ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಹುಲಿ ಸಂತತಿ ಹೆಚ್ಚಳ; ಸಮೀಕ್ಷೆ ಪ್ರಾಥಮಿಕ ವರದಿ ಮಾಹಿತಿ...

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ಬೆಂಗಳೂರು, ಜುಲೈ 29: ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಇದೇ ಡಿಸೆಂಬರ್ ತಿಂಗಳಿನಲ್ಲಿ ರಾಜ್ಯದಲ್ಲಿ ಹುಲಿ ಗಣತಿ ನಡೆಸಲು ಮುಂದಾಗಿದೆ. ಮುಂದಿನ ವಿಶ್ವ ಹುಲಿ ದಿನಾಚರಣೆ (ಏಪ್ರಿಲ್ 29, 2022) ಹೊತ್ತಿಗೆ ವರದಿ ಬಿಡುಗಡೆ ಮಾಡುವುದಾಗಿ ತಿಳಿಸಿದೆ.

ಅಂತರರಾಷ್ಟ್ರೀಯ ಹುಲಿ ದಿನವಾದ ಇಂದು, (ಜುಲೈ 29), ರಾಜ್ಯದಲ್ಲಿ ಹುಲಿ ಸಂತತಿ ಕುರಿತು ಒಂದು ಮೆಲುಕು ನೋಟ ಬೀರೋಣ...

ಅಂತಾರಾಷ್ಟ್ರೀಯ ಹುಲಿ ದಿನ 2021: ಇತಿಹಾಸ, ಮಹತ್ವ, ಘೋಷಣೆಗಳುಅಂತಾರಾಷ್ಟ್ರೀಯ ಹುಲಿ ದಿನ 2021: ಇತಿಹಾಸ, ಮಹತ್ವ, ಘೋಷಣೆಗಳು

ಕೊರೊನಾ ಸಾಂಕ್ರಾಮಿಕ, ಲಾಕ್‌ಡೌನ್ ಹಾಗೂ ಪ್ರವಾಸಿಗರ ನಿರ್ಬಂಧದ ಕಾರಣವಾಗಿ ಈ ಬಾರಿ ಕ್ಯಾಮೆರಾ ಟ್ರ್ಯಾಪ್ ಮೂಲಕ ಅರಣ್ಯ ಇಲಾಖೆ ಹುಲಿ ಗಣತಿಗೆ ಮುಂದಾಗಿದ್ದು, ಮಾರ್ಚ್- ಮೇ ತಿಂಗಳಿನಲ್ಲಿ ಕ್ಯಾಮೆರಾ ಟ್ರ್ಯಾಪ್ ಮೂಲಕ ಅಂದಾಜು ಮಾಡಲಾಗಿದೆ. ಮೀಸಲು ಹಾಗೂ ವನ್ಯಜೀವಿ ಅಭಯಾರಣ್ಯಗಳು ಕ್ಯಾಮೆರಾ ಟ್ರ್ಯಾಪ್ ಹಂಚಿಕೊಳ್ಳುವ ಮೂಲಕ ಹುಲಿಗಣತಿಯನ್ನು ಪೂರ್ಣಗೊಳಿಸಿವೆ. ಮುಂದೆ ಓದಿ...

 ಸಮೀಕ್ಷೆಗೆ ತಂತ್ರಜ್ಞಾನ ಬಳಕೆಗೆ ಒಲವು

ಸಮೀಕ್ಷೆಗೆ ತಂತ್ರಜ್ಞಾನ ಬಳಕೆಗೆ ಒಲವು

ಕೊರೊನಾ ಮೂರನೇ ಅಲೆ ಭೀತಿ ಎದುರಾಗಿದ್ದು, ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ, ಭಾರತೀಯ ವನ್ಯಜೀವಿ ಸಂಸ್ಥೆಯು, ಸ್ಥಳಗಳಿಗೆ ಭೇಟಿ ನೀಡಿ ಸರ್ವೇ ನಡೆಸುವುದನ್ನು ತಗ್ಗಿಸಲು ಬಯಸಿದ್ದು, ತಂತ್ರಜ್ಞಾನವನ್ನು ಗಣತಿಗೆ ಹೆಚ್ಚು ಬಳಸಲು ಆಸಕ್ತಿ ತೋರಿದೆ.

 ಹುಲಿಗಳ ಸಂಖ್ಯೆ ಶೇ 5-10ರಷ್ಟು ಹೆಚ್ಚಳ

ಹುಲಿಗಳ ಸಂಖ್ಯೆ ಶೇ 5-10ರಷ್ಟು ಹೆಚ್ಚಳ

ಸದ್ಯಕ್ಕೆ ದೊರೆತಿರುವ ಪ್ರಾಥಮಿಕ ವರದಿಯ ಮೌಲ್ಯಮಾಪನದಲ್ಲಿ ಹಿಂದಿನ ಗಣತಿಗೆ ಹೋಲಿಸಿದರೆ ಹುಲಿಗಳ ಸಂಖ್ಯೆ ಶೇ 5-10ರಷ್ಟು ಹೆಚ್ಚಾಗಿರುವುದಾಗಿ ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಹುಲಿ ಸಂರಕ್ಷಣಾ ಕ್ರಮಗಳು ಹೆಚ್ಚಾಗಿದ್ದು, ಹುಲಿಗಳ ಬೇಟೆಯಾಡುವುದು ಕಡಿಮೆಯಾಗಿದೆ. ಕೊರೊನಾ ಸಾಂಕ್ರಾಮಿಕ ಸಮಯ ಹುಲಿ ಸಂತತಿ ಹೆಚ್ಚಳಕ್ಕೆ ಪರೋಕ್ಷವಾಗಿ ನೆರವಾಗಿದೆ.

ಬಿ.ಆರ್. ಹಿಲ್ಸ್‌ನಲ್ಲಿ ಹುಲಿಗಳ ಗಾಂಭೀರ್ಯದ ನಡಿಗೆಬಿ.ಆರ್. ಹಿಲ್ಸ್‌ನಲ್ಲಿ ಹುಲಿಗಳ ಗಾಂಭೀರ್ಯದ ನಡಿಗೆ

 ಖಂಡಿತ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಿರಲಿದೆ

ಖಂಡಿತ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಿರಲಿದೆ

ಕಾಳಿ ಹುಲಿ ಸಂರಕ್ಷಣಾ ಮೀಸಲು ಪ್ರದೇಶ ಪಶ್ಚಿಮ ಘಟ್ಟದ ಉತ್ತರ ಭಾಗಗಳಿಂದ ಗೋವಾವರೆಗೂ ಖಂಡಿತ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳ ತೋರಿಸಲಿವೆ ಎಂದು ಎನ್‌ಟಿಸಿಎ ಹಾಗೂ ಡಬ್ಲುಐಐ ಸದಸ್ಯರು ತಿಳಿಸಿದ್ದಾರೆ. ಕಾವೇರಿ ವನ್ಯಜೀವಿ ಅಭಯಾರಣ್ಯ ಹಾಗೂ ಕುದುರೆಮುಖದಂಥ ಸ್ಥಳಗಳಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿದ್ದರೂ ಕರ್ನಾಟಕದಲ್ಲಿ ಹೆಚ್ಚು ಹುಲಿ ಸಂರಕ್ಷಿತ ಮೀಸಲು ಪ್ರದೇಶಗಳೆಂದು ಘೋಷಿಸಿಲ್ಲದ್ದರಿಂದ ಕೇರಳದ ವಯನಾಡು ವನ್ಯಜೀವಿ ಅಭಯಾರಣ್ಯ ಸಂಭಾವ್ಯ ಮೀಸಲು ಪ್ರದೇಶವಾಗಲಿದೆ ಎಂದು ಎನ್‌ಟಿಸಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ಕ್ಯಾಮೆರಾ ಟ್ರ್ಯಾಪ್ ಮೂಲಕ ಗಣತಿ

ಕ್ಯಾಮೆರಾ ಟ್ರ್ಯಾಪ್ ಮೂಲಕ ಗಣತಿ

ಹುಲಿ ಸಂತತಿ ಅಂದಾಜನ್ನು ಈ ಡಿಸೆಂಬರ್‌ ತಿಂಗಳಿನಲ್ಲಿ ಆರಂಭಿಸಿ ಮುಂದಿನ 2022ರ ಜನವರಿ ತಿಂಗಳಿನಲ್ಲಿ ಪೂರ್ಣಗೊಳಿಸಲು ಕೆಲಸ ಆರಂಭಿಸಲಾಗಿದೆ. ಹಲವು ಅಭಯಾರಣ್ಯಗಳಲ್ಲಿ ಕ್ಯಾಮೆರಾ ಟ್ರ್ಯಾಪ್ ಅಂದಾಜನ್ನು ಮಾಡಲಾಗಿದೆ. ಮೊಬೈಲ್ ಫೋನ್ ತಂತ್ರಜ್ಞಾನವನ್ನು ಗಣತಿಗೆ ಬಳಸಿಕೊಳ್ಳಲು ಆದ್ಯತೆ ನೀಡಲಾಗಿದೆ. ಕಳೆದ ಬಾರಿ ಹುಲಿ ಗಣತಿಗೆ 50% ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿತ್ತು. ಈ ಬಾರಿ ಸಂಪೂರ್ಣ ಇಲ್ಲವೇ 90% ತಂತ್ರಜ್ಞಾನವನ್ನು ಬಳಸಿಕೊಳ್ಳುವ ಗುರಿ ಹೊಂದಲಾಗಿದೆ ಎಂದು ಡಬ್ಲುಐಐ ವಿಜ್ಞಾನಿ ಖುಮಾರ್ ಖುರೇಶಿ ತಿಳಿಸಿದ್ದಾರೆ.

ರಷ್ಯಾದಲ್ಲಿ 2010ರಲ್ಲಿ ನಡೆದ ಸೇಂಟ್ ಪೀಟರ್ಸ್ ಬರ್ಗ್ ಹುಲಿ ಸಮಾವೇಶದಲ್ಲಿ ಅಂತರರಾಷ್ಟ್ರೀಯ ಹುಲಿ ದಿನ ಆಚರಣೆಗೆ ತೀರ್ಮಾನಿಸಲಾಯಿತು. ಅಳಿವಿನಂಚಿನಲ್ಲಿ ಇರುವಂತಹ ಹುಲಿಗಳ ಸಂರಕ್ಷಣೆ ಮಾಡುವುದು ಇದರ ಮುಖ್ಯ ಉದ್ದೇಶ. ಹುಲಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ರಾಷ್ಟ್ರಗಳು ಹುಲಿಗಳ ಸಂಖ್ಯೆಯನ್ನು 2020ರ ವೇಳೆಗೆ ದ್ವಿಗುಣ ಮಾಡಬೇಕೆಂದು ನಿರ್ಧಾರ ತೆಗೆದುಕೊಳ್ಳಲಾಯಿತು.

English summary
National Tiger Conservation Authority (NTCA) is keen on conducting the tiger census in December and releasing the new estimates by the next World Tiger Day
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X