ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ವೀನ್ ಎಲಿಜಬೆತ್ -ಅತಿ ಹೆಚ್ಚು ಕಾಲ ಆಳಿದ ರಾಣಿ, ವಿಶ್ವದಾಖಲೆ

|
Google Oneindia Kannada News

ಲಂಡನ್, ಜೂನ್ 13: ಕೆಲವರು ಕೆಲ ಸಾಧನೆ ಮಾಡುವ ಮೂಲಕ ವಿಶ್ವ ದಾಖಲೆ ಬರೆಯುತ್ತಾರೆ. ಇನ್ನೂ ಕೆಲವರಿಗೆ ಸುದೀರ್ಘ ಅಧಿಕಾರ ನಡೆಸಿ ದಾಖಲೆ ಸೃಷ್ಟಿಸುತ್ತಾರೆ. ಆದರೆ ಬ್ರಿಟನ್‌ನ ರಾಣಿ ಎಲಿಜಬೆತ್ II ಅವರು ವಿಶ್ವದ ಎರಡನೇ ಅತಿ ದೀರ್ಘಾವಧಿಯ ರಾಣಿಯಾಗುವ ಮೂಲಕ ದಾಖಲೆ ಬರೆದಿದ್ದಾರೆ. ಫ್ರಾನ್ಸ್‌ನ ಲೂಯಿಸ್ XIV ರ ನಂತರ ಬ್ರಿಟನ್‌ನ ರಾಣಿ ಎಲಿಜಬೆತ್ II ಅವರು ಭಾನುವಾರ ಥಾಯ್ಲೆಂಡ್‌ನ ರಾಜನನ್ನು ಹಿಂದಿಕ್ಕಿ ಇತಿಹಾಸದಲ್ಲಿ ವಿಶ್ವದ ಎರಡನೇ ಅತಿ ಹೆಚ್ಚು ಕಾಲ ಆಳಿದ ರಾಣಿಯಾಗಿದ್ದಾರೆ.

ಕಳೆದ ವಾರಾಂತ್ಯದಲ್ಲಿ ಭವ್ಯವಾದ ಕಾರ್ಯಕ್ರಮಗಳೊಂದಿಗೆ ರಾಷ್ಟ್ರಕ್ಕೆ 70 ವರ್ಷಗಳ ಸೇವೆಯನ್ನು ಗುರುತಿಸಲು ಯುಕೆ 96 ವರ್ಷ ವಯಸ್ಸಿನ ಕ್ವೀನ್ಸ್ ಪ್ಲಾಟಿನಂ ಜುಬಿಲಿಯನ್ನು ಆಚರಿಸಿತು. ಇದರಲ್ಲಿ ಬ್ರಿಟನ್‌ನ ರಾಣಿ ಎಲಿಜಬೆತ್ II ಅವರು 1927 ಮತ್ತು 2016 ರ ನಡುವೆ 70 ವರ್ಷ ಮತ್ತು 126 ದಿನಗಳ ಕಾಲ ಆಳ್ವಿಕೆ ನಡೆಸಿದ ಥಾಯ್ಲೆಂಡ್‌ನ ಕಿಂಗ್ ಭೂಮಿಬೋಲ್ ಅದುಲ್ಯದೇಜ್ ಅವರನ್ನು ಹಿಂದಿಕ್ಕಿ ದಾಖಲೆಯನ್ನು ನಿರ್ಮಿಸಿದ್ದಾರೆ.

ಏಕಾಏಕಿ ಆಸ್ಪತ್ರೆಗೆ ದಾಖಲಾಗಿದ್ದ ಬ್ರಿಟನ್ ರಾಣಿ ಎರಡನೇ ಎಲಿಜಬೆತ್ಏಕಾಏಕಿ ಆಸ್ಪತ್ರೆಗೆ ದಾಖಲಾಗಿದ್ದ ಬ್ರಿಟನ್ ರಾಣಿ ಎರಡನೇ ಎಲಿಜಬೆತ್

ಫ್ರಾನ್ಸ್‌ನ ಲೂಯಿಸ್ XIV ಅವರು 1643 ರಿಂದ 1715 ರವರೆಗೆ 72-ವರ್ಷ ಮತ್ತು 110-ದಿನಗಳ ಆಳ್ವಿಕೆಯೊಂದಿಗೆ ದೀರ್ಘಾವಧಿಯ ಮೊದಲ ರಾಜನಾಗಿ ಉಳಿದಿದ್ದಾನೆ.

ಕೊರೊನಾ ಲಸಿಕೆ ಪಡೆದ ಬ್ರಿಟಿನ್ ರಾಣಿ ಎಲಿಜಬೆತ್ ಹಾಗೂ ರಾಜ ಫಿಲಿಪ್ ಕೊರೊನಾ ಲಸಿಕೆ ಪಡೆದ ಬ್ರಿಟಿನ್ ರಾಣಿ ಎಲಿಜಬೆತ್ ಹಾಗೂ ರಾಜ ಫಿಲಿಪ್

ಎರಡನೇ ಅತಿ ದೀರ್ಘಾವಧಿಯ ರಾಣಿ

ಎರಡನೇ ಅತಿ ದೀರ್ಘಾವಧಿಯ ರಾಣಿ

1953 ರಲ್ಲಿ ಪಟ್ಟಾಭಿಷೇಕ ಮಾಡಲಾದ ರಾಣಿ ಎಲಿಜಬೆತ್ II ಸೆಪ್ಟೆಂಬರ್ 2015 ರಲ್ಲಿ ತನ್ನ ಮುತ್ತಜ್ಜಿ ರಾಣಿ ವಿಕ್ಟೋರಿಯಾವನ್ನು ಮೀರಿಸಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಬ್ರಿಟಿಷ್ ರಾಣಿಯಾಗಿದ್ದಾರೆ.

ಪ್ಲಾಟಿನಂ ಜುಬಿಲಿ ಮೈಲಿಗಲ್ಲು ಗುರುತಿಸಲು UK ಮತ್ತು ಕಾಮನ್‌ವೆಲ್ತ್‌ನಾದ್ಯಂತ ನಡೆದ ನಾಲ್ಕು ದಿನಗಳ ರಾಯಲ್ ಪರೇಡ್‌ಗಳು, ಬೀದಿ ಪಾರ್ಟಿಗಳು, ಪ್ರದರ್ಶನ ಮತ್ತು ಇತರ ಕಾರ್ಯಕ್ರಮಗಳ ನಂತರ, ಥಾಯ್ಲೆಂಡ್‌ನ ರಾಜ ಪತ್ರದಲ್ಲಿ ರಾಷ್ಟ್ರಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ನಂತರ ಈ ದಾಖಲೆಗೆ ಭಾಜನರಾದ ಎಲಿಜಬೆತ್ II ಅವರು 'ಇದು ವಿನಮ್ರತೆಗೆ ಹೆಸರಾಗಿದೆ. ಈ ನವೀಕೃತ ಒಗ್ಗಟ್ಟಿನ ಪ್ರಜ್ಞೆ ಮುಂಬರುವ ಹಲವು ವರ್ಷಗಳವರೆಗೆ ಅನುಭವಿಸಲ್ಪಡುತ್ತದೆ' ಎಂದು ಹೇಳಿದರು.

ದೀರ್ಘ ಅಧಿಕಾರ ಅವಧಿ ಪೂರೈಸಿದ್ದು ಹೇಗೆ ಎಲಿಜಬೆತ್

ದೀರ್ಘ ಅಧಿಕಾರ ಅವಧಿ ಪೂರೈಸಿದ್ದು ಹೇಗೆ ಎಲಿಜಬೆತ್

''ನನಗೆ ರಾಣಿಯಾಗಿ 70 ವರ್ಷಗಳನ್ನು ಪೂರೈಸಿದ್ದು ಹೇಗೆ ಎಂಬ ವಿಷಯಕ್ಕೆ ಬಂದಾಗ ನನಗೆ ಯಾವುದೇ ಮಾರ್ಗದರ್ಶಿ ಪುಸ್ತಕವಿರಲಿಲ್ಲ. ಇದು ನಿಜವಾಗಿಯೂ ಹೊಸದಾಗಿದೆ. ಆದರೆ ನನ್ನ ಪ್ಲಾಟಿನಂ ಜುಬಿಲಿಯನ್ನು ಆಚರಿಸಲು ಅನೇಕ ಜನರು ಭಾಗವಹಿಸಿದ್ದಾರೆ ಎಂದು ನಾನು ಸಂತೋಷವಾಗಿದ್ದೇನೆ" ಎಂದು ಅವರು ಹೇಳಿದರು.

ಎಲ್ಲಿ ಆಚರಿಸಲಾಗುತ್ತದೆ?

ಎಲ್ಲಿ ಆಚರಿಸಲಾಗುತ್ತದೆ?

ರಾಣಿ ಎಲಿಜಬೆತ್ ಒಂದು ವರ್ಷದಲ್ಲಿ ಎರಡು ಜನ್ಮದಿನಗಳನ್ನು ಆಚರಿಸುತ್ತಾರೆ. ಮೊದಲನೆಯದು ಅವರು 1926 ರಲ್ಲಿ ಏಪ್ರಿಲ್ 21 ರಂದು ಜನಿಸಿದ ದಿನವಾದರೆ, ಮತ್ತೊಂದು, ಜೂನ್ ಎರಡನೇ ಶನಿವಾರದಂದು ಅಧಿಕೃತವಾದ ಹುಟ್ಟುಹಬ್ಬವನ್ನು ಆಚರಿಸುತ್ತಾರೆ. ರಾಣಿ ಸಾಮಾನ್ಯವಾಗಿ ತನ್ನ ನಿಜವಾದ ಜನ್ಮದಿನವನ್ನು ತನ್ನ ಕುಟುಂಬದೊಂದಿಗೆ ಆಚರಿಸುತ್ತಾರೆ. ಆದರೂ, ಈ ವೇಳೆ ಹೈಡ್ ಪಾರ್ಕ್‌ನಲ್ಲಿ 41-ಗನ್ ಸೆಲ್ಯೂಟ್, ವಿಂಡ್ಸರ್ ಗ್ರೇಟ್ ಪಾರ್ಕ್‌ನಲ್ಲಿ 21-ಗನ್ ಸೆಲ್ಯೂಟ್ ಮತ್ತು ಏಪ್ರಿಲ್ 21 ರಂದು ಲಂಡನ್ ಗೋಪುರದಲ್ಲಿ 62-ಗನ್ ಸೆಲ್ಯೂಟ್ ನಲ್ಲಿರುತ್ತದೆ. ಆದರೆ, ಅವರ ಅಧಿಕೃತ ಜನ್ಮದಿನದಂದು, ರಾಷ್ಟ್ರದಲ್ಲಿ ಒಂದು ದೊಡ್ಡ ಸಾಂಪ್ರದಾಯಿಕ ಸಮಾರಂಭ, ಟ್ರೂಪಿಂಗ್ ಆಫ್ ಕಲರ್ಸ್ ಪೆರೇಡ್‌ನಿಂದ ಗುರುತಿಸಲಾಗಿದೆ.

ಆರ್‌ಎಎಫ್‌ ವಿಮಾನಗಳ ಪ್ರದರ್ಶನ

ಆರ್‌ಎಎಫ್‌ ವಿಮಾನಗಳ ಪ್ರದರ್ಶನ

ಬ್ರಿಟಿಷ್ ರಾಜ ಮನೆತನದವರ ಅಧಿಕೃತ ಜನ್ಮದಿನಗಳನ್ನು ಗುರುತಿಸಲು ಈ ಸಮಾರಂಭವನ್ನು 260 ವರ್ಷಗಳಿಗೂ ಹೆಚ್ಚು ಕಾಲದಿಂದ ಆಚರಿಸಲಾಗುತ್ತಿದೆ. ಈ ಮೆರವಣಿಗೆ ರಾಣಿ ಎಲಿಜಬೆತ್‌ರ ಅಧಿಕೃತ ನಿವಾಸವಾದ ಬಕಿಂಗ್‌ಹ್ಯಾಮ್‌ ಅರಮನೆಯಿಂದ ಪ್ರಾರಂಭವಾಗುತ್ತದೆ. ಇದು ಡೌನಿಂಗ್ ಸ್ಟ್ರೀಟ್ ಬಳಿಯ ವೈಟ್‌ಹಾಲ್‌ನಲ್ಲಿ ಮಾಲ್‌ನಿಂದ ಹಾರ್ಸ್ ಗಾರ್ಡ್ಸ್ ಪೆರೇಡ್‌ವರೆಗೆ ಚಲಿಸುತ್ತದೆ. ನಂತರ ಮತ್ತೆ ವಾಪಸ್‌ ಅರಮನೆಗೆ ಮರಳುತ್ತದೆ. ರಾಜಮನೆತನದವರು ಸಾಂಪ್ರದಾಯಿಕ ಸಮಾರಂಭದ ಅಂಗವಾಗಿ ಮಾಲ್‌ನಿಂದ ಪ್ರಯಾಣಿಸುತ್ತಾರೆ. ಜನರನ್ನು ತಮ್ಮ ನಿವಾಸದ ಬಕಿಂಗ್‌ಹ್ಯಾಮ್‌ ಅರಮನೆಯ ಬಾಲ್ಕನಿಯಲ್ಲಿ ಸ್ವಾಗತಿಸುತ್ತಾರೆ.

ಈ ಸಂದರ್ಭಕ್ಕಾಗಿ ವೈಮಾನಿಕ ಪ್ರದರ್ಶನವನ್ನು ಆರ್‌ಎಎಫ್‌ ವಿಮಾನಗಳ ಪ್ರದರ್ಶನದೊಂದಿಗೆ ಮೆರವಣಿಗೆ ಮುಕ್ತಾಯವಾಗುತ್ತದೆ. ರಾಯಲ್ ನಿಯಮಾವಳಿಗಳ ಪ್ರಕಾರ, ಹವಾಮಾನವು ಆಹ್ಲಾದಕರವಾದಾಗ ಬೇಸಿಗೆಯಲ್ಲಿ ಒಂದು ದಿನದಂದು ರಾಯಲ್ ಮೊನಾರ್ಕ್ ಅವರ ಅಧಿಕೃತ ಜನ್ಮದಿನವನ್ನು ಸಾರ್ವಜನಿಕವಾಗಿ ಆಚರಿಸುವುದು ಅವಶ್ಯಕ. ಅಕ್ಟೋಬರ್‌ನಲ್ಲಿ ಜನಿಸಿದ ಕಿಂಗ್ ಜಾರ್ಜ್ II ಈ ಪದ್ಧತಿಯನ್ನು ಪ್ರಾರಂಭಿಸಿದರೆಂದು ನಂಬಲಾಗಿದೆ.

English summary
Britain’s Queen Elizabeth II on Sunday overtook Thailand’s King to become the world’s second-longest reigning monarch in history, after France’s Louis XIV.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X