ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಆಯಾ ರಾಮ್, ಗಯಾ ರಾಮ್' ಪಕ್ಷಾಂತರ ನಿಷೇಧ ಕಾಯ್ದೆ ಹೇಗೆ?

|
Google Oneindia Kannada News

ಭಾರಿ ಕುತೂಹಲ ಕೆರಳಿಸಿದ್ದ ಮುಂಗಾರು ಮಳೆ ಅಧಿವೇಶನದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ನಿರೀಕ್ಷೆಯಂತೆ ಜುಲೈ 18ರಂದು ವಿಶ್ವಾಸಮತ ಯಾಚನೆ ಪ್ರಸ್ತಾವನೆ ಮಾಡಿದರು. ಆದರೆ, ಇದಾದ ಬಳಿಕ ನಡೆದಿದ್ದೆಲ್ಲವೂ ಬಿಜೆಪಿ ಅನಿರೀಕ್ಷಿತವಾಗಿತ್ತು. ಮಧ್ಯಾಹ್ನದ ವೇಳೆಗೆ ಲಾಯರ್ ಸಿದ್ದರಾಮಯ್ಯ ಅವರು ಸಂವಿಧಾನದ 10ನೇ ಶೆಡ್ಯೂಲ್, ಶಾಸಕರಿಗೆ ವಿಪ್ ಜಾರಿ ಸಂಬಂಧ ಇರುವ ಗೊಂದಲ ಮೊದಲು ನಿವಾರಣೆಯಾಗಬೇಕು, ಅಲ್ಲಿ ತನಕ ವಿಶ್ವಾಸಮತ ಯಾಚನೆ ಬಗ್ಗೆ ಚರ್ಚೆ ಇಲ್ಲ ಎಂದು ಗುಟುರು ಹಾಕಿದರು.

Photos : ಸದನದಲ್ಲಿ ಗದ್ದಲ, ಅಹೋರಾತ್ರಿ ಧರಣಿ, ಮಾರ್ನಿಂಗ್ ವಾಕ್

ಸಂಜೆ ವೇಳೆಗೆ ಸದನದಲ್ಲಿ ಪಾಯಿಂಟ್ ಆಫ್ ಆರ್ಡರ್, ರಾಜ್ಯಪಾಲರಿಂದ ಬಂದ ಪತ್ರ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಕಿಡ್ನಾಪ್ ವಿಚಾರ ಎಲ್ಲವೂ ಸದನದ ಸಮಯವನ್ನು ಬಲಿಹಾಕಿತು.

ಕರ್ನಾಟಕ ರಾಜಕೀಯ ಬಿಕ್ಕಟ್ಟು, ಪಕ್ಷಾಂತರ ನಿಷೇಧ ಕಾಯ್ದೆ ಎಂದರೇನು? ಕರ್ನಾಟಕ ರಾಜಕೀಯ ಬಿಕ್ಕಟ್ಟು, ಪಕ್ಷಾಂತರ ನಿಷೇಧ ಕಾಯ್ದೆ ಎಂದರೇನು?

ಈ ನಡುವೆ ರೆಬೆಲ್ ಶಾಸಕರ ಪೈಕಿ ಒಟ್ಟು 6 ಮಂದಿ ವಿರುದ್ಧ ಕ್ರಮ ಕೈಗೊಂಡು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಎಂದು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ದೂರು ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಮತ್ತೊಮ್ಮೆ ಪಕ್ಷಾಂತರ ನಿಷೇಧ ಕಾಯ್ದೆ ಬಗ್ಗೆ ಚರ್ಚೆ ಶುರುವಾಗಿದೆ. ಭಾರತದ ರಾಜಕೀಯ ಇತಿಹಾಸದಲ್ಲಿ ಪಕ್ಷಾಂತರ ಆರಂಭವಾದ ಕಥೆಯನ್ನು ಸಿದ್ದರಾಮಯ್ಯ ಅವರು ಕೂಡಾ ಇಂದು ಸದನದ ಮುಂದೆ ಹೇಳಿದರು.

ಮೂಲ ಪುರುಷ ಗಯಾ ಲಾಲ್

ಮೂಲ ಪುರುಷ ಗಯಾ ಲಾಲ್

'ಆಯಾ ರಾಮ್, ಗಯಾ ರಾಮ್' ಎಂಬ ವಾಕ್ಯ ಜನಪ್ರಿಯಗೊಂಡಿದ್ದು ಅಥವಾ ಪಕ್ಷಾಂತರ ಬಗ್ಗೆ ರಾಜಕೀಯ ರಂಗದಲ್ಲಿ ಮೊದಲ ಅನುಭವ ಕಂಡಿದ್ದು 1967ರಲ್ಲಿ ಇದನ್ನು ಸಾಧಿಸಿದ್ದು ಹರ್ಯಾಣದ ಶಾಸಕ ಗಯಾ ಲಾಲ್. ಗಯಾ ಲಾಲ್ ಅವರು ಒಂದೇ ದಿನ ಮೂರು ಪಕ್ಷಗಳನ್ನು ಬದಲಾಯಿಸಿದರು. ಈ ರೀತಿ ಪಕ್ಷದಿಂದ ಪಕ್ಷಕ್ಕೆ ಹಾರುವುದನ್ನು ತಪ್ಪಿಸಲು ಪಕ್ಷಾಂತರ ನಿಷೇಧ ಕಾಯ್ದೆಯ ಬಗ್ಗೆ ಚಿಂತನೆ ಅಂದಿನಿಂದಲೆ ಆರಂಭವಾಯಿತು.

ಪಕ್ಷಾಂತರ ನಿಷೇಧ ಕಾಯ್ದೆ ಯಾವಾಗ ಆರಂಭವಾಯಿತು?

ಪಕ್ಷಾಂತರ ನಿಷೇಧ ಕಾಯ್ದೆ ಯಾವಾಗ ಆರಂಭವಾಯಿತು?

1985ರಲ್ಲಿ ಸಂವಿಧಾನದ 10ನೇ ಶೆಡ್ಯೂಲಿನಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ(Anti Defection Law) ಬಗ್ಗೆ ಪರಿಚಯಿಸಲಾಯಿತು. ಈ ಕಾಯ್ದೆ 52 ತಿದ್ದುಪಡಿಯನ್ನು ಕಂಡಿದೆ. ಕಾಯ್ದೆ ಬಳಸಿ ಪಕ್ಷದಿಂದ ಪಕ್ಷಕ್ಕೆ ಹಾರುವ ಶಾಸಕರನ್ನು ಅನರ್ಹಗೊಳಿಸಬಹುದಾಗಿದೆ.

ಯಾರು ಅನರ್ಹಗೊಳಿಸಬಹುದು?
* ವಿಧಾನಸಭಾ ಸ್ಪೀಕರ್ ಅವರಿಗೆ ಈ ಅಧಿಕಾರ ಇರುತ್ತದೆ.
* ಸ್ಪೀಕರ್ ವಿರುದ್ಧವೇ ಅವಿಶ್ವಾಸ ಮಂಡನೆಯಾಗಿ, ದೂರು ಎದುರಿಸುತ್ತಿದ್ದರೆ, ಸದನದ ಸದಸ್ಯರು ಶಾಸಕರೊಬ್ಬರ ಅನರ್ಹತೆ ಬಗ್ಗೆ ತೀರ್ಮಾನ ಕೈಗೊಳ್ಳಬಹುದು.

ವಿಶ್ವಾಸ-ಅವಿಶ್ವಾಸ ಮತ: ರಾಜ್ಯದ ಇತಿಹಾಸದಲ್ಲಿ ಎಷ್ಟೆಷ್ಟು ದಿನ ಚರ್ಚೆ ನಡೆದಿತ್ತು? ವಿಶ್ವಾಸ-ಅವಿಶ್ವಾಸ ಮತ: ರಾಜ್ಯದ ಇತಿಹಾಸದಲ್ಲಿ ಎಷ್ಟೆಷ್ಟು ದಿನ ಚರ್ಚೆ ನಡೆದಿತ್ತು?

ಈ ಕಾಯ್ದೆ ಪ್ರಕಾರ ಅನರ್ಹತೆ ಮಾಡಲು ನಿಯಮಗಳೇನು?

ಈ ಕಾಯ್ದೆ ಪ್ರಕಾರ ಅನರ್ಹತೆ ಮಾಡಲು ನಿಯಮಗಳೇನು?

* ವಿಧಾನಸಭಾ ಸದಸ್ಯರು ತಮ್ಮ ಸ್ವಇಚ್ಛೆಯಿಂದ ರಾಜಕೀಯ ಪಕ್ಷವೊಂದರ ಸದಸ್ಯತ್ವವನ್ನು ತೊರೆದಿದ್ದು, ವಿಪ್ ಅನುಗುಣವಾಗಿ ಮತ ಹಾಕದಿದ್ದರೆ ಅಥವಾ ಮತದಾನ ಪ್ರಕ್ರಿಯೆಗೆ ಗೈರಾದರೆ...
* ವಿಶ್ವಾಸಮತ ಯಾಚನೆಗೂ 15 ದಿನ ಮೊದಲು ಪಕ್ಷದಿಂದ ಪೂರ್ವಾನುಮತಿ ಪಡೆದ ಸದಸ್ಯರು ಅನರ್ಹತೆ ಭೀತಿಯಿಂದ ಬಚಾವಾಗುತ್ತಾರೆ.
* ಸ್ವತಂತ್ರ ಸದಸ್ಯರೊಬ್ಬರು ಚುನಾವಣೆ ಬಳಿಕ ರಾಜಕೀಯ ಪಕ್ಷ ಸೇರಿದಾಗ
* ವಿಧಾನಸಭೆಯ ನಾಮಾಂಕಿತ ಸದಸ್ಯರು, ನಾಮಾಂಕಿತಗೊಂಡ 6 ತಿಂಗಳ ನಂತರ ಯಾವುದೇ ಪಕ್ಷವನ್ನು ಸೇರಿದರೆ...

ಯಾವ ಸಂದರ್ಭದಲ್ಲಿ ಕಾಯ್ದೆ ಅನ್ವಯವಾಗುವುದಿಲ್ಲ?

ಯಾವ ಸಂದರ್ಭದಲ್ಲಿ ಕಾಯ್ದೆ ಅನ್ವಯವಾಗುವುದಿಲ್ಲ?

* ಶಾಸಕರೊಬ್ಬರ ಪಕ್ಷವು ಮತ್ತೊಂದು ಪಕ್ಷದೊಡನೆ ವಿಲೀನವಾದರೆ, ಅನರ್ಹತೆ ಊರ್ಜಿತವಾಗುವುದಿಲ್ಲ. ಹಳೆ ಪಕ್ಷದ ಶಾಸಕರೆಲ್ಲರೂ ಹೊಸ ಪಕ್ಷದ ಸದಸ್ಯರಾಗಿ ಪರಿಗಣಿಸಲ್ಪಡುತ್ತಾರೆ ಅಥವಾ ವಿಲೀನವನ್ನು ವಿರೋಧಿಸಿದ ಪ್ರತ್ಯೇಕ ಗುಂಪಾಗಿ ಗುರುತಿಸಲ್ಪಡುತ್ತಾರೆ.
* ಈ ರೀತಿ ವಿನಾಯಿತಿ ಸಂದರ್ಭದ ಬರಲು ವಿಧಾನಸಭೆಯಲ್ಲಿ ಪಕ್ಷವೊಂದರ ಕನಿಷ್ಠ 2/3ರಷ್ಟು ಸದಸ್ಯರು ವಿಲೀನಕ್ಕೆ ಒಪ್ಪಿಗೆ ಸೂಚಿಸಿರಬೇಕು.
* ಸಾಂದರ್ಭಿಕ ಉದಾಹರಣೆ: ಕೆಪಿಜೆಪಿ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನಗೊಳಿಸಿದ ರಾಣೇಬೆನ್ನೂರು ಶಾಸಕ ಆರ್ ಶಂಕರ್. ಗೋವಾದಲ್ಲಿ 10 ಕಾಂಗ್ರೆಸ್ ಶಾಸಕರು ಬಿಜೆಪಿ ಜೊತೆ ವಿಲೀನಗೊಳಿಸಿದ್ದರ ಬಗ್ಗೆ ಅಲ್ಲಿನ ಸ್ಪೀಕರ್ ಒಪ್ಪಿಗೆ.

ಕರ್ನಾಟಕ ಬಿಕ್ಕಟ್ಟು: ವಿಶ್ವಾಸಮತ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಕರ್ನಾಟಕ ಬಿಕ್ಕಟ್ಟು: ವಿಶ್ವಾಸಮತ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಕರ್ನಾಟಕದ ಇಂದಿನ ಪ್ರಕರಣ

ಕರ್ನಾಟಕದ ಇಂದಿನ ಪ್ರಕರಣ

ಸ್ಪೀಕರ್ ರಮೇಶ್ ಕುಮಾರ್ ಅವರು ಜನಪ್ರತಿನಿಧಿ ಕಾಯ್ದೆ ಅರ್ಟಿಕಲ್ 190, ಸಂವಿಧಾನದ ಶೆಡ್ಯೂಲ್ 10, ಪಕ್ಷಾಂತರ ನಿಷೇಧ ಕಾಯ್ದೆ, ಕರ್ನಾಟಕ ವಿಧಾನಸಭಾ ಸದನ ನಿರ್ವಹಣೆ ನಿಯಮಾವಳಿ(202) ಸೇರಿದಂತೆ ಹಲವು ಕಾನೂನು, ಕಾಯ್ದೆ, ನಿಯಮಾವಳಿಗಳ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯವನ್ನು ಪಡೆದುಕೊಳ್ಳುತ್ತಿರುವುದರಿಂದ ಶಾಸಕರ ರಾಜೀನಾಮೆ ಅಂಗೀಕಾರ, ಅನರ್ಹತೆ ವಿಚಾರ ವಿಳಂಬವಾಗುತ್ತಿದೆ ಎಂಬ ಮಾಹಿತಿಯಿದೆ.

ಸ್ಪೀಕರ್ ಮುಂದಿರುವ ಪ್ರಮುಖ ಆಯ್ಕೆ?

ಸ್ಪೀಕರ್ ಮುಂದಿರುವ ಪ್ರಮುಖ ಆಯ್ಕೆ?

ತಮಿಳುನಾಡು ಮಾದರಿಯಲ್ಲಿ ಎಲ್ಲಾ ಶಾಸಕರನ್ನು ತಕ್ಷಣವೇ ಅಮಾನತುಗೊಳಿಸಿ, ಶಾಸಕ ಸ್ಥಾನದಿಂದ ಅನರ್ಹಗೊಳಿಸಬಹುದು. ಸಂವಿಧಾನದ 10ನೇ ಶೆಡ್ಯೂಲ್ ಪ್ರಕಾರ ದೂರು ದಾಖಲಾಗಿದೆ, ವಿಪ್ ಉಲ್ಲಂಘನೆ ಬಗ್ಗೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಸ್ತಾಪಿಸಿ, ದೂರು ನೀಡಿದ್ದಾರೆ. ಇದೆಲ್ಲವನ್ನುವನ್ನು ಪರಿಗಣಿಸಿ ಶಾಸಕರನ್ನು ಅನರ್ಹಗೊಳಿಸಬಹುದು. ಶಾಸಕರ ವಿರುದ್ಧ ಕ್ರಮ ಜರುಗಿಸಲು ತಮಿಳುನಾಡು ಮಾದರಿಯಲ್ಲಿ ದೂರು ಬಂದರೆ, ಒಟ್ಟಿಗೆ ಪ್ರಯಾಣಿಸಿದ ಚಿತ್ರ, ವಿಡಿಯೋ ಸಾಕ್ಷಿ ಪರಿಗಣಿಸಬಹುದು.

ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಸ್ಪೀಕರ್ ರಮೇಶ್ ಮುಂದಿರುವ ಆಯ್ಕೆಗಳೇನು? ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಸ್ಪೀಕರ್ ರಮೇಶ್ ಮುಂದಿರುವ ಆಯ್ಕೆಗಳೇನು?

ಸ್ಪೀಕರ್ ವಿರುದ್ಧ ದೂರು ಸಾಧ್ಯವೇ?

ಸ್ಪೀಕರ್ ವಿರುದ್ಧ ದೂರು ಸಾಧ್ಯವೇ?

* ಸ್ಪೀಕರ್ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ರೆಬೆಲ್ ಶಾಸಕರು ಸುಪ್ರೀಂಕೋರ್ಟ್ ಮೇಟ್ಟಿಲೇರಿದ್ದರು. ವಿಶ್ವಾಸ ಮತ ಯಾಚನೆ ಪ್ರಕ್ರಿಯೆ ವಿಳಂಬವಾಗಿದೆ ಎಂದು ಬಿಜೆಪಿ ಕೂಡಾ ಕೋರ್ಟ್ ಮೆಟ್ಟಿಲೇರಬಹುದು. ಈ ಮುಂಚೆ ಸ್ಪೀಕರ್ ಅವರು ರಾಜೀನಾಮೆ ವಿಷಯದಲ್ಲಿ ತೆಗೆದುಕೊಳ್ಳುವ ನಿರ್ಧಾರವನ್ನು ಪ್ರಶ್ನಿಸಲು ಆಸ್ಪದವಿರಲಿಲ್ಲ. 1992ರಿಂದ ಸ್ಪೀಕರ್ ನಿರ್ಣಯವನ್ನು ಪ್ರಶ್ನೆ ಮಾಡುವ ಅವಕಾಶವನ್ನು ಸುಪ್ರೀಂಕೋರ್ಟ್ ನೀಡಿದೆ. ಹೀಗಾಗಿ, ಅನರ್ಹತೆ ವಿರುದ್ಧ ಶಾಸಕರು ಕೋರ್ಟ್ ಮೆಟ್ಟಿಲೇರಬಹುದು.

ಕಾಲಮಿತಿ ಬಗ್ಗೆ ಯಾವೆಲ್ಲ ನಿಯಮಗಳಿವೆ

ಕಾಲಮಿತಿ ಬಗ್ಗೆ ಯಾವೆಲ್ಲ ನಿಯಮಗಳಿವೆ

ಅತೃಪ್ತ ಶಾಸಕರ ಅರ್ಜಿ ವಿಚಾರಣೆ ನಡೆಸಿ ಸುಪ್ರೀಂಕೋರ್ಟ್ ಕೊಟ್ಟಿರುವ ಮಧ್ಯಂತರ ತೀರ್ಪಿನ ಪ್ರಕಾರ, "ರೆಬೆಲ್ ಶಾಸಕರು ವ್ಹಿಪ್ ಜಾರಿಯಲ್ಲಿದ್ದರೂ, ಅವರನ್ನು ಬಲವಂತವಾಗಿ ಸದನದ ಕಲಾಪಕ್ಕೆ ಹಾಜರಾಗುವಂತೆ ಒತ್ತಾಯಿಸುವಂತಿಲ್ಲ. ರಾಜೀನಾಮೆ ಅಂಗೀಕಾರ, ಅನರ್ಹತೆ ಬಗ್ಗೆ ಸ್ಪೀಕರ್ ಅವರು ಯಾವುದೆ ಕಾಲಮಿತಿಯಿಲ್ಲದಂತೆ ಸ್ವಇಚ್ಛೆಯಿಂದ ನಿರ್ಣಯ ತೆಗೆದುಕೊಳ್ಳಬಹುದು, ಇದು ಕೋರ್ಟ್ ವ್ಯಾಪ್ತಿ ಮೀರಿದ ವಿಷಯ". ಹೀಗಾಗಿ, ಸ್ಪೀಕರ್ ರಮೇಶ್ ಕುಮಾರ್ ಅವರು ರಾಜೀನಾಮೆ ಅಂಗೀಕರಿಸುವ ತನಕ ಕೋರ್ಟ್ ಈ ವಿಷಯದಲ್ಲಿ ತಲೆಹಾಕುವುದಿಲ್ಲ. ರಾಜೀನಾಮೆ ಅಂಗೀಕರಿಸಲು ಸ್ಪೀಕರ್ ಗೆ ಯಾವುದೆ ಕಾಲಮಿತಿಯೂ ಇಲ್ಲ.

ರಾಜ್ಯ ರಾಜಕೀಯ ; ರಾಜೀನಾಮೆಯಿಂದ ವಿಶ್ವಾಸಮತದ ತನಕರಾಜ್ಯ ರಾಜಕೀಯ ; ರಾಜೀನಾಮೆಯಿಂದ ವಿಶ್ವಾಸಮತದ ತನಕ

2003ರಲ್ಲಿ ಕಾಯ್ದೆಗೆ ತಿದ್ದುಪಡಿ

2003ರಲ್ಲಿ ಕಾಯ್ದೆಗೆ ತಿದ್ದುಪಡಿ

ಪಕ್ಷಾಂತರ ನಿಷೇಧ ಕಾಯ್ದೆಗೆ 2003ರಲ್ಲಿ ಪ್ರಮುಖ ತಿದ್ದುಪಡಿ ಮಾಡಲಾಯಿತು. ಮೂಲ ರಾಜಕೀಯ ಪಕ್ಷ ಒಡೆದು ಹೋಳಾಗಿ, 1/3 ರಷ್ಟು ಶಾಸಕರು ಪ್ರತ್ಯೇಕ ಬಣವಾಗಿ ಗುರುತಿಸಿಕೊಂಡರೆ, ಅವರನ್ನು ಅನರ್ಹಗೊಳಿಸುವಂತಿಲ್ಲ ಎಂಬ ತಿದ್ದುಪಡಿ ಮಾಡಲಾಯಿತು. ಆದರೆ, ಈ ಬಗ್ಗೆ ಸಾಕಷ್ಟು ಚರ್ಚೆಯಾಗಿ, ಈ ವಿನಾಯಿತಿಯನ್ನು ತೆಗೆದುಹಾಕಲಾಯಿತು. ಸಂವಿಧಾನದ 10ನೇ ಶೆಡ್ಯೂಲಿನ 4ನೇ ಪ್ಯಾರಾಗ್ರಾಫಿನಲ್ಲಿ ವಿನಾಯಿತಿ ಬಗ್ಗೆ ಉಲ್ಲೇಖಿಸಿ, ಪಕ್ಷ ವಿಲೀನವಾದರೆ ಮಾತ್ರ ಅನರ್ಹತೆಯಿಂದ ತಪ್ಪಿಸಿಕೊಳ್ಳಬಹುದು ಎಂದು ಸೇರಿಸಲಾಯಿತು.

English summary
The Congress in Karnataka said today that there has been a violation of their right under the 10th Schedule of the Constitution. The disqualification of MLAs or MPs takes place under the Anti Defection Law, which was introduced to stop the 'Aaya Ram, Gaya Rama syndrome.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X