ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತಿ ಹೆಚ್ಚು ಬಾರಿ ಸಿಎಂ, ಅಲ್ಪಾವಧಿ ಸಿಎಂ ಯಡಿಯೂರಪ್ಪ ಸಾಧನೆ

|
Google Oneindia Kannada News

ಬೆಂಗಳೂರು, ಜುಲೈ 26: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್ ಯಡಿಯೂರಪ್ಪ ಅವರು ಶುಕ್ರವಾರ ಸಂಜೆ 6.32ರ ಸುಮಾರಿಗೆ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ 4ನೇ ಬಾರಿಗೆ ಕರ್ನಾಟಕ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಭಾರತದಲ್ಲಿ ಅತಿ ಹೆಚ್ಚು ಬಾರಿ ಸಿಎಂ ಪಟ್ಟಕ್ಕೇರಿದವರು ಅತಿ ಹೆಚ್ಚು ಅವಧಿ ಅಧಿಕಾರ ಕಂಡವರಾಗಿದ್ದಾರೆ. ಆದರೆ, ಈ ಪಟ್ಟಿಗೆ ಸೇರಿರುವ ಬಿ.ಎಸ್ ಯಡಿಯೂರಪ್ಪ ಅವರು ಮಾತ್ರ ಹೆಚ್ಚು ಅವಧಿ ಸಿಎಂ ಆಗಿಲ್ಲದಿರುವುದು ವಿಶೇಷ.

4 ಬಾರಿ ಮುಖ್ಯಮಂತ್ರಿಯಾದರೂ ಯಡಿಯೂರಪ್ಪ ಅವರು ಒಮ್ಮೆ ಕೂಡಾ ಪೂರ್ಣಾವಧಿ ಅಧಿಕಾರ ಅನುಭವಿಸಲಿಲ್ಲ. 2008ರ ಮೇ 30 ರಿಂದ 2011ರ ಆಗಸ್ಟ್ 4ರ ಅವಧಿಯಲ್ಲಿ 3 ವರ್ಷ 62ದಿನಗಳ ಕಾಲ ಅಧಿಕಾರದಲ್ಲಿದ್ದೇ ಅತಿ ಹೆಚ್ಚಿನ ಅವಧಿ ಎನಿಸಿಕೊಂಡಿದೆ.

"ಶಿಸ್ತಿನ ಸಿಪಾಯಿ" ಯಡಿಯೂರಪ್ಪ ರಾಜಕೀಯ ಬದುಕಿನ ಚಿತ್ರಣ

ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ರೆಬೆಲ್ ಶಾಸಕರ ರಾಜೀನಾಮೆಯಿಂದಾಗಿ 15ನೇ ವಿಧಾನಸಭೆಯಲ್ಲಿ ಕುಮಾರಸ್ವಾಮಿ ವಿಶ್ವಾಸಮತ ಕಳೆದುಕೊಂಡಿದ್ದು, ಮೈತ್ರಿ ಸರ್ಕಾರದ 14 ತಿಂಗಳ ಅವಧಿ ಅಧಿಕಾರ ಅಂತ್ಯಕಂಡಿತ್ತು. ಇದಾದ ಕೆಲ ದಿನಗಳ ಬಳಿಕ ಮೂವರು ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ರಮೇಶ್ ಕುಮಾರ್ ಆದೇಶಿಸಿದ್ದಾರೆ. ಬಿ.ಎಸ್ ಯಡಿಯೂರಪ್ಪ ಅವರು 4ನೇ ಬಾರಿಗೆ ಸಿಎಂ ಆಗಿದ್ದಾರೆ.

ನಾಲ್ಕನೇ ಬಾರಿಗೆ ಮುಖ್ಯಮಂತ್ರಿ

ನಾಲ್ಕನೇ ಬಾರಿಗೆ ಮುಖ್ಯಮಂತ್ರಿ

ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಬಿಎಸ್ವೈ 2007 ರ ನವೆಂಬರ್ 12 ರಂದು ಮೊದಲ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಅವರು ನವೆಂಬರ್ 19(7ದಿನ)ರ ತನಕ ಪಟ್ಟದಲ್ಲಿದ್ದರು.

2008 ರ ಮೇ 30 ರಂದು ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ 2011 ರ ಜುಲೈ 31 ರವರೆಗೆ 3 ವರ್ಷ 62 ದಿನಗಳ ಕಾಲ (39 ತಿಂಗಳು) ಅವರು ಮುಖ್ಯಮಂತ್ರಿಯಾಗಿದ್ದರು.

3 ನೇ ಬಾರಿಗೆ ಮುಖ್ಯಮಂತ್ರಿಯಾಗ ಮೇ 18, 2018ರಂದು ಪ್ರಮಾಣ ವಚನ ಸ್ವೀಕರಿಸಿ 55 ಗಂಟೆಗಳ ಕಾಲ ಸಿಎಂ ಆಗಿ ಅಲ್ಪಾವಧಿ ಸರ್ಕಾರದ ದೊರೆ ಎನಿಸಿಕೊಂಡರು.

4ನೇ ಬಾರಿಗೆ ಸಿಎಂ ಆಗಿ ಜುಲೈ 26ರಂದು ಸಂಜೆ 6.32 ಗಂಟೆ ನಂತರ ಪ್ರಮಾಣ ವಚನ ಸ್ವೀಕರಿಸಿದ್ದಾರೆ

ಅತಿ ಹೆಚ್ಚು ಬಾರಿ ಮುಖ್ಯಮಂತ್ರಿಯಾದವರು

ಅತಿ ಹೆಚ್ಚು ಬಾರಿ ಮುಖ್ಯಮಂತ್ರಿಯಾದವರು

1.ಪವನ್ ಕುಮಾರ್ ಚಾಮ್ಲಿಂಗ್ (ಸಿಕ್ಕಿಂ) -5 ಬಾರಿ - 24 ವರ್ಷ 165 ದಿನಗಳ ಅವಧಿ
2. ಜ್ಯೋತಿ ಬಸು (ಪಶ್ಚಿಮ ಬಂಗಾಲ)- 5 ಬಾರಿ-23 ವರ್ಷ 137 ದಿನಗಳ ಅವಧಿ
3. ಲಾಲ್ ತಾನ್ವಾಹ್ವಾಲ (ಮಿಜೋರಾಂ) -5 ಬಾರಿ -21 ವರ್ಷ, 38 ದಿನಗಳ ಅವಧಿ
4. ವೀರ್ ಭದ್ರ ಸಿಂಗ್ (ಹಿಮಾಚಲ ಪ್ರದೇಶ) -5 ಬಾರಿ -21 ವರ್ಷ
5. ನವೀನ್ ಪಟ್ನಾಯಕ್ (ಒಡಿಶಾ) -5 ಬಾರಿ -19 ವರ್ಷ, 143 ದಿನಗಳ ಅವಧಿ
6. ಎಂ ಕರುಣಾನಿಧಿ (ತಮಿಳುನಾಡು)-5 ಬಾರಿ-18 ವರ್ಷ, 293 ದಿನಗಳ ಅವಧಿ.
7. ಪ್ರಕಾಶ್ ಸಿಂಗ್ ಬಾದಲ್ (ಪಂಜಾಬ್)-5 ಬಾರಿ-17 ವರ್ಷ, 261ದಿನಗಳ ಅವಧಿ.
8. ಮೋಹನ್ ಲಾಲ್ ಸುಖಾಡಿಯಾ(ರಾಜಸ್ಥಾನ)-4 ಬಾರಿ- 17ವರ್ಷ, 175 ದಿನಗಳು
9 ಪ್ರತಾಪ್ ಸಿಂಗ್ ರಾಣೆ(ಗೋವಾ)-7 ಬಾರಿ-15 ವರ್ಷ ಬಾರಿ, 250 ದಿನಗಳು
10. ಎಸ್. ಸಿ ಜಾಮೀರ್ (ನಾಗಾಲ್ಯಾಂಡ್)-4 ಬಾರಿ-15 ವರ್ಷ 200ದಿನಗಳು
11. ಬಿಧನ್ ಚಂದ್ರ ರಾಯ್ (ಪಶ್ಚಿಮ ಬಂಗಾಲ)-4ಬಾರಿ-14 ವರ್ಷ, 159 ದಿನಗಳು
12. ಜೆ ಜಯಲಲಿತಾ(ತಮಿಳುನಾಡು)-6 ಬಾರಿ-14 ವರ್ಷ, 126 ದಿನಗಳು
13. ಬಿ.ಎಸ್ ಯಡಿಯೂರಪ್ಪ(ಕರ್ನಾಟಕ)-4 ಬಾರಿ-3ವರ್ಷ, 71ದಿನಗಳು

ಅತಿ ಕಡಿಮೆ ಅವಧಿ ಸಿಎಂ

ಅತಿ ಕಡಿಮೆ ಅವಧಿ ಸಿಎಂ

1. ಜಗದಾಂಬಿಕ ಪಾಲ್ -1 ದಿನ-ಉತ್ತರಪ್ರದೇಶ
2. ಬಿ.ಎಸ್ ಯಡಿಯೂರಪ್ಪ-55 ಗಂಟೆ-ಕರ್ನಾಟಕ
4. ಸತೀಶ್ ಪ್ರಸಾದ್ ಸಿಂಗ್- 1 ವಾರ- ಬಿಹಾರ
5. ಎಸ್ ಸಿ ಮಾರಕ್-13 ದಿನಗಳು-ಮೇಘಾಲಯ
6. ಜಾನಕಿ ರಾಮಚಂದ್ರನ್-23 ದಿನಗಳು-ತಮಿಳುನಾಡು
7. ಸಿ.ಎಚ್ ಮೊಹಮ್ಮದ್ ಕೊಯಾ-45 ದಿನಗಳು- ಕೇರಳ

ಕರ್ನಾಟಕದಲ್ಲಿ ಅತಿ ಹೆಚ್ಚು ಬಾರಿ ಸಿಎಂ

ಕರ್ನಾಟಕದಲ್ಲಿ ಅತಿ ಹೆಚ್ಚು ಬಾರಿ ಸಿಎಂ

4 ಬಾರಿ - ಬಿಎಸ್ ಯಡಿಯೂರಪ್ಪ, 2007, 2008,2018, 2019
2 ಬಾರಿ - ಎಸ್ ನಿಜಲಿಂಗಪ್ಪ, 1956, 1962
2 ಬಾರಿ -ದೇವರಾಜ್ ಅರಸ್-1972, 1978
2 ಬಾರಿ- ವೀರೇಂದ್ರ ಪಾಟೀಲ್-1968,1989
2 ಬಾರಿ- ಎಚ್. ಡಿ ಕುಮಾರಸ್ವಾಮಿ-2006, 2018

English summary
B.S Yediyurappa became 4th time CM of Karnataka. Here is the list of politicians who became maximum times CM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X