ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ತ ಓಲೈಕೆ, ಇತ್ತ ಬೈಗುಳ! ಚುನಾವಣೆಯ ಅಸ್ತ್ರವಾದರೆ ಬ್ರಾಹ್ಮಣರು?

|
Google Oneindia Kannada News

Recommended Video

ಕಾಂಗ್ರೆಸ್‍ನಲ್ಲಿ ಚುನಾವಣೆಯ ಅಸ್ತ್ರವಾಗಿಬಿಟ್ಟರಾ ಇವರು?: Lok Sabha Elections 2019 | Oneindia Kannada

ಒಂದೆಡೆ ಬ್ರಾಹ್ಮಣರ ಓಲೈಕೆ, ಇನ್ನೊಂದೆಡೆ ಬೈಗುಳ! ಬ್ರಾಹ್ಮಣರೇನು ಚುನಾವಣೆಯ ಅಸ್ತ್ರವಾಗಿಬಿಟ್ಟಿದ್ದಾರಾ? ಇತ್ತೀಚಿನ ಕೆಲವು ಬೆಳವಣಿಗೆಗಳು ಈ ಪ್ರಶ್ನೆಯನ್ನು ಹುಟ್ಟುಹಾಕಿವೆ.

ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿಕೆ ಹರಿಪ್ರಸಾದ್ ಅವರು 'ಬ್ರಾಹ್ಮಣರೆಲ್ಲ ಕಾಂಗ್ರೆಸ್ ಅನ್ನು ಬೆಂಬಲಿಸಲಿದ್ದಾರೆ' ಎಂಬ ಹೇಳಿಕೆ ನೀಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ನಂತರ ಅದಕ್ಕೆ ಬ್ರಾಹ್ಮಣ ಮಹಾಸಭಾ ತಕ್ಕ ಉತ್ತರವನ್ನೂ ನೀಡಿತ್ತು. ಅದಾಗಿ ಒಂದೆರಡು ದಿನಗಳಲ್ಲಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರೂ, 'ಬ್ರಾಹ್ಮಣರ ಮತ ಕಾಂಗ್ರೆಸ್ಸಿಗೆ' ಎಂದಿದ್ದರು.

ಅತ್ತ ಬೆಳಗಾವಿಯಲ್ಲಿ ಸಮಾವೇಶವೊಂದರಲ್ಲಿ ಮಾತನಾಡುತ್ತಿದ್ದ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ, ಬ್ರಾಹ್ಮಣರನ್ನು ಅವಹೇಳನ ಮಾಡುವ ಹೇಳಿಕೆಯನ್ನು ನೀಡಿದರು.

ಬ್ರಾಹ್ಮಣರನ್ನು ಹಿಯಾಳಿಸಿದ ಜಾರಕಿಹೊಳಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರುಬ್ರಾಹ್ಮಣರನ್ನು ಹಿಯಾಳಿಸಿದ ಜಾರಕಿಹೊಳಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ಎಲ್ಲಿ ಬ್ರಾಹ್ಮಣರ ಮತವಿಲ್ಲದೆ ಗೆಲ್ಲುವುದಕ್ಕೆ ಸಾಧ್ಯವಿಲ್ಲವೋ ಅಲ್ಲಿ ಬ್ರಾಹ್ಮಣರನ್ನು ಓಲೈಸುವುದು, ಎಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡಿದರೆ ಮತ ಪಡೆಯುವುದಕ್ಕೆ ಸಾಧ್ಯವೋ ಅಲ್ಲಿ ಅವಹೇಳನ ಮಾಡುವುದು... ಒಂದೇ ಪಕ್ಷದ ವರಿಷ್ಟರು ಹೀಗೆ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿ ತಮ್ಮ ರಾಜಕೀಯ ಹಿತಾಸಕ್ತಿಗಾಗಿ ವೈರುಧ್ಯದ ಹೇಳಿಕೆ ನೀಡುವುದು ಎಷ್ಟು ಸರಿ?

ಬಿಕೆ ಹರಿಪ್ರಸಾದ್ ಹೇಳಿಕೆ

ಬಿಕೆ ಹರಿಪ್ರಸಾದ್ ಹೇಳಿಕೆ

ಬನಶಂಕರಿ ಎರಡನೇ ಹಂತದ ಬನಗಿರಿ ವರಸಿದ್ದಿ ವಿನಾಯಕ ದೇವಾಲಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿಕೆ ಹರಿಪ್ರಸಾದ್ ನೇತೃತ್ವದಲ್ಲಿ ಸಭೆಯೊಂದನ್ನು ನಡೆಸಲಾಗಿತ್ತು. ಈ ಸಭೆಗೆ ಕೆಲವು ಬ್ರಾಹ್ಮಣರನ್ನು ಆಮಂತ್ರಿಸಲಾಗಿತ್ತು. ನಂತರ ಆ ಎಲ್ಲಾ ಬ್ರಾಹ್ಮಣರೂ ಕಾಂಗ್ರೆಸ್ಸಿಗೆ ಬೆಂಬಲ ನೀಡುತ್ತಾರೆ ಎಂದು ವರದಿಯಾಗುವಂತೆ ಮಾಡಲಾಗಿತ್ತು. ಆದರೆ ಮರುದಿನವೇ ಬ್ರಾಹ್ಮಣ ಮಹಾಸಭಾ ಇದನ್ನು ವಿರೋಧಿಸಿ, ತಾವು ಕಾಂಗ್ರೆಸ್ಸಿಗೇ ಮತಹಾಕುವುದಾಗಿ ಎಲ್ಲಿಯೂ ಹೇಳಿಲ್ಲ ಎಂದು ಸಮಜಾಯಿಷಿ ನೀಡಿತ್ತು.

ಬ್ರಾಹ್ಮಣರನ್ನು ಕೆಣಕಿದ ಜಾರಕಿಹೊಳಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಬ್ರಾಹ್ಮಣರನ್ನು ಕೆಣಕಿದ ಜಾರಕಿಹೊಳಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಶೇ.80 ರಷ್ಟು ಬ್ರಾಹ್ಮಣರ ಮತ ಕಾಂಗ್ರೆಸ್ಸಿಗೆ!

ಶೇ.80 ರಷ್ಟು ಬ್ರಾಹ್ಮಣರ ಮತ ಕಾಂಗ್ರೆಸ್ಸಿಗೆ!

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಶೇ 80ರಷ್ಟು ಬ್ರಾಹ್ಮಣರ ಮತಗಳು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಗಳಿಗೇ ಸಿಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದರು.

ಹರಿಪ್ರಸಾದ್ ಗೆ ಬೆಂಬಲ ವದಂತಿ: ಸ್ಪಷ್ಟನೆ ನೀಡಿದ ಬ್ರಾಹ್ಮಣ ಮಹಾಸಭಾ ಹರಿಪ್ರಸಾದ್ ಗೆ ಬೆಂಬಲ ವದಂತಿ: ಸ್ಪಷ್ಟನೆ ನೀಡಿದ ಬ್ರಾಹ್ಮಣ ಮಹಾಸಭಾ

ಸೇನೆಯಲ್ಲಿ ಪ್ರಾಣತ್ಯಾಗ ಮಾಡಿದವರು ಬ್ರಾಹ್ಮಣರಲ್ಲ!

ಸೇನೆಯಲ್ಲಿ ಪ್ರಾಣತ್ಯಾಗ ಮಾಡಿದವರು ಬ್ರಾಹ್ಮಣರಲ್ಲ!

ಏಪ್ರಿಲ್ 16 ರಂದು ಬೆಳಗಾವಿ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಸತೀಶ್ ಜಾರಕೊಹೊಳಿ ಅವರು, "ದೇಶದ ಸೇನೆಯಲ್ಲಿ ದಲಿತರು, ಹಿಂದುಳಿದವರು, ಮುಸ್ಲಿಮರು ಹೆಚ್ಚಾಗಿ ಪ್ರಾಣತ್ಯಾಗ ಮಾಡಿದ್ದಾರೆಯೇ ಹೊರತು ದೇಶಪಾಂಡೆ, ಕುಲಕರ್ಣಿ, ಜೋಶಿ ಸೇರಿದಂತೆ ಬ್ರಾಹ್ಮಣರು ಸೇನೆಗಾಗಿ ಜೀವ ಬಿಟ್ಟ ಇತಿಹಾಸವಿಲ್ಲ" ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಚುನಾವಣೆಯ ಅಸ್ತ್ರವಾದರೇ ಬ್ರಾಹ್ಮಣರು?

ಚುನಾವಣೆಯ ಅಸ್ತ್ರವಾದರೇ ಬ್ರಾಹ್ಮಣರು?

ಈ ಎಲ್ಲಾ ಹೇಳಿಕೆಗಳಿಗೂ ಬ್ರಾಹ್ಮಣ ಮಹಾಸಭಾ ತಕ್ಕ ಉತ್ತರ ನೀಡಿದೆ. ಸತೀಶ್ ಜಾರಕಿಹೊಳಿ ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರನ್ನೂ ನೀಡಿದೆ. ಆದರೆ 'ಬ್ರಾಹ್ಮಣ' ಸಮುದಾಯವನ್ನೇ ಇರಲಿ, ಇನ್ಯಾವ ಸಮುದಾಯವನ್ನೇ ಇರಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ಚುನಾವಣೆಯ ಅಸ್ತ್ರವನ್ನಾಗಿ ಬಳಸಿಕೊಳ್ಳುವ ಅವಕಾಶವಾದೀ ರಾಜಕಾರಣ ಮತದಾರನಿಗೆ ಅರ್ಥವಾಗಬೇಕಿದೆ. ಯಾವ ಪಕ್ಷವೇ ಇದ್ದಿರಲಿ, ಅಭಿವೃದ್ಧಿ, ದೂರದೃಷ್ಟಿಯೇ ಪ್ರಚಾರದ ಮಾನದಂಡವಾಗಬೇಕೇ ಹೊರತು, ಒಂದು ನಿರ್ದಿಷ್ಟ ಜಾತಿಯನ್ನು ಓಲೈಸುವ ಅಥವಾ ಅವಹೇಳನ ಮಾಡುವ ಮೂಲಕ ತಮ್ಮ ಹಿತಾಸಕ್ತಿಗಾಗಿ ಅಸ್ತ್ರವನ್ನಾಗಿ ಬಳಸಿಕೊಳ್ಳುವುದು ಸರಿಯೇ?

English summary
Lok Sabha electins 2019: Brahmins are becoming vote banks to some parties in elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X