ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Timeline:ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಇದ್ದ ಹೆಲಿಕಾಪ್ಟರ್ ಪತನ

|
Google Oneindia Kannada News

ನವದೆಹಲಿ, ಡಿಸೆಂಬರ್ 09: ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಪತ್ನಿ ಮಧುಲಿಕಾ ಸೇರಿದಂತೆ 14 ಮಂದಿ ಇದ್ದ ಸೇನಾ ಹೆಲಿಕಾಪ್ಟರ್ ಬುಧವಾರ ತಮಿಳುನಾಡಿನಲ್ಲಿ ಪತನವಾಗಿತ್ತು.

ಹೆಲಿಕಾಪ್ಟರ್‌ನಲ್ಲಿದ್ದ 13 ಮಂದಿ ಕೊನೆಯುಸಿರೆಳೆದಿದ್ದರು. ತಮಿಳುನಾಡಿನ ಕುನೂರ್ ಬಳಿ ಹೆಲಿಕಾಪ್ಟರ್ ಪತನವಾಗಿತ್ತು. ಬಿಪಿನ್ ರಾವತ್ ಸೇರಿದಂತೆ ಸೇನಾಧಿಕಾರಿಗಳನ್ನು ಹೊತ್ತು ಹೊರಟಿದ್ದ ಹೆಲಿಕಾಪ್ಟರ್‌ಗೆ ಏಕಾಏಕಿ ಏನಾಯಿತು ಎನ್ನುವುದರ ಕುರಿತು ಟೈಂ ಲೈನ್ ಇಲ್ಲಿದೆ.

Breaking: ಸೇನಾ ಹೆಲಿಕಾಪ್ಟರ್ ಪತನ ಕುರಿತು ಲೋಕಸಭೆಯಲ್ಲಿ ರಾಜನಾಥ್ ಸಿಂಗ್ ಹೇಳಿಕೆBreaking: ಸೇನಾ ಹೆಲಿಕಾಪ್ಟರ್ ಪತನ ಕುರಿತು ಲೋಕಸಭೆಯಲ್ಲಿ ರಾಜನಾಥ್ ಸಿಂಗ್ ಹೇಳಿಕೆ

*ಬೆಳಗ್ಗೆ 08.45: ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಹಾಗೂ ಇತರೆ 7 ಜನರಿದ್ದ ವಿಮಾನ ದೆಹಲಿಯ ಪಾಲಂ ನಿಲ್ದಾಣದಿಂದ ಹೊರಟಿತು.
*ಬೆಳಗ್ಗೆ 11.30: ಕೊಯಮತ್ತೂರು ಸಮೀಪದ ಸೂಲೂರಿನಲ್ಲಿರುವ ವಾಯುನೆಲೆಯಲ್ಲಿ ಇಳಿದ ವಿಮಾನ
*ಬೆಳಗ್ಗೆ 11.48: ರಾವತ್ ಸೇರಿದಂತೆ 14ರನ್ನು ಹೊತ್ತ ಎಂಐ-17ವಿ5 ಹೆಲಿಕಾಪ್ಟರ್ ವೆಲ್ಲಿಂಗ್ಟನ್ ಪಯಣ
*ಬೆಳಗ್ಗೆ 12.15: ಊಟಿಯಿಂದ 20ಕಿಲೋಮೀಟರ್ ದೂರದಲ್ಲಿರುವ, ಕೂನೂರು ಸಮೀಪದ ನಂಜಪ್ಪಂಚತಿರಂ ಎಂಬಲ್ಲಿ ಪತನ, ವೆಲ್ಲಿಂಗ್ಟನ್‌ನ ಸೇನಾ ಕೇಂದ್ರದ ಹೆಲಿಪ್ಯಾಡ್‌ನಲ್ಲಿ ಲ್ಯಾಂಡಿಂಗ್ ಆಗಲು 10 ನಿಮಿಷ ಬಾಕಿ ಇದ್ದಾಗ ಕಾಪ್ಟರ್ ಅಪಘಾತಕ್ಕೀಡಾಗಿದೆ. ಅಪಘಾತ ಸ್ಥಳಕ್ಕೂ ಲ್ಯಾಂಡಿಂಗ್ ಆಗಬೇಕಿದ್ದ ಜಾಗಕ್ಕೂ 10 ಕಿ.ಮೀ ಅಂತರವಿದೆ.

CDS General Bipin Rawat,12 Others Die After IAF Chopper Crashes: Timeline

ಹೆಲಿಕಾಪ್ಟರ್‌ನಲ್ಲಿದ್ದವರ ಹೆಸರುಗಳು
*ಜನರಲ್ ಬಿಪಿನ್ ರಾವತ್ (ಸಿಡಿಎಸ್)
*ಮಧುಲಿಕಾ ರಾವತ್
*ಬ್ರಿಗೇಡಿಯರ್ ಎಲ್‌ಎಸ್ ಲಿಡ್ಡರ್
*ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್
*ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್
*ಸ್ಕ್ವಾಡ್ರನ್ ಲೀಡರ್ ಕುಲದೀಪ್
*ಜೂನಿಯರ್ ವಾರಂಟ್ ಆಫೀಸರ್ ಪ್ರದೀಪ್
*ಜೆಡ್ಬ್ಲ್ಯೂಒ ದಾಸ್
*ನಾಯಕ್ ಗುರುಸೇವಕ್ ಸಿಂಗ್
*ನಾಯಕ್ ಜಿತೇಂದ್ರ ಕುಮಾರ್
*ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್
*ಹವಾಲ್ದಾರ್ ಸತ್ಪಾಲ್
*ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್
ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರು ಪ್ರಯಾಣಿಸುತ್ತಿದ್ದ ಎಂಐ-17ವಿ5 ಹೆಲಿಕಾಪ್ಟರ್ ದುರಂತದ ಪ್ರತ್ಯಕ್ಷದರ್ಶಿಗಳಲ್ಲಿ ಕೃಷ್ಣಸ್ವಾಮಿ ಒಬ್ಬರು.

ಹೆಲಿಕಾಪ್ಟರ್‌ನಿಂದ ಜನರು ಬೀಳುವ ಭಯಾನಕ ದೃಶ್ಯ ಕಂಡು ಅಪಘಾತಗೊಂಡ ಅವರು, ತಕ್ಷಣವೇ ತಮ್ಮ ನೆರೆಮನೆಯ ಯುವಕ ಕುಮಾರ್ ಎಂಬುವವರಿಗೆ ವಿಷಯ ತಿಳಿಸಿದ್ದಾರೆ.

ಕುಮಾರ್ ಅವರು ಕೂಡಲೇ ತಮ್ಮ ಮೊಬೈಲ್ ಫೋನ್‌ನಿಂದ ಕರೆ ಮಾಡಿ, ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಘಟನೆಯ ಮಾಹಿತಿ ನೀಡಿದ್ದಾರೆ.

ಹೆಲಿಕಾಪ್ಟರ್ ಹೊತ್ತಿ ಉರಿದು ಬಿದ್ದ ಮೇಲೆ ದಟ್ಟ ಹೊಗೆ ಬೆಂಕಿ ಬಿಟ್ಟು ನಮಗೆ ಬೇರೇನೂ ಕಾಣಿಸಿಲ್ಲ. ಆದರೆ ಅದು ಅಪ್ಪಳಿಸುವುದನ್ನು, ಅದರಿಂದ ಮೂವರು ಬೀಳುತ್ತಿರುವುದನ್ನು ನೋಡಿದೆ, ಆ ದೃಶ್ಯ ಭಯಾನಕವಾಗಿತ್ತು ಎಂದು ಕೃಷ್ನಸ್ವಾಮಿ ಹೇಳಿದ್ದಾರೆ.

ನೀಲಗಿರಿಯ ದಟ್ಟವಾದ ಕಾಡಿನಿಂದ ಆವೃತವಾಗಿದ್ದು, ವೆಲ್ಲಿಂಗ್ಟನ್‌ನಲ್ಲಿ ಸೇರಬೇಕಾದ ಸ್ಥಳಕ್ಕೆ ಇನ್ನೇನು 10 ನಿಮಿಷವಷ್ಟೇ ಬಾಕಿ ಇದ್ದಾಗ ಹೆಲಿಕಾಪ್ಟರ್ ಪತನಗೊಂಡಿತು.

ಆ ಜಾಗದ ಸುತ್ತಮುತ್ತ 200ಕ್ಕೂ ಹೆಚ್ಚು ಮನೆಗಳಿದ್ದವು. ಈ ಪ್ರದೇಶಕ್ಕೂ ಅಪಘಾತ ನಡೆದ ಸ್ಥಳಕ್ಕೂ ಇನ್ನೂರು-ಮುನ್ನೂರು ಮೀಟರ್ ಅಷ್ಟೇ ಅಂತರವಿದ್ದು, ಸ್ಥಳೀಯರು ಪವಾಡಸದೃಶವಾಗಿ ಪಾರಾಗಿದ್ದಾರೆ. ಇಲ್ಲಿನ ನಿವಾಸಿಗಳ ಪೈಕಿ ಬಹುತೇಕರು ಚಹಾ ತೋಟಗಳಲ್ಲಿ ಕೆಲಸ ಮಾಡುವವರಾಗಿದ್ದಾರೆ. ಘಟನೆ ಸಂಭವಿಸಿದಾಗ ಕೆಲವೇ ಮಂದಿ ತಮ್ಮ ಮನೆಗಳಲ್ಲಿದ್ದರು.

ಸುದ್ದಿ ತಿಳಿಯುತ್ತಿದ್ದಂತೆ ಎಂಟು ತುರ್ತು ಆಂಬ್ಯುಲೆನ್ಸ್‌ ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯಾಚರಣೆಗೆ ನೆರವಾಗಿದ್ದಾರೆ. ಬರ್ಲಿಯಾರ್ ಗ್ರಾಮದ ಹತ್ತಿರದಲ್ಲೇ ಹೆಲಿಕಾಪ್ಟರ್ ಹಾರುತ್ತಿರುವುದನ್ನು ನಾನು ನೋಡಿದೆ. ಮರವೊಂದಕ್ಕೆ ಡಿಕ್ಕಿ ಹೊಡೆದು, ಪತನಗೊಂಡಿತು. ಪೈಲಟ್ ಅವರನ್ನು ಮಾತ್ರ ಜೀವಂತವಾಗಿ ಹೊರತೆಗೆಯಲು ಸಾಧ್ಯವಾಯಿತು ಎಂದರು.

ಸುಟ್ಟು ಕರಕಲಾದ ಸೇನಾ ಅಧಿಕಾರಿಗಳ ದೇಹಗಳನ್ನು ಹೆಲಿಕಾಪ್ಟರ್‌ನಿಂದ ಹೊರತೆಗೆಯುತ್ತಿರುವುದನ್ನು ಕಂಡವರೂ ದಿಗ್ಭ್ರಮೆಗೊಂಡಿದ್ದರು.

English summary
In a shocking incident on Wednesday, India's first CDS General Bipin Rawat, his wife Madhulika, 11 others died in a IAF's chopper crash in Coonoor, Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X