ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ರಾಜ್ಯೋತ್ಸವ ದಿನದಂದು ಕೂ Appನಲ್ಲಿ ಯಡಿಯೂರಪ್ಪ ಲೈವ್

|
Google Oneindia Kannada News

ಬೆಂಗಳೂರು, ಅ. 30: ಕನ್ನಡ ರಾಜ್ಯೋತ್ಸವವನ್ನು ಕರ್ನಾಟಕದ ಕೆಲವು ಖ್ಯಾತನಾಮರು ಹಾಗೂ ಹಲವು ಕನ್ನಡದ ಹೃದಯಗಳೊಟ್ಟಿಗೆ ನವೆಂಬರ್ 1 ರಂದು ಕೂ ಆ್ಯಪ್ ವಿಜೃಂಭಣೆಯಿಂದ ಆಚರಿಸಲಿದೆ. ಕರ್ನಾಟಕ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೇರಿದಂತೆ ವಿವಿಧ ಗಣ್ಯರು ಕೂ ಆಪ್ ನಲ್ಲಿ ಲೈವ್ ಬರಲಿದ್ದಾರೆ.

ಕೂ ಅಪ್ಲಿಕೇಶನ್ ಒಂದು ಮೈಕ್ರೋ-ಬ್ಲಾಗಿಂಗ್ ವೇದಿಕೆಯಾಗಿದ್ದು, ಇದು ಕನ್ನಡ ಮತ್ತು ಇತರ ಕೆಲವು ಭಾರತೀಯ ಭಾಷೆಗಳನ್ನೊಳಗೊಂಡಿದೆ. ಜನರು ತಮ್ಮ ಮಾತೃಭಾಷೆಯಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಇದು ಸಹಾಯ ಮಾಡುತ್ತದೆ. ಮಾರ್ಚ್ 2020 ರಲ್ಲಿ ಕನ್ನಡದಲ್ಲಿ ಕೂ ವೇದಿಕೆಯನ್ನು ಪ್ರಾರಂಭಿಸಲಾಯಿತು ಅಂದಿನಿಂದ ಇಂದಿನ ವರೆಗೆ ಕೂನಲ್ಲಿ ಅನೇಕ ಗಮನಾರ್ಹ ವ್ಯಕ್ತಿಗಳು ಸೇರಿದ್ದಾರೆ ಮತ್ತು ಕೂ ಇದೀಗ ಕನ್ನಡದ ಅತಿದೊಡ್ಡ ಸಮುದಾಯವಾಗಿದೆ.

ಕನ್ನಡಿಗರಿಂದ ಎಲ್ಲರಿಗಾಗಿ 'Koo App', ಏನಿದರ ವಿಶೇಷ?ಕನ್ನಡಿಗರಿಂದ ಎಲ್ಲರಿಗಾಗಿ 'Koo App', ಏನಿದರ ವಿಶೇಷ?

ಪ್ರಾರಂಭವಾದ ಕೆಲವೇ ತಿಂಗಳುಗಳಲ್ಲಿ ಕೂ ವಿಶ್ವದ ಅತಿದೊಡ್ಡ ಕನ್ನಡ ಮೈಕ್ರೋ ಬ್ಲಾಗ್ ಆಗಿ ಮಾರ್ಪಟ್ಟಿದೆ. ಇತರ ಯಾವುದೇ ಮೈಕ್ರೋ ಬ್ಲಾಗ್ ವೇದಿಕೆಗಳಿಗೆ ಹೋಲಿಸಿದರೆ ಇದು ಹೆಚ್ಚಿನ ಸಂಖ್ಯೆಯ ಆಲೋಚನೆಗಳು ಮತ್ತು ಅಭಿಪ್ರಾಯಗಳನ್ನು ಒಳಗೊಂಡಿದೆ. ಆಗಸ್ಟ್ 2020 ರಲ್ಲಿ ಸರ್ಕಾರ ನಡೆಸಿದ ಆತ್ಮಾನಿರ್ಭರ್ ಆಪ್ ಇನ್ನೋವೇಶನ್ ಚಾಲೆಂಜ್ನಲ್ಲಿ ಕೂ ಆ್ಯಪ್ಗೆ ಗೆಲುವನ್ನು ಘೋಷಿಸಲಾಯಿತು. ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತೀಯ ಭಾಷೆಗಳಲ್ಲಿ ತಮ್ಮನ್ನು ತಾವು ಅಭಿವ್ಯಕ್ತಿಸಲು ಕೂಆ್ಯಪ್ ಬಳಸುವಂತೆ ಪ್ರೋತ್ಸಾಹಿಸಿದರು.

ಸಂಜೆ 6 ಗಂಟೆಗೆ ಕೂನಲ್ಲಿ ನೇರ ಪ್ರಸಾರ

ಸಂಜೆ 6 ಗಂಟೆಗೆ ಕೂನಲ್ಲಿ ನೇರ ಪ್ರಸಾರ

ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಂಜೆ 6 ಗಂಟೆಗೆ ಕೂನಲ್ಲಿ ನೇರ ಪ್ರಸಾರದ ಮೂಲಕ ಕನ್ನಡದ ಹಬ್ಬವನ್ನು ಆಚರಿಸಲಾಗುವುದು. ಈ ಕಾರ್ಯಕ್ರಮಕ್ಕೆ ಕನ್ನಡದ ಅತ್ಯಂತ ಪ್ರತಿಭಾವಂತ ಮತ್ತು ಪ್ರಸಿದ್ಧ ಕಲಾವಿದರು, ಗಾಯಕರು, ನಟ- ನಟಿಯರು ಮತ್ತು ರಾಜಕಾರಣಿಗಳ ನೇರ ಪ್ರದರ್ಶನಗಳು ಮತ್ತು ಮನದಾಳದ ಮಾತುಗಳಿರುತ್ತವೆ.

ಕರ್ನಾಟಕ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಜನಪ್ರಿಯ ಕನ್ನಡ ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ್, ನಟ ಮತ್ತು ನಿರ್ದೇಶಕ ಜಗದೀಶ್ ಮಲ್ನಾಡ್, ಚಂದನವನದ ಪ್ರತಿಭಾವಂತ ನಟಿ ನೀತೂ ಶೆಟ್ಟಿ, ಚಂದನವನದ ಪ್ರತಿಭಾವಂತ ನಟ ನವೀನ್ ಕೃಷ್ಣ, ವಿಶ್ವ ಪ್ರಸಿದ್ಧ ಜಾದೂಗಾರ ಕುದ್ರೋಳಿ ಗಣೇಶ್ ಅವರ ಮ್ಯಾಜಿಕ್ ಪ್ರದರ್ಶನ, ಗಾಯಕ ಗಣೇಶ್ ಕಾರಂತ್, ಗಾಯಕಿ ಕಾತ್ಯಾಯಿನಿ ಭಟ್ ಮತ್ತು ನಟಿ-ನರ್ತಕಿ ರೂಪಿಕಾ ಅವರಿಂದ ಹಲವು ಕಲಾ ಪ್ರದರ್ಶನಗಳು ನಡೆಯಲಿವೆ. ಈ ಸುಸಂದರ್ಭದಲ್ಲಿ ಕೂ ಸಂಸ್ಥಾಪಕರಾದ ಅಪ್ರಮೇಯ ರಾಧಾಕೃಷ್ಣ ಅವರು ಕೂ ಕುರಿತು ಮಾತನಾಡಲಿದ್ದಾರೆ.

ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಅವರ ಮಾತುಗಳು

ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಅವರ ಮಾತುಗಳು

ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕೂ ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಅವರ ಮಾತುಗಳು: "ಕೂನಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುತ್ತಿರುವುದು ನನಗೆ ಅಪಾರ ಸಂತೋಷವನ್ನುಂಟುಮಾಡುತ್ತಿದೆ. ಕನ್ನಡಿಗನಾಗಿ ನಮ್ಮ ಸಂಸ್ಕೃತಿ ಮತ್ತು ನಮ್ಮ ಇತಿಹಾಸದ ಬಗ್ಗೆ ನಾನು ತುಂಬಾ ಹೆಮ್ಮೆಪಡುತ್ತೇನೆ. ನಾವು ಕೂನಲ್ಲಿ ಅನೇಕ ಕನ್ನಡಿಗರನ್ನು ಒಂದುಗೂಡಿಸಿದ್ದೇವೆ ಮತ್ತು ಕನ್ನಡದಲ್ಲಿಯೇ ಅತೀ ದೊಡ್ಡ ಹಾಗೂ ಹೆಮ್ಮೆಯ ಸಮುದಾಯವನ್ನು ಕಟ್ಟಲು ಅನೇಕ ಹೆಸರಾಂತ ಕನ್ನಡಿಗರನ್ನು ಕರೆತಂದಿದ್ದೇವೆ. ನಾನು ಒಂದು ದೊಡ್ಡ ಸಂಭ್ರಮಾಚರಣೆಯನ್ನು ಎದುರು ನೋಡುತ್ತಿದ್ದೇನೆ ಮತ್ತು ನವೆಂಬರ್ 1 ರ ಸಂಭ್ರಮದಂದು ನಮ್ಮೊಡನೆ ಜೊತೆಯಾಗಲು ಎಲ್ಲಾ ಕನ್ನಡಿಗರನ್ನು ಆಹ್ವಾನಿಸುತ್ತೇನೆ'.'

ಮೋದಿಯವರ ಆ್ಯಪ್ ಚಾಲೆಂಜ್‌ನಲ್ಲಿ ಆಯ್ಕೆಯಾದ ಕೂ ಆ್ಯಪ್ಮೋದಿಯವರ ಆ್ಯಪ್ ಚಾಲೆಂಜ್‌ನಲ್ಲಿ ಆಯ್ಕೆಯಾದ ಕೂ ಆ್ಯಪ್

ಅನೇಕ ಪ್ರಮುಖ ವ್ಯಕ್ತಿಗಳು ವೇದಿಕೆಗೆ ಸೇರಿದ್ದಾರೆ

ಅನೇಕ ಪ್ರಮುಖ ವ್ಯಕ್ತಿಗಳು ವೇದಿಕೆಗೆ ಸೇರಿದ್ದಾರೆ

ಮಾರ್ಚ್ ನಲ್ಲಿ ಪ್ರಾರಂಭವಾದಾಗಿನಿಂದ ಅನೇಕ ಪ್ರಮುಖ ವ್ಯಕ್ತಿಗಳು ವೇದಿಕೆಗೆ ಸೇರಿದ್ದಾರೆ. ಉನ್ನತ ವ್ಯಕ್ತಿಗಳಾದ ಸದ್ಗುರು, ಕರ್ನಾಟಕ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪ, ಉಪ ಮುಖ್ಯಮಂತ್ರಿಗಳಾದ ಅಶ್ವತ್ಥ್ ನಾರಾಯಣ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ಮಾಜಿ ಪ್ರಧಾನಮಂತ್ರಿಗಳಾದ ಹೆಚ್. ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಹೆಚ್. ಡಿ. ಕುಮಾರಸ್ವಾಮಿ, ಡಿ. ಕೆ. ಶಿವಕುಮಾರ್, ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ, ಸಿ. ಟಿ. ರವಿ, ಪೊಲೀಸ್ ಆಯುಕ್ತರಾದ ಕಮಲ್ ಪಂತ್, ಬಿಎಂಟಿಸಿಯ ಅಧಿಕೃತ ಖಾತೆಗಳು ಮತ್ತು ಬೆಂಗಳೂರು ಪೊಲೀಸ್ ಸೇರಿದಂತೆ ಅನೇಕರು. ಕೂನಲ್ಲಿ ಸಾಕಷ್ಟು ಹಿಂಬಾಲಕರನ್ನು ಹೊಂದಿದ್ದಾರೆ ಮತ್ತು ತಮ್ಮ ಆಲೋಚನೆಗಳನ್ನು ಕನ್ನಡಿಗರೊಂದಿಗೆ ಪ್ರತಿದಿನ ಹಂಚಿಕೊಳ್ಳುತ್ತಾರೆ.

ಕೂ ವೇದಿಕೆ ಕನ್ನಡಿಗರ ಧ್ವನಿಯಾಗಿದೆ

ಕೂ ವೇದಿಕೆ ಕನ್ನಡಿಗರ ಧ್ವನಿಯಾಗಿದೆ

ಕನ್ನಡದಲ್ಲಿ ಕೂ ಬಳಸುವಾಗ ಬಳಕೆದಾರರಿಗೆ ವಿಶೇಷ ಅನುಭವವನ್ನು ನೀಡುತ್ತದೆ. ಎಲ್ಲಾ ಹಂತದ ವೃತ್ತಿಯ ಹಾಗೂ ವಿಭಾಗದ ಜನರು ಕೂನಲ್ಲಿದ್ದಾರೆ - ರಾಜಕಾರಣಿಗಳು, ಕನ್ನಡ ಚಲನಚಿತ್ರೋದ್ಯಮಿಗಳು, ಕ್ರೀಡಾ ತಾರೆಗಳು, ಲೇಖಕರು, ಬರಹಗಾರರು, ಕವಿಗಳು, ಗಾಯಕರು, ಸಂಗೀತ ಸಂಯೋಜಕರು, ಪತ್ರಕರ್ತರು, ಸಂಪಾದಕರು ಮತ್ತು ಲಕ್ಷಾಂತರ ಬಳಕೆದಾರರು 1000 ಕ್ಕೂ ವಿವಿಧ ವೃತ್ತಿಗಳಲ್ಲಿರುವ ಜನರಿದ್ದಾರೆ. ರೈತರು, ಚಾಲಕರು, ಬಡಗಿಗಳು ಮತ್ತು ಎಲ್ಲೂ ಕೇಳದ ಸಮಾಜದ ಕೆಲವು ವರ್ಗಗಳಿಂದ ಕೂ ವೇದಿಕೆ ಕನ್ನಡಿಗರ ಧ್ವನಿಯಾಗಿದೆ.

ಕೂ ಮತ್ತು ಕೂ ಸಂಸ್ಥಾಪಕರ ಬಗ್ಗೆ

ಕೂ ಮತ್ತು ಕೂ ಸಂಸ್ಥಾಪಕರ ಬಗ್ಗೆ

ಕೂ ಎಂಬುದು ಭಾರತದ ಸ್ಥಳೀಯ ಭಾಷೆಗಳಲ್ಲಿ ಮೈಕ್ರೊ-ಬ್ಲಾಗಿಂಗ್ ವೇದಿಕೆಯಾಗಿದೆ. ಜನರು ಪಠ್ಯ, ಆಡಿಯೋ ಅಥವಾ ವಿಡಿಯೋ ಬಳಸಿ ತಮ್ಮ ಮಾತೃಭಾಷೆಯಲ್ಲಿ ತಮ್ಮನ್ನು ತಾವು ವ್ಯಕ್ತಪಡಿಸಿಕೊಳ್ಳಬಹುದು. ಬಳಕೆದಾರರು ಇತರರನ್ನು ಹಿಂಬಾಲಿಸಬಹುದು ಮತ್ತು ಅವರ ಆಲೋಚನೆಗಳು ಮತ್ತು ಅಭಿಪ್ರಾಯಗಳನ್ನು ಕೇಳಬಹುದು. ಕೂ ಮೊದಲು ಕನ್ನಡ ಭಾಷೆಯಲ್ಲಿ ಪ್ರಾರಂಭವಾಯಿತು ಹಾಗೂ ಇಂದು ಅನೇಕ ಭಾರತೀಯ ಭಾಷೆಗಳಲ್ಲಿದೆ.

ಕೂ ಆ್ಯಪನ್ನು ಅಪ್ರಮೇಯ ರಾಧಾಕೃಷ್ಣ ಮತ್ತು ಮಯಾಂಕ್ ಬಿಡಾವತ್ಕಾ ಅವರು ಸ್ಥಾಪಿಸಿದ್ದಾರೆ. ಅಪ್ರಮೇಯ ರಾಧಾಕೃಷ್ಣ ಉದ್ಯಮಿಯಾಗಿದ್ದು ಮತ್ತು ಅವರ ಟ್ಯಾಕ್ಸಿಫಾರ್ಶ್ಯೂರ್ ಸ್ಥಾಪಕರಾಗಿದ್ದರು. ಅವರು ಕನ್ನಡಿಗರಾಗಿದ್ದು, ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು. ಅವರು ಎನ್‌ಐಟಿ ಸೂರತ್‌ಕಲ್‌ನಿಂದ ಎಂಜಿನಿಯರಿಂಗ್ ಮತ್ತು ಐಐಎಂ-ಅಹಮದಾಬಾದ್‌ನಿಂದ ಎಂಬಿಎ ಪಡೆದಿದ್ದಾರೆ.

English summary
Chief Minister of Karnataka BS Yediyurrapa is going Live on Koo App and interact with public on Kannada Rajyotsava day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X