ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತಿ ಕಡಿಮೆ ಖರ್ಚಿನಲ್ಲಿ ವಿಶ್ವ ಪರ್ಯಟನೆಗೆ ಶ್ರೀನಿಧಿ ದಿಕ್ಸೂಚಿ!

By ವಿಕಾಸ್ ಹೆಗಡೆ, ಬೆಂಗಳೂರು
|
Google Oneindia Kannada News

ವಿದೇಶಗಳಿಗೆ ಪ್ರವಾಸ ಮಾಡುವುದು, ಅಲ್ಲಿನ ಸುಂದರ, ಆಸಕ್ತಿಕರ ಸ್ಥಳಗಳಿಗೆ ಭೇಟಿಕೊಡುವುದು ಯಾರಿಗೆ ತಾನೆ ಇಷ್ಟವಿಲ್ಲ? ಆದರೆ ವಿದೇಶಗಳಿಗೆ ಪ್ರಯಾಣಿಸಲು ಬರೀ ಆಸಕ್ತಿ, ಇಷ್ಟ ಇದ್ದರೆ ಸಾಲದಲ್ಲ!. ನಮ್ಮ ಜೀವನದ ಕೆಲಸಗಳ ನಡುವೆ ಸಮಯ ಬೇಕು, ಅದನ್ನು ಹೇಗೋ ಹೊಂದಿಸಿಕೊಂಡರೂ ಮುಖ್ಯವಾದ ಇನ್ನೊಂದು ಅಂಶವೆಂದರೆ ಹಣ! ವಿದೇಶ ಪ್ರವಾಸದ ಪ್ಯಾಕೇಜ್ ಟೂರ್ ಗಳು ದುಬಾರಿ ಅನ್ನಿಸುವಷ್ಟಿರುತ್ತದೆ.

ಕುಟುಂಬ ಸಮೇತ ಹೋದರಂತೂ ಉಳಿತಾಯದ ಹಣಕ್ಕೆ ದೊಡ್ಡಮಟ್ಟದ ಕತ್ತರಿ ಬಿದ್ದಂತೆ. ಹಾಗಂತ ಯಾವುದೋ ದೇಶಕ್ಕೆ ನಾವೇ ಯೋಜನೆ ಹಾಕಿಕೊಂಡು ಕಡಿಮೆ ಖರ್ಚಿನಲ್ಲಿ ಪ್ರಯಾಣಿಸುವುದು ಸಾಧ್ಯವಿಲ್ಲವಾ ಅಂತ ಕೇಳಿದರೆ ಖಂಡಿತ ಸಾಧ್ಯವಿದೆ.

ಹೇಮಕುಂಡ್ ಸಾಹಿಬ್ ಸುತ್ತಾ ರೋಚಕ ಚಾರಣಹೇಮಕುಂಡ್ ಸಾಹಿಬ್ ಸುತ್ತಾ ರೋಚಕ ಚಾರಣ

ಆದರೆ ಅದಕ್ಕೆ ತಕ್ಕುದಾದ ತಯಾರಿಬೇಕು, ಮಾಹಿತಿಗಳನ್ನು ತಿಳಿದುಕೊಳ್ಳುವ ದಾರಿ ಗೊತ್ತಿರಬೇಕು, ಕಡಿಮೆ ಖರ್ಚಿನ ಪ್ರಯಾಣ, ಒಳನಾಡಿನ ಓಡಾಟಗಳು, ಆಹಾರ, ವಸತಿಗಳನ್ನು ಸೂಕ್ತಬೆಲೆಯಲ್ಲಿ ನಿರ್ವಹಣೆ ಮಾಡಿಕೊಳ್ಳುವ ಜಾಣ್ಮೆ ಬೇಕಾಗುತ್ತದೆ.

ಈಗಿನ ಅಂತರಜಾಲದ ಯುಗದಲ್ಲಿ ಇವೆಲ್ಲವೂ ಬಹಳ ಕಷ್ಟದ ವಿಚಾರಗಳೇನಲ್ಲ, ಆದರೆ ಯಾವುದನ್ನು ಎಲ್ಲೆಲ್ಲಿ ಹೇಗೆ ಬಳಸಿಕೊಳ್ಳಬೇಕೆಂಬ ಮಾರ್ಗದರ್ಶಕ ಮಾಹಿತಿಯ ಅಗತ್ಯವಂತೂ ಇದೆ.

ಕನ್ನಡದಲ್ಲಿ ಪ್ರವಾಸ ಸಾಹಿತ್ಯಗಳಿಗೇನೂ ಕೊರತೆಯಿಲ್ಲ. ನೂರಾರು ಪ್ರವಾಸಕಥನದ ಪುಸ್ತಕಗಳಿವೆ. ಆದರೆ ವಿದೇಶ ಪ್ರವಾಸದ ಯೋಜನೆಯನ್ನು ಕಡಿಮೆ ಖರ್ಚಿನಲ್ಲಿ ಹೇಗೆ ಪೂರೈಸಿಕೊಳ್ಳಬಹುದು ಅಂತ ಇದುವರೆಗೂ ಯಾವ ಪುಸ್ತಕ ಬಂದಹಾಗಿಲ್ಲ. ಈ ನಿಟ್ಟಿನಲ್ಲಿ ಉಪಯೋಗವಾಗುವಂತೆ ಬಂದಿರುವ ಪುಸ್ತಕ - ''ವಿಶ್ವದರ್ಶನ, ಬಜೆಟ್'ನಲ್ಲಿ''!

ಟ್ರಾವೆಲ್ ಬ್ಲಾಗರ್ ಶ್ರೀನಿಧಿ ಹಂದೆ

ಟ್ರಾವೆಲ್ ಬ್ಲಾಗರ್ ಶ್ರೀನಿಧಿ ಹಂದೆ

ಲೇಖಕರು ಶ್ರೀನಿಧಿ ಹಂದೆ: ಚೆನ್ನೈಯಲ್ಲಿ ನೆಲೆಸಿರುವ ಇವರು ಒಬ್ಬ ಟ್ರಾವೆಲ್ ಬ್ಲಾಗರ್. ಮೂವತ್ತೈದಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿರುವ ಇವರು ತಮ್ಮ ಪ್ರತಿ ಪ್ರವಾಸದ ವಿವರಗಳನ್ನು ಒಂದು ದಶಕದಿಂದ ತಮ್ಮ ಬ್ಲಾಗಿನಲ್ಲಿ ಬರೆಯುತ್ತಾ ಬಂದಿದ್ದಾರೆ. ಬಹುತೇಕ ಪ್ರವಾಸಗಳನ್ನು ತಾವೇ ಯೋಜಿಸಿಕೊಂಡು ಪೂರೈಸಿದ್ದಾರೆ. ಹೀಗಾಗಿ ಈ ಪುಸ್ತಕವು ಸ್ವಾನುಭವಗಳ ಆಧಾರದಿಂದ ಮೂಡಿಬಂದಿರುವ ಫಸ್ಟ್ ಹ್ಯಾಂಡ್ ಮಾಹಿತಿಯಾಗಿದ್ದು ಪ್ರಸ್ತುತವೆನಿಸುತ್ತದೆ.

ಪ್ರವಾಸಕ್ಕೆ ದೇಶದ ಆಯ್ಕೆ ಹೇಗೆ

ಪ್ರವಾಸಕ್ಕೆ ದೇಶದ ಆಯ್ಕೆ ಹೇಗೆ

ಪ್ರವಾಸಕ್ಕೆ ದೇಶದ ಆಯ್ಕೆ ಹೇಗೆ, ಕಡಿಮೆ ಖರ್ಚಿನ ವಿಮಾನಪ್ರಯಾಣ ಬುಕ್ ಮಾಡುವುದು ಹೇಗೆ, ವೀಸಾ ಮಾಡಿಸಿಕೊಳ್ಳುವುದು, ವಿದೇಶಿ ಕರೆನ್ಸಿ ಪಡೆದುಕೊಳ್ಳುವುದು, ನಮ್ಮ ಆಸಕ್ತಿಯ ಸ್ಥಳಗಳನ್ನು ಹುಡುಕಿಕೊಳ್ಳುವುದು ಎಂಬಂತಹ ವಿಷಯಗಳಿಂದ ಹಿಡಿದು ವಿದೇಶಗಳಲ್ಲಿ ಭಾಷೆ, ಆಹಾರ, ತಿರುಗಾಟ, ವಸತಿ, ಚಟುವಟಿಕೆಗಳು, ಸುರಕ್ಷತೆ, ಆಗಬಹುದಾದ ತೊಂದರೆ-ನಷ್ಟಗಳನ್ನು ನಿಭಾಯಿಸುವುದು ಹೇಗೆ ಎಂಬ ವಿಷಯಗಳ ಬಗ್ಗೆ ಮಾಹಿತಿಯನ್ನು ಈ ಪುಸ್ತಕದಲ್ಲಿ ಒದಗಿಸಿದ್ದಾರೆ. ಇದಕ್ಕೆ ನೆರವಾಗುವ ಕೆಲವೊಂದು ಜಾಲತಾಣಗಳು, ಹಣ ಉಳಿಸುವ ವಿಧಾನಗಳು ಮತ್ತು ವಹಿಸಬೇಕಾದ ಮುನ್ನೆಚ್ಚರಿಕೆಗಳ ವಿವರಗಳಿವೆ.

ಮಾರ್ಗದರ್ಶನ ನೀಡುವಂತಹ ಕೈಪಿಡಿ

ಮಾರ್ಗದರ್ಶನ ನೀಡುವಂತಹ ಕೈಪಿಡಿ

ಬೇರೆ ಬೇರೆ ಕೆಲ ದೇಶಗಳಲ್ಲಿ ಭಾರತೀಯರನ್ನು ಒಳಗೆ ಬಿಟ್ಟುಕೊಳ್ಳಲು ಅವರಿಗಿರುವ ಧೋರಣೆಗಳು, ಪ್ರವಾಸಿಗರನ್ನು ದೋಚುವ, ಮೋಸಮಾಡುವ ಘಟನೆಗಳು, ಊಹಿಸಿರದಂತಹ ಕೆಲ ವ್ಯತಿರಿಕ್ತ ವಿದ್ಯಮಾನಗಳ ಅನುಭವಗಳನ್ನು ಸಂಕ್ಷಿಪ್ತವಾಗಿ ದಾಖಲಿಸಿದ್ದಾರೆ.

ಒಟ್ಟಾರೆ ಪುಸ್ತಕವನ್ನು ಮಾಹಿತಿಯ ದೃಷ್ಟಿಯಿಂದ ಬರೆದಿರುವುದು ಸ್ಪಷ್ಟವಾಗಿದ್ದು ಕಡಿಮೆ ಖರ್ಚಿನಲ್ಲಿ ವಿದೇಶ ಪ್ರವಾಸ ಮಾಡುವ ಆಸಕ್ತಿಗೆ ಮಾರ್ಗದರ್ಶನ ನೀಡುವಂತಹ ಕೈಪಿಡಿಯಂತೆ ಈ 110 ಪುಟಗಳ ಪುಸ್ತಕ ಮೂಡಿಬಂದಿದೆ.

ಪುಸ್ತಕ ಪ್ರಿಂಟ್ ಆನ್ ಡಿಮ್ಯಾಂಡ್ ರೂಪದಲ್ಲಿ

ಪುಸ್ತಕ ಪ್ರಿಂಟ್ ಆನ್ ಡಿಮ್ಯಾಂಡ್ ರೂಪದಲ್ಲಿ

ಅಂದಹಾಗೆ, ಈ ಪುಸ್ತಕ ಪ್ರಿಂಟ್ ಆನ್ ಡಿಮ್ಯಾಂಡ್ ರೂಪದಲ್ಲಿ ದೊರೆಯುತ್ತಿದೆ. ಅಂದರೆ, ಯಾರಾದರೂ ಆರ್ಡರ್ ಮಾಡಿದರೆ ಪ್ರಿಂಟ್ ಮಾಡಿಕೊಡಲಾಗುತ್ತದೆ. Notionpress ಎಂಬ ಪ್ರಕಾಶನ ತಾಣದಲ್ಲಿ ಖರೀದಿಸಿ ಆರ್ಡರ್ ಮಾಡಿದರೆ ಪುಸ್ತಕದ ಮುದ್ರಿತ ಪ್ರತಿಕಳಿಸಿಕೊಡುತ್ತಾರೆ ಅಥವಾ ಅಮೇಜಾನ್ ತಾಣದಲ್ಲೂ ಖರೀದಿಸಬಹುದು.

English summary
Budget trip Book: How to travel around the World get to know from Shrinidhi Hande's Kannada book.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X