ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಲೆ ಏರಿಕೆ ಸ್ವಾಮಿ: ಭಾರತದಲ್ಲಿ ಮಧ್ಯಮ ವರ್ಗದ ಮಂದಿಗೆ ದುಬಾರಿ "ದೀಪಾವಳಿ"!

|
Google Oneindia Kannada News

ನವದೆಹಲಿ, ಅಕ್ಟೋಬರ್ 25: ಭಾರತದಲ್ಲಿ ದೀಪಾವಳಿ ಹಬ್ಬದ ಆಚರಣೆ ಬಲು ದುಬಾರಿಯಾಗಲಿದೆ. ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆ ಏರಿಕೆಯೊಂದಿಗೆ ಹೂವು-ಹಣ್ಣು-ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿ ಏರಿಕೆಯಾಗಿದೆ. ದುಬಾರಿ ದುನಿಯಾದಲ್ಲಿ ಮಧ್ಯಮವರ್ಗದ ಜನರು ಹಬ್ಬದ ಆಚರಣೆ ಮಾಡಬೇಕೋ ಬೇಡವೋ ಎನ್ನುವಂತಾ ಸನ್ನಿವೇಶ ಸೃಷ್ಟಿಯಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿ, ಎನ್ ಸಿಆರ್, ಮುಂಬೈ, ಚೆನ್ನೈ, ಹೈದ್ರಾಬಾದ್, ಕೋಲ್ಕತ್ತಾ ಹಾಗೂ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಬೆಲೆ ಏರಿಕೆಯು ಸಾಮಾನ್ಯವರ್ಗ ಹಾಗೂ ಮಧ್ಯಮ ವರ್ಗದ ಜನರ ಮೇಲೆ ಹೇಗೆ ಪರಿಣಾಮ ಬೀರಿದೆ ಎನ್ನುವುದರ ಕುರಿತು "ಲೋಕಲ್ ಸರ್ಕಲ್" ಸರ್ವೇ ನಡೆಸಿದೆ.

ಕಚ್ಚಾತೈಲದ ನಂಟು: ಭಾರತದಲ್ಲಿ ಪೆಟ್ರೋಲ್, ಡೀಸೆಲ್, ನೈಸರ್ಗಿಕ ಅನಿಲದ ಬೆಲೆ ಏಕೆ ದುಬಾರಿ!? ಕಚ್ಚಾತೈಲದ ನಂಟು: ಭಾರತದಲ್ಲಿ ಪೆಟ್ರೋಲ್, ಡೀಸೆಲ್, ನೈಸರ್ಗಿಕ ಅನಿಲದ ಬೆಲೆ ಏಕೆ ದುಬಾರಿ!?

ದೇಶದ ಪ್ರಮುಖ ನಗರಗಳು ಮತ್ತು ಮಹಾನಗರಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯು ಮಧ್ಯಮ ವರ್ಗದ ಜನರ ಜೇಬಿಗೆ ಕತ್ತರಿ ಹಾಕುವಂತಿದೆ. ಆದಾಯ ಗಳಿಕೆ ಮತ್ತು ಖರ್ಚುಗಳ ನಡುವಿನ ಅಂತರ ಸಾರ್ವಜನಿಕರನ್ನು ಮತ್ತೊಮ್ಮೆ ಬಡತನಕ್ಕೆ ನೂಕುವ ಅಪಾಯ ಎದುರಾಗಿದೆ. ದೀಪಾವಳಿ ಹೊಸ್ತಿಲಿನಲ್ಲಿ ಪೆಟ್ರೋಲ್, ಡೀಸೆಲ್ ಜೊತೆಗೆ ದಿನನಿತ್ಯ ಬಳಸುವ ಅಗತ್ಯ ವಸ್ತಗೆಳ ಬೆಲೆ ಹೇಗಿದೆ. ಅವುಗಳ ಪರಿಣಾಮ ಜನರ ಮೇಲೆ ಹೇೆಗೆ ಬೀರಲಿದೆ ಎಂಬುದನ್ನು ಮುಂದೆ ಓದಿ.

ಬಿಲೆ ಏರಿಕೆ ಬಿಸಿ ತಟ್ಟಿದ ಪ್ರಮುಖ ನಗರ ಮತ್ತು ಕಾರಣ

ಬಿಲೆ ಏರಿಕೆ ಬಿಸಿ ತಟ್ಟಿದ ಪ್ರಮುಖ ನಗರ ಮತ್ತು ಕಾರಣ

ಚೆನ್ನೈ, ಬೆಂಗಳೂರು, ಕೋಲ್ಕತ್ತಾ, ಪುಣೆ, ಅಹಮದಾಬಾದ್ ಮತ್ತು ಗುರುಗ್ರಾಮ್‌ನ ಕುಟುಂಬಗಳು ಬಜೆಟ್‌ನ ಪ್ರಮುಖ ಮಾನದಂಡ ಎಂದು ಹೇಳಿದೆ. ದೆಹಲಿ, ಮುಂಬೈ, ಹೈದರಾಬಾದ್ ಮತ್ತು ನೋಯ್ಡಾದ ಕುಟುಂಬಗಳು 'ಸುರಕ್ಷತೆ' ಹೆಚ್ಚು ಪ್ರಮುಖ ಅಂಶವೆಂದು ಉಲ್ಲೇಖಿಸಿವೆ. ಮುಂಬೈ, ಪುಣೆ, ಅಹಮದಾಬಾದ್ ಮತ್ತು ನೋಯ್ಡಾದಲ್ಲಿನ ಮನೆಗಳಿಗೆ, ಶಾಪಿಂಗ್ ಮಾಡುವಾಗ ಆಗುವ ಅನುಕೂಲವೂ ಒಂದು ಪ್ರಮುಖ ಮಾನದಂಡವಾಗಿದೆ.

ದೇಶದ ಮಾರುಕಟ್ಟೆ ಮತ್ತು ಆರ್ಥಿಕತೆಗೆ ಉತ್ತಮ ವಾತಾವರಣ ಕಂಡು ಬಂದಿದೆ. ದೈನಂದಿನ ಕೋವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ ಇಳಿಮುಖವಾದ ಹಿನ್ನೆಲೆ ಮೇ 2021ರಲ್ಲಿ ಕೇವಲ ಶೇ.30ರಷ್ಟು ಜನರು ಖರೀದಿ ಮಾಡುತ್ತಿದ್ದರೆ, ಅದೇ ಸೆಪ್ಟೆಂಬರ್‌ನಲ್ಲಿ ಶೇ.60ರಷ್ಟು ಕುಟುಂಬಗಳು ಖರ್ಚು ಮಾಡುವುದಕ್ಕೆ ಮನಸು ಮಾಡಿವೆ.

ಸಮೀಕ್ಷೆ ನಡೆಸಿದ ರೀತಿ ಹೇಗಿತ್ತು?

ಸಮೀಕ್ಷೆ ನಡೆಸಿದ ರೀತಿ ಹೇಗಿತ್ತು?

"ಗ್ರಾಹಕರ ಚಿತ್ತ" ರಾಷ್ಟ್ರೀಯ ಸಮೀಕ್ಷೆಯನ್ನು ಲೋಕಲ್ ಸರ್ಕಲ್ಸ್ ನಡೆಸಿತು. ಈ ಸಮೀಕ್ಷೆಯು ದೆಹಲಿ, ಮುಂಬೈ, ಕೋಲ್ಕತಾ, ಚೆನ್ನೈ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ಪುಣೆ, ಗುರಗಾವ್ ಮತ್ತು ನೋಯ್ಡಾದ 61,000ಕ್ಕೂ ಹೆಚ್ಚು ಮನೆಗಳಿಂದ ಪ್ರತಿಕ್ರಿಯೆ ಪಡೆಯಲಾಗಿತ್ತು.

ಅಗತ್ಯ ವಸ್ತು ಜೊತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ಅಗತ್ಯ ವಸ್ತು ಜೊತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ದೀಪಾವಳಿ ಹೊಸ್ತಿಲಿನಲ್ಲಿ ಪೆಟ್ರೋಲ್, ಡೀಸೆಲ್, ತರಕಾರಿ ಮತ್ತು ಖಾದ್ಯ ತೈಲಗಳ ಬೆಲೆಗಳು ಗಣನೀಯವಾಗಿ ಏರಿಕೆಯಾಗಿದೆ. ಅಕ್ಟೋಬರ್ 25ರ ಅಂಕಿ-ಅಂಶಗಳ ಪ್ರಕಾರ, ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 107.59 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 96.32 ರೂಪಾಯಿ ಇದೆ. ಅದೇ ರೀತಿ ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 113.46 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 104.38 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ 108.11 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 99.43 ರೂಪಾಯಿ ಇದೆ.

ತಮಿಳುನಾಡಿನ ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 104.52 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 100.59 ರೂಪಾಯಿ ಇದೆ. ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 111.34 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 102.23 ರೂಪಾಯಿ ಇದೆ. ಮಧ್ಯಪ್ರದೇಶದ ಭೋಪಾಲ್​ನಲ್ಲಿ ಲೀಟರ್ ಪೆಟ್ರೋಲ್​ಗೆ 116.26 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 105.64 ರೂಪಾಯಿ ನಿಗದಿಯಾಗಿದೆ.

CNG ಹಾಗೂ PNG ಬೆಲೆ ಏರಿಕೆ

CNG ಹಾಗೂ PNG ಬೆಲೆ ಏರಿಕೆ

ಗ್ಯಾಸ್ ಬೆಲೆಯಲ್ಲಿನ ಹೆಚ್ಚಳವು ಸಾರಿಗೆ ಇಂಧನವಾಗಿ ಬಳಸುವ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್ ಜಿ) ಮತ್ತು ಅಡುಗೆ ಇಂಧನವಾಗಿ ಬಳಸುವ ಪೈಪ್ಡ್ ನ್ಯಾಚುರಲ್ ಗ್ಯಾಸ್ (ಪಿಎನ್ ಜಿ) ಎರಡರ ಬೆಲೆಯ ಏರಿಕೆಯಾಗಿದೆ. ಸಿಎನ್ಜಿಯ ಬೆಲೆಯು ಈ ತಿಂಗಳಲ್ಲಿ ಪ್ರತಿ ಕೆಜಿಗೆ 4.56 ರೂ.ಗಳಿಂದ ರಾಷ್ಟ್ರೀಯ ರಾಜಧಾನಿಯಲ್ಲಿ 49.8 ರೂ.ಗಳಿಗೆ ಹೆಚ್ಚಾಗಿದೆ. ಮತ್ತು ಪಿಎನ್ಜಿಯ ಪ್ರತಿ ಪಿಎಂಜಿಗೆ ಪ್ರತಿ ರೂ. 4.2 ರಷ್ಟು ಏರಿಕೆಯಾಗಿದ್ದು, 35.11 ರೂಪಾಯಿ ತಲುಪಿದೆ.

ಭಾರತದಲ್ಲಿ ಹೇಗಿದೆ ಅಗತ್ಯ ವಸ್ತುಗಳ ಬೆಲೆ

ಭಾರತದಲ್ಲಿ ಹೇಗಿದೆ ಅಗತ್ಯ ವಸ್ತುಗಳ ಬೆಲೆ

ದೇಶದಲ್ಲಿ ದೀಪಾವಳಿ ಹೊಸ್ತಿಲಿನಲ್ಲೇ ಅಕ್ಕಿ, ಗೋದಿ, ಆಲೂಗಡ್ಡೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯಲ್ಲೂ ಏರಿಕೆಯಾಗಿದೆ. ಒಂದು ಕೆಜಿ ಅಕ್ಕಿ 34.76 ರಿಂದ 75 ರೂಪಾಯಿ, ಗೋಧಿ 27 ರಿಂದ 30, ಬೇಳೆ 101, ಸಕ್ಕರೆ 42, ಹಾಲು 48.49, ಅಡುಗೆ ಎಣ್ಣೆ 185, ಪಾಮ್ ಎಣ್ಣೆ 134, ಆಲೂಗಡ್ಡೆ 22, ಈರುಳ್ಳಿ 41 ಹಾಗೂ ಟೊಮ್ಯಾಟೋ 49.36 ರೂಪಾಯಿಗಿಂತ ಹೆಚ್ಚಾಗಿದೆ. ಮುಂದಿನ ಒಂದು ವಾರದಲ್ಲಿ ಈ ಬೆಲೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಗಳಿವೆ.

Recommended Video

ಭಾರತವನ್ನು ಸೋಲಿಸಿದ್ರೂ ಪಾಕ್ ಆಟಗಾರರು ಸಂಭ್ರಮ ಪಡ್ಲೇ ಇಲ್ಲ!! ಯಾಕೆ? | Oneindia Kannada

English summary
Ahead of Festivals, Budget-Conscious Middle Class Hit Hard Due to Rising Fuel and other essentials prices. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X