ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಟ್ಸಾಪ್‌ಗೆ ಹೊಸ ಫೀಚರ್; ಗ್ರೂಪ್‌ಗೆ ಹೆಚ್ಚು ಜನರು, ರಿಯಾಕ್ಷನ್ಸ್, ದೊಡ್ಡ ಫೈಲ್

|
Google Oneindia Kannada News

ಬೆಂಗಳೂರು, ಮೇ 7: ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ (Whatsapp Messaging App) ಆಗಾಗ್ಗೆ ಪರಿಷ್ಕರಿಸಿಕೊಳ್ಳುತ್ತಿರುತ್ತದೆ. ಈಗ ಕೆಲ ಹೊಸ ವಿಶೇಷ ಫೀಚರ್‌ಗಳನ್ನು ವಾಟ್ಸಾಪ್ ಬಿಡುಗಡೆ ಮಾಡುತ್ತಿದೆ. ಅದರಲ್ಲಿ ಪ್ರಮುಖವಾದುದು ಒಂದು ಮೆಸೇಜ್‌ಗೆ ವಿವಿಧ ರೀತಿಯ ಇಮೋಜಿ ರಿಯಾಕ್ಷನ್ಸ್ (emoji reactions) ಅವಕಾಶ ಇರುವುದು. ಹಾಗೆಯೇ, ವಾಟ್ಸಾಪ್ ಗ್ರೂಪ್‌ಗೆ ಸದಸ್ಯರನ್ನು ಸೇರಿಸುವ ಸಂಖ್ಯೆಯನ್ನ ಹೆಚ್ಚಿಸಲಾಗಿದೆ. ದೊಡ್ಡ ಫೈಲ್ ಅನ್ನ ಅಟ್ಯಾಚ್ ಮಾಡುವ ಅವಕಾಶವನ್ನೂ ಕಲ್ಪಿಸಲಾಗಿದೆ.

ನೀವು ವಾಟ್ಸಾಪ್‌ನಲ್ಲಿ 2 ಜಿಬಿ ಗಾತ್ರದವರೆಗಿನ ಫೈಲ್ ಅನ್ನು ಸಂದೇಶವಾಗಿ ಅಟ್ಯಾಚ್ ಮಾಡಿ ಸುರಕ್ಷಿತವಾಗಿ ಕಳುಹಿಸಬಹುದು. 2 ಜಿಬಿಯಷ್ಟು ಗಾತ್ರದ ಫೈಲ್ ಅನ್ನು ಜಿಮೇಲ್‌ನಲ್ಲೇ ಅಟ್ಯಾಚ್ ಮಾಡಲು ಸಾಧ್ಯವಾಗುವುದಿಲ್ಲ. ಅದು ವಾಟ್ಸಾಪ್‌ನಲ್ಲಿ ಅವಕಾಶ ಕೊಡಲಾಗಿದೆ. ಆದರೆ, ಈ ದೊಡ್ಡ ಫೈಲ್ ಕಳುಹಿಸುವಾಗ ಸಾಧ್ಯವಾದಷ್ಟು ವೈ ಫೈ ಬಳಸಿ ಎಂಬ ಸಲಹೆಯನ್ನೂ ಕೊಡಲಾಗಿದೆ.

Fact check: ಸರ್ಕಾರ 3 ತಿಂಗಳವರೆಗೆ ಉಚಿತ ಇಂಟರ್ನೆಟ್ ನೀಡುತ್ತಿದೆ?Fact check: ಸರ್ಕಾರ 3 ತಿಂಗಳವರೆಗೆ ಉಚಿತ ಇಂಟರ್ನೆಟ್ ನೀಡುತ್ತಿದೆ?

ಇಮೋಜಿ ರಿಯಾಕ್ಷನ್ಸ್ ಹೇಗೆ?
ವಾಟ್ಸಾಪ್ ಸಂದೇಶಕ್ಕೆ ಇಮೋಜಿ ಪ್ರತಿಕ್ರಿಯೆಯ ಅವಕಾಶ ಕೊಡಲಾಗುತ್ತಿದೆ. ಈಗಾಗಲೇ ವಾಟ್ಸಾಪ್‌ನಲ್ಲಿ ಇಮೋಜಿ ರಿಯಾಕ್ಷನ್ಸ್ ಲಭ್ಯ ಇರುವುದರಿಂದ ಇದ್ಯಾವುದು ಹೊಸ ಫೀಚರ್ ಎಂಬ ಗೊಂದಲ ಬೇಡ. ಅದು ಬೇರೆ ಇದು ಬೇರೆ. ಹೊಸ ಫೀಚರ್‌ನಲ್ಲಿ ನೀವು ಒಂದು ಸಂದೇಶಕ್ಕೆ ಆರು ಭಾವನೆಗಳ ರಿಯಾಕ್ಷನ್ಸ್ ಇರುವ ಇಮೋಜಿಗಳನ್ನ ಡೀಫಾಲ್ಟ್ ಆಗಿ ಅಡಕ ಮಾಡಲಾಗುತ್ತದೆ. ಒಂದು ಸಂದೇಶವನ್ನು ಸುದೀರ್ಘ ಒತ್ತಿದರೆ ರಿಯಾಕ್ಷನ್ಸ್‌ನ ಸಾಲು ತೆರೆದುಕೊಳ್ಳುತ್ತದೆ. ಅದರಲ್ಲಿ ಒಂದನ್ನು ನೀವು ಆರಿಸಬಹುದು. ಇದು ಥೇಟ್ ಫೇಸ್‌ಬುಕ್, ಟ್ವಿಟ್ಟರ್, ಇನ್ಸ್‌ಟಾಗ್ರಾಮ್‌ನಲ್ಲಿರುವಂಥದ್ದೇ ಒಂದು ಫೀಚರ್. ಒಂದು ಸಂದೇಶ ಇಷ್ಟವಾದರ ಮುಗುಳ್ನಗೆಯ ಇಮೋಜಿ ಸೆಲೆಕ್ಟ್ ಮಾಡಬಹುದು. ಇಷ್ಟವಾಗದಿದ್ದರೆ ಸಿಟ್ಟಿನ ಭಾವನೆಯ ಇಮೋಜಿಯನ್ನ ಕ್ಲಿಕ್ ಮಾಡಬಹುದು.

Whatsapp releases new important features including emoji reactions, enhanced group

ಲೈಕ್ ಬಟನ್, ಲವ್, ನಗೆ, ಬೇಸರ, ಆಶ್ಚರ್ಯ ಮತ್ತು ಥ್ಯಾಂಕ್ಸ್ ಇವು ಸದ್ಯ ಇರುವ ಆರು ಮುಖಭಾವಗಳ ಇಮೋಜಿಗಳು. ಮುಂದಿನ ದಿನಗಳಲ್ಲಿ ಇನ್ನಷ್ಟು ವಿಧದ ಇಮೋಜಿಗಳನ್ನ ಸೇರಿಸಲಾಗುತ್ತದೆ ಎಂದು ವಾಟ್ಸಾಪ್ ಹೇಳಿದೆ.

ವಾಟ್ಸಾಪ್‌ನ ಹೊಸ ಗ್ರೂಪ್ ವಾಯ್ಸ್ ಕಾಲ್ ಫೀಚರ್ ಬಳಕೆ ಹೇಗೆ?ವಾಟ್ಸಾಪ್‌ನ ಹೊಸ ಗ್ರೂಪ್ ವಾಯ್ಸ್ ಕಾಲ್ ಫೀಚರ್ ಬಳಕೆ ಹೇಗೆ?

ಬೇರೆ ಸೋಷಿಯಲ್ ಮೀಡಿಯಾಗಳಲ್ಲಿ ಇಂಥದ್ದೊಂದು ಅವಕಾಶಗಳು ಯೂಸರ್‌ಗಳಿಗೆ ಇದ್ದವು. ವಾಟ್ಸಾಪ್‌ನಲ್ಲೂ ಇದು ಬೇಕೆಂಬ ಕೂಗು ಇತ್ತೀಚೆಗೆ ಬಲವಾಗಿ ಕೇಳಿಬರುತ್ತಿತ್ತು. ಮೂರು ವರ್ಷಗಳಿಂದ ವಾಟ್ಸಾಪ್ ಈ ಇಮೋಜಿ ಸೃಷ್ಟಿಗೆ ಪ್ರಕ್ರಿಯೆ ನಡೆದಿತ್ತು. ಕಳೆದ ತಿಂಗಳಷ್ಟೇ ವಾಟ್ಸಾಪ್ ಈ ಇಮೋಜಿ ಬಗ್ಗೆ ಬಹಿರಂಗವಾಗಿ ಘೋಷಣೆ ಮಾಡಿತು.

Whatsapp releases new important features including emoji reactions, enhanced group

ಗ್ರೂಪ್‌ಗೆ ಹೆಚ್ಚು ಮಂದಿ ಸೇರಿಸಲು ಸಾಧ್ಯ:
ಸದ್ಯ ಒಂದು ವಾಟ್ಸಾಪ್ ಗ್ರೂಪ್‌ನಲ್ಲಿ 256 ಮಂದಿಯನ್ನು ಸೇರಿಸುವ ಅವಕಾಶ ಇದೆ. ಈಗ ಮಾಡಿರುವ ಅಪ್‌ಡೇಟ್‌ನಲ್ಲಿ ಇದು ದ್ವಿಗುಣಗೊಳ್ಳುತ್ತದೆ. ಅಂದರೆ ಒಂದು ಗ್ರೂಪ್‌ಗೆ 512 ಜನರನ್ನ ಸೇರಿಸಬಹುದು. ಮುಂದಿನ ದಿನಗಳಲ್ಲಿ ಇದರ ಮಿತಿಯನ್ನು ಇನ್ನೂ ಹೆಚ್ಚಿಸುವ ಸಾಧ್ಯತೆ ಇದೆ.

ಏಕಕಾಲದಲ್ಲಿ 100 ಮಂದಿಗೆ ಕಾಲ್:
ವಾಪ್ಸಾಪ್ ಗ್ರೂಪ್ ಕಾಲ್ ಮಿತಿಯನ್ನೂ ಹೆಚ್ಚಿಸಲಾಗಿದೆ. ವಾಟ್ಸಾಪ್‌ನಲ್ಲಿ ಧ್ವನಿ ಕರೆ (Whatsapp voice call) ಮೂಲಕ ಒಮ್ಮೆಲೇ ನೂರು ಮಂದಿ ಜೊತೆ ಮಾತನಾಡಬಹುದು. ಇನ್ನು, ಫೈಲ್ ಶೇರಿಂಗ್‌ನಲ್ಲೂ ವಾಟ್ಸಾಪ್ ಒಳ್ಳೆಯ ಸುದ್ದಿ ಕೊಟ್ಟಿದೆ. ಎರಡು ಜಿಬಿ ಗಾತ್ರದವರೆಗಿನ ಫೈಲ್ ಅನ್ನು ವಾಟ್ಸಾಪ್‌ನಲ್ಲಿ ಯಾರು ಬೇಕಾದರೂ ಕಳುಹಿಸಬಹುದು. ಈ ಮುಂಚೆ ಇದರು ನೂರು ಎಂಬಿಗೆ ಸೀಮಿತವಾಗಿತ್ತು.

(ಒನ್ಇಂಡಿಯಾ ಸುದ್ದಿ)

English summary
Whatsapp releases new important features including emoji reactions, enhanced group,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X