ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕಿನಿಂದ ಮಧುಮೇಹ ಬರುವುದೇ? ತಿಳಿಯಬೇಕಾದ ಸಂಗತಿ

|
Google Oneindia Kannada News

ವೈದ್ಯರು, ಸಂಶೋಧಕರು, ವಿಜ್ಞಾನಿಗಳು ಹೇಳುವ ಪ್ರಕಾರ ಕೊರೊನಾ ಸೋಂಕು ಕೇವಲ ಉಸಿರಾಟ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವುದಲ್ಲದೆ, ಹೃದಯ, ಮೆದುಳು, ಕಿಡ್ನಿ ಸೇರಿದಂತೆ ದೇಹದ ಇತರೆ ಭಾಗಗಳ ಮೇಲೂ ದುಷ್ಪರಿಣಾಮ ಬೀರುತ್ತದೆ.

ನ್ಯಾಷನಲ್‌ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನಲ್ಲಿ ಮಂಗಳವಾರ ಪ್ರಕಟವಾದ ವರದಿ ಪ್ರಕಾರ ಸಾರ್ಸ್‌ ಕೋವ್ 2 ದೇಹದ ಇನ್ಸುಲಿನ್ ಉತ್ಪಾದಿಸುವ ಕೋಶಗಳನ್ನು ಗುರಿಯಾಗಿಸಬಹುದು ಹಾಗೂ ದುರ್ಬಲಗೊಳಿಸಬಹುದು, ಇದರ ಪರಿಣಾಮವಾಗಿ ಮಧುಮೇಹ ಶುರುವಾಗಬಹುದು ಎಂದು ಹೇಳಲಾಗಿದೆ.

ಕೇವಲ ಈ ಸಧ್ಯಯನ ಮಾತ್ರವಲ್ಲದೆ ಎ ಜರ್ನಲ್ ಆಫ್ ಫಾರ್ಮಾಕಾಲಜಿ ಮತ್ತು ಥೆರಪೋಟಿಕ್ಸ್‌ನಲ್ಲಿ ಕೂಡ ಕೊರೊನಾ ವೈರಸ್ ಹಾಗೂ ಮಧುಮೇಹದ ನಡುವೆ ಇರುವ ಸಂಬಂಧದ ಬಗ್ಗೆ ವಿವರಿಸಲಾಗಿದೆ.

2020ರ ಜನವರಿ ಮತ್ತು ಮೇ ತಿಂಗಳಲ್ಲಿ ಪತ್ತೆಯಾದ ಹೊಸ ಮಧುಮೇಹಿ ಪ್ರಕರಣಗಳನ್ನು ಗಮನಿಸಿದಾಗ ಎಲ್ಲವೂ ಕೋವಿಡ್‌ಗೆ ಸಂಬಂಧಿಸಿದ್ದಾಗಿವೆ. ಒಟ್ಟು 3711 ಮಂದಿಯನ್ನು ವಿಶ್ಲೇಷಿಸಲಾಗಿದೆ. ಅದರಲ್ಲಿ ಶೇ.14.4ರಷ್ಟು ಎಂದರೆ 492 ರೋಗಿಗಳು ಕೊರೊನಾ ಸೋಂಕು ತಗುಲಿದ ಬಳಿಕ ಮಧುಮೇಹದಿಂದ ಬಳಲುತ್ತಿದ್ದಾರೆ, ಹಾಗೂ ಇವರುಗಳಲ್ಲಿ ಟೈಪ್ 2 ಡಯಾಬಿಟಿಸ್ ಇದೆ ಎಂಬುದು ತಿಳಿದುಬಂದಿದೆ.

 ಮಧುಮೇಹ ನಿಮ್ಮನ್ನು ಬಾಧಿಸುತ್ತದೆ

ಮಧುಮೇಹ ನಿಮ್ಮನ್ನು ಬಾಧಿಸುತ್ತದೆ

ವಿಶ್ವದಾದ್ಯಂತ 175 ಮಿಲಿಯನ್ ಮಂದಿಗೆ ಕೊರೊನಾ ಸೋಂಕು ತಗುಲಿದೆ. ಕೊರೊನಾ ಸೋಂಕು ತಗುಲುವ ಪ್ರಶ್ನೆಗಿಂತ ನೀವು ಬದುಕುತ್ತೀರೋ ಸಾಯುತ್ತೀರೋ ಎನ್ನುವ ಯೋಚನೆಯೇ ಬಲವಾಗಿದೆ. ಸೋಂಕಿಗೆ ಒಳಗಾದ ಬಳಿಕ ಅನುಭವಿಸುವ ದೀರ್ಘಕಾಲದ ಆರೋಗ್ಯ ಪರಿಣಾಮಗಳ ಬಗ್ಗೆ ಆಲೋಚಿಸಬೇಕು. ನಿಮಗೆ ಒಮ್ಮೆ ಮಧುಮೇಹ ಬಂದರೆ ಜೀವನ ಪರ್ಯಂತ ಅದು ನಿಮ್ಮನ್ನು ಬಾಧಿಸುತ್ತದೆ.

 ಕೇವಲ ಉಸಿರಾಟ ಸಮಸ್ಯೆಯೊಂದೇ ಅಲ್ಲ

ಕೇವಲ ಉಸಿರಾಟ ಸಮಸ್ಯೆಯೊಂದೇ ಅಲ್ಲ

ಕೊರೊನಾ ಸೋಂಕು ಕೇವಲ ಉಸಿರಾಟ ಸಮಸ್ಯೆಯೊಂದನ್ನೇ ತಂದೊಡ್ಡುವುದಿಲ್ಲ, ದೇಹದ ಹಲವು ಭಾಗಗಳಿಗೆ ದೀರ್ಘಕಾಲದ ನೋವನ್ನು ಉಂಟುಮಾಡಬಲ್ಲದು. ಮೆದುಳು, ಹೃದಯ, ಕಿಡ್ನಿ ಸೇರಿದಂತೆ ಯಾವ ಭಾಗಕ್ಕೆ ಬೇಕಾದರೂ ಪೆಟ್ಟು ನೀಡಬಹುದು. ಕೊರೊನಾ ಸೋಂಕು ಹಾಗೂ ಮಧುಮೇಹಕ್ಕೆ ಸಂಬಂಧವಿರುವ ಕುರಿತು ಈಗಾಗಲೇ ಹಲವು ಸಂಶೋಧನೆಗಳು ನಡೆಯುತ್ತಿದೆ.

 ಮಧುಮೇಹದ ಬಗ್ಗೆ ಮಾಹಿತಿ

ಮಧುಮೇಹದ ಬಗ್ಗೆ ಮಾಹಿತಿ

ಮಧುಮೇಹ ನಿಮ್ಮ ರಕ್ತದಲ್ಲಿ ಗ್ಲೂಕೋಸ್, ಅಥವಾ ಸಕ್ಕರೆ ಮಟ್ಟ ತುಂಬಾ ಅಧಿಕವಾಗಿರುವ ಒಂದು ಕಾಯಿಲೆ. ವ್ಯಕ್ತಿಯ ಶರೀರ ಸಾಕಷ್ಟು ಇನ್ಸುಲಿನ್ ಹಾರ್ಮೋನ್ ಉತ್ಪಾದಿಸದಿದ್ದರೆ ಅಥವಾ ದೇಹವು ಇನ್ಸುಲಿನ್-ಗೆ ಸರಿಯಾಗಿ ಪ್ರತಿಕ್ರಿಯೆ ನೀಡದಿದ್ದಲ್ಲಿ ಮಧುಮೇಹ ಉಂಟಾಗುತ್ತದೆ. ಮಧುಮೇಹದಲ್ಲಿ ಎರಡು ಸಾಮಾನ್ಯ ವಿಧಗಳಿವೆ. ಮಧುಮೇಹ 1ನೆಯ ವಿಧದಲ್ಲಿ ಮೇದೋಜೀರಕ ಗ್ರಂಥಿಯು ಇನ್ಸುಲಿನ್ ಉತ್ಪಾದಿಸುವಲ್ಲಿ ವಿಫಲವಾಗುತ್ತದೆ.

ಮಧುಮೇಹ 2ನೆಯ ವಿಧದಲ್ಲಿ ದೇಹವು ಇನ್ಸುಲಿನ್-ಗೆ ಸರಿಯಾಗಿ ಪ್ರತಿಕ್ರಿಯೆ ನೀಡುವುದಿಯಲ್ಲ, ತದನಂತರ ಮೇದೋಜೀರಕ ಗ್ರಂಥಿಗೆ ದೇಹಕ್ಕೆ ಅವಶ್ಯವಾದ ಅಧಿಕ ಪ್ರಮಾಣದ ಇನ್ಸುಲಿನ್ ಉತ್ಪಾದಿಸಲು ಸಾಧ್ಯವಾಗದಿದ್ದಾಗ ರಕ್ತದಲ್ಲಿ ಸಕ್ಕರೆಯು ಅಧಿಕವಾಗುತ್ತದೆ. ಮಧುಮೇಹಿಗಳ ಪೈಕಿ ಹೆಚ್ಚಿನವರಿಗೆ 2ನೆಯ ವಿಧದ ಮಧುಮೇಹವಿರುತ್ತದೆ.

 ಪ್ರಿ-ಡಯಾಬಿಟಿಸ್ ಎಂದರೇನು?

ಪ್ರಿ-ಡಯಾಬಿಟಿಸ್ ಎಂದರೇನು?

ನಿಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟವು ಸಾಮಾನ್ಯಕ್ಕಿಂತ ಹೆಚ್ಚು ಆದರೆ ಮಧುಮೇಹ ಎಂದು ನಿರ್ಣಯಿಸುವ ಮಟ್ಟಕಿಂತ ಕಡಿಮೆ ಇದ್ದಾಗ ನಿಮಗೆ ಪ್ರಿ-ಡಯಾಬಿಟಿಸ್ ಇದೆ ಎಂದು ಹೇಳಬಹುದು. ಪ್ರಿ-ಡಯಾಬಿಟಿಸ್ ಉಳ್ಳವರ ಸಂಖೆ ದಿನೇ-ದಿನೇ ಹೆಚ್ಚುತ್ತಲಿದೆ. ಇದು 2ನೆಯ ವಿಧದ ಮಧುಮೇಹ ಉಂಟಾಗುವ ಸಾಧ್ಯತೆಯನ್ನು ಮಹತ್ತರವಾಗಿ ಹೆಚ್ಚಿಸುತ್ತದೆ.

ಒಳ್ಳೆಯ ಸುದ್ದಿಯೇನೆಂದರೆ ನೀವು ಪ್ರಿ-ಡಯಾಬಿಟಿಸ್ ಮಧುಮೇಹವಾಗಿ ಪರಿವರ್ತನೆಗೊಳ್ಳುವುದನ್ನು ತಡೆಯಬಹುದು ಇಲ್ಲವೇ ನಿಧಾನಗೊಳಿಸಬಹುದು. ಆರೋಗ್ಯಕಾರ ಆಹಾರ ಪದ್ಧತಿ, ತೂಕವನ್ನು ಸರಿಯಾದ ಮಟ್ಟದಲ್ಲಿರಿಸುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು ಮುಂತಾದ ಜೀವನ ಶೈಲಿ ಬದಲಾವಣೆಯಿಂದ ಇದು ಸಾಧ್ಯ.

 ಮಧುಮೇಹದ ಲಕ್ಷಣಗಳು

ಮಧುಮೇಹದ ಲಕ್ಷಣಗಳು

ರೋಗಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಆರಂಭಿಕ ಹಂತಗಳಲ್ಲಿ, ಯಾವುದೇ ರೋಗಲಕ್ಷಣಗಳು ಇರದಿರಬಹುದು, ಆದ್ದರಿಂದ ನಿಮಗೆ ಮಧುಮೇಹ ಇದೆ ಎಂದು ತಿಳಿಯದೇ ಇರಬಹುದು. ನಿಮಗರಿವಿಲ್ಲದೇ ಯಾವುದೇ ರೋಗಲಕ್ಷಣವಿಲ್ಲದೇ ಕಣ್ಣು, ಮೂತ್ರಪಿಂಡಗಳು, ಹೃದಯ ಮತ್ತು ರಕ್ತನಾಳಗಳಿಗೆ ಹಾನಿಯುಂಟಾಗುತ್ತಿರಬಹುದು. ಮಧುಮೇಹದ ಕೆಲ ಲಕ್ಷಣಗಳು ಈ ತೆರನಾಗಿವೆ:

-ಅತಿಯಾದ ಹಸಿವು

-ಅತಿ ಬಾಯಾರಿಕೆ

-ಪದೇ ಪದೇ ಮೂತ್ರ ವಿಸರ್ಜನೆ

-ವಿವರಿಸಲಾಗದ ತೂಕ ನಷ್ಟ

-ದೃಷ್ಟಿ ಮಸುಕಾಗುವಿಕೆ.

-ಯಾವಗಲೂ ಸುಸ್ತಾಗಿರುವ ಅನುಭವ.

-ಗಾಯಗಳು ಗುಣವಾಗದಿರುವುದು.

- ಶುಷ್ಕ ಚರ್ಮ ಹಾಗೂ ಚರ್ಮದಲ್ಲಿ ತುರಿಕೆ.

-ಕೈ ಅಥವಾ ಕಾಲುಗಳ ಅಡಿಗಳಲ್ಲಿ ಜುಮ್ಮೆನಿಸುವಿಕೆ ಅಥವಾ ಮರಗಟ್ಟುವಿಕೆ.
-ಪುನರಾವರ್ತಿಸುವ ಸೋಂಕುಗಳು (ಚರ್ಮ, ಹಲ್ಲುಗಳ ವಸಡು, ಮೂತ್ರಕೋಶ), ಯೋನಿಯ ಈಸ್ಟ್ ಸೋಂಕು

 ಎರಡು ಬಗೆಯ ಮಧುಮೇಹ

ಎರಡು ಬಗೆಯ ಮಧುಮೇಹ

1ನೆಯ ವಿಧದ ಮಧುಮೇಹ ಎಂದರೇನು?: 1ನೆಯ ವಿಧದ ಮಧುಮೇಹವನ್ನು ಇನ್ಸುಲಿನ್ ಅವಲಂಬಿತ ಮಧುಮೇಹ ಎಂದು ಕೂಡ ಕರೆಯುತ್ತಾರೆ. ಮಧುಮೇಹ ಬಾಧಿತ ಜನರ ಪೈಕಿ ಸುಮಾರು 10% ಈ ಪ್ರಕಾರವನ್ನು ಹೊಂದಿರುತ್ತಾರೆ. ಇದನ್ನು ಸಾಮಾನ್ಯವಾಗಿ ಜ್ಯುವೆನಿಲ್ ಮಧುಮೇಹ ಕರೆಯುತ್ತಾರೆ ಏಕೆಂದರೆ ಮಕ್ಕಳು ಮತ್ತು ಹದಿಹರೆಯದವರಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ, ಆದರೆ ಕೆಲವೊಮ್ಮೆ, 40 ವರ್ಷಗಳ ವರೆಗಿನ ವಯೋಮಾನದ ಕೆಲವು ವಯಸ್ಕರಲ್ಲಿ ಸಹ ಇದು ಕಾಣಿಸಿಕೊಳ್ಳಬಹುದು.

2ನೆಯ ವಿಧದ ಮಧುಮೇಹ ಎಂದರೇನು?: ಮಧುಮೇಹ 2 ನೆಯ ವಿಧ ಸಾಮಾನ್ಯವಾಗಿ ವಯಸ್ಕರಲ್ಲಿ ಮತ್ತು ಮುಖ್ಯವಾಗಿ ಅಧಿಕತೂಕದ ವ್ಯಕ್ತಿಗಳಲ್ಲಿ ಉಂಟಾಗುತ್ತದೆ. ಶರೀರದ ಜೀವಕೋಶಗಳು ಇನ್ಸುಲಿನ್-ಗೆ ಸರಿಯಾಗಿ ಪ್ರತಿಕ್ರಿಯಿಸದಂತಹ ಸ್ಥಿತಿಯಲ್ಲಿ ಹೆಚ್ಚಿದ ಇನ್ಸುಲಿನ್ ಅವಶ್ಯಕತೆ ನಿಭಾಯಿಸಲು ಮೇದೋಜೀರಕ ಗ್ರಂಥಿ ವಿಫಲವಾದರೆ ಇದು ಉಂಟಾಗುತ್ತದೆ.

English summary
COVID-19 has shown doctors, patients, and researchers alike that it's not like other viruses-it's been known to cause severe inflammation throughout the body, wreaking havoc not only on the respiratory system, but also the heart, brain, and kidneys, among other essential organs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X