ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ 2022: ವಿದೇಶದಲ್ಲಿರುವ ಭಾರತೀಯರ ನಿರೀಕ್ಷೆಗಳು ಏನು?

|
Google Oneindia Kannada News

ನವದೆಹಲಿ, ಜನವರಿ 17: ಕಳೆದ ವರ್ಷದ ಬಜೆಟ್ ಅನಿವಾಸಿ ಭಾರತೀಯರು (ಎನ್‌ಆರ್‌ಐ) ಎದುರಿಸುತ್ತಿರುವ ತೊಂದರೆಗಳನ್ನು ನಿವಾರಿಸಲು ಕೆಲವು ಕ್ರಮಗಳನ್ನು ತೆಗೆದುಕೊಂಡಿತು. ಎನ್‌ಆರ್‌ಐಗಳಿಗೆ ಒನ್ ಪರ್ಸನ್ ಕಂಪನಿಗಳನ್ನು (ಒಪಿಸಿ) ಸ್ಥಾಪಿಸಲು ಅನುಮತಿ ನೀಡುವ ಮೂಲಕ ಎನ್‌ಆರ್‌ಐಗಳು ಭಾರತದಲ್ಲಿ ವ್ಯಾಪಾರ ಮಾಡಲು ಸುಲಭ ಅವಕಾಶ ಮಾಡಿಕೊಡಲಾಯಿತು.

ಕೈಗೆಟಕುವ ದರದ ಮನೆಗಳಿಗೆ ತೆರಿಗೆ ಪ್ರಯೋಜನಗಳು ಮತ್ತು ಈ ವಿಭಾಗದಲ್ಲಿನ ಯೋಜನೆಗಳಿಗೆ ತೆರಿಗೆ ವಿನಾಯಿತಿಯನ್ನು ಎನ್‌ಆರ್‌ಐಗಳಿಗೂ ನೀಡಲಾಗಿದೆ. ಹಲವಾರು ದೇಶಗಳು ವಿಧಿಸಿದ ಲಾಕ್‌ಡೌನ್‌ಗಳು ಮತ್ತು ವಿಮಾನಯಾನ ನಿರ್ಬಂಧಗಳನ್ನು ಪ್ರಸ್ತುತ ಸಡಿಲಿಕೆ ಮಾಡಲಾಗಿದೆ. ಈ ನಡುವೆ ಭಾರತದಲ್ಲಿ ನಡೆಯುವ ಕೇಂದ್ರ ಬಜೆಟ್‌ನಲ್ಲಿ ಎನ್‌ಆರ್‌ಐಗಳು ಹಲವಾರು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ.

ಅನಿವಾಸಿ ಕನ್ನಡಿಗರ 'NRI ಅಪೀಲ್ ಡೇ' ಅಭಿಯಾನ: ನೀವೂ ಕೈಜೋಡಿಸಿಅನಿವಾಸಿ ಕನ್ನಡಿಗರ 'NRI ಅಪೀಲ್ ಡೇ' ಅಭಿಯಾನ: ನೀವೂ ಕೈಜೋಡಿಸಿ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಬಜೆಟ್ ಮಂಡನೆ ಮಾಡಲಿದ್ದಾರೆ. ಈ ನಡುವೆ ಹಲವಾರು ವಲಯಗಳು ಹಲವು ನಿರೀಕ್ಷೆಗಳನ್ನು ಇರಿಸಿಕೊಂಡಿದೆ. ಈ ಬಗ್ಗೆ ಪ್ರಸ್ತಾಪವನ್ನು ಕೂಡಾ ಮಾಡಲಾಗಿದೆ. ಎನ್‌ಆರ್‌ಐಗಳ ಬಹುಕಾಲದ ಬೇಡಿಕೆಗಳು ಇನ್ನೂ ಕೂಡಾ ಈಡೇರಿಕೆ ಆಗಿಲ್ಲ. ಹಾಗಾದರೆ ಎನ್‌ಆರ್‌ಐಗಳು ಈ ಬಾರಿಯ ಬಜೆಟ್‌ನಲ್ಲಿ ಏನು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ ಎಂದು ತಿಳಿಯಲು ಮುಂದೆ ಓದಿ..

ಬಜೆಟ್ 2021: ಏಕ ವ್ಯಕ್ತಿ ಕಂಪೆನಿ ಸ್ಥಾಪನೆಗೆ ಎನ್‌ಆರ್‌ಐಗಳಿಗೆ ಅನುಮತಿಬಜೆಟ್ 2021: ಏಕ ವ್ಯಕ್ತಿ ಕಂಪೆನಿ ಸ್ಥಾಪನೆಗೆ ಎನ್‌ಆರ್‌ಐಗಳಿಗೆ ಅನುಮತಿ

 ತೆರಿಗೆ ವಿನಾಯಿತಿಯಲ್ಲಿನ ನಿರೀಕ್ಷೆ

ತೆರಿಗೆ ವಿನಾಯಿತಿಯಲ್ಲಿನ ನಿರೀಕ್ಷೆ

ಅನಿವಾಸಿ ಭಾರತೀಯರು (ಎನ್‌ಆರ್‌ಐ) ತೆರಿಗೆ ಕಡಿತದ (ಟಿಡಿಎಸ್‌) ವಿಚಾರಕ್ಕೆ ಬಂದಾಗ ಒಂದು ಕೋಲಿನ ತುದಿಯಲ್ಲಿ ಇನ್ನೇನು ಕೆಳಗೆ ಬೀಳಬಹುದು ಎಂಬ ಪರಿಸ್ಥಿತಿಯಲ್ಲಿ ನಿಂತಿರುತ್ತಾರೆ. ಎನ್‌ಆರ್‌ಐಗಳು ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಆಸ್ತಿಯನ್ನು ಹೊಂದಿದ್ದರೆ ಅದನ್ನು 50 ಲಕ್ಷಕ್ಕಿಂತ ಕಡಿಮೆ ಆಸ್ತಿಯನ್ನು ಮಾರಾಟ ಮಾಡಿದಾಗ ಬಂಡವಾಳ ಲಾಭದ ಮೇಲೆ ಶೇಕಡ 20ರಷ್ಟು ಟಿಡಿಎಸ್‌ ಅನ್ನು ಪಾವತಿಸಬೇಕಾಗುತ್ತದೆ. ಬಂಡವಾಳ ಲಾಭಗಳು ಅಲ್ಪಾವಧಿಯದ್ದಾಗಿದ್ದರೆ ಅಂದರೆ ಎರಡು ವರ್ಷಗಳಿಗಿಂತಲೂ ಕಡಿಮೆ ಅವಧಿಯ ಆಸ್ತಿ ಆಗಿದ್ದರೆ, ಟಿಡಿಎಸ್‌ ಆ ವ್ಯಕ್ತಿಯ ಆದಾಯ ತೆರಿಗೆಯ ಆದಾರದಲ್ಲಿ ಇರುತ್ತದೆ. ಆಸ್ತಿಯು 50 ಲಕ್ಷಕ್ಕಿಂತ ಹೆಚ್ಚು ಮೌಲ್ಯದ್ದಾಗಿದ್ದರೆ ಎಲ್‌ಟಿಸಿಜಿ ಅಂದರೆ ದೀರ್ಘಾವಧಿಯ ಬಂಡವಾಳ ಲಾಭಗಳ ತೆರಿಗೆಯ ಮೇಲೆ ಹೆಚ್ಚುವರಿ ಶುಲ್ಕ ವಿಧಿಸಲಾಗು‌ತ್ತದೆ. ಅದೇ ರೀತಿ, ಸ್ಟಾಕ್‌ಗಳು ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಭಾರತೀಯ ನಿವಾಸಿ ಹೂಡಿಕೆದಾರರಿಗೆ ಯಾವುದೇ ಟಿಡಿಎಸ್ ಇಲ್ಲದಿದ್ದರೂ, ಎನ್‌ಆರ್‌ಐಗಳು ಹೆಚ್ಚಿನ ತೆರಿಗೆ ದರಗಳಲ್ಲಿ ಟಿಡಿಎಸ್ ಅನ್ನು ಪಾವತಿ ಮಾಡಬೇಕಾಗುತ್ತದೆ. ಆದರೆ ಅನಿವಾಸಿ ಭಾರತೀಯರು ಈ ತೆರಿಗೆ ವಿನಾಯಿತಿ ವಿಚಾರದಲ್ಲಿ ತಮ್ಮ ಹಾಗೂ ನಿವಾಸಿ ಭಾರತೀಯರ ನಡುವೆ ಸಮಾನತೆಯನ್ನು ಆಶಿಸುತ್ತಿದ್ದಾರೆ.

 ಮೂಲ ವಿನಾಯಿತಿ ಮಿತಿ

ಮೂಲ ವಿನಾಯಿತಿ ಮಿತಿ

ಎನ್‌ಆರ್‌ಐಗಳಿಗೆ ಮತ್ತೊಂದು ಪ್ರಮುಖ ನೋವಿನ ಅಂಶವೆಂದರೆ ತಮ್ಮ ಬಂಡವಾಳ ಲಾಭವನ್ನು ಮೂಲ ವಿನಾಯಿತಿ ಮಿತಿಯಾದ 2.5 ಲಕ್ಷಕ್ಕೆ ಹೊಂದಿಕೆ ಮಾಡದಿರುವುದು. ಭಾರತೀಯ . ನಿವಾಸಿ ತೆರಿಗೆದಾರರಿಂದ ಗಳಿಸಿದ ಬಂಡವಾಳದ ಲಾಭಗಳು (ಅಲ್ಪಾವಧಿಯ ಮತ್ತು ದೀರ್ಘಾವಧಿಯ ಎರಡೂ) ಮೂಲ ವಿನಾಯಿತಿ ಮಿತಿಗಿಂತ ಕೆಳಗಿದ್ದರೆ, ಅಂದರೆ 2.5 ಲಕ್ಷಕ್ಕಿಂತ ಕಡಿಮೆ ಇದ್ದರೆ ಯಾವುದೇ ತೆರಿಗೆಯನ್ನು ಪಾವತಿ ಮಾಡಬೇಕಾಗಿಲ್ಲ. ಆದರೆ ಎನ್‌ಆರ್‌ಐಗಳು ತಮ್ಮ ಆದಾಯ 2.5 ಲಕ್ಷಕ್ಕಿಂತ ಕಡಿಮೆ ಇದ್ದರೂ ಬಂಡವಾಳದ ಲಾಭದ ಮೇಲೆ ಒಟ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಅನೇಕ ಎನ್‌ಆರ್‌ಐಗಳು ಈ ಬಗ್ಗೆ ಅಗತ್ಯ ಬದಲಾವಣೆಯನ್ನು ಬಜೆಟ್‌ನಲ್ಲಿ ನಿರೀಕ್ಷಿಸಿದ್ದಾರೆ.

 ಹೂಡಿಕೆ ಎಲ್ಲಿ ಮಾಡುವುದು?: ನಿರ್ಬಂಧಗಳಿವೆ

ಹೂಡಿಕೆ ಎಲ್ಲಿ ಮಾಡುವುದು?: ನಿರ್ಬಂಧಗಳಿವೆ

ಯಾವುದೇ ಇತರ ತೆರಿಗೆದಾರರಂತೆ, ಎನ್‌ಆರ್‌ಐಗಳು ಸೆಕ್ಷನ್ 80 ಸಿ ಅಡಿಯಲ್ಲಿ ರೂ 1.5 ಲಕ್ಷ ಕಡಿತಕ್ಕೆ ಮತ್ತು ಸೆಕ್ಷನ್ 80 ಸಿಸಿಡಿ (1 ಬಿ) ಅಡಿಯಲ್ಲಿ ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡಲು ರೂ 50,000 ಗೆ ಅರ್ಹರಾಗಿರುತ್ತಾರೆ. ಆದರೆ ಎನ್‌ಆರ್‌ಐಗಳು ಎಲ್ಲಿ ಹೂಡಿಕೆ ಮಾಡಬಹುದು ಎಂಬುದರ ಮೇಲೆ ನಿರ್ಬಂಧಗಳಿವೆ. ಎನ್‌ಆರ್‌ಐಗಳು ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಲು ಸಾಧ್ಯವಿಲ್ಲ. ಪಿಪಿಎಫ್‌ ಖಾತೆಯನ್ನು ತೆರೆಯಲು ಅಥವಾ ಎನ್‌ಎಸ್‌ಸಿಗಳು ಮತ್ತು ಪೋಸ್ಟ್ ಆಫೀಸ್ ಠೇವಣಿಗಳನ್ನು ಮಾಡಲು ಸಾಧ್ಯವಿಲ್ಲ. ಯಾವುದೇ ಸಂದರ್ಭದಲ್ಲಿ, ಅಂತಹ ಹೂಡಿಕೆಗಳಿಂದ ಗಳಿಸಿದ ಆದಾಯವು ಸಾಮಾನ್ಯ ತೆರಿಗೆಗೆ ಒಳಪಟ್ಟಿರುತ್ತದೆ.

 ಸಮಾನ ತೆರಿಗೆ ವಿನಾಯಿತಿಗಳು

ಸಮಾನ ತೆರಿಗೆ ವಿನಾಯಿತಿಗಳು

ಎನ್‌ಆರ್‌ಐಗಳು ಬಯಸಬಹುದಾದ ಇತರ ಕೆಲವು ಪ್ರಯೋಜನಗಳು ಕೆಲವು ಸಣ್ಣ ಪುಟ್ಟ ವಿನಾಯಿತಿಗಳು ಆಗಿದೆ. ಆದರೆ ಕೆಲವು ಜನರಿಗೆ ಅದು ತೀರಾ ಮುಖ್ಯವಾಗಿದೆ. ಎನ್‌ಆರ್‌ಐಗಳು ವಿದೇಶದಲ್ಲಿ ವಾಸಿಸುತ್ತಿರುವವರಾಗಿದ್ದು, ಸ್ವದೇಶದಲ್ಲಿ ಸಂಬಂಧಿಕರು ಮತ್ತು ಕುಟುಂಬವನ್ನು ಹೊಂದಿದ್ದಾರೆ. ಆದರೆ ಅಂಗವಿಕಲ ಅವಲಂಬಿತರ ವೈದ್ಯಕೀಯ ಚಿಕಿತ್ಸೆ (ಸೆಕ್ಷನ್ 80DD), ನಿರ್ದಿಷ್ಟ ರೋಗಗಳಿಂದ ಬಳಲುತ್ತಿರುವ ಕುಟುಂಬದ ಸದಸ್ಯರ ಚಿಕಿತ್ಸೆ (ಸೆಕ್ಷನ್ 80DDB) ಮತ್ತು ಸ್ವಯಂ ಅಥವಾ ಅವಲಂಬಿತ (ಸೆಕ್ಷನ್ 80U) ಅಂಗವೈಕಲ್ಯ ಸೇರಿದಂತೆ ಕೆಲವು ತೆರಿಗೆ ವಿನಾಯಿತಿಗಳಿಗೆ ಎನ್‌ಆರ್‌ಐಗಳು ಅರ್ಹರಾಗಿರುವುದಿಲ್ಲ. ಅನೇಕ ಎನ್‌ಆರ್‌ಐಗಳು ಅನಾರೋಗ್ಯ ಮತ್ತು ದುರ್ಬಲರಾಗಿರುವ ತಮ್ಮ ಕುಟುಂಬಸ್ಥರನ್ನು ನೋಡಿಕೊಳ್ಳುತ್ತಿರುತ್ತಾರೆ. ತೀರಾ ಅನಿವಾರ್ಯವಾಗಿ ವಿದೇಶದಲ್ಲಿ ದುಡಿಯುತ್ತಿರುತ್ತಾರೆ. ಈ ಕೆಲವು ಸೌಲಭ್ಯಗಳು ಎನ್‌ಆರ್‌ಐಗಳಿಗೂ ಲಭಿಸಬೇಕು ಎಂಬುವುದು ಎನ್‌ಆರ್‌ಐಗಳ ಬೇಡಿಕೆಯಾಗಿದೆ. (ಒನ್‌ಇಂಡಿಯಾ ಸುದ್ದಿ)

English summary
Budget 2022: Four things Indians abroad are hoping for this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X