೂ ಆಗಲ್ಲ. ಸೂರ್ಯನ ಕಿರುಣವು ಭೂಮಿಯ ವಾತಾವರಣದಲ್ಲಿ ಚದುರುವ ಕಾರಣಕ್ಕಾಗಿ ಕೆಂಪು ಬಣ್ಣಕ್ಕೆ ತಿರುಗಿದಂತೆ ಗೋಚರಿಸುತ್ತದೆ. ಇನ್ನೂ ವಿಶೇಷ ಏನು ಗೊತ್ತಾ? ಮಂಗಳ ಗ್ರಹ ಕೂಡ ಭೂಮಿಗೆ ಬಹಳ ಹತ್ತಿರದಲ್ಲಿದೆ. ಕಳೆದ ಹದಿನೈದು ವರ್ಷದ ಅವಧಿಯಲ್ಲೇ ಜುಲೈನ ಚಂದ್ರ ಗ್ರಹಣದ ವೇಳೆ ಭೂಮಿಗೆ ಅಂಗಾರಕ ಬಹಳ ಹತ್ತಿರದಲ್ಲಿದೆ.

Centurys longest lunar eclipse on July 27-28th

ಜುಲೈ ಇಪ್ಪತ್ತೇಳನೇ ತಾರೀಕು ಸೂರ್ಯನಿಗೆ ವಿರುದ್ಧವಾಗಿ ಮಂಗಳ ಬರುತ್ತದೆ. ಭೂಮಿ ಹಾಗೂ ಮಂಗಳದ ಮಧ್ಯದ ಕನಿಷ್ಠ ಅಂತರ ಮೂವತ್ತನೇ ತಾರೀಕಿನ ಹೊತ್ತಿಗೆ ಬಹಳ ಕಡಿಮೆ ಆಗುತ್ತದೆ. ಆ ದಿನ ಕೆಂಪು ಗ್ರಹ ಮಂಗಳ ತನ್ನ ಸಹಜ ಮೆರುಗಿಗಿಂತ ಹೆಚ್ಚಿರುತ್ತದೆ. ಗುರು ಗ್ರಹಕ್ಕಿಂತ ದುಪ್ಪಟ್ಟು ಮಿಂಚುತ್ತಿರುತ್ತದೆ. ಆದರೆ ಶುಕ್ರ ಗ್ರಹಕ್ಕಿಂತ ಕಡಿಮೆ ಪ್ರಕಾಶಮಾನವಾಗಿರುತ್ತದೆ.

ಮನಸ್ಸು ಉದ್ವಿಗ್ನಗೊಳಿಸುವ ಜುಲೈ 27ರ ಚಂದ್ರಗ್ರಹಣದ ಪರಿಣಾಮ ಏನಾಗಲಿದೆ?ಮನಸ್ಸು ಉದ್ವಿಗ್ನಗೊಳಿಸುವ ಜುಲೈ 27ರ ಚಂದ್ರಗ್ರಹಣದ ಪರಿಣಾಮ ಏನಾಗಲಿದೆ?

ಆಕಾಶ ಶುಭ್ರವಾಗಿದ್ದರೆ ಅಂದು ಬರಿಗಣ್ಣಿಗೆ ಮಂಗಳ ಗ್ರಹ ಕಾಣಿಸಿಕೊಳ್ಳುತ್ತದೆ. ಹಾಗೆ ಭೂಮಿಗೆ ಅಂಗಾರಕ ಬಹಳ ಹತ್ತಿರ ಬಂದಿದ್ದು 2003ರಲ್ಲಿ. ಈಗ ಮುಂಗಾರಿನ ಸಮಯ. ಜುಲೈ 27 -28ರಂದು ಆಗಸ ಶುಭ್ರವಾಗಿದ್ದರೆ, ಅಂದರೆ ಮೋಡ- ಮಳೆ ಇಲ್ಲದಿದ್ದ ಪಕ್ಷದಿದ್ದಲ್ಲಿ ಅದ್ಭುತ ವಿದ್ಯಮಾನವೊಂದಕ್ಕೆ ನಾವೆಲ್ಲರೂ ಸಾಕ್ಷಿಯಾಗಬಹುದು.

English summary
21st Century's longest lunar eclipse on July 27-28th, 2018. Also Mars is very close to earth. This will be an opportunity to witness cosmic circus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X