ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Black Tea: ಕಪ್ಪು ಚಹಾದಿಂದ ಕೊರೊನಾ ವೈರಸ್ ನಿಯಂತ್ರಣ

|
Google Oneindia Kannada News

ನವದೆಹಲಿ, ಆಗಸ್ಟ್ 12: ಒಂದೇ ಒಂದು ಕಪ್ ಅಥವಾ ಎರಡು ಕಪ್ ಕಪ್ಪು ಚಹಾ(Black Tea)ದಿಂದ ಸಾಕಷ್ಟು ಆರೋಗ್ಯಕಾರಿ ಪ್ರಯೋಜನಗಳಿವೆ. ಒಟ್ಟಾರೆ ಆರೋಗ್ಯ ಪ್ರಯೋಜನಗಳ ಬಗ್ಗೆ ನಾವು ದೀರ್ಘಕಾಲದವರೆಗೆ ಹೇಳಿದ್ದೇವೆ.

ಕಪ್ಪು ಚಹಾವು ಸಮಗ್ರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ SARS-CoV-2 ವೈರಸ್‌ನ್ನು ಮತ್ತೆ ಬಾರದಂತೆ ನಿಯಂತ್ರಿಸುತ್ತದೆ ಎಂಬುದು ಸಂಶೋಧಕರು ನಡೆಸಿರುವ ಸಂಶೋಧನೆಗಳಿಂದ ಇದೀಗ ಬೆಳಕಿಗೆ ಬಂದಿದೆ.

ಕಪ್ಪು ಚಹಾ ಮತ್ತು ಹಾಲಿನ ಚಹಾ ಯಾವ ಚಹಾವನ್ನು ಕುಡಿದರೆ ಉತ್ತಮಕಪ್ಪು ಚಹಾ ಮತ್ತು ಹಾಲಿನ ಚಹಾ ಯಾವ ಚಹಾವನ್ನು ಕುಡಿದರೆ ಉತ್ತಮ

ಹೈದರಾಬಾದ್ ಮೂಲದ ಸೆಂಟರ್ ಫಾರ್ ಸೆಲ್ಯುಲಾರ್ ಅಂಡ್ ಮಾಲಿಕ್ಯುಲರ್ ಬಯಾಲಜಿ (CCMB) ಮತ್ತು ಹಿಮಾಚಲ ಪ್ರದೇಶದ ಇನ್‌ಸ್ಟಿಟ್ಯೂಟ್ ಆಫ್ ಹಿಮಾಲಯನ್ ಬಯೋರೆಸೋರ್ಸ್ ಟೆಕ್ನಾಲಜಿ (IHBT)ಯ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಥೀಫ್ಲಾವಿನ್ 3-ಗ್ಯಾಲೇಟ್, ನೈಸರ್ಗಿಕವಾಗಿ ಥೀಫ್ಲಾವಿನ್‌ನಿಂದ ಪಡೆದ ಜೈವಿಕ ಸಕ್ರಿಯ ಅಣುವಾಗಿದೆ. ಇದು ಕಪ್ಪು ಚಹಾದಲ್ಲಿ ಹೇರಳವಾಗಿ ಕಂಡುಬರುತ್ತದೆ. ಇದರಿಂದ SARS-CoV-2 ಕೊರೊನಾವೈರಸ್‌ನ ಪುನರಾವರ್ತನೆಯನ್ನು ಮಿತಿಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ತೋರಿಸಿ ಕೊಟ್ಟಿದೆ.

ಕಪ್ಪು ಚಹಾದಲ್ಲಿದೆ ಮಾಯಾಮದ್ದು

ಕಪ್ಪು ಚಹಾದಲ್ಲಿದೆ ಮಾಯಾಮದ್ದು

ಕಪ್ಪು ಚಹಾದಲ್ಲಿ ಇರುವ 'ಥಿಫ್ಲಾವಿನ್ 3-ಗ್ಯಾಲೇಟ್ SARS-CoV-2ನ ಮುಖ್ಯ ಪ್ರೋಟೀಸ್(Mpro) ಅನ್ನು ಪ್ರತಿಬಂಧಿಸುವ ಶಕ್ತಿಯನ್ನು ಹೊಂದಿದೆ. ವಿಟ್ರೋದಲ್ಲಿ ಅದರ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಎಂಬುದನ್ನು CCMB-IHBT ಸಹಯೋಗದಲ್ಲಿ ನಡೆಸಿದ ಅಧ್ಯಯನವು ಬಹಿರಂಗಪಡಿಸಿದೆ. ಈ ಕುರಿತು ಜುಲೈ 30ರಂದು ಪ್ರತಿಷ್ಠಿತ ನೇಚರ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ಥಿಪ್ಲಾವಿನ್ ಮೂಲಕ ಆರೋಗ್ಯಕಾರಿ ಮದ್ದು

ಥಿಪ್ಲಾವಿನ್ ಮೂಲಕ ಆರೋಗ್ಯಕಾರಿ ಮದ್ದು

ಥಿಪ್ಲಾವಿನ್ ಕಪ್ಪು ಚಹಾದಲ್ಲಿನ ರಾಸಾಯನಿಕವಾಗಿದ್ದು, ಇದು ಹಸಿರು ಚಹಾದ ಹುದುಗುವಿಕೆಯಿಂದ ರೂಪುಗೊಳ್ಳುತ್ತದೆ. ಇದನ್ನು ಸಾಮಾನ್ಯವಾಗಿ ವಿವಿಧ ವೈದ್ಯಕೀಯ ಪರಿಸ್ಥಿತಿಗಳಿಗೆ ಔಷಧವಾಗಿ ಬಳಸಲಾಗುತ್ತದೆ. ಕಠಿಣ ವೈಜ್ಞಾನಿಕ ಮಾಹಿತಿಯ ಕೊರತೆಯ ಹೊರತಾಗಿಯೂ, ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಹೃದ್ರೋಗ, ಸ್ಥೂಲಕಾಯತೆ, ಮಧುಮೇಹ ಮತ್ತು ಕ್ಯಾನ್ಸರ್ ಅನ್ನು ನಿಯಂತ್ರಿಸಲು ಜನರು ನೈಸರ್ಗಿಕವಾಗಿ ಕಂಡುಬರುವ ಥಿಪ್ಲಾವಿನ್ ಅನ್ನು ಕಪ್ಪು ಚಹಾದ ಮೂಲಕ ಸೇವಿಸುತ್ತಾರೆ.

ಕೊರೊನಾ ವೈರಸ್ ನಿಯಂತ್ರಿಸಲು ಥಿಫ್ಲಾವಿನ್ 3-ಗ್ಯಾಲೇಟ್ ಔಷಧಿ

ಕೊರೊನಾ ವೈರಸ್ ನಿಯಂತ್ರಿಸಲು ಥಿಫ್ಲಾವಿನ್ 3-ಗ್ಯಾಲೇಟ್ ಔಷಧಿ

ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನಿಂದ ತಪ್ಪಿಸಿಕೊಳ್ಳುವುದಕ್ಕೆ ಜನರು ಔಷಧಿಗಳ ಹುಡುಕಾಟದಲ್ಲಿದ್ದಾರೆ. ಆದರೆ ನಿತ್ಯ ನೀವು ಸೇವಿಸುವ ಕಪ್ಪು ಚಹಾದಿಂದಲೇ ವೈರಸ್ ಮತ್ತೆ ಬಾರದಂತೆ ನಿಯಂತ್ರಿಸಲು ಸಾಧ್ಯವಿದೆ ಎಂದು CCMB-IHBT ಸಂಶೋಧಕರು ಹೇಳಿದ್ದಾರೆ. SARS-CoV-2 ಅನ್ನು ತ್ವರಿತವಾಗಿ ಗುಣಪಡಿಸುವ ಸಾಮರ್ಥ್ಯವನ್ನು ಹಾಗೂ ಮತ್ತೆ ಬಾರದಂತೆ ತಡೆಗಟ್ಟುವ ಸಾಮರ್ಥ್ಯವನ್ನು ಕಪ್ಪು ಚಹಾದಲ್ಲಿರುವ ಥಿಫ್ಲಾವಿನ್ 3-ಗ್ಯಾಲೇಟ್ ಅಂಶವು ಒಳಗೊಂಡಿರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಕೋವಿಡ್-19 ಪುನರಾವರ್ತನೆಗೆ ಕಾರಣವೇನು?

ಕೋವಿಡ್-19 ಪುನರಾವರ್ತನೆಗೆ ಕಾರಣವೇನು?

"SARS-CoV-2ನ ಪುನರಾವರ್ತನೆಯಲ್ಲಿ ಪ್ರೋಟೀಸ್ (Mpro) ಪ್ರಮುಖ ಪಾತ್ರ ವಹಿಸುತ್ತದೆ. ಈ ಪ್ರೋಟೀಸ್ ಅನ್ನು ನಿಯಂತ್ರಿಸುವುದಕ್ಕೆ ನಮ್ಮ ಸಂಶೋಧಕರು ಪರಿಶೋಧನೆ ನಡೆಸಿದರು. ಆಗ ಥಿಫ್ಲಾವಿನ್ 3-ಗ್ಯಾಲೇಟ್ ಮೂಲಕ ಕೊರೊನಾ ವೈರಸ್ ಸೋಂಕು ಮತ್ತೆ ಪುನರಾವರ್ತನೆ ಆಗದಂತೆ ನಿರ್ಬಂಧಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ಹಿರಿಯ ವಿಜ್ಞಾನಿ ಬಿ ಕಿರಣ್ ಕುಮಾರ್ ಅವರ ಸಿಸಿಎಂಬಿ ಸಂಶೋಧನಾ ಪ್ರಯೋಗಾಲಯದ ನೇತೃತ್ವದ ಅಧ್ಯಯನವು ಕಂಡುಕೊಂಡಿದೆ.

"ನಮ್ಮ ಹಿಂದಿನ ಪ್ರಾಥಮಿಕ ಆಣ್ವಿಕ ಡಾಕಿಂಗ್ ಅಧ್ಯಯನಗಳು ಥಿಫ್ಲಾವಿನ್ 3-ಗ್ಯಾಲೇಟ್ ಅಟಜಾನವಿರ್, ದಾರುನಾವಿರ್ ಮತ್ತು ಲೋಪಿನಾವಿರ್‌ನಂತಹ ಮರು ಉತ್ಪಾದಿತ ಔಷಧಿಗಳಿಗಿಂತ ಉತ್ತಮ ಡಾಕಿಂಗ್ ಸ್ಕೋರ್‌ಗಳನ್ನು ಪ್ರದರ್ಶಿಸಿದೆ ಎಂದು ತೋರಿಸಿದೆ. ಈ ಅಧ್ಯಯನದಲ್ಲಿ, ಸಾಂಪ್ರದಾಯಿಕ IMD-ಸಿಮ್ಯುಲೇಶನ್‌ಗಳ ವಿಶ್ಲೇಷಣೆಯು ಥಿಫ್ಲಾವಿನ್‌ಗಿಂತ ಎಂಪ್ರೊದ ಸಕ್ರಿಯ ಅಣುಗಳ ವಿರುದ್ಧ ಥಿಫ್ಲಾವಿನ್ 3-ಗ್ಯಾಲೇಟ್‌ನ ವಿರುದ್ಧ ಪ್ರಬಲವಾಗಿ ಹೋರಾಡುತ್ತದೆ.

Recommended Video

ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಕಥೆ.. | Freedom Fighters | OneIndia Kannada

English summary
CCMB Study explained how Black Tea can prevent SARS-CoV-2 replicating.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X