• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಂಜಾನ್‌: ಕೋವಿಡ್ ತೊಲಗಿಸುವಂತೆ ಮುಸ್ಲಿಮರಿಂದ ವಿಶೇಷ ಪ್ರಾರ್ಥನೆ

By ದಿವ್ಯಶ್ರೀ.ವಿ, ಬೆಂಗಳೂರು
|

ಮುಸ್ಲಿಂ ಬಾಂಧವರು ಆಚರಿಸುವ ಪವಿತ್ರ ಹಬ್ಬ ಈ ರಂಜಾನ್. ಚಂದ್ರನ ಚಲನೆಯನ್ನಾಧರಿಸಿದ ಲೂನಾರ್ ಕ್ಯಾಲೆಂಡರ್ ಅನುಸರಿಸಿ ವರ್ಷದ ಒಂಬತ್ತನೆಯ ತಿಂಗಳಲ್ಲಿ ಈದ್ -ಉಲ್ -ಫಿತರ್‌ನ್ನು ಆಚರಿಸುತ್ತಾರೆ. ಈ ಹಬ್ಬವು ಪ್ರವಾದಿ ಮೊಹಮ್ಮದ್ ರವರು ಮಾನವ ಕಲ್ಯಾಣಕ್ಕಾಗಿ ಪವಿತ್ರ ಕುರಾನ್ ಗ್ರಂಥವನ್ನು ಅವತೀರ್ಣಗೊಳಿಸಿದರು.

ಇದರ ಅನುಗ್ರಹ ದಿಂದ ಮುಸ್ಲಿಮರು ಪ್ರತಿ ವರ್ಷವೂ ಕಲ್ಮಾ (ಮನಸ್ಸಿನಲ್ಲಿ ದೇವರ ಧ್ಯಾನ ), ನಮಾಜ್ (ಪ್ರಾರ್ಥನೆ ), ರೋಜಾ (ಉಪವಾಸ ), ಜಕಾತ್ (ದಾನ ), ಹಾಗೂ ಹಜ್ (ಮೆಕ್ಕಾ ಯಾತ್ರೆ ) ಈ ಪಂಚ ತತ್ವಗಳನ್ನು ಆಧರಿಸಿ ರಂಜಾನ್ ನ್ನು ಆಚರಿಸುತ್ತಾರೆ. ಒಂದು ತಿಂಗಳ ವರೆಗೂ ವ್ರತಾಚರಣೆ ನಡೆಸುವ ಇವರು ಪ್ರಾತಃ ಕಾಲದಿಂದ ಹಿಡಿದು ಸೂರ್ಯಾಸ್ತಮದವರೆಗೂ ಒಂದು ಹನಿ ನೀರು ಸೇವಿಸದೇ ಸಂಪೂರ್ಣ ಉಪವಾಸ ನಡೆಸುತ್ತಾರೆ.

ಪ್ರಾತಃ ಕಾಲದಲ್ಲಿ ಎದ್ದು ಅಲ್ಲಾಹು ವಿನ ಪ್ರಾರ್ಥನೆ ಸಲ್ಲಿಸಿ ಸುಹೂರ್‌ನ್ನು ( ಬೆಳಗಿನ ಉಪಹಾರ )ಸೇವಿಸುತ್ತಾರೆ. ನಂತರ ದಿನದ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ ಸಮಯದ ಅಂತರ ವಿರುವಾಗ ಕುರಾನ್ ಗ್ರಂಥವನ್ನು ಪಠಿಸುತ್ತಾರೆ ಇನ್ನು ಸೂರ್ಯಾಸ್ತಮದ ವೇಳೆ ಉಪವಾಸವನ್ನು ತ್ಯಜಿಸಿ ಇಫ್ತಾರ್ ( ರಾತ್ರಿಯ ಭೋಜನ )ನ್ನು ಸೇವಿಸಿ ದಿನದ ವ್ರತವನ್ನು ಸಂಪನ್ನಗೊಳಿಸುತ್ತಾರೆ. ಅಲ್ಲಾಹು ವಿನ ಆಶೀರ್ವಾದ, ಅನುಗ್ರಹ ಪಡೆಯಲು ಕಠಿಣ ವ್ರತಾಚರಣೆ ಮಾಡಿ ದುಃಖ, ದ್ವೇಷ, ಅಸೂಯೆ, ನಕಾರಾತ್ಮಕ ಯೋಚನೆಗಳಿಂದ ದೂರ ಸರಿದು ಸುಖ, ಪ್ರೀತಿ, ವಿವೇಕ, ವಿನಯತೆ ಯ ಸಕಾರಾತ್ಮಕ ಯೋಚನೆಗಳನ್ನು ಪಾಲಿಸಿಕೊಂಡು ತಮ್ಮಲ್ಲಿ ಇರುವುದಕ್ಕಿಂತ ಹೆಚ್ಚಿಗೆ ಇರುವುದನ್ನು ಬಡವರಿಗೆ ದಾನ ಮಾಡಿ ಸೌಹಾರ್ದತೆ ಮೆರಿಯುತ್ತಾರೆ.

ಇದೇ ಅನುಸಾರದಲ್ಲಿ ಭಾರತಕ್ಕೆ ಕಂಟಕವಾಗಿರುವ ಕೊರೊನಾ ಎರಡನೇ ಅಲೆಯಿಂದ ಆಮ್ಲಜನಕದ ಕೊರತೆಯಿಂದ ಸಾಕಷ್ಟು ಜನ ಜೀವ ಕಳೆದುಕೊಳ್ಳುತ್ತಿರುವ ಸಮಯದಲ್ಲಿ ಸೌದಿ ಅರೇಬಿಯಾದ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ರವರು ಭಾರತಕ್ಕೆ 80 ಮೆಟ್ರಿಕ್ ಟನ್ ದ್ರವ ಆಮ್ಲಜನಕವನ್ನು ರವಾನಿಸಿ ನೆರವು ನೀಡಿ ಸೌಹಾರ್ದತೆ ಮೆರೆದಿದದ್ದಾರೆ. ಈ ಈದ್ -ಉಲ್ -ಫಿತಾರ್ ಆಚರಣೆಯ ಅಲ್ಲಾಹುವಿನ ಪ್ರಮುಖ ಪ್ರಚಾರವೇ ದಾನ ಮಾಡುವುದು ಬಡವನಿಗೆ, ಹಸಿದವನಿಗೆ ಅನ್ನ ನೀಡುವುದು. ಇಲ್ಲಿ ಬಡವ-ಶ್ರೀಮಂತ, ಹೆಣ್ಣು-ಗಂಡು ಎನ್ನುವ ಭೇದ- ಭಾವ ವಿಲ್ಲದೆ ಎಲ್ಲರೂ ವ್ರತಾಚರಣೆಯನ್ನು ನಡೆಸಿ ತಪ್ಪು ಮಾರ್ಗದ ಕಾರ್ಯಗಳನ್ನು ತ್ಯಜಿಸಿ ಅಲ್ಲಾಹುವಿನ ಕುರಾನ್ ಗ್ರಂಥದ ಸನ್ಮಾರ್ಗಗಳನ್ನು ಅನುಸರಿಸಿ ಭಗವಾನ್ ಅಲ್ಲಾ ನನ್ನು ಪ್ರಾರ್ಥಿಸುತ್ತಾರೆ.

ಒಂದು ತಿಂಗಳು ಉಪವಾಸದಿಂದ ಹಸಿವಿನ ಮಹತ್ವವನ್ನು ಅರಿತು ಬಡವರಿಗೆ- ಹಸಿದವರಿಗೆ ತಮ್ಮ ಕೈಲಾದಷ್ಟು ದಾನ ಸಹಾಯ ಮಾಡುವುದು ಪ್ರತಿಯೊಬ್ಬ ಮುಸ್ಲಿಮರ ಕರ್ತವ್ಯವಾಗಿರುತ್ತದೆ . ಒಂದು ತಿಂಗಳ ಮುವ್ವತ್ತನೆಯ ಕೊನೆಯ ದಿನದಂದು ಅರ್ಧ ಚಂದ್ರನ ವೀಕ್ಷಣೆ ನಂತರ ರಂಜಾನ್ ಹಬ್ಬವನ್ನು ಆಚರಿಸಲಾಗುತ್ತದೆ ಮೂವತ್ತು ದಿನಗಳ ಉಪವಾಸ ವ್ರತವನ್ನು ಪರಾಭವಗೊಳಿಸಿ ಅಲ್ಲಾಹುಗೆ ತಮ್ಮ ಭಕ್ತಿಯನ್ನು ಸಮರ್ಪಿಸಿ ಶಾಂತಿ, ಸುಖ, ಆಶೀರ್ವಾದ ನೀಡಲಿ ಎಂದು ತಮ್ಮ ವ್ರತವನ್ನು ಸಮಾಪ್ತಿಗೊಳಿಸುತ್ತಾರೆ.

   ಟ್ರಂಪ್ ಕಟ್ಟಿದ್ದ ಗೋಡೆ ಕೆಡವಿ ಬಡವರ ಮನೆಗಳಿಗೆ 1 ಲಕ್ಷ ಕೊಟ್ಟ ಜೋ ಬಿಡೆನ್ | Oneindia Kannada

   ಇನ್ನು ಈ ವರ್ಷವು ಕಳೆದ ವರ್ಷದಂತೆ ಹಬ್ಬದಲ್ಲಿ ಮುಸ್ಲಿಮರ ನಮಾಜ್ ಅಂದರೆ ಮಸೀದಿಗಳಲ್ಲಿ ನಡೆಯುವ ಸಾಮೂಹಿಕ ಪ್ರಾರ್ಥನೆಯನ್ನು ವಜಾಗೊಳಿಸಲಾಗಿದೆ ಕಾರಣ ಕೊರೋನಾ ಇದರಿಂದ ಮುಸ್ಲಿಂ ಭಾಂದವರು ಅಂತರ ಕಾಪಾಡಿಕೊಂಡು ಸ್ವಇಚ್ಛೆಯಿಂದ ತಮ್ಮ ತಮ್ಮ ನಿವಾಸಗಳಲ್ಲಿಯೇ ಅಲ್ಲಾಹುವಿಗೆ ಕೊರೊನಾ ಮಹಾಮಾರಿಯನ್ನು ತೊಲಗಿಸುವಂತೆ ಪ್ರಾರ್ಥನೆ ಸಲ್ಲಿಸಿ ಎಲ್ಲರನ್ನೂ ಶಾಂತಿ ಸಮೃದ್ಧತೆ ಯಿಂದ ಇರಲು ಬೇಡಿಕೊಳ್ಳುತ್ತಾ ಎಲ್ಲಾ ಮುಸ್ಲಿಂ ಬಾಂಧವರಿಗೂ ರಂಜಾನ್ ಹಬ್ಬದ ಹಾರ್ಧಿಕ ಶುಭಾಶಯಗಳು.

   English summary
   Muslim had Cautious celebration of Eid Ul Fitr During Covid pandemic.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X