ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸೂಚಿಸಿದ ಪ್ರಾಧಿಕಾರ

|
Google Oneindia Kannada News

ನವದೆಹಲಿ, ಆಗಸ್ಟ್ 31: ಕರ್ನಾಟಕ ಹಾಗೂ ತಮಿಳುನಾಡಿನ ನಡುವಿನ ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದಿಂದ ಮತ್ತೊಮ್ಮೆ ರಾಜ್ಯಕ್ಕೆ ಕಹಿ ಸುದ್ದಿ ಸಿಕ್ಕಿದೆ. ಪೂರ್ವನಿಗದಿಯಂತೆ ತಮಿಳುನಾಡಿಗೆ ಮಳೆನಾಡಿನ ಅವಧಿಯ ಕಾವೇರಿ ನದಿ ನೀರು ಹರಿಸುವಂತೆ ಪ್ರಾಧಿಕಾರ ಇಂದು ಸೂಚಿಸಿದೆ.

ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳುಗಳಲ್ಲಿ ತಮಿಳುನಾಡಿಗೆ ಹರಿಸಬೇಕಾದ ನೀರಿನ ಪ್ರಮಾಣ 30.6 ಟಿಎಂಸಿ ಬಾಕಿಯನ್ನು ಬಿಡುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಎಸ್. ಕೆ ಹಲ್ದರ್ ಸೂಚಿಸಿದ್ದಾರೆ.

ತಮಿಳುನಾಡಿನ ಮೆಟ್ಟೂರ್ ಅಣೆಕಟ್ಟಿಗೆ ಹರಿಸುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಆಗಸ್ಟ್ 31ರಂದು ಸೂಚಿಸಿದೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ 11ನೇ ಸಭೆಯಲ್ಲಿ ಸುಪ್ರೀಂಕೋರ್ಟ್ ನಿರ್ದೇಶನದಂತೆ ನೀರು ಹರಿಸುವಂತೆ ಸಿಡಬ್ಲುಎಂಎ ಅಧ್ಯಕ್ಷತೆ ವಹಿಸಿದ್ದ ಹಲ್ದರ್ ಸೂಚಿಸಿದರು. ಕರ್ನಾಟಕದ ಅಣೆಕಟ್ಟುಗಳಲ್ಲಿ ನೀರಿನ ಒಳ ಹರಿವು ಕಡಿಮೆ ಇದೆ ಎಂಬ ಕರ್ನಾಟಕದ ವಾದವನ್ನು ಪುರಸ್ಕರಿಸಲಿಲ್ಲ.

ಟೈಮ್ ಲೈನ್ : ಕಾವೇರಿ ವಿವಾದ ತೀರ್ಪು 15 ವರ್ಷಗಳ ತನಕ ಬದ್ಧಟೈಮ್ ಲೈನ್ : ಕಾವೇರಿ ವಿವಾದ ತೀರ್ಪು 15 ವರ್ಷಗಳ ತನಕ ಬದ್ಧ

ಸಭೆಯಲ್ಲಿ ಲೋಕೋಪಯೋಗಿ ಇಲಾಖೆ ಸದಸ್ಯರು ಮತ್ತು ತಮಿಳುನಾಡು, ಪುದುಚೇರಿ, ಕರ್ನಾಟಕ ಮತ್ತು ಕೇರಳದ ಸದಸ್ಯರು ಉಪಸ್ಥಿತರಿದ್ದರು. ತಮಿಳುನಾಡು ಪರವಾಗಿ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ, ಕಾವೇರಿ ತಾಂತ್ರಿಕ ಸಮಿತಿಯ ಅಧ್ಯಕ್ಷರು ಉಪಸ್ಥಿತರಿದ್ದರು. ತಮಿಳುನಾಡಿಗೆ ಹರಿಸಬೇಕಾದ ನೀರಿನ ಪ್ರಮಾಣ ಇನ್ನಿತರ ವಿವರ ಮುಂದಿದೆ...

ಆಗಸ್ಟ್ ಅಂತ್ಯಕ್ಕೆ 86 ಟಿಎಂಸಿ ಅಡಿ ನೀರು ಹರಿಸಬೇಕು

ಆಗಸ್ಟ್ ಅಂತ್ಯಕ್ಕೆ 86 ಟಿಎಂಸಿ ಅಡಿ ನೀರು ಹರಿಸಬೇಕು

ಕಾವೇರಿ ನದಿ ನ್ಯಾಯಾಧೀಕರಣ ಹಾಗೂ ಸುಪ್ರೀಂಕೋರ್ಟ್ ಆದೇಶದ ಅನ್ವಯ ಪ್ರತಿ ತಿಂಗಳು ಇಂತಿಷ್ಟು ನೀರು ಹರಿಸಬೇಕು ಎಂದು ನಿಗದಿಯಾಗಿದೆ. ಅದರಂತೆ ಜೂನ್ ತಿಂಗಳಿನಲ್ಲಿ 9.19 ಟಿಎಂಸಿ, ಜುಲೈ ತಿಂಗಳಿನಲ್ಲಿ 31.24 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಕರ್ನಾಟಕ ಹರಿಸಬೇಕಾಗಿತ್ತು. ಆಗಸ್ಟ್ ಅಂತ್ಯಕ್ಕೆ 86 ಟಿಎಂಸಿ ಅಡಿಗಳಷ್ಟು ನೀರು ಹರಿಸಬೇಕಾಗಿದ್ದು, ಸದ್ಯ 57 ಟಿಎಂಸಿ ನೀರು ಹರಿಸಲಾಗಿದೆ ಎಂದು ಕರ್ನಾಟಕ ತಿಳಿಸಿದೆ. ನೀರು ಹಂಚಿಕೆ ಸಂಬಂಧ ಪುದುಚೇರಿ ಹಾಗೂ ತಮಿಳುನಾಡಿನ ನಡುವೆ ಆಗಿರುವ ಒಪ್ಪಂದ ಮುಂದುವರೆಯಲಿದೆ ಎಂದು ಸಭೆಯ ನಂತರ ಹಲ್ದರ್ ಹೇಳಿದರು.

ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ

ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ

ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟುವಿನಲ್ಲಿ ಜಲಾಶಯ ನಿರ್ಮಾಣ ಮಾಡಲು ಕರ್ನಾಟಕ ಸರ್ಕಾರ ಪ್ರಸ್ತಾವನೆ ಸಿದ್ಧಪಡಿಸಿದೆ. ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 67.16 ಟಿಎಂಸಿ ಅಡಿ. ಯೋಜನೆ ಪೂರ್ಣಗೊಂಡರೆ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು ಎಂದು ಸರ್ಕಾರ ಹೇಳಿದೆ. ಮೇಕೆದಾಟು ಯೋಜನೆಯ ಒಟ್ಟು ವೆಚ್ಚ 5912 ಕೋಟಿ ರೂ. ಗಳು. ಆದರೆ, ಸಭೆಯಲ್ಲಿ ಈ ಬಗ್ಗೆ ತಮಿಳುನಾಡು ಪ್ರತಿನಿಧಿಗಳು ಆಕ್ಷೇಪ ತೆಗೆದರು.

ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆ ಬಗ್ಗೆ 2013ರಲ್ಲಿ ಪ್ರಸ್ತಾವನೆ ಸಿದ್ಧಪಡಿಸಿತ್ತು. ಯೋಜನೆಗೆ ತಮಿಳುನಾಡು, ಪುದುಚೇರಿ ರಾಜ್ಯಗಳು ವಿರೋಧ ವ್ಯಕ್ತಪಡಿಸುತ್ತಿವೆ. ಯೋಜನೆ ಜಾರಿಯಾದರೆ ತಮಿಳುನಾಡಿಗೆ ಹರಿಯುವ ನೀರಿನ ಪ್ರಮಾಣ ಕಡಿಮೆಯಾಗಲಿದೆ ಎಂಬುದು ತಮಿಳುನಾಡು ಸರ್ಕಾರದ ವಾದವಾಗಿದೆ. ಮೇಕೆದಾಟು ಯೋಜನೆ ಹಾಗೂ ಗುಂಡಾರು ಯೋಜನೆ ಬಗ್ಗೆ ವಾದ -ಪ್ರತಿವಾದ ಮುಂದುವರೆದಾಗ ಚರ್ಚೆಯನ್ನು ಮುಂದೂಡಲಾಯಿತು.

ಜಲಾಶಯಗಳು ಇನ್ನೂ ತುಂಬಿಲ್ಲ

ಜಲಾಶಯಗಳು ಇನ್ನೂ ತುಂಬಿಲ್ಲ

ಕೆಆರ್ ಎಸ್ , ಕಬಿನಿ, ಹಾರಂಗಿ ಹಾಗೂ ಹೇಮಾವತಿ ಜಲಾಶಯ ತುಂಬಿಲ್ಲ. ಬೆಂಗಳೂರಿಗೆ ಪ್ರತಿ ತಿಂಗಳಿಗೆ 4 ಟಿಎಂಸಿಯಷ್ಟು ಕುಡಿಯುವ ನೀರಿನ ಬೇಡಿಕೆ ಇರುವುದರಿಂದ, ರಾಜ್ಯದಲ್ಲಿ ಮುಂಗಾರು ವಿಳಂಬ, ಅಣೆಕಟ್ಟಿಗೆ ಒಳಹರಿವು ಹೆಚ್ಚಾಗದಿರುವುದರಿಂದ ನೀರು ಹರಿಸಲು ಕಷ್ಟ ಎಂದು ಕರ್ನಾಟಕದ ಪ್ರತಿನಿಧಿಗಳು ಹೇಳಿದರು.

ಕಾವೇರಿಕೊಳ್ಳದ ಜಲಾಶಯಗಳ ನೀರಿನ ಮಟ್ಟ( ಆಗಸ್ಟ್ 31)

  • ಹಾರಂಗಿ: 871.08 ಮೀ(ಪೂರ್ಣ ಮಟ್ಟ 871.38 ಮೀ/2859.0 ಅಡಿ)
  • ಹೇಮಾವತಿ: 889.05 ಮೀ (890.58ಮೀ/2922.0 ಅಡಿ)
  • ಕೃಷ್ಣರಾಜ ಸಾಗರ: 35.79 ಮೀ (38.04 ಮೀ/124.80 ಅಡಿ)
  • ಕಬಿನಿ: 695.20 ಮೀ (696.13 ಮೀ/2284.0 ಅಡಿ)

ಕಾವೇರಿಕೊಳ್ಳದ ಜಲಾಶಯಗಳ ಒಟ್ಟು ಸಾಮರ್ಥ್ಯ 114.57 ಟಿಎಂಸಿ ಇಂದಿನ ಮಟ್ಟ 98.05 ಟಿಎಂಸಿ (109.89 ಟಿಎಂಸಿ ಕಳೆದ ವರ್ಷ ಇದೇ ಅವಧಿ)
* ಒಳ ಹರಿವು ಬರದೇ ಇದ್ದಲ್ಲಿ ನೀರು ಹರಿಸುವ ಅಗತ್ಯವಿಲ್ಲ.

ವಾಯುಭಾರ ಕುಸಿತ; ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ
ಸುಪ್ರೀಂಕೋರ್ಟ್ ಕಾವೇರಿ ವಿವಾದ ಅಂತಿಮ ತೀರ್ಪು

ಸುಪ್ರೀಂಕೋರ್ಟ್ ಕಾವೇರಿ ವಿವಾದ ಅಂತಿಮ ತೀರ್ಪು

ಕರ್ನಾಟಕದಿಂದ ತಮಿಳುನಾಡಿಗೆ ವಾರ್ಷಿಕವಾಗಿ 177 ಟಿಎಂಸಿ ಅಡಿ ಕಾವೇರಿ ಬಿಡಬೇಕು, ಆದರೆ, ಅಗತ್ಯಕ್ಕೆ ತಕ್ಕಂತೆ ಕರ್ನಾಟಕ ರಾಜ್ಯವು ತನ್ನ ನೀರಾವರಿ ಸಂಪತ್ತನ್ನು ವಿಸ್ತರಿಸಿಕೊಳ್ಳಬಹುದು ಎನ್ನಲಾಗಿದೆ. ಹೀಗಾಗಿ ಅಣೆಕಟ್ಟು ನಿರ್ಮಾಣದ ಕರ್ನಾಟಕದ ಪ್ರಸ್ತಾವನೆಗೆ ಬಲ ಸಿಕ್ಕಿದೆ.ಆದರೆ, ಪ್ರಸ್ತಾವಿತ ಮೇಕೇದಾಟು ಅಣೆಕಟ್ಟು ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ, ಪ್ರಧಾನಿ ಮೋದಿ ಅವರಿಗೆ ತಮಿಳುನಾಡು ಸರ್ಕಾರ ಪತ್ರ ಬರೆದಿದೆ. ಒಟ್ಟಾರೆ, ಕಾವೇರಿ ನೀರು ಹಂಚಿಕೆ ಅಂತಿಮ ತೀರ್ಪಿನಂತೆ ವಾರ್ಷಿಕ ಹಂಚಿಕೆ ವಿಷಯದಲ್ಲಿ ಕರ್ನಾಟಕಕ್ಕೆ 14.5 ಟಿಎಂಸಿ ಹೆಚ್ಚುವರಿ ನೀರು ಲಭ್ಯವಾಗಿದೆ. ಇದರಲ್ಲಿ 4.75 ಟಿಎಂಸಿ ನೀರು ಬೆಂಗಳೂರಿನ ಕುಡಿಯುವ ನೀರಿಗೆ ಬಳಕೆ ಮಾಡಬಹುದು.

ಅಂತಿಮ ತೀರ್ಪು: ತಮಿಳುನಾಡಿಗೆ ಕರ್ನಾಟಕದಿಂದ ಹರಿಸಬೇಕಾದ ನೀರಿನ ಪ್ರಮಾಣವೆಷ್ಟು?

English summary
The Cauvery Water Management Authority on Tuesday (August 31) directed Karnataka to release water 30.5 TMC from Cauvery basin reservoirs to Mettur in Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X